Ramachari serial: ಮಾನ್ಯತಾ ಒಪ್ಪದಿದ್ದರೂ ಚಾರುವನ್ನು ಕರೆದುಕೊಂಡು ಹೊರಟ ರಾಮಾಚಾರಿ
ಈವರೆಗೆ ಮಾನ್ಯತಾ ತನ್ನ ಅಣ್ಣನ ಮಗ ಆಡಿದ ಮಾತಿನ ಬಗ್ಗೆಯೇ ನೆನೆಸಿಕೊಂಡು ಕೊರಗುತ್ತಾ ಇದ್ದಾಳೆ ಇನ್ನು ಮಾನ್ಯತಾ ಬಳಿಗೆ ಬಂದ ಜೈ ಶಂಕರ್ ತನ್ನ ಹೆಂಡತಿಯನ್ನು ಸಮಾಧಾನ ಮಾಡಿದ್ದಾರೆ. ಈ ಕಡೆ ಚಾರು ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಜಾರಿ ಬಿದ್ದಿದ್ದಾಳೆ ಇದನ್ನು ನೋಡಿದ ಜೈ ಶಂಕರ್ ಓಡೋಡಿ ಹೋಗಿ ಚಾರುವನ್ನು ಮೇಲಕ್ಕೆ ಎತ್ತಿದ್ದಾರೆ.
ನಂತರ ನನ್ನನ್ನು ಕೂಗಿದರೆ ಆಗುತ್ತಿತ್ತು ಎಂದು ಹೇಳಿದಾಗ ನನಗೆ ಕಣ್ಣು ಇಲ್ಲ ಯಾವಾಗಲೂ ನೀವು ಬರಲು ಸಾಧ್ಯವಾ ಆಫೀಸು ಎಂದು ಹೋಗುತ್ತಿರುತ್ತೀರ ನಾನು ಎಲ್ಲವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಚಾರು ಹೇಳಿದ್ದಾಳೆ. ಈ ಅವಶ್ಯಕತೆ ಇಲ್ಲದವಳ ಬಗ್ಗೆ ನೀವು ಯೋಚನೆ ಮಾಡುತ್ತಾ ಇದ್ದರೆ ನಿಮ್ಮ ಬದುಕು ಸಹ ಕತ್ತಲೆಯಾಗುತ್ತೆ ಡ್ಯಾಡ್ ಎಂದು ಚಾರು ಹೇಳಿದ್ದಾಳೆ. ಇದನ್ನು ಕೇಳಿದ ಜೈ ಶಂಕರ್ ಗೆ ತುಂಬಾ ಅಳು ಬಂದಿದೆ ಮಗಳನ್ನು ತಬ್ಬಿಕೊಂಡಿದ್ದಾರೆ.
ಚಾರುಲತಾ ಮನೆಗೆ ರಾಮಾಚಾರಿ ಬಂದಿದ್ದಾನೆ ಮಾನ್ಯತಾ ರಾಮಾಚಾರಿಯನ್ನು ನೋಡಿ ಸಿಟ್ಟು ಮಾಡಿಕೊಂಡಿದ್ದಾಳೆ. ಇನ್ನೊಬ್ಬರು ಆಗಿದ್ದರೆ ಇನ್ನೊಂದು ಕುಟುಂಬಕ್ಕೆ ಅನ್ಯಾಯ ಆಗಿದೆ ಎಂದು ಊರು ಬಿಟ್ಟು ಹೋಗುತ್ತಿದ್ದರು. ನೀನು ಇಲ್ಲೇ ಇದ್ದೀಯ ಎಂದು ರಾಮಾಚಾರಿಗೆ ಮಾನ್ಯತಾ ಬೈಯುತ್ತಿದ್ದಾಳೆ.

ರಾಮಾಚಾರಿ ನೋಡಿ ಸಿಟ್ಟು ಮಾಡಿಕೊಂಡ ಮಾನ್ಯತಾ
ಇದನ್ನೆಲ್ಲ ಕೇಳಿಸಿಕೊಂಡ ರಾಮಾಚಾರಿ ನಾನು ನಿಮ್ಮ ಮೇಲೆ ದ್ವೇಷ ಮಾಡುತ್ತಿಲ್ಲ ಹಾಗೆ ದ್ವೇಷ ಮಾಡಿದ್ದರೆ ನಾನು ನಿಮ್ಮ ಮಗಳನ್ನು ಕಾಪಾಡುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಮಾನ್ಯತಾ ಬಳಿ ಹೇಳಿದ್ದಾನೆ. ಈ ಕಡೆ ರಾಮಾಚಾರಿಗೆ ಮಾನ್ಯತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಅದನ್ನು ತಡೆಯಲು ಚಾರು ಮಧ್ಯದಲ್ಲಿ ಮಾತನಾಡಿದ್ದಾಳೆ ಚಾರು ಬಾಯಿಯನ್ನು ಮಾನ್ಯತಾ ಮುಚ್ಚಿಸಿ ಎತ್ತ ಒಡಲ ಸಂಕಟ ನಿನಗೆ ಏನು ಗೊತ್ತು ಎಂದೂ ರಾಮಾಚಾರಿಗೆ ಹೇಳಿದ್ದಾಳೆ.

ಚಾರು ಕರೆದುಕೊಂಡು ಹೋಗುತ್ತೇನೆ ಎಂದ ರಾಮಾಚಾರಿ
ಚಾರುಲತಾ ಗೆ ಕಣ್ಣು ಮತ್ತೊಮ್ಮೆ ಬರಿಸಲು ಚಿಕ್ಕಮಗಳೂರಿಗೆ ಹೋಗಬೇಕು ಎಂದು ರಾಮಾಚಾರಿ ಮಾನ್ಯತಾ ಬಳಿ ಕೇಳಿದ್ದಾನೆ ಇದಕ್ಕೆ ಮಾನ್ಯತಾ ಒಪ್ಪದೆ ನನಗೆ ನಿನ್ನ ಮೇಲೆ ನಂಬಿಕೆ ಇಲ್ಲ ನೀನು ನನ್ನ ಮಗಳನ್ನು ಸಾಯಿಸಲು ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಹೇಳಿದ್ದಾಳೆ. ಮೇಡಂ ನಿಮ್ಮ ಮಗಳನ್ನು ಸಾಯಿಸಬೇಕು ಎಂದಿದ್ದಾರೆ ನಮ್ಮ ಮನೆಯಲ್ಲಿ ಇಟ್ಟುಕೊಂಡು 15 ದಿನ ಆರೈಕೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ರಾಮಾಚಾರಿ ಮಾನ್ಯತಾ ಗೆ ತಿಳಿಸಿದ್ದಾನೆ.

ರಾಮಾಚಾರಿಗೆ ಮಾನ್ಯತಾ ಪ್ರಶ್ನೆ
ವಿದೇಶಿಯ ಡಾಕ್ಟರ್‌ಗಳೆ ಕಣ್ಣು ಬರುವುದಿಲ್ಲ ಎಂದು ಹೇಳಿದರು ಮೂಡ ನಂಬಿಕೆಯನ್ನು ನಂಬಿಕೊಂಡು ಕಣ್ಣು ಬರುತ್ತದೆ ಎಂದು ಹೇಳುತ್ತಿದ್ದೀಯ ಎಂದು ರಾಮಾಚಾರಿಗೆ ಮಾನ್ಯತಾ ಪ್ರಶ್ನೆ ಮಾಡಿದ್ದಾಳೆ. ಮೇಡಂ ಇದೊಂದು ಅವಕಾಶವನ್ನು ಕೊಟ್ಟು ನೋಡಿ ಅವದೂತರೇ ನಾನು ಹೇಳದಿದ್ದರೂ ನನ್ನ ಮನಸ್ಸಿನಲ್ಲಿರುವುದನ್ನು ಕೇಳಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ ಎಂದು ಹೇಳಿದ್ದಾನೆ.

ಹೆಂಡತಿ ಒಪ್ಪಿಸಿದ ಜೈಶಂಕರ್
ರಾಮಾಚಾರಿ ಜೊತೆಗೆ ಚಾರುಲತಾ ಕಳಿಸಲು ಮಾನ್ಯತಾ ಪ್ರತಿರೋಧವನ್ನ ತೋರಿದ್ದಾಳೆ ಇದನ್ನೆಲ್ಲ ಕೇಳಿಸಿಕೊಂಡು ಸ್ಥಳಕ್ಕೆ ಬಂದ ಜೈ ಶಂಕರ್ ಹೆಂಡತಿಯನ್ನು ಒಪ್ಪಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ನಾನು ರಾಮಾಚಾರಿಯನ್ನು ಹಲವಾರು ವರ್ಷದಿಂದ ನೋಡುತ್ತಿದ್ದೇನೆ ಅವನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಅವನು ಹಲವಾರು ಬಾರಿ ನನ್ನ ಮಗಳ ಪ್ರಾಣವನ್ನು ಕಾಪಾಡಿದ್ದಾನೆ ಎಂದು ಮಾನ್ಯತಾ ಗೆ ಹೇಳಿ ಚಿಕ್ಕಮಗಳೂರಿಗೆ ಹೋಗಲು ಮಗಳನ್ನು ಒಪ್ಪಿಸಿದ್ದಾರೆ. ಈ ಕಡೆ ಚಾರು ಸಹ ನನಗೆ ರಾಮಾಚಾರಿ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ ನಾನು ರಾಮಾಚಾರಿ ಜೊತೆಗೆ ಹೋಗಲು ಸಿದ್ದ ಎಂದು ಹೇಳಿದಾಗ ಮಾನ್ಯತಾ ಏನಾದರೂ ಮಾಡಿಕೊಳ್ಳಿ ಎಂದು ಅಲ್ಲಿಂದ ಹೊರಟು ಹೋಗಿದ್ದಾಳೆ. ಕೊನೆಗೆ ಚಾರುಗೆ ಕಣ್ಣು ಬರುತ್ತದೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











