Ramachari Serial: ಚಾರು ಸೇವೆ ಮಾಡುತ್ತಿರುವ ರಾಮಾಚಾರಿ

By ಶೃತಿ ಹರೀಶ್ ಗೌಡ

ರಾಮಾಚಾರಿ, ತನ್ನಿಂದಲೇ ಕಣ್ಣು ಹೋಗಿದೆ ಎಂದು ತಿಳಿದು ಚಾರು ಸೇವೆಯನ್ನು ಮಾಡುತ್ತಿದ್ದಾನೆ.‌ ಆದರೆ ಇತ್ತ ಚಾರು ಮನೆಯಲ್ಲಿ ಒಬ್ಬಳೇ ಗೋಡೆ ಹಿಡಿದುಕೊಂಡು ನಡೆಯಲು ಪ್ರಯತ್ನ ಮಾಡುತ್ತಿದ್ದಾಳೆ. ರಾಮಾಚಾರಿ ಮೇಡಂ ನಡೆಯಬೇಡಿ ನಾನು ಇದ್ದೇನೆ ಅಂತಾ ಮಾತಾಡ್ತಾ ಇರ್ತಾನೆ. ಅದಕ್ಕೆ ಚಾರು‌, 'ಗಂಡನ ಕೈಲಿನ ಸೇವೆ ಮಾಡಿಸಿಕೊಳ್ಳೊಕೆ ಪುಣ್ಯ ಮಾಡಿರಬೇಕು' ಅಂತಾ ಮನಸಿನಲ್ಲೇ ಅಂದುಕೊಳ್ತಾ‌ ಇರ್ತಾಳೆ.

ಹಾಗೆ ಮಾತಾಡ್ತಾ ಇರಬೇಕಾದರೆ ಚಾರು ತಲೆ ಮೇಲೆ ರಂಗೋಲಿ‌ ಡಬ್ಬಾ ಬಿದ್ದು ಬಿಡುತ್ತದೆ. ಅದನ್ನು ನೋಡಿ ರಾಮಾಚಾರಿ ನಗೋಕೆ ಶುರು ಮಾಡ್ತಾನೆ. ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ನೀವು ನಗ್ತೀರಾ ಅಂತಾನೆ. ಕನ್ನಡಿ ಮುಂದೆ ಹೋಗಬಹುದು ಆದರೆ ಕಣ್ಣು ಕಾಣಬೇಕಲ್ಲ ಎಂದು ಹೇಳ್ತಾಳೆ ಚಾರು.

ಇದರಿಂದ ತುಂಬಾ ಬೇಜಾರು ಮಾಡಿಕೊಂಡ ರಾಮಾಚಾರಿ ಕ್ಷಮಿಸಿ ಮೇಡಂ ಎಂದು ಕೇಳುತ್ತಾನೆ.‌ ಇದಕ್ಕೆ ಚಾರು ಯಾಕೆ ಬೇಜಾರು ಆಗ್ತೀಯಾ ರಾಮಾಚಾರಿ ನಾನು ನಿಮಗೆ‌ ಕೊಟ್ಟ ಹಿಂಸೆಗೆ ಸರಿಯಾಗಿದೆ ಎಂದು ಹೇಳ್ತಾಳೆ. ಏನಾಗಿಲ್ಲ ಮೇಡಂ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿ ಸ್ನಾನ ಮಾಡಿ ಎಂದು ಹೇಳ್ತಾನೆ ಅದಕ್ಕೆ ಡಾಕ್ಟರ್ ಒಂದು ವಾರ ತಲೆಗೆ ಸ್ನಾನ ಮಾಡಬೇಡಿ ಎಂದಿದ್ದಾರೆ ಎಂದು ಚಾರು‌ ಹೇಳುತ್ತಾಳೆ. ಅದಕ್ಕೆ ಮೈಗೆ ಸ್ನಾನ ಮಾಡಿ ಅಂತಾ ರಾಮಾಚಾರಿ ಹೇಳುತ್ತಾನೆ.

ಶರ್ಮಿಳಾಗೆ ಗೊತ್ತಾಯ್ತು ಆದ್ಯಾ ವಿಯಾನ್ ಪ್ರೀತಿಯ ವಿಷಯ

ಶರ್ಮಿಳಾಗೆ ಗೊತ್ತಾಯ್ತು ಆದ್ಯಾ ವಿಯಾನ್ ಪ್ರೀತಿಯ ವಿಷಯ

ಆದ್ಯಾ ಮತ್ತು ವಿಹಾನ್ ಪ್ರೇಮದ ಬಗ್ಗೆ ಶರ್ಮಿಳಾಗೆ ಗೊತ್ತಾಗಿದೆ. ಇದರಿಂದ ಶರ್ಮಿಳಾಗೆ ಬೇಜಾರ್ ಆಗಿದೆ ಆದ್ಯಾ ನೀನು ನನ್ನ ನಂಬಿಕೆಗೆ ಮೋಸ ಮಾಡಿ ಬಿಟ್ಟೆ, ಮಾನ್ಯತಾ ಹೇಳಿದ್ದಕ್ಕೆ ನಾನು ಕಾನ್ಫಿಡೆನ್ಸ್‌ನಿಂದ ಹೇಳಿದ್ದೇ ನನ್ನ ಮಗಳು ಆ ರೀತಿಯಲ್ಲ ಮಾಡಲ್ಲ ಎಂದು ಆದರೆ ನೀನು ಮಾಡಿದ್ದೇನು ಎಂದು ಆದ್ಯಾಗೆ ಶರ್ಮೀಳಾ ಕ್ಲಾಸ್ ತಗೆದುಕೊಂಡಿದ್ದಾಳೆ. ನೀನು ಪ್ರೀತಿ-ಗೀತಿ ಅಂತಾ ಹೋಗ್ತಿಯಾ ಅಂತಾ ನಾನು ಹೋಗ್ತೀಯಾ ಎಂದು ನಾನು ತಿಳಿದುಕೊಂಡಿಲ್ಲ ಎಂದು ಶರ್ಮಿಳಾ ಹೇಳುತ್ತಾಳೆ. ಅಮ್ಮ ನೀನು ಸಹ ಪ್ರೀತಿ ಮಾಡಿ ಮದುವೆ ಆಗಿದ್ಯಾ, ಅಪ್ಪನಿಗೆ ಪ್ರೀತಿ ವಿಷಯವನ್ನು ಹೇಳು ಎಂದು ಆದ್ಯಾ ಬೇಡಿಕೊಳ್ತಾಳೆ. ಇದಕ್ಕೆ ಶರ್ಮಿಳಾ, ವಿಯಾನ್ ಅನ್ನು ಮನೆಗೆ ಕರೆಸು ಮಾತಾಡೋಣ ಎಂದು ಹೇಳುತ್ತಾಳೆ. ಇದಕ್ಕೆ ಆದ್ಯಾಗೆ ತುಂಬಾ ಖುಷಿಯಾಗುತ್ತದೆ.

ಚಾರುಗೆ ಸ್ನಾನ ಮಾಡಿಸಿದ ಚಾರಿ

ಚಾರುಗೆ ಸ್ನಾನ ಮಾಡಿಸಿದ ಚಾರಿ

ರಾಮಾಚಾರಿ, ಚಾರುಗೆ ಸ್ನಾನ ಮಾಡಿಸ್ತಾನೆ. ರಾಮಾಚಾರಿಗೆ ಚಾರು ನೂರೆಂಟು ಪ್ರಶ್ನೆ ಮಾಡ್ತಾ ಇರ್ತಾಳೆ. ಚಾರುಗೆ ರಾಮಾಚಾರಿ ಆ ಭಗವಂತ ಏನೇ ಮಾಡಿದ್ರು ನಮ್ಮ ಒಳ್ಳೆಯದಕ್ಕೆ ಅಂತಾನೆ. ಒಂದನ್ನು ಪಡೆಯಬೇಕು ಅಂದರೆ ಒಂದನ್ನು ಕಳೆದುಕೊಳ್ಳಬೇಕು ಅಂತಾನೆ ಅದಕ್ಕೆ ಅಲ್ವ ರಾಮಾಚಾರಿ ಈ ಸ್ಥಿತಿಗೆ ತಂದಿರೋದು. ನಿನ್ನ ಕೈಯಲ್ಲಿ ಸ್ನಾನ ಮಾಡಿಸಿಕೊಳ್ಳೋಕೆ ಎಷ್ಟು ಜನ್ಮ ಕಾಯಬೇಕಿತ್ತು ಅಂತಾ ಮನಸಿನಲ್ಲಿ ಚಾರು ಅಂದುಕೊಳ್ತಾಳೆ. ಅತ್ತೆ ಮನೆಗೆ ಬಂದ ವಿಯಾನ್‌ನನ್ನು ಅತ್ತೆ ಮಾನ್ಯತಾ ಪ್ರೀತಿಯಿಂದ ಸತ್ಕರಿಸುತ್ತಾಳೆ. ಜಯ್‌ ಅನ್ನು ವಿಯಾನ್ ಮಾತಾಡಿಸ್ತಾ ಇರ್ತಾನೆ. ನಂತರ ವಿಯಾನ್ ಏನೋ ಸಪ್ರೈಸ್ ಕೊಡ್ತಿನಿ ಅಂದ್ರಲ್ಲ ಅದೇನು ಹೇಳಿ ಅಂತಾ ವಿಯಾನ್ ಕೇಳ್ತಾನೆ ನಂತರ ಹೇಳ್ತಿನಿ ಎಂದು ಮಾನ್ಯತಾ ಹೇಳ್ತಾಳೆ.

ರಾಮಾಚಾರಿ ಹಾಗೂ ಚಾರು ಕನಸಿನ ಜಾಲಿ ರೈಡ್

ರಾಮಾಚಾರಿ ಹಾಗೂ ಚಾರು ಕನಸಿನ ಜಾಲಿ ರೈಡ್

ಚಾರು ರಾಮಾಚಾರಿ ಜೊತೆಗೆ ಜಾಲಿ ರೈಡ್ ಹೋಗುವ ಕನಸು ಕಾಣ್ತಾ ಇರ್ತಾಳೆ. ರಾಮಾಚಾರಿ ಬೈಕ್‌ನಲ್ಲಿ ಟ್ರಡಿಷನಲ್ ಡ್ರೆಸ್‌ನಲ್ಲಿ ಇಬ್ಬರು ಹೋಗ್ತಾ ಇರ್ತಾರೆ. ನಂತರ ಬೆಟ್ಟಕ್ಕೆ ಹೋಗಿರುವ ಥರ ಕನಸು ಕಾಣುತ್ತಾ ಇರ್ತಾಳೆ. ಆಗ ಐ ಲವ್ ಯೂ ಎಂದು ಹೇಳಿದ ಹಾಗೆ ಚಾರು ಕನಸು ಕಾಣುತ್ತಾ ಹಿಂದೆ ಬೀಳಲು ಹೋಗ್ತಾಳೆ ಆಗ ರಾಮಾಚಾರಿ ಚಾರುವನ್ನು ಹಿಡಿದುಕೊಳ್ಳುತ್ತಾನೆ. ನಂತರ ಚಾರು ನನ್ನ ಹತ್ತಿರ ಬೇರೆ ಬಟ್ಟೆ ಇಲ್ಲ ಎಂದು ಹೇಳಿದಾಗ ನಾನು ತರ್ತಿನಿ ಮೇಡಂ ಇರಿ ಎಂದು ರಾಮಾಚಾರಿ ಹೇಳುತ್ತಾನೆ. ಆಗ ಚಾರು ನಿನ್ನಂತಹ ಗಂಡ ಎಲ್ಲೂ ಸಿಗಲ್ಲ ಅಂತಾ ಮನಸಿನಲ್ಲಿ ಅಂದುಕೊಳ್ತಾ ಇರ್ತಾಳೆ.

ಆತಂಕದಲ್ಲಿ ಆದ್ಯಾ, ವಿಯಾನ್‌ಗೆ ಕರೆ

ಆತಂಕದಲ್ಲಿ ಆದ್ಯಾ, ವಿಯಾನ್‌ಗೆ ಕರೆ

ಇತ್ತ ವಿಹಾನ್ ಜೊತೆಗೆ ಜಯ್ ಹಾಗೂ ಮಾನ್ಯತಾ ಮಾತಾಡ್ತಾ ಇರ್ತಾರೆ. ಈ ವೇಳೆ ಆದ್ಯಾ, ವಿಯಾನ್‌ಗೆ ಕಾಲ್ ಮಾಡಿ ನಮ್ಮ ಪ್ರೀತಿ ವಿಷಯ ನಮ್ಮ ಮನೆಯವರಿಗೆ ಗೊತ್ತಾಗಿದೆ ಎಂದು ಹೇಳಿ ಕಾಲ್ ಕಟ್ ಮಾಡ್ತಾಳೆ. ನಂತರ ಮಾನ್ಯತಾ ಇದು ನಿನ್ನ ಒಳ್ಳೆಯದ್ದಕ್ಕೆ ತಕೊಂಡ ನಿರ್ಧಾರ ಇದ್ದಕ್ಕೆ ನೀನು ನನ್ನ ಮಾತು ಕೇಳು ವಿಯಾನ್ ಅಂತಾ ಮಾನ್ಯತಾ ಹೇಳುತ್ತಾಳೆ. ಖಂಡಿತ ಅತ್ತೆ ಅಂತಾ ವಿಯಾನ್ ಹೇಳ್ತಾನೆ. ಮಾನ್ಯತಾಳ ಮಾತು ಕೇಳಿ ವಿಯಾನ್‌ಗೆ ತುಂಬಾನೇ ಶಾಕ್ ಆಗುತ್ತದೆ. ಮಾನ್ಯತಾ ವಿಯಾನ್ ಬಳಿ ನನ್ನ ಬೇಬಿ ಚಾರುನಾ ನಿನಗೆ ಕೊಟ್ಟು ಮದುವೆ ಮಾಡಿಕೊಡಬೇಕು ಎಂದುಕೊಂಡಿದ್ದೇನೆ. ನೀನೇ ನಮ್ಮ ಮನೆ ಅಳಿಯ ಚಾರುಗೆ ಗಂಡ ಎಂದು ಮಾನ್ಯತಾ ಹೇಳ್ತಾಳೆ. ಈ ಮಾತು ಕೇಳಿ ವಿಯಾನ್‌ಗೆ ತುಂಬಾನೇ ಶಾಕ್ ಆಗುತ್ತದೆ. ಮುಂದೆ ವಿಯಾನ್ ಯಾವ ನಿರ್ಧಾರ ತಗೆದುಕೊಳ್ತಾನೆ ನೋಡಬೇಕಿದೆ.

More from Filmibeat

English summary
Colors Kannada serial Ramachari Written Update on January 10th episode. Here is the details about Charulatha grows ecstatic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X