Ramachari Serial: ಚಾರುಗೆ ಬಾರದ ದೃಷ್ಠಿ: ರಾಮಾಚಾರಿಗೆ ಕಣ್ಣೀರು

By ಶೃತಿ ಹರೀಶ್ ಗೌಡ

'ರಾಮಾಚಾರಿ' ದೇವರ ಬಳಿ ಚಾರುಲತಾಗೆ ಕಣ್ಣು ಬರಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದಾನೆ. ಡಾಕ್ಟರ್ ಬ್ಯಾಡೇಂಜ್ ಬಿಚ್ಚಿದ ಮೇಲೆ 'ರಾಮಾಚಾರಿ' ಎಲ್ಲಿದ್ದೀಯಾ ಎಂದು ಕೇಳೋದ್ದನ್ನು ನೋಡಿ 'ರಾಮಾಚಾರಿ'ಗೆ ಶಾಕ್ ಆಗಿದೆ. ಮೇಡಂ ನಾನು ಎದುರುಗಡೇನೆ ಇದ್ದೇನೆ ಎಂದಾಗ ಚಾರು ನಂಗೆ ಎನು ಕಾಣಿಸ್ತಾ ಇಲ್ಲ ಎಂದು ಹೇಳಿದಾಗ ರಾಮಾಚಾರಿ ಕುಸಿದು ಬೀಳುತ್ತಾನೆ. ನಂತರ ಚಾರು ಕಣ್ಣೀರು ಹಾಕುತ್ತಾಳೆ.

ರಾಮಾಚಾರಿಯನ್ನು, ನಂಗೆ ಕಣ್ಣು ಬರಲ್ವ ಎಂದು ತುಂಬಾ ಸಲ‌ ಕೇಳ್ತಾ ಇರುತ್ತಾಳೆ ಆಗ ಡಾಕ್ಟರ್ ನಿಜ ಹೇಳೋಕೆ ಹೋದಾಗ ರಾಮಾಚಾರಿ ಕಣ್ಣಿನಲ್ಲಿ ಸನ್ನೆ ಮಾಡಿ ಹೇಳಬೇಡಿ ಎಂದು ಹೇಳುತ್ತಾನೆ. ನಂತರ ರಾಮಾಚಾರಿ ಕುಸಿದು ಬೀಳುತ್ತಾನೆ. ರಾಮಾಚಾರಿ ನನ್ನಿಂದಲೇ ಈ ರೀತಿಯಾಗಿದ್ದು ಎಂದು ತನ್ನನ್ನೇ ತಾನು ಶಪಿಸಿಕೊಳ್ಳುತ್ತಾನೆ.

ಈ ಕಡೆ ರಾಮಾಚಾರಿ ಸರಿಯಾದ ರೀತಿಯಲ್ಲಿ ಚಾರುವನ್ನು ನೋಡಿಕೊಳ್ಳದ ಹಿನ್ನೆಲೆಯಲ್ಲಿ ರಾಮಾಚಾರಿಗೆ ಡಾಕ್ಟರ್ಸ್ ಬೈಯುತ್ತಿದ್ದಾರೆ.‌ ನಿಮಗೆ ಹೇಳಿದ್ದೇ ತಾನೇ ಅವರಿಗೆ ತಲೆ ಮೇಲೆ ನೀರು ಬೀಳದಂತೆ ನೋಡಿಕೊಳ್ಳಬೇಕು ಎಂದು ಆದರೆ ನೀವು ಮಾಡಿದ್ದೇನು ಮಳೆಯಲ್ಲಿ ನೆನೆಸಿದ್ದೀರಾ, ಬಾವಿಗೆ ಬೇರೆ ಬಿದ್ದರು ಎಂದು ಹೇಳುತ್ತಿದ್ದೀರಾ, ಸಣ್ಣ ಆಪರೇಷನ್ ಆದರೆ‌ ನಾವು ತಲೆಗೆ ನೀರು ಹಾಕಲು ಬಿಡೋದಿಲ್ಲ ಆದರೆ ನೀವು ಮಾಡಿದ್ದೇನು ಎಂದು ರಾಮಾಚಾರಿಗೆ ಬೈಯುತ್ತಾರೆ.

ಚಾರುಲಗೆ ದೃಷ್ಟಿ ಬರುವುದೇ ಇಲ್ವ?

ಚಾರುಲಗೆ ದೃಷ್ಟಿ ಬರುವುದೇ ಇಲ್ವ?

ಮಾನ್ಯತಾಗೆ ಅನುಮಾನ ಬಂದಿದೆ, ಚಾರುಲತಾಳನ್ನು ಕಿಡ್ನ್ಯಾಪ್ ಮಾಡಿದ್ರಾ ಅಥವಾ ಚಾರುಗೆ ಎನಾದ್ರು ಆಗಿದೆಯಾ ಎಂದೆಲ್ಲಾ ಯೋಚಿಸುತ್ತಾ ಸಾನ್ವಿಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ. ಆದರೆ ಸಾನ್ವಿ‌ ಈ ಕಡೆ ರಾಮಾಚಾರಿಗೆ ಮೇಸೇಜ್ ಮಾಡುತ್ತಾಳೆ. ಆದರೆ ರಾಮಾಚಾರಿ ಫೋನ್ ನೋಡೋದೆ ಇಲ್ಲ. ಮಾನ್ಯತಾ ಈ ಕಡೆ ಬೇಟೆಗೆ ಹೊರಟಿರೋದು ಈ ಮಾನ್ಯತಾ ಸಿಕ್ಕಿಹಾಕಿಕೊಳ್ಳಲೇಬೇಕು ಎಂದು ಮಾನ್ಯತಾ ಹೇಳುತ್ತಾಳೆ.

ಚಾರುಗೆ ಸುಳ್ಳು ಹೇಳುವ ರಾಮಾಚಾರಿ

ಚಾರುಗೆ ಸುಳ್ಳು ಹೇಳುವ ರಾಮಾಚಾರಿ

ಆಸ್ಪತ್ರೆಯಿಂದ ಮನೆ ಕಡೆ ರಾಮಾಚಾರಿ ಚಾರು ಹೊರಟಿದ್ದಾರೆ. ದಾರಿ ಮಧ್ಯದಲ್ಲಿ ಚಾರು ರಾಮಾಚಾರಿಯನ್ನು ನಂಗೆ ಶಾಶ್ವತವಾಗಿ ಕಣ್ಣು ಬರಲ್ವ ಎಂದು ಕೇಳಿದಾಗ ರಾಮಾಚಾರಿ ಶಾಕ್ ಆಗುತ್ತಾನೆ. ನಂತರ ಸಾವರಿಸಿಕೊಂಡು ಇನ್ನೂ ಹದಿನೈದು ದಿನಗಳಲ್ಲಿ ನಿಮಗೆ ಕಣ್ಣು ಬರುತ್ತದೆ ಮೇಡಂ ಅಲ್ಲಿವರೆಗೂ ನಮ್ಮ ಮನೆಯಲ್ಲಿ ನೀವು ಇರಿ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳುತ್ತಾನೆ. ಆಗ ಚಾರು ಬಹಳ ಖುಷಿಯಿಂದ ರಾಮಾಚಾರಿ ಜೊತೆಗೆ ಮಾತನಾಡುತ್ತಾಳೆ.

ಫಲಿಸಿದ ದೀಪಾ ಹರಕೆ

ಫಲಿಸಿದ ದೀಪಾ ಹರಕೆ

ದೀಪಾ ದೇವರ ಬಳಿ ಶಾಶ್ವತವಾಗಿ ಚಾರುಲತಾಗೆ ಕಣ್ಣು ಹೋಗಲಿ ಎಂದು ಹರಕೆಯನ್ನು ಕಟ್ಟಿಕೊಂಡಿದ್ದಳು. ಈಗ ಚಾರುಲತಾಗೆ ಕಣ್ಣು ಹೋಗಿದೆ ಇದರಿಂದ ದೀಪಾ ಕಟ್ಟಿಕೊಂಡ ಹರಕೆ ಫಲಿಸಿದಂತೆ ಆಗಿದೆ. ಈ ಕಡೆ ಅಪ್ಪ ಮಗಳು ಮಾತನಾಡುತ್ತಾ ಚಾರುನಾ ರಾಮಾಚಾರಿ ಮನೆಗೆ ಬಿಟ್ಟು ಬಾರದೇ ಇದ್ದರೆ ನಾನು ರೈಲಿಗೆ ತಲೆಕೊಡುತ್ತೇನೆ ಎಂದು ದೀಪಾ ಹೇಳಿದ ಮಾತು ಕೇಳಿ ಅಪ್ಪನಿಗೆ ಶಾಕ್ ಆಗಿದೆ.

ರಾಮಾಚಾರಿಗಾಗಿ ಕಾಯುತ್ತಿರುವ ಮನೆಯವರು

ರಾಮಾಚಾರಿಗಾಗಿ ಕಾಯುತ್ತಿರುವ ಮನೆಯವರು

ರಾಮಾಚಾರಿಯ ಹಾದಿಯನ್ನೇ ಮನೆಯವರೆಲ್ಲರೂ ಕಾಯುತ್ತಿದ್ದಾರೆ ಅವನು ಚಾರುಲತಾಳನ್ನು ಮನೆಗೆ ಬಿಟ್ಟು ಬರುತ್ತಾನಾ ಎಂದು ಕಾಯುತ್ತಿದ್ದಾರೆ. ಆದರೆ ರಾಮಾಚಾರಿ ಚಾರುವನ್ನು ಕರೆದುಕೊಂಡು ಬರುತ್ತಿದ್ದಾನೆ. ರಾಮಾಚಾರಿ ಗಾಡಿಯಲ್ಲಿ ಬರುತ್ತಿರುವುದನ್ನು ಜಾನಕಿ, ಅಜ್ಜಿ ಹಾಗೂ ಕೋದಂಡ ಎಲ್ಲರೂ ಸಹ ಕಿಟಕಿಯಲ್ಲಿ ನೋಡುತ್ತಿದ್ದಾರೆ. ಮೊದಲು ಬಾರಿ ರಾಮಾಚಾರಿ ನೋಡಿ ಇನ್ಮುಂದೆ ಆ ಪೀಡೆ ತೊಲಗಿತು ಎಂದು ಅಣ್ಣ ತಮ್ಮ ಚನ್ನಾಗಿ ಇರಿ ಎಂದು ಹೇಳುತ್ತಿರುವಾಗಲೇ ರಾಮಾಚಾರಿ ಹಿಂದೆ ಚಾರುಲತಾ ಕುಳಿತಿರೋದ್ದನ್ನು ನೋಡಿ ಪೀಡೆ ತೊಲಗಲಿಲ್ಲ ರಾಮಾಚಾರಿ ಜೊತೆಗೆ ಬರುತ್ತಿದೆ ಎಂದು ಹೇಳಿಕೊಳ್ಳುತ್ತಾನೆ ಕೋದಂಡ. ಚಾರುವನ್ನು ರಾಮಾಚಾರಿ ಸ್ಕೂಟರ್‌ನಿಂದ ಇಳಿಸಿ ಮನೆಯೊಳಗೆ ಕರೆದುಕೊಂಡು ಬರುತ್ತಿದ್ದಾನೆ. ಈ ಕಡೆ ಸಾನ್ವಿ ಜೊತೆಗೆ ಮಾನ್ಯತಾ ಸಹ ರಾಮಾಚಾರಿ ಮನೆಗೆ ಬರುತ್ತಿದ್ದಾಳೆ ಮುಂದೇನು ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Ramachari Written Update on January 23th episode. Here is the details about to charulatha's eye operation fails miserably and the doctors blame his carelessness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X