Don't Miss!
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ರಾಮಾಚಾರಿ ಮೇಲೆ ಮಚ್ಚು ಎತ್ತಿದ್ದ ಅಣ್ಣ!
ವಿಹಾನ್ ತಂದೆ ಅಂದರೆ ಮಾನ್ಯತಾ ಅವರ ಅಣ್ಣನಿಗೆ ಫೋನ್ ಮಾಡಿ ವಿಹಾನ್ ನನ್ನ ಮಾತು ತಗೆದು ಹಾಕೋದಿಲ್ಲ ಎಂದು ಹೇಳಿದ್ದಾಳೆ. ನನ್ನ ಮಗನ ಮೇಲೂ ಸಹ ವಿಹಾನ್ ಮೇಲೆ ಪ್ರೀತಿ ಇದೆ ಅದಷ್ಟು ಬೇಗ ಮದುವೆ ಮಾಡೋಣ ಎಂದು ಅಣ್ಣನ ಬಳಿ ಹೇಳುತ್ತಾಳೆ.
ಬಾವಿಗೆ ಬಿದ್ದಿದ್ದ ಚಾರುವನ್ನು ಬಾವಿಯಿಂದ ಮೇಲೆತ್ತಿದ ರಾಮಾಚಾರಿ ಚಾರುವಿಗೆ ಪ್ರಜ್ಞೆ ತರಿಸಲು ಪ್ರಯತ್ನವನ್ನು ಮಾಡುತ್ತಾನೆ. ಇತ್ತ ಚಾರುಗೆ ಪ್ರಜ್ಞೆ ಬಾರದ ಹಿನ್ನಲೆಯಲ್ಲಿ ಶಾಕ್‌ಗೆ ಒಳಗಾಗುತ್ತಾನೆ. ನಂತರ ಚಾರುವನ್ನು ಉಲ್ಟಾ ಮಲಗಿಸಿ ನೀರನ್ನು ಹೊರಗೆ ತೆಗೆಯುತ್ತಾನೆ. ನಂತರ ಚಾರುಗೆ ಪ್ರಜ್ಞೆ ಬರುತ್ತದೆ ಇದರಿಂದ ರಾಮಚಾರಿ ನಿಟ್ಟಿಸಿರು ಬಿಡುತ್ತಾನೆ.
ಸುರಕ್ಷಿತವಾದ ಸ್ಥಳಕ್ಕೆ ಚಾರುವನ್ನು ಕರೆದುಕೊಂಡು ಬಂದು ಮಾತನಾಡಿಸುತ್ತಾನೆ. ಆಗ ಚಾರು ನಂಗೂ ನಿನಗೂ ಅವಿನಾಭಾವ ಸಂಬಂಧವಿದೆ ಅದೆಷ್ಟು ಬಾರಿ ನೀನು ನನ್ನ ಕಾಪಾಡಿದ್ದೀಯಾ ಅಂತಾ ಹೇಳುತ್ತಾಳೆ. ಅಯ್ಯೋ ಮೇಡಂ ಆ ರೀತಿ ಏನಿಲ್ಲ ತಪ್ಪೆಲ್ಲ ನನ್ನದೇ ನಿಮಗೆ ಕಣ್ಣು ಕಾಣಿಸೋದಿಲ್ಲ ಎಂದು ಗೊತ್ತಿದ್ದರೂ ಸಹ ನಾನು ಬಿಟ್ಟು ತಪ್ಪು ಮಾಡಿದೆ ಎನ್ನುತ್ತಾನೆ ಚಾರಿ.
ಆದ್ಯಾ ಮಳೆಯಲ್ಲಿ ನೆನೆದುಕೊಂಡು ಬಂದಿದ್ದಕ್ಕೆ ಶರ್ಮಿಳಾ ಕ್ಲಾಸ್ ತಗೆದುಕೊಂಡಿದ್ದಾಳೆ. ನಂತರ ನೀನು ಮೊದಲು ಮನೆಗೆ ಬಾ ನಿನ್ನ ಹುಡುಗ ಏನು ಸೂಪರ್ ಸ್ಟಾರ್ ಅಲ್ಲ ಬೇಗ ಮನೆಗೆ ಬಾ ಎಂದು ಹೇಳುತ್ತಾಳೆ. ನಿನ್ನ ಪ್ರೀತಿಯ ವಿಷಯವನ್ನು ನಿನ್ನ ತಂದೆಗೆ ಹೇಳಿದ್ದೇನೆ ಎಂದು ಶರ್ಮಿಳಾ ಹೇಳುತ್ತಾಳೆ. ನಿಮ್ಮ ಅಪ್ಪ ಸಹ ಒಪ್ಪಿದ್ದಾರೆ ನಮ್ಮ ಮಗಳ ಆಯ್ಕೆ ಸರಿಯಾಗೇ ಇರುತ್ತದೆ ಎಂದು ಹೇಳಿದ್ದಾರೆ ಎಂದು ನಿನ್ನ ಹುಷಾರಲ್ಲಿ ನೀನು ಇರಬೇಕು ಎಂದು ಹೇಳುತ್ತಾಳೆ.

ಚಾರುವನ್ನು ಅಡ್ಡಗಟ್ಟಿದ ರಾಮಾಚಾರಿ ಮನೆಯವರು
ಚಾರುನಾ ಮನೆಗೆ ರಾಮಾಚಾರಿ ಕರೆದುಕೊಂಡು ಬಂದಿದ್ದಾನೆ. ಮುರಾರಿಯನ್ನು ಕರೆದು ಸಂಭ್ರಾಣಿ ಹಾಗೂ ಕೆಂಡ ರೆಡಿ ಮಾಡಲು ಹೇಳುತ್ತಾನೆ. ಇತ್ತ ಕೋದಂಡ ಅಡ್ಡ ಬಂದು ನಿಂತ್ಕೋ ಒಂದು ಹೆಜ್ಜೆ ಮುಂದಿಟ್ರೆ ಕೊಚ್ಚಿ ಹಾಕಿಬಿಡ್ತಿನಿ ಅಂತಾನೆ. ಅವರಿಗೆ ಶೀತ ಆಗಬಾರದು ಜಾಗ ಬಿಡು ಅಂತಾನೇ ಆದರೆ ಏನು ಸತ್ತು ಹೋಗಿ ಬಿಡ್ತಾಳ ನನ್ನ ಅಪರ್ಣಾ ಸಾವಿಗೆ ಕಾರಣ ಇವಳು ಸಾವೇ ಇವಳಿಗೆ ಸರಿಯಾದ ಶಿಕ್ಷೆ ಎಂದು ಹೇಳುತ್ತಾನೆ.

ರಾಮಾಚಾರಿಯ ಮೇಲೆ ಮಚ್ಚು ಎತ್ತಿದ ಅಣ್ಣ
ಆಗ ರಾಮಾಚಾರಿ ಸುಮ್ಮನೆ ಇರಣ್ಣ ಅದೇನು ಸಾವು ಅಂತೀಯಾ ಅವರು ಕಣ್ಣು ಕಳೆದುಕೊಂಡಿದ್ದಾರೆ. ಕಣ್ಣು ಕಳೆದುಕೊಂಡಿರೋದು ಅವಳು ಕುರುಡಾಗಿರೋದು ನೀನು ಅದಕ್ಕೆ ಅವಳನ್ನು ಒಳಗಡೆ ಬಿಟ್ಟುಕೊಳ್ತಾ ಇದ್ದಿಯಾ ಎಂದು ಕೋದಂಡ ಹೇಳುತ್ತಾನೆ. ಬನ್ನಿ ಮೇಡಂ ಎಂದು ರಾಮಾಚಾರಿ ಚಾರುನಾ ಒಳಗಡೆ ಕರೆದುಕೊಂಡು ಬರ್ತಾರೆ. ಇತ್ತ ತಮ್ಮನ ತಡೆಯಲು ಕೋದಂಡ ಮಚ್ಚು ತಕೊಂಡು ಬರ್ತಾನೆ ಕೋಪದ ಕೈಗೆ ಬುದ್ದಿಕೊಡಬೇಡ ಎಂದು ಹೇಳುತ್ತಾನೆ ರಾಮಾಚಾರಿ.

ಅಣ್ಣನಿಗೆ ಕಾಪಾಳಮೋಕ್ಷ ಮಾಡಿದ ರಾಮಾಚಾರಿ
ಅಣ್ಣ ಹೇಳಿದ ಮಾತು ಕೇಳದ್ದಕ್ಕೆ ರಾಮಾಚಾರಿ ಅಣ್ಣನಿಗೆ ಕಾಪಾಳಮೋಕ್ಷ ಮಾಡುತ್ತಾನೆ. ಚಾರುನಾ ಮತ್ತೆ ಕೋದಂಡ ಮನೆಯಿಂದ ಹೊರಗೆ ಹಾಕಲು ಹೊರಗೆ ಹೋಗುವಾಗ ಅಣ್ಣನ ಕಾಪಾಳಕ್ಕೆ ಹೊಡೆಯುತ್ತಾನೆ. ಆಗ ಮನೆಯವರಿಗೆ ಶಾಕ್ ಆಗುತ್ತದೆ ರಾಮಾಚಾರಿ ಚಾರುನಾ ಕರೆದುಕೊಂಡು ಒಳಗೆ ಹೋಗುತ್ತಾನೆ. ನಂತರ ಕೋದಂಡನ ಬಳಿ ಹೋಗಿ ಒಂದು ಜೀವ ಉಳಿಸೋದು ಎಂದು ಹೇಳುತ್ತಾನೆ.

ಮುಂದೇನಾಗುತ್ತದೆ ಕಾದು ನೋಡಬೇಕು
ಇತ್ತ ಅಪರ್ಣ ಫೋಟೋ ಮುಂದೆ ನಿಂತ ಕೋದಂಡ ಕಣ್ಣೀರು ಹಾಕುತ್ತಿದ್ದಾನೆ. ನೋಡು ಅಪರ್ಣ ನಿನ್ನ ಮೈದುನಾನ ತಲೆಮೇಲೆ ಹೊತ್ತು ಮಗ ಎಂದು ಮರೆಸಿದೆ ಎಂದು ಹೇಳಿ ಕಣ್ಣೀರು ಹಾಕುತ್ತಾನೆ. ಆಗ ಜಾನಕಿ ಸಹ ಕಣ್ಣೀರು ಹಾಕುತ್ತಾಳೆ ನಿಮಗೆ ರಾಮಾಚಾರಿ ಬಗ್ಗಿಸಲು ಆಗಿಲ್ಲ ಎಂದು ಕೋದಂಡ ಬೇಸರ ಮಾಡಿಕೊಳ್ತಾನೆ. ನಂಗೆ ರಾಮಾಚಾರಿ ಮುಖ ನೋಡಲು ಇಷ್ಟ ಇಲ್ಲ ಅಣ್ಣ ಅಂತ ನೋಡದೆ ನಂಗೆ ಕಾಪಾಳಕ್ಕೆ ಹೊಡೆದ ನಾನು ಮನೆಯಲ್ಲಿ ಇರಲ್ಲ ಎಂದು ಮನೆಯಿಂದ ಹೊರಗೆ ಹೋಗಲು ಹೋದಾಗ ಜಾನಕಿ ತಡೆದು ನಿಲ್ಲಿಸುತ್ತಾಳೆ. ಅಣ್ಣ- ತಮ್ಮ ಜಗಳವಾಡಿ ದೂರ ಆದರೂ ಅಂತಾ ಜನರು ಹಾಡಿಕೊಳ್ತಾರೆ ಎಂದು ಜಾನಕಿ ಹೇಳಿ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾಳೆ. ಮುಂದೇನು ಆಗುತ್ತದೆ ಕಾದು ನೋಡಬೇಕಿದೆ.