Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ಚೇಳು ತಂದು ಬಿಟ್ಟ ಕೋದಂಡ ಮುಂದೇನು ಚಾರು ಗತಿ
ಕೋದಂಡ ರಾಮಾಚಾರಿ ನನ್ನ ಕಾಪಾಳಕ್ಕೆ ಅಣ್ಣ ಎಂದು ನೋಡದೆ ಹೊಡೆದು ಬಿಟ್ಟ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಅಜ್ಜಿ, ಜಾನಕಿ ಇಬ್ಬರೂ ಬೇಡ ಕಣೋ ಕೋದಂಡ ಇಂತಹ ನಿರ್ಧಾರ ತಗೋಬೇಡ ಸಮಾಧಾನ ಮಾಡ್ಕೋ ಎಂದು ಸಮಾಧಾನ ಮಾಡ್ತಾ ಇರುತ್ತಾರೆ. ಈ ಮೂರು ದಿನದಲ್ಲಿ ಚಾರುಗೆ ನರಕ ತೋರಿಸುತ್ತೇನೆ ಎಂದು ಹೇಳಿ ಹೋಗುವಾಗ ಮನೆಯವರಿಗೆ ಶಾಕ್ ಆಗುತ್ತದೆ. ಆಗ ಅಜ್ಜಿ ಜಾನಕಿಗೆ ಸಮಾಧಾನ ಮಾಡುತ್ತಾರೆ.
ರಾಮಾಚಾರಿ ಚಾರು ರೂಪದಲ್ಲಿರುವ ಶೈಲೂಗೆ ಕಾಲ್ ಮಾಡುತ್ತಾನೆ. ಈ ವೇಳೆ ಸಂಕ್ರಾಂತಿ ಶುಭಾಶಯ ತಿಳಿಸುತ್ತಾರೆ ಎಳ್ಳು-ಬೆಲ್ಲ ತಿಂದು ಒಳ್ಳೆಯದು ಮಾತಾಡಿ ಎಂದು ಹೇಳಿದಾಗ. ರಾಮಾಚಾರಿ, ಏನೋ ಒಳ್ಳೆಯದೋ ಏನೋ ಎಂದು ಹೇಳಿದಾಗ ಏನಾಯ್ತು ರಾಮಾಚಾರಿ ಎಂದು ಶೈಲೂ ಕೇಳಿದಾಗ ಅಣ್ಣ ಹಾಗೂ ತಮ್ಮನ ನಡುವೆ ನಡೆದ ಜಗಳದ ಬಗ್ಗೆ ಹೇಳಿದಾಗ. ಅವರು ದೊಡ್ಡವರು ಅವರ ಕಾಲು ಹಿಡಿದು ಕ್ಷಮೆ ಕೇಳಿ ಎಂದು ಹೇಳುತ್ತಾಳೆ ಶೈಲೂ. ಇದರಿಂದ ರಾಮಾಚಾರಿ ನಿಮ್ಮ ಹತ್ರ ಮಾತಾಡಿ ಖುಷಿಯಾಯ್ತು ಎಂದು ಹೇಳುತ್ತಾನೆ.
ಶರ್ಮಿಳಾ ರಸ್ತೆಯಲ್ಲಿ ಬರುತ್ತಿರುವಾಗ ಮಗುವೊಂದು ರಸ್ತೆ ಮಧ್ಯದಲ್ಲಿ ಬಾಲ್ ಬಿಸಾಡಿ ನಿಂತಿರುತ್ತದೆ. ಅದನ್ನು ಕಂಡ ಶರ್ಮಿಳಾ ಮಗು ಮಗು ಎಂದು ಜೋರಾಗಿ ಕಿರುಚಿಕೊಳ್ಳುವಾಗ ವಿಹಾನ್ ಓಡಿ ಬಂದು ಮಗು ಕಾಪಾಡುತ್ತಾನೆ. ಆಗ ಶರ್ಮಿಳಾಗೆ ಬಯ್ಯೋಕೆ ಶುರು ಮಾಡ್ತಾನೆ ಮೇಡಂ ಮಗು ಹುಷಾರಾಗಿ ನೋಡಿಕೊಳ್ಳಬೇಕು ತಾನೆ ಎನ್ನುತ್ತಾನೆ ಆಗ ಮಗು ನನ್ನದಲ್ಲ ಎಂದು ಶರ್ಮಿಳಾ ಹೇಳಿದಾಗ ಯಾರದ್ದು ಮಗು ಎಂದು ಹುಡುಕುವಾಗ ಮಗುವಿನ ತಾಯಿ ಸ್ಥಳಕ್ಕೆ ಬಂದು ಧನ್ಯವಾದ ಹೇಳಿ ಮಗು ಕರೆದುಕೊಂಡು ಹೋಗುತ್ತಾಳೆ. ಆಗ ವಿಹಾನ್ ಮನಸು ಶರ್ಮಿಳಾಗೆ ಇಷ್ಟ ಆಗುತ್ತದೆ.

ಕೋದಂಡನ ಕ್ಷಮೆ ಕೇಳಿದ ರಾಮಾಚಾರಿ
ಕೋದಂಡನ ಬಳಿ ಬಂದ ರಾಮಾಚಾರಿ ಅಣ್ಣ ಅಮ್ಮ ಕರೆಯುತ್ತಿದ್ದಾರೆ ಎಂದು ಹೇಳಿದಾಗ ಇವಾಗೇನು ಹೊಡೆದಿದ್ದು ಸಾಕಾಗಲ್ಲ ಬಾ ಸಾಯಿಸು ಎಂದು ಹೇಳಿದಾಗ ರಾಮಾಚಾರಿ ಕೋದಂಡನ ಕಾಲು ಹಿಡಿದುಕೊಂಡು ಕಾಲು ಹಿಡಿದು ಕ್ಷಮಿಸಿ ಬಿಡಣ್ಣ ಎಂದು ಹೇಳಿದಾಗ. ಬಿಡು ನನ್ನ ಕಾಲನ್ನು ಎಂದು ರಾಮಾಚಾರಿಯನ್ನು ಕಾಲಿನಿಂದ ಒದ್ದು ಕೋದಂಡ ಹೊರಗೆ ಹೋಗುತ್ತಾನೆ.

ಅಳುತ್ತಾ ನಿಂತ ರಾಮಾಚಾರಿ
ಜಾನಕಿ ಬಳಿ ಬಂದ ರಾಮಾಚಾರಿ ಅಮ್ಮ ಅಣ್ಣ ನನ್ನ ಕ್ಷಮಿಸಿಲ್ಲ ನೋಡಮ್ಮ ಎಂದು ಹೇಳಿದಾಗ ಜಾನಕಿ ದೊಡ್ಡವನಿಗೆ ಹೊಡೆಯೊವಷ್ಟು ದೊಡ್ಡವನು ಆಗಿಬಿಟ್ಟೆ ನೀನು ಬಿಡಪ್ಪ ಎಂದು ಹೇಳಿ ಹೋಗ್ತಾರೆ. ಇತ್ತ ಅಜ್ಜಿ ಸಹ ಕೋದಂಡ ಹೆಂಡತಿ ಕಳೆದುಕೊಂಡು ಬೇಜಾರ್ ನಲ್ಲಿ ಇದ್ದಾನೆ ನೀನು ಯಡವಟ್ಟು ಮಾಡಿಕೊಂಡು ಶತ್ರುನಾ ಮನೆಗೆ ಕರೆದುಕೊಂಡು ಬಂದ್ರೆ ಬೇಜಾರ್ ಆಗಲ್ವ ಎಂದು ಎದ್ದು ಹೋಗುತ್ತಾರೆ. ಈ ಕಡೆ ಶೃತಿಕೂಡ ಅಣ್ಣ ನೀನು ಅಣ್ಣನಿಗೆ ಕಾಪಾಳಕ್ಕೆ ಹೊಡೆಯಬಾರದಿತ್ತು ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಈ ಕಡೆ ಮುರಾರಿ ಸಹ ಈ ಮನೆಯಲ್ಲಿ ಹಬ್ಬದ ದಿನನೂ ನೆಮ್ಮದಿ ಇಲ್ಲದ ಹಾಗೇ ಚಾರು ಮಾಡಿಬಿಟ್ಲು ಎಂದು ಬೈದುಕೊಳ್ತಾನೆ. ರಾಮಾಚಾರಿ ಅಳುತ್ತಾ ನಿಂತಿದ್ದಾನೆ.

ಚೇಳು ತಂದು ಬಿಟ್ಟ ಕೋದಂಡ
ಚಾರು ಮೇಲೆ ದ್ವೇಷ ಸಾಧಿಸುತ್ತಿರುವ ಕೋದಂಡ ಚಾರು ಅವರೆಕಾಯಿ ಸಿಪ್ಪೆ ಬಿಡುಸುವಾಗ ಎಲ್ಲಿಂದಲೋ ಚೇಳು ಹಿಡಿದುಕೊಂಡು ಬಂದು ಚಾರು ಅವರೆಕಾಯಿ ಬಿಡಿಸುತ್ತಿರುವ ಮೊರಕ್ಕೆ ಹಾಕುತ್ತಾನೆ. ಅಷ್ಟರಲ್ಲಿ ರಾಮಾಚಾರಿ ಚಾರುಗೆ ಫೋನ್ ಮಾಡುತ್ತಾನೆ. ಚಾರು, ರಾಮಾಚಾರಿ ಜೊತೆಗೆ ಮಾತನಾಡುವಾಗ ಸಿಹಿ ಸುದ್ದಿ ಹೇಳುತ್ತಾನೆ. ಫಾರಿನ್‌ನಿಂದ ನಿಮ್ಮ ಕಣ್ಣು ನೋಡುವ ಡಾಕ್ಟರ್ ನಾಳೆ ಬರ್ತಿದ್ದಾರೆ. ನಿಮ್ಮ ಕಣ್ಣು ಟೆಸ್ಟ್ ಮಾಡುತ್ತಾರೆ ಎಂದಾಗ ಚಾರು ಎದ್ದು ನಂಗೆ ಕಣ್ಣು ಬರುತ್ತದೆ ಅಂತಾ ಕುಣಿಯುವಾಗ ಮೊರ ಮೇಲಕ್ಕೆ ಹಾರಿ ಬಿಡುತ್ತದೆ. ಅವರೆಕಾಯಿ ಚಲ್ಲಾಪಿಲ್ಲಿಯಾಗಿ ಚೇಳು ಚಾರುಗೆ ಕಚ್ಚುತ್ತಾ ಇಲ್ಲ ಎಂಬುದನ್ನು ಮುಂದೆ ನೋಡಬೇಕಿದೆ.