Ramachari serial: ಚಾರು-ರಾಮಾಚಾರಿಗೆ ಮುಂದಿದೆ ಅಗ್ನಿಪರೀಕ್ಷೆ!
ರಾಮಾಚಾರಿ ಮತ್ತು ಚಾರು ಧಾತ್ರಿ ವನಕ್ಕೆ ಹೊರಟಿದ್ದಾರೆ ಅಲ್ಲಿ ರಾಮಾಚಾರಿಗೆ ಚಾರುಗೆ ಕಣ್ಣು ಬರುವ ಭರವಸೆ ಮೂಡಿಬಂದಿದೆ ಈ ಕಡೆ ಗುರುಗಳು ಹೇಳಿದ ಮಾತು ಕೇಳಿ ರಾಮಾಚಾರಿ ಶಾಕ್ ಆಗಿದ್ದಾನೆ.
ಈ ಕಡೆ ಗುರುಗಳು ಚಾರುಲತಾಳ ಎರಡು ಕಣ್ಣನ್ನು ನೋಡಿ ಹಣೆಯ ಮೇಲೆ ಕೈಯಿಟ್ಟು ಪರೀಕ್ಷೆ ಮಾಡುತ್ತಿದ್ದಾರೆ. ರಾಮಾಚಾರಿಯ ಮುಖವನ್ನು ನೋಡಿ ತಮ್ಮ ಕತ್ತನ್ನ ಅಲ್ಲಾಡಿಸಿದ್ದಾರೆ ಈಕೆಗೆ ದೃಷ್ಟಿ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ರಾಮಾಚಾರಿ ಮತ್ತು ಚಾರುಗೆ ತುಂಬಾನೇ ಬೇಸರವಾಗಿದೆ. ಇದು ಕಣ್ಣಿಗೆ ಬಿದ್ದಿರುವ ಶಾಶ್ವತವಾದ ಕತ್ತಲೆಯಾಗಿದ್ದು ಇದನ್ನು ಯಾವ ದೀಪ ಕೂಡ ಬೆಳಕನ್ನು ತರಿಸಲು ಸಾಧ್ಯವಿಲ್ಲ ಎಂದು ಗುರುಗಳು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ರಾಮಾಚಾರಿ ಕೈಯಲ್ಲಿ ಏಟು ತಿಂದ ಬನವಾಸಿ ಸೌದೆ ಕಡೆಯುತ್ತಾ ಇರುತ್ತಾನೆ. ಅಲ್ಲಿಗೆ ಬಂದಂತಹ ಅವನ ಚೇಲಾ ರಾಮಾಚಾರಿ ಬಂದಿರುವುದಾಗಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಘಟನೆಯನ್ನು ನೆನೆಸಿಕೊಂಡ ಬನವಾಸಿ ಬಹಳ ಸಿಟ್ಟಾಗಿದ್ದಾನೆ ಎಲ್ಲಿ ಅವನು ತೋರಿಸು ಎಂದು ಹೇಳಿದ್ದಾನೆ. ರಾಮಾಚಾರಿ ಬರ್ತಾ ಇದೀನಿ ನಾನು ಎಂದುಕೊಂಡು ಅಲ್ಲಿಂದ ಕೈಯಲ್ಲಿ ಕಬ್ಬಿಣದ ರಾಡು ಹಿಡಿದುಕೊಂಡು ಅಲ್ಲಿಂದ ಹೋಗುತ್ತಾನೆ.

ಅವಧೂತರ ಬಗ್ಗೆ ಪ್ರಶ್ನೆ ಮಾಡಿದ ಗುರುಗಳು
ಅವಧೂತರು ಹೇಳಿದ ಮಾತನ್ನು ರಾಮಾಚಾರಿ ಗುರುಗಳ ಹತ್ತಿರ ಹೇಳುತ್ತಿದ್ದಾನೆ ಅವಧೂತರು ಬಂದು ಧಾತ್ರಿ ವನಕೆ ಹೋಗು ಇಂಗಿ ಹೋದ ಬೆಳಕು ಬರುತ್ತದೆ ಎಂದು ಹೇಳಿದ್ದಾರೆ ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ ದಯವಿಟ್ಟು ನಿರಾಸೆ ಮಾಡಬೇಡಿ ಎಂದು ಕೇಳುತ್ತಿದ್ದಾನೆ. ಅವಧೂತರ ಬಗ್ಗೆ ಪ್ರಶ್ನೆ ಮಾಡಿದ ಗುರುಗಳಿಗೆ ಅವಧೂತರ ವಾಣಿ ದೇವರ ವಾಣಿ ಇದ್ದಂತೆ ಗುರುಗಳೇ, ಎಷ್ಟೇ ಕಠಿಣವಾದರೂ ಸಹ ನಾವು ಅದನ್ನು ಮಾಡುತ್ತೇವೆ ದಯವಿಟ್ಟು ಕಣ್ಣು ಬರಿಸಿ ಎಂದು ಬೇಡಿಕೊಂಡಿದ್ದಾನೆ. ನೀನು ಕಠಿಣ ಪರಿಸ್ಥಿತಿ ಎದುರಿಸುವುದಲ್ಲಪ್ಪ ಆ ಹೆಣ್ಣು ಮಗು ಕಠಿಣ ಪರಿಸ್ಥಿತಿಯನ್ನ ಹೆದರಿಸಬೇಕು ನಾವು ಕೊಡುವ ಚಿಕಿತ್ಸೆಗೆ ಹೊಂದಿಕೊಂಡು ಆಕೆ ಹೋಗಬೇಕು ಎಂದಿದ್ದಾರೆ ಅದಕ್ಕೆ ಚಾರು ಒಪ್ಪಿಕೊಂಡಿದ್ದಾಳೆ.

ದೊಡ್ಡಮ್ಮನ ಮಾತಿನಿಂದ ಬೇಸರಗೊಂಡ ಆದ್ಯಾ
ಈ ಕಡೆ ಶರ್ಮೀಳಾ, ಜೈ ಶಂಕರ್ ಬಳಿ ಆದ್ಯಾ ಮದುವೆಯ ಬಗ್ಗೆ ಮಾತನಾಡುತ್ತಿರುತ್ತಾಳೆ ಅದನ್ನು ಕೇಳಿಸಿಕೊಂಡು ಅಲ್ಲಿಗೆ ಬಂದ ಮಾನ್ಯತಾ ಬಾಯಿಗೆ ಬಂದಂತೆ ಮಾತನಾಡಿ ಆದ್ಯಾ ಮನಸ್ಸಿಗೆ ನೋವು ಮಾಡುತ್ತಾಳೆ. ನೀನು ಯಾವನನ್ನು ಲವ್ ಮಾಡಿದ್ದೀಯಾ ನೀನು ಸಹ ಅಮ್ಮನ ತರಹನೆ ಮನೆಹಾಳು ಬುದ್ಧಿ ಕಲಿತುಬಿಟ್ಟೆಯಲ್ಲ ಎಂದು ಮಾನ್ಯತಾ ಹೇಳಿದ್ದಾಳೆ. ಈ ಮಾತು ಕೇಳಿಸಿಕೊಂಡ ಆದ್ಯಾ ಮತ್ತು ಶರ್ಮಿಳಾಗೆ ತುಂಬಾ ನೋವಾಗಿದೆ. ಇದೆಲ್ಲವನ್ನು ಕೇಳಿಸಿಕೊಂಡ ಜೈ ಶಂಕರ್ ಮಾನ್ಯತಾಳ ಬಾಯಿ ಮುಚ್ಚಿಸಿದ್ದಾನೆ. ಮಗಳ ಮದುವೆಯಾದ ನಂತರವೇ ಈ ಮನೆಯಲ್ಲಿ ನಿನ್ನ ಮಗಳ ಮದುವೆಯಾಗಬೇಕು ಎಂದು ಹೇಳಿ ಮಾನ್ಯತಾ ಅಲ್ಲಿಂದ ಹೊರಟಿದ್ದಾಳೆ. ಅಕ್ಕ ನಿಮ್ಮ ಬಿಟ್ಟು ನಾನು ಯಾವುದೇ ಕೆಲಸಕ್ಕೂ ಕೈ ಹಾಕುವುದಿಲ್ಲ ನಾವು ಮಾಡುವ ಪ್ರತಿ ಕೆಲಸಕ್ಕೂ ನಿಮ್ಮ ಹಾರೈಕೆ ಇರಬೇಕು ಎಂದು ಶರ್ಮಿಳಾ ಅಷ್ಟು ಹೇಳಿದರು ಸಹ ಮಾನ್ಯತಾ ಮಾತ್ರ ತನ್ನ ನಿಲುವು ಬದಲಿಸಿಕೊಳ್ಳದೆ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಾಳೆ.

ಚಾರುವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರುವ ಬನವಾಸಿ
ಚಾರುಲತಾ ಧಾತ್ರಿ ವನದಲ್ಲಿ ಕುಳಿತಿರುವುದನ್ನು ನೋಡಿದ ಬನವಾಸಿ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾನೆ ಚಾರುಲತಾ ಗೆ ಕಣ್ಣು ಕಾಣದ ವಿಷಯ ತಿಳಿದು ತುಂಬಾ ಖುಷಿಯಾಗಿ ಇದ್ದಾನೆ ರಾಮಾಚಾರಿ ಚಾರುವನ್ನು ಮಾತನಾಡಿಸಿಕೊಂಡು ಹೋದ ನಂತರ ಅಲ್ಲಿಗೆ ಬಂದ ಬನವಾಸಿ ಚಾರು ಮುಖದ ಬಳಿ ಬಂದು ನಗುತ್ತಿದ್ದಾನೆ. ಚಾರು ಯಾರು ಯಾರು ಎಂದರು ಮಾತನಾಡದೇ ಚಾರುಲತಾಳನ್ನು ಆಟವಾಡಿಸುತ್ತಾ ಇದ್ದಾನೆ ಮುಂದೆ ಯಾವ ರೀತಿಯ ಅನಾಹುತ ಕಾದಿದೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











