Don't Miss!
- Sports
ಭಾರತ vs ನ್ಯೂಜಿಲೆಂಡ್: 3ನೇ ಏಕದಿನ ಪಂದ್ಯ, ವೈಟ್ವಾಶ್ ಮೇಲೆ ಭಾರತದ ಕಣ್ಣು
- News
ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ದೀಪಾ ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟ ರಾಮಾಚಾರಿ
ಚಾರುಲತಾ, ರಾಮಾಚಾರಿ ಮನೆಗೆ ಬಂದಿರುವುದಕ್ಕೆ ದೀಪಾಗೆ ಎಲ್ಲಿಲ್ಲದ ಕೋಪ ಬಂದಿದೆ ಹೇಗಾದರೂ ಮಾಡಿ ಚಾರುಲತಾಗೆ ಬುದ್ಧಿ ಕಲಿಸಬೇಕು ಎಂದು ಪಣತೊಟ್ಟು ನಿಂತಿದ್ದಾಳೆ. ಆ ಕಡೆ ಜಾನಕಿ, ಚಾರುಲತಾಗೆ ಊಟ ಕೊಟ್ಟು ಬರುತ್ತೇನೆ ಎಂದು ಬರುವಾಗ ಅತ್ತೆ ನಾನೇ ಚಾರುಗೆ ಊಟ ತೆಗೆದುಕೊಂಡು ಹೋಗಿ ಕೊಡುತ್ತೇನೆ ಎಂದು ದೀಪ ಹೇಳಿದ್ದಾಳೆ. ಬೇಡ ಬಿಡಮ್ಮ ನಾನೇ ತೆಗೆದುಕೊಂಡು ಹೋಗಿ ಕೊಡುತ್ತೇನೆ ಎಂದು ಹೇಳಿದರು ಸಹ ಜಾನಕಿ ಕೈಯಿಂದ ದೀಪಾ ಊಟ ಕಿತ್ತುಕೊಂಡಿದ್ದಾಳೆ.
ಚಾರುಲತಾಗೆ ಹೊಟ್ಟೆ ಉರಿ ಬರಲಿ ನನಗೆ ಹೊಟ್ಟೆ ತಣ್ಣಗಾಗುತ್ತದೆ ಎಂದು ದೀಪಾ, ಜಾನಕಿ ಕೈಲಿದ್ದ ಊಟವನ್ನು ಕಸಿದುಕೊಂಡು ಅಡುಗೆ ಮನೆಗೆ ಹೋಗಿ ಖಾರದ ಪುಡಿಯನ್ನು ಊಟಕ್ಕೆ ಬೆರೆಸಿದ್ದಾಳೆ. ನಂತರ ರಾಮಾಚಾರಿ ಕೈಗೆ ದೀಪ ಸಿಕ್ಕಿ ಯಾರಿಗೆ ಊಟ ಎಂದು ರಾಮಾಚಾರಿ ಕೇಳಿದ್ದಾನೆ. ಚಾರುಲತಾಗೆ ಊಟ ತೆಗೆದುಕೊಂಡು ಹೋಗುತ್ತಿದ್ದೇನೆ ನಮ್ಮ ಮನೆಗೆ ಬಂದವರು ಅತಿಥಿ ಸಮಾನ ಮಾವ ಎಂದು ಹೇಳಿದ್ದಾಳೆ. ಇದನ್ನೇ ನಂಬಿದ ರಾಮಾಚಾರಿ ಊಟ ಮಾಡಲು ಹೋಗಿದ್ದಾನೆ.

ಖಾರದ ಅಡುಗೆ ಕೊಟ್ಟ ದೀಪಾ
ಈ ಕಡೆ ಚಾರು ರೂಮಿಗೆ ಬಂದ ದೀಪ ಊಟ ಮಾಡಲು ತಟ್ಟೆಯನ್ನು ಕೊಡುತ್ತಾಳೆ ತಟ್ಟೆ ಕೊಡುವ ಮುಂಚೆ ಕಣ್ಣು ಬಂದರೆ ಮೊದಲು ಮಾಡುವ ಕೆಲಸ ಏನು ಎಂದು ದೀಪಾ ಕೇಳಿದ್ದಾಳೆ. ಇದಕ್ಕೆ ಉತ್ತರ ನೀಡಿದ ಚಾರು ರಾಮಾಚಾರಿ ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ ನೋಡಬೇಕು ಎಂದು ಹೇಳಿದ್ದಾಳೆ ಇದಕ್ಕೆ ದೀಪಾಗೆ ತುಂಬಾ ಕೋಪ ಬಂದಿದೆ. ನಂತರ ಊಟ ತಿನ್ನಲು ಚಾರುಲತಾ ಕೈಗೆ ತಟ್ಟೆಯನ್ನು ಕೊಡುತ್ತಾಳೆ. ಒಂದು ತುತ್ತು ಅನ್ನವನ್ನು ಬಾಯಿಗಿಟ್ಟ ಚಾರುಲತಾ ರಾಮಾಚಾರಿಯನ್ನು ಜೋರಾಗಿ ಕೂಗುತ್ತಾಳೆ.

ಖಾರದ ಅನ್ನ ತಿಂದ ರಾಮಾಚಾರಿ
ಸ್ಥಳಕ್ಕೆ ಬಂದ ರಾಮಾಚಾರಿ ಏನಾಯಿತು ಮೇಡಂ ಎಂದು ಕೇಳಿದ್ದಕ್ಕೆ ತುಂಬಾ ಖಾರವಾಗಿದೆ ಎಂದು ಹೇಳುತ್ತಾಳೆ. ಅಲ್ಲಿಂದ ಓಡಿ ಹೋದ ರಾಮಾಚಾರಿ ಸಕ್ಕರೆಯನ್ನು ತಂದು ಚಾರುಲತಾ ಬಾಯಿಗೆ ಹಾಕಿದ್ದಾನೆ ಇದೆಲ್ಲವನ್ನು ನೋಡುತ್ತಿದ್ದ ದೀಪಾಗೆ ಮತ್ತಷ್ಟು ಸಂಕಟ ಶುರುವಾಗಿದೆ. ಇದೇ ವೇಳೆ ದೀಪಾ ಮಾಡಿದ ತಪ್ಪಿಗೆ ದೀಪ ಕಲಸಿಟ್ಟ ಕಾರದ ಅನ್ನವನ್ನು ರಾಮಾಚಾರಿ ತಿಂದಿದ್ದಾನೆ. ಮನೆಯವರು ಬೇಡ ಎಂದರು ಸಹ ರಾಮಾಚಾರಿ ನಾವು ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸಬೇಕು ಅಲ್ಲವೇ ಎಂದು ದೀಪಾ ನೋಡಿಕೊಂಡು ಹೇಳಿ ಅನ್ನವನ್ನು ತಿಂದಿದ್ದಾನೆ.

ಜಯಶಂಕರ್ ಬಳಿ ವಿಹಾನ್ ಬಗ್ಗೆ ಶರ್ಮಿಳಾ ಮಾತು
ಜಯಶಂಕರ್‌ಗೆ ಶರ್ಮಿಳಾ ಕಾಪಿ ತಂದುಕೊಟ್ಟು ವಿಹಾನ್ ಬಗ್ಗೆ ಮಾತನಾಡುತ್ತಿದ್ದಾಳೆ. ಇದನ್ನು ಆದ್ಯಾ ಸಹ ಕೇಳಿಸಿಕೊಳ್ಳುತ್ತಿದ್ದಾಳೆ. ವಿಹಾನ್ ತುಂಬಾ ಸಂಸ್ಕಾರವಂತ ಬೇರೆಯವರಿಗಾಗಿ ತುಡಿಯುವ ಮನಸ್ಥಿತಿ ಇದೆ, ಒಳ್ಳೆಯ ಹುಡುಗ, ಕೈತುಂಬಾ ಸಂಪಾದನೆ ಇದೆ ನನ್ನ ಮಗಳು ಒಳ್ಳೆಯ ಹುಡುಗನನ್ನೇ ಲವ್ ಮಾಡಿದ್ದಾಳೆ ಎಂದು ಶರ್ಮೀಳಾ ಜಯಶಂಕರ್ ಬಳಿ ಹೇಳಿದ್ದಾಳೆ. ಅದಕ್ಕೆ ಜಯಶಂಕರ್ ನಂಗೆ ಗೊತ್ತಿದೆ ನನ್ನ ಮಗಳ ಆಯ್ಕೆ ಚನ್ನಾಗಿ ಇರುತ್ತದೆ ಎಂದು, ನಾನು ನಿನಗೆ ಮುಂಚೆಯೇ ಹೇಳಿದ್ದೇ ಎಂದು ಜಯಶಂಕರ್ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಆದ್ಯಾ ನನ್ನ ಹುಡುಗ ಎಲ್ಲರಿಗೂ ಮೋಡಿ ಮಾಡಿದ್ದಾನೆ ಎಂದು ಖುಷಿಪಡುತ್ತಾಳೆ. ವಿಹಾನ್‌ನನ್ನು ಮನೆಗೆ ಕರೆಯುವಂತೆ ಶರ್ಮಿಳಾ ಬಳಿ ಜಯಶಂಕರ್ ತಿಳಿಸಿದ್ದಾರೆ.

ರಾಮಾಚಾರಿಯ ಬೈಕ್ ಹತ್ತಿ ಆಸ್ಪತ್ರೆಗೆ ಹೊರಟ ಚಾರು
ರಾಮಾಚಾರಿ ಜೊತೆಗೆ ಬೈಕ್‌ನಲ್ಲಿ ಚಾರುಲತಾ ಆಸ್ಪತ್ರೆಗೆ ಹೊರಟಿದ್ದಾಳೆ. ಅವಳಿಗೆ ಹಾರೈಕೆ ಮಾಡುವುದನ್ನು ನೋಡಿದ ಮನೆಯವರಿಗೆ ಎಲ್ಲಿಲ್ಲದ ಕೋಪ ಬಂದಿದೆ.ಅದು ಅಲ್ಲದೇ ಸ್ಥಳದಲ್ಲೇ ಇದ್ದ ದೀಪಾ ಇದ್ಯಾವುದನ್ನು ಸಹಿಸುತ್ತಿಲ್ಲ. ನೋಡು ಅಪ್ಪ ಮಾವ ಅವಳ ಕೈಹಿಡಿದುಕೊಂಡು ಗಾಡಿ ಹತ್ತಿಸುತ್ತಿದ್ದಾನೆ ಎಂದು ಬೇಜಾರ್ ಮಾಡಿಕೊಳ್ಳುತ್ತಾಳೆ. ಅದಕ್ಕ ಜಾನಕಿ ಏನಿಲ್ಲ ಸುಮ್ಮನೆ ಇರು ಅವಳಿಗೆ ಕಣ್ಣು ಬಂದ ಮೇಲೆ ಅವಳು ಅವಳ ಮನೆಗೆ ಹೋಗುತ್ತಾಳೆ ಎಂದು ಸಮಾಧಾನ ಮಾಡುತ್ತಾರೆ. ಚಾರುಗೆ ಕಣ್ಣು ಡಾಕ್ಟರ್ ಏನು ಅಂತಾರೆ ಕಣ್ಣು ಬರುತ್ತಾ ಎಂಬುದೇ ಕುತೂಹಲಕಾರಿಯಾಗಿದೆ.