Ramachari Serial: ರಾಮಾಚಾರಿ ಮನೆಯವರ ಪರನಿಂತ ಚಾರುಲತಾ

By ಶೃತಿ ಹರೀಶ್ ಗೌಡ

ಮಾನ್ಯತಾ ಮಗಳನ್ನು ನೋಡಿದಾಗ ರಾಮಾಚಾರಿ ಮನೆಯವರಿಗೆ ಶಾಕ್ ಆಗಿದೆ ನಂತರ ಬಾಯಿಗೆ ಬಂದಂತೆ ಮಾನ್ಯತಾ ಮಾತನಾಡುತ್ತಿದ್ದಾಳೆ. ಕೇಳಿಸಿಕೊಳ್ಳುತ್ತಿರುವ ರಾಮಾಚಾರಿ ಅವರ ಮನೆಯವರಿಗೆ ಮುಜುಗರವಾಗುತ್ತಿದೆ. ನೀವುಗಳು ಇಂತಹ ಸುಳ್ಳು ಹೇಳುತ್ತೀರಾ ಎಂದು ನಾನು ಎಂದುಕೊಂಡಿರಲಿಲ್ಲ ನಿಮ್ಮದು ಎಂತಹ ಸುಸಂಸ್ಕೃತ ಕುಟುಂಬ ಎಂದು ತಿಳಿದುಕೊಂಡಿದ್ದೆ. ರಾಮಾಚಾರಿ ಸತ್ಯ ಹರಿಶ್ಚಂದ್ರನ ರೀತಿ ಸುಳ್ಳೆ ಹೇಳುವುದಿಲ್ಲ ಎಂದು ತಿಳಿದುಕೊಂಡಿದ್ದೆ ಇದೇನಾ ನಿಮ್ಮ ಸಂಸ್ಕಾರ ಎಂದು ರಾಮಾಚಾರಿಯ ಕುಟುಂಬಸ್ಥರಿಗೆ ಮಾನ್ಯತಾ ಪ್ರಶ್ನೆ ಮಾಡಿದ್ದಾಳೆ.

ಇತ್ತ ಕಡೆ ರಾಮಾಚಾರಿ ಕುಟುಂಬದವರಿಗೆ ಮಾನ್ಯತಾ ಬಾಯಿಗೆ ಬಂದಂತೆ ಬೈಯುತ್ತಿರುವಾಗ ಚಾರುಲತಾ ಮಧ್ಯ ಪ್ರವೇಶ ಮಾಡಿ ಆ ರೀತಿಯೆಲ್ಲ ಬೇಡಿ ಎಂದು ಹೇಳಿದ್ದಾಳೆ. ನೀನು ಸುಮ್ಮನೆ ಇರು ಬೇಬಿ ಇವರು ನಿನ್ನ ತಲೆಕೆಡಿಸಿ ಈ ಮನೆಗೆ ತಂದು ಇಟ್ಟುಕೊಂಡಿದ್ದಾರೆ ಎಂದು ಮಗಳಿಗೆ ಮಾನ್ಯತಾ ರೇಗಿದ್ದಾಳೆ. ಇದರಿಂದ ಚಾರು ನನ್ನನ್ನು ಯಾರು ಇನ್ನುಗೆ ಕರೆದುಕೊಂಡು ಬಂದಿಲ್ಲ ನಾನು ಬಂದೆ ಎಂದು ಹೇಳಿದ್ದಾಳೆ. ನೀನು ಎಲ್ಲೋ ತಿರಿಗಿಕೊಂಡು ಹೇಳಬೇಡ ಚಾರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳು ಎಂದು ಮಾನ್ಯತಾ ಮಗಳನ್ನು ಕೇಳಿದ್ದಾಳೆ.

ತನ್ನ ಮಗಳಿಗೆ ಕಣ್ಣು ಹೋಗಿದ್ದನ್ನು ಕೇಳಿದ ಮಾನ್ಯತಾಗೆ ತುಂಬಾ ಶಾಕ್ ಆಗಿದೆ ಇದಕ್ಕೆಲ್ಲ ಯಾರು ಕಾರಣ ಎಂದು ಚಾರುಲತಾಳನ್ನು ಮಾನ್ಯತಾ ಕೇಳಿದ್ದಾಳೆ. ಇದೇ ವೇಳೆ ಚಾರುಲತಾ ಇದಕ್ಕೆ ಯಾರು ಕಾರಣರು ಅಲ್ಲ ಅಮ್ಮ ಎಂದು ತಿಳಿಸಿದ್ದಾಳೆ. ನನ್ನ ಮಗಳು ಕಲ್ಕತ್ತಾ ಗೆ ಪ್ರಾಜೆಕ್ಟ್ ಮೇಲೆ ಹೋಗಿದ್ದಾಳೆ ಎಂದು ನಾನು ತುಂಬಾ ಖುಷಿಯಾಗಿ ಇದ್ದೆ, ಇಲ್ಲಿ ನೋಡಿದರೆ ನೀನು ಕಣ್ಣು ಕಳೆದುಕೊಂಡು ಕುಳಿತಿದ್ದಿಯಾ ಎಂದು ಮಾನ್ಯತಾ ಸಂಕಟವನ್ನು ಪಡುತ್ತಾಳೆ.

ಶತ್ರು ಮನೆಯಲ್ಲಿರುವುದು ಬೇಡವೆಂದ ಮಾನ್ಯತಾ

ಶತ್ರು ಮನೆಯಲ್ಲಿರುವುದು ಬೇಡವೆಂದ ಮಾನ್ಯತಾ

ಅಮ್ಮ ನಾನು ಕೆಲಸ ಮಾಡುವ ವೇಳೆ ಕೆಮಿಕಲ್ ಬಿದ್ದು ನನ್ನ ಕಣ್ಣು ಹಾಳಾಗಿದೆ ಅದಕ್ಕಾಗಿ ನಾನು ಲೋಕಕ್ಕೆ ಮುಖ ತೋರಿಸದೆ ರಾಮಾಚಾರಿ ಮನೆಯವರಿಗೆ ರಿಕ್ವೆಸ್ಟ್ ಮಾಡಿಕೊಂಡು ಇಲ್ಲೇ ಉಳಿದುಕೊಂಡಿದ್ದೇನೆ ಎಂದು ಚಾರುಲತಾ ಹೇಳಿದ್ದಾಳೆ. ಇದಕ್ಕೆ ಮಾನ್ಯತಾ ನನಗೆ ಹೇಳಿದ್ದರೆ ನಾನೇ ನಿನಗೆ ಒಳ್ಳೆಯ ಫಾರಿಂದ ಆಫ್ಟರ್ ಬಳಿ ಟ್ರೀಟ್ಮೆಂಟ್ ಕೊಡಿಸುತ್ತಿದ್ದೆ ನನ್ನ ಶತ್ರು ಮನೆಯಲ್ಲಿ ಇರುವುದು ನೀನು ನನಗೆ ಬೇಜಾರಾಗಿದೆ ಎಂದು ಹೇಳಿದ್ದಾಳೆ.

ಚಾರುಲತಾಳನ್ನು ಮನೆಗೆ ಕರೆದುಕೊಂಡು ಹೋದ ಮಾನ್ಯತಾ

ಚಾರುಲತಾಳನ್ನು ಮನೆಗೆ ಕರೆದುಕೊಂಡು ಹೋದ ಮಾನ್ಯತಾ

ಮಗಳ ಪರಿಸ್ಥಿತಿಯನ್ನು ನೋಡಿದ ಮಾನ್ಯತಾಳಿಗೆ ಕರುಳು ಕಿತ್ತು ಬರುವಂತಾಗಿದೆ. ಮಗಳು ಪ್ರಪಂಚವನ್ನು ನೋಡದೆ ಕಣ್ಣು ಕಳೆದುಕೊಂಡು ಒದ್ದಾಡುತ್ತಿರುವುದಕ್ಕೆ ಮಾನ್ಯತಾ ಕಣ್ಣೀರನ್ನು ಹಾಕುತ್ತಿದ್ದಾಳೆ. ನೀನು ಭಯ ಪಡಬೇಡ ಬೇಬಿ ನಿನಗೆ ಈಗ ನನ್ನ ಹಾರೈಕೆ ಬೇಕಾಗಿದೆ ಎಂದು ಹೇಳುತ್ತಾಳೆ. ಚಾರು ಒಂದು ನಿಮಿಷ ಎನ್ನುವಾಗ ನನ್ನ ಶತ್ರುಗಳ ಮನೆಯ ಅನ್ನದ ಋಣ ಬೇಡ ಎಂದು ಮಗಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಾಳೆ.

ಬಹಳ ಬೇಸರದಲ್ಲಿರುವ ರಾಮಾಚಾರಿ

ಬಹಳ ಬೇಸರದಲ್ಲಿರುವ ರಾಮಾಚಾರಿ

ಈ ಕಡೆ ಮಾನ್ಯತಾ ಚಾರುಲತಾಳನ್ನು ಮನೆಗೆ ಕರೆದುಕೊಂಡು ಹೋದ ಮೇಲೆ ರಾಮಾಚಾರಿ ಬೇಸರದಲ್ಲಿ ಇದ್ದಾನೆ. ಶಾಶ್ವತವಾಗಿ ಅವರ ಮನೆಯ ನೆಮ್ಮದಿಯನ್ನು ನಾವು ಕಿತ್ತುಕೊಂಡು ಬಿಟ್ವಿ ಎಂದು ಕಣ್ಣೀರು ಹಾಕುತ್ತಾನೆ. ಇನ್ನೂ ಮನೆಯವರು ಸಮಾಧಾನ ಮಾಡಿದರು ಸಹ ರಾಮಾಚಾರಿ ಸಮಾಧಾನ ಆಗೋದಿಲ್ಲ ನಾನು ತಪ್ಪು ಮಾಡಿದೆ ಅಮ್ಮ ಅವರಿಗೆ ಸತ್ಯ ಗೊತ್ತಾದರೆ‌ ಈಗ ಮನೆಯಿಂದ ಕರೆದುಕೊಂಡು ಹೋದಷ್ಟು ಕೂಲಾಗಿ ಇರೋದಿಲ್ಲ ಎಂದು ಅನ್ನುತ್ತಾನೆ.

ಮುಂದೇನಾಗುತ್ತದೆ ನೋಡಬೇಕಿದೆ

ಮುಂದೇನಾಗುತ್ತದೆ ನೋಡಬೇಕಿದೆ

ಮನೆಯವರ ಚಾರುಲತಾ ಮನೆಯವರ ಬಳಿ ಚಾರುಲತಾಗೆ ಶಾಶ್ವತವಾಗಿ ಕಣ್ಣು ಬರೋದಿಲ್ಲ ಎಂಬ ಸತ್ಯ ತಿಳಿಸುವಂತೆ ರಾಮಾಚಾರಿಗೆ ಒತ್ತಾಯಿಸಿದ್ದಾರೆ. ರಾಮಾಚಾರಿ ಸಹ ಮೂರನೇಯವರಿಂದ ಸತ್ಯ ತಿಳಿಯುವ ಮೊದಲು ನಾನೇ ಸತ್ಯ ಹೇಳುವುದು ಒಳಿತು ಎಂದು ಹೇಳಿ ಎನೇ ಕಷ್ಟಬಂದರೂ ಎದೆಗುಂದದೆ ಎದುರಿಸುತ್ತೇನೆ ಎಂದು ಹೇಳುತ್ತಾನೆ. ಮುಂದೆ ಎನಾಗುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Ramachari Written Update on January 25th episode. Here is the details about to charulatha hiding the truth, many at a tackles her about the person responsible for it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X