Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ಮಾನ್ಯತಾ ಕೈಗೆ ಸಿಕ್ಕಿಬಿದ್ದ ಚಾರುಲತಾ!
ರಾಮಾಚಾರಿ ಮನೆಯವರೆಲ್ಲರನ್ನು ದೂಷಣೆ ಮಾಡುತ್ತಾ ಇದ್ದಾನೆ ಚಾರುಲತಾ ಗೆ ಶಾಶ್ವತವಾಗಿ ಕಣ್ಣು ಹೋಗಲು ಇಷ್ಟು ದಿನ ನಾನೊಬ್ಬ ಕಾರಣನಾಗಿದ್ದೆ ಆದರೆ ಅದರಲ್ಲಿ ನೀವುಗಳು ಸಹ ಪಾಲನ್ನು ಪಡೆದುಕೊಂಡಿದ್ದೀರಿ ಎಂದು ರಾಮಾಚಾರಿ ಮನೆಯವರ ಬಳಿ ಹೇಳುತ್ತಾನೆ. ಕೋದಂಡನ ಬಳಿ ಬಂದ ರಾಮಾಚಾರಿ ಒಂದು ಹೆಣ್ಣು ಎಂಬುದನ್ನು ನೋಡದೆ ಮಳೆಯಲ್ಲಿ ನೀನು ಚಾರುಲತಾರನ್ನು ನೆನೆಸಿದೆ ಇದರಿಂದಾಗಿ ಅವರಿಗೆ ಶೀತ ಆಯಿತು ಇದು ಟ್ರೀಟ್ಮೆಂಟ್ ಗೆ ಅಡ್ಡ ಬಂದಿತು ಎಂದು ಅಣ್ಣನನ್ನು ಬೈಯ್ದಿದ್ದಾನೆ.
ನಂತರ ದೀಪಾ ಬಳಿ ಬಂದ ರಾಮಾಚಾರಿ ಚಾರು ಮೇಡಂ ಕಣ್ಣಲ್ಲಿ ನೀರು ಬಾರದೇ ಇರಬೇಕಿತ್ತು ನೀನು ಖಾರವನ್ನು ಸುರಿದು ಅವರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ ಎಂದು ಹೇಳಿ ದೀಪಾ ಮುಂದೆ ಕಣ್ಣೀರು ಹಾಕಿದ್ದಾನೆ. ಇದನ್ನೆಲ್ಲಾ ನೋಡಿದ ಜಾನಕಿಗೆ ಸಂಕಟವಾಗುತ್ತಿದೆ ತನ್ನ ಮಗ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಜಾನಕಿ ಸಂಕಟಪಡುತ್ತಾಳೆ.
ನಮ್ಮ ಕುಟುಂಬದಲ್ಲಿ ನಾವು ಒಂದು ಇರುವೆಗೂ ಸಹ ಕೇಡನ್ನು ಬಯಸಿಲ್ಲ ಆದರೆ ನಮ್ಮಿಂದಾಗಿ ಒಂದು ಹೆಣ್ಣಿನ ಬಾಳು ಕತ್ತಲೆಗೆ ದೂಡಿದಂತಾಗಿದೆ ಎಂದು ರಾಮಾಚಾರಿ ಅಳುತ್ತಾನೆ. ಕೋಪದ ಕೈಗೆ ಬುದ್ಧಿ ಕೊಟ್ಟು ಈಗ ನೋವು ಅನುಭವಿಸುವಂಥಾಗಿದೆ ಎಂದು ಕಣ್ಣೀರು ಹಾಕುತ್ತಾನೆ. ಜಾನಕಿ ಮಗನನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ.

ಸಡನ್ನಾಗಿ ಮನೆಗೆ ಎಂಟ್ರಿ ಕೊಟ್ಟ ಮಾನ್ಯತಾ
ಆಚಾರಿ ಮನೆಗೆ ಸಡನ್ನಾಗಿ ಮಾನ್ಯತಾ ಎಂಟ್ರಿಕೊಟ್ಟು ತನ್ನ ಮಗಳು ಚಾರುಲತಾ ಇದ್ದಾಳೆ ಎಂದು ರಾಮಾಚಾರಿಯ ಬಳಿ ಪ್ರಶ್ನೆ ಮಾಡಿದ್ದಾಳೆ. ಇವಳೇ ರಾಮಾಚಾರಿ ಚಾರು ಮೇಡಂ ಇಲ್ಲ ಯಾಕೆ ಬರುತ್ತಾರೆ ಅವರು ಕಲ್ಕತ್ತಾ ಗೆ ಹೋಗಿದ್ದಾರೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಮಾನ್ಯತಾ ನೀನು ಸುಮ್ಮನೆ ಇರು ನಾನು ನನ್ನ ಮಗಳು ಇರುವುದನ್ನು ಕಂಡು ಹಿಡಿದೆ ಹಿಡಿಯುತ್ತೇನೆ ಎಂದು ರಾಮಾಚಾರಿ ಬಳಿ ಹೇಳುತ್ತಾಳೆ.

ಮನೆಯೆಲ್ಲ ತಡಕಾಡಿದ ಮಾನ್ಯತಾ
ಚಾರು ಬೇಬಿ ಚಾರು ಬೇಬಿ ಎಂದು ಕೂಗಿಕೊಂಡು ಮಾನ್ಯತಾ ಮನೆಯನ್ನೆಲ್ಲ ತಡಕಾಡಿದ್ದಾಳೆ. ಅದಕ್ಕೆ ನಿಲ್ಲಿಸದ ಮಾನ್ಯತಾ ಬಚ್ಚಲು ಮನೆಗೂ ಹೋಗಿ ಡ್ರಮ್ನಲ್ಲಿ ಅಡಗಿಕೊಂಡಿದ್ದಾಳೆ ಎಂದು ಸಹ ನೋಡಿ ಅಲ್ಲಿ ಇರದನ್ನು ಸಹ ಕನ್ಫರ್ಮ್ ಮಾಡಿಕೊಂಡು ಬಂದಿದ್ದಾಳೆ. ನಂತರ ಪಾ, ಚಾರುಳನ್ನು ಬಚ್ಚಿಟ್ಟು ರೂಮಿನಲ್ಲಿ ಬಂದದ್ದನ್ನು ನೋಡಿದ ಮಾನ್ಯತಾಗೆ ಡೌಟ್ ಬಂದು ರೂಮಿನ ಕಡೆಯೂ ಸಹ ಹುಡುಕಾಟವನ್ನು ನಡೆಸಿದ್ದಾಳೆ.

ಎಲ್ಲಿ ಹೋದಳು ಚಾರು
ರೂಮಿನ ಬಾಗಿಲು ತೆಗೆದ ಮಾನ್ಯತಾ ವಾರ್ಡ್ರೋಬ್ ಸೇರಿದಂತೆ ಮಂಚದ ಕೆಳಗೆಲ್ಲ ತನ್ನ ಮಗಳು ಇದ್ದಾಳೆ ಎಂದು ಹುಡುಕಾಟ ನಡೆಸಿದ್ದಾಳೆ. ಕೊನೆಗೆ ಚಾರು ಇಲ್ಲದಿರುವುದನ್ನು ಕಂಡು ಮನೆಯಿಂದ ಹೊರಗೆ ಹೋಗಲು ಹಾಲ್‌ಗೆ ಬಂದಿದ್ದಾಳೆ. ಆಗ ರಾಮಾಚಾರಿ ಅಜ್ಜಿಗೆ ತಿಳಿಯುತ್ತಾನೆ ಅಜ್ಜಿ ಎಲ್ಲೂ ಇಲ್ಲದವಳೇನು ಆಕಾಶದಿಂದ ಉದುರಿ ಬರುತ್ತಾಳ ಈ ರೀತಿ ಮಾಡುವುದು ತಪ್ಪು ಬೇರೆಯವರ ಮನೆಗೆ ಬಂದು ನೀವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳುತ್ತಾರೆ. ಕೊನೆಗೆ ಮನೆಯಿಂದ ಹೊರಗೆ ಹೋಗುವಾಗ ಇನ್ನೊಮ್ಮೆ ಮನೆಯನ್ನು ಕಣ್ಣಾಡಿಸುತ್ತಾಳೆ. ಆದರೆ ಚಾರು ಅಲ್ಲಿ ಇರುವುದು ಗೊತ್ತಾಗುವುದಿಲ್ಲ ನಂತರ ಹೊರಗೆ ಹೋಗುತ್ತಾಳೆ. ರಾಮಾಚಾರಿಗೆ ಶಾಕ್ ಆಗುತ್ತದೆ ಚಾರು ಎಲ್ಲಿ ಹೋದರು ಎಂದು ಹುಡುಕಾಟ ನಡೆಸುತ್ತಿದ್ದಾಗ ಚಾರುಲತಾ ವಾಯ್ಸ್ ಕೇಳಿಸುತ್ತದೆ.

ಬೊಂಬೆ ನಡುವೆ ಅಡಗಿ ಕುಳಿತ ಚಾರು
ಈ ಕಡೆ ಸಿಕ್ಕಿ ಬೀಳುತ್ತೇನೆ ಎಂದು ತಿಳಿದ ಚಾರುಲತಾ ಹೇಗೋ ಬೊಂಬೆಗಳ ನಡುವೆ ಬಂದು ಕುಳಿತುಕೊಳ್ಳುತ್ತಾಳೆ. ಚಾರುಲತಾ ಅಮ್ಮನ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂದುಕೊಳ್ಳುತ್ತಾಳೆ. ಈ ಕಡೆ ವಾಯ್ಸ್ ಬಂದ ಕಡೆಯೇ ರಾಮಾಚಾರಿ ಹಾಗೂ ಮನೆಯವರು ನೋಡುತ್ತಿದ್ದಾಗ ಬೊಂಬೆಯ ಮಧ್ಯದಲ್ಲಿ ಅಡಗಿ ಕುಳಿತ ಚಾರುಲತಾಳ ಕಣ್ಣು ಮಾತ್ರ ಕಾಣಿಸುತ್ತಿರುತ್ತದೆ. ನೋಡಿದ ರಾಮಾಚಾರಿ ವಂಡರ್ಫುಲ್ ಮೇಡಂ ವಂಡರ್ಫುಲ್ ಎಂದು ಚಪ್ಪಾಳೆಯನ್ನು ತಟ್ಟುತ್ತಾನೆ ಆಗ ಮಾನ್ಯತಾ ಸಹ ಅಲ್ಲಿಗೆ ಬಂದು ಚಪ್ಪಾಳೆ ತಟ್ಟುತ್ತಿರುತ್ತಾಳೆ. ಮತ್ತೆ ಮಾನ್ಯತಾಳನ್ನು ನೋಡಿದ ಮನೆಯವರಿಗೆ ಶಾಕ್ ಆಗಿದೆ ಮುಂದೆ ಮಾನ್ಯತಾ ಏನು ನಿರ್ಧಾರ ಕೈಗೊಳ್ಳುತ್ತಾಳೆ ಎಂಬುವುದೇ ಕುತೂಹಲಕಾರಿಯಾಗಿದೆ.