Ramachari serial: ಚಾರುಲತಾಗೆ ಕಣ್ಣು ಬರಿಸಲು ಶುರುವಾದ ಪೂಜೆ
ಈವರೆಗೆ ಧಾತ್ರಿ ವನದಲ್ಲಿ ಪೂಜೆಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ಆದರೆ ಬನವಾಸಿ ಚಾರು ಹಾಗೂ ರಾಮಾಚಾರಿ ಮೇಲೆ ಕಣ್ಣು ಹಾಕಿ ಮತ್ತೆ ಕೆಟ್ಟದ್ದನ್ನು ಮಾಡಲು ಹೊಂಚು ಹಾಕುತ್ತಿದ್ದಾನೆ.
ಧಾತ್ರಿವನದಲ್ಲಿ ಚಾರುಲತಾ ಒಬ್ಬಳೇ ಕುಳಿತಿದ್ದಾಳೆ ಅಲ್ಲಿಗೆ ಬನವಾಸಿ ಬಂದು ಚಾರುಲತಾ ಸುತ್ತಮುತ್ತ ಸುಳಿದಾಡುತ್ತಾ ಇದ್ದಾನೆ. ಚಾರು ಯಾರು ನೀವು ಎಂದರು ಹೇಳುತ್ತಿಲ್ಲ ಒಳಗೆ ಖುಷಿಯಿಂದ ನಗುತ್ತಿದ್ದಾನೆ ಇನ್ನೇನು ಚಾರು ಹತ್ತಿರ ಹೋಗಬೇಕು ಅನ್ನುವಷ್ಟರಲ್ಲಿ ರಾಮಾಚಾರಿ ಬರುವುದನ್ನು ನೋಡಿ ಮರೆಯಾಗಿ ಮರದ ಬಳಿ ಬಚ್ಚಿಟ್ಟುಕೊಂಡಿದ್ದಾನೆ. ಇನ್ನು ಚಾರು ರಾಮಾಚಾರಿ ನನ್ನ ಬಳಿ ಯಾರೋ ಸುಳಿದಂತೆ ಆಯಿತು ಅದುಸಹ ಡ್ರಿಂಕ್ಸ್ ಮಾಡಿದ ವಾಸನೆ ಬಂತು ಎಂದು ಹೇಳಿದ್ದಾಳೆ.
ರಾಮಾಚಾರಿ ಯಾರು ಇಲ್ಲ ಮೇಡಂ ಇದು ಆಶ್ರಮ ಯಾರು ಸಹ ಕುಡಿದು ಬರೋದಿಲ್ಲ ಎಂದು ಹೇಳಿದ್ದಾನೆ. ಆದರೂ ಸಹ ರಾಮಾಚಾರಿಗೆ ಮತ್ತೊಮ್ಮೆ ಚಾರು ಇಲ್ಲ ರಾಮಾಚಾರಿ ನನ್ನ ಮೂಗಿಗೆ ಕುಡಿದಿರುವುದು ವಾಸನೆ ಬಂತು ಎಂದು ಹೇಳಿದಾಗ ಸುತ್ತಲು ಸಹ ಕಣ್ಣಾಡಿಸಿ ರಾಮಾಚಾರಿ ನೋಡಿದಾಗ ಯಾರು ಸಹ ಕಂಡಿಲ್ಲ ಮೇಡಂ ಎಲ್ಲೋ ಗಿಡಗಳನ್ನು ಹರೆಯುತ್ತಿದ್ದಾರೆ ಅದಕ್ಕೆ ಈ ರೀತಿ ವಾಸನೆ ಬಂದಿರಬೇಕು ಎಂದು ಹೇಳಿ ಚಾರುವನ್ನು ಕರೆದುಕೊಂಡು ಹೋಗಿದ್ದಾನೆ.

ಫಾರ್ಮ್ ಹೌಸ್‌ಗೆ ಬರುವಂತೆ ವಿಹಾನ್‌ಗೆ ಹೇಳಿದ ಆದ್ಯಾ
ಶರ್ಮಿಳಾಗೆ ಮಾನ್ಯತಾ ಬಹಳವಾಗಿ ಚುಚ್ಚಿ ಮಾತನಾಡುತ್ತಿದ್ದಾಳೆ. ನನ್ನ ಮಗಳ ಮದುವೆ ಮಾಡುವ ಮುಂಚೆಯೇ ನೀನು ನಿನ್ನ ಮಗಳ ಮದುವೆ ಮಾಡಲು ಹೊರಟಿದ್ಯಾ ಎಂದು ಹಂಗಿಸುತ್ತಾಳೆ. ಅಲ್ಲಿಗೆ ಬಂದ ಜೈಶಂಕರ್ ಅವಳಿಗೆ ಮತ್ತು ನನಗೆ ನೀನೇ ಮುಂದೆ ನಿಂತು ಮದುವೆ ಮಾಡಿಸಿದೆ ನೆನಪಿರಲಿ ಎಂದು ಹೇಳಿದಾಗ ಮಾನ್ಯತಾ ಸುಮ್ಮನೆ ಆಗಿದ್ದಾಳೆ ಹುಡುಗನನ್ನು ನೋಡಲು ಬರುವುದಾಗಿ ತಿಳಿಸಿದ್ದಾಳೆ. ಈ ಕಡೆ ವಿಹಾನ್‌ಗೆ ಆದ್ಯಾ ತನ್ನ ತಂದೆಯನ್ನು ಭೇಟಿಯಾಗಲು ನಮ್ಮ ಫಾರ್ಮ್‌ಹೌಸ್‌ಗೆ ಬಾ ಲೋಕೇಷನ್ ಕಳುಹಿಸಿದ್ದೇನೆ ಎನ್ನುತ್ತಾಳೆ. ಯಾಕೆ ಫಾರ್ಮ್‌ಹೌಸ್‌ಗೆ ಎಂದು ಕೇಳಿದಾಗ ಅದೊಂದು ದೊಡ್ಡ ಕಥೆ ನಮ್ಮ ಮನೆಯಲ್ಲಿ ಮಾತುಕತೆಗೆ ಒಬ್ಬರಿಂದ ನೂರೆಂಟು ವಿಘ್ನ ಎಂದು ಹೇಳಿದಾಗ ಎನಾಯ್ತು ಎಂದು ಕೇಳಿದ್ದಾನೆ. ಅದಕ್ಕೆ ಏನಿಲ್ಲ ಇವಾಗ ನಾವು ಲವ್ ಬರ್ಡ್ಸ್ ಐಸ್ಕ್ರೀಂ ತಿನ್ನೋಕೆ ಹೋಗೋಣ ಎಂದು ವಿಷಯವನ್ನು ಡೈವರ್ಟ್ ಮಾಡಿದ್ದಾಳೆ ಆದ್ಯಾ.

ಕಣ್ಣು ಬರಲಿ ಎಂದು ಬೇಡಿಕೊಂಡ ರಾಮಾಚಾರಿ
ಚಾರುಗೆ ಕಣ್ಣು ಬರಲಿ ಎಂದು ಗುರೂಜಿ ಪೂಜೆಯನ್ನು ಶುರು ಮಾಡಿದ್ದಾರೆ ಅಶ್ವಿನಿ ದೇವತೆಗಳು ಸಂಚಾರ ಮಾಡುವಾದ ನಾವು ಬೇಡಿಕೊಂಡ ಎಲ್ಲವೂ ಸಹ ಫಲಿಸುತ್ತದೆ ನೀವು ಬೇಡಿಕೊಳ್ಳಿ ಎಂದು ಗುರೂಜಿ ಪೂಜೆಯನ್ನು ಶುರು ಮಾಡಿದ್ದಾರೆ. ಈ ಕಡೆ ರಾಮಾಚಾರಿ ಹಾಗೂ ಚಾರುಗೆ ಇಬ್ಬರಿಗೂ ಸಹ ಬೇಡಿಕೊಳ್ಳಿ ಎಂದು ಹೇಳಿದ್ದಾರೆ. ರಾಮಾಚಾರಿ ಅಶ್ವಿನಿ ದೇವತೆಗಳೇ ಚಾರು ಮೇಡಂಗೆ ಕಣ್ಣು ಬರಲಿ ನಾನು ನನಗಾಗಿ ಏನನ್ನು ಬೇಡಿಕೊಳ್ಳುವುದಿಲ್ಲ ದಯವಿಟ್ಟು ಇದೊಂದು ಬೇಡಿಕೆಯನ್ನು ಈಡೇರಿಸಿ ಎಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾನೆ. ಈ ಕಡೆ ಚಾರು ದೇವರೇ ನನ್ನ ಕಣ್ಣಾಗಿ ನನ್ನ ಕೈ ಹಿಡಿದು ನಡೆಸುತ್ತಿರುವ ರಾಮಾಚಾರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅವಕಾಶ ಮಾಡಿಕೊಂಡು,ಹಾಗೇ ರಾಮಾಚಾರಿ ನನ್ನ ಮದುವೆಯಾಗಲಿ ಎಂದು ಬೇಡಿಕೊಂಡಿದ್ದಾಳೆ.

ಧೈರ್ಯದಿಂದ ಇರುವಂತೆ ಹೇಳಿದ ಚಾರಿ
ಚಾರು ಕೈಗೆ ಒಂದು ರಕ್ಷಣೆಯ ಅರಿಶಿಣದ ಕೊಂಬನ್ನು ಗುರೂಜಿ ಕಟ್ಟಲು ಹೇಳಿದಾಗ ರಾಮಾಚಾರಿ ಕೈಹಿಡಿದು ಎಲ್ಲವನ್ನು ಮಾಡಿದ್ದಾನೆ. ಮೊದಲಿಗೆ ಹಿಮದ ನೀರನ್ನು ಮೈಮೇಲೆ ಹಾಕಲಾಗುತ್ತದೆ ಎಂದಾಗ ರಾಮಾಚಾರಿ ಚಾರುಲತಾ ಕಷ್ಟಪಡುತ್ತಿರುವುದನ್ನು ನೋಡಿ ಕಣ್ಣೀರು ಹಾಕಿದ್ದಾನೆ. ಈ ಕಡೆ ಬನವಾಸಿ ಸರಿಯಾದ ಸಮಯ ನೋಡಿಕೊಂಡು ಚಾರು ಹಾಗೂ ರಾಮಾಚಾರಿ ಕೊಲ್ಲಲು ಪ್ಲ್ಯಾನ್ ಮಾಡುತ್ತಿದ್ದಾನೆ. ಮುಂದೇನು ಎಂಬುದೇ ಕುತೂಹಲವಾಗಿದೆ.


Click it and Unblock the Notifications











