Ramachari Serial: ಚಾರುಗಾಗಿ ವೃತ ಆರಂಭಿಸಿದ ರಾಮಾಚಾರಿ!

By ಶೃತಿ ಹರೀಶ್ ಗೌಡ

ಚಾರುಲತಾ ಮನೆಯಲ್ಲಿ ಎಲ್ಲರೂ ಸಹ ಬೇಜಾರಿನಲ್ಲಿ ಇದ್ದಾರೆ. ಮಾನ್ಯತಾ ತನ್ನ ಮಗಳ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾಳೆ. ಜೈ ಶಂಕರ್ ಮಗಳ ಪರಿಸ್ಥಿತಿ ನೋಡಿ ಏನನ್ನು ಮಾತನಾಡದೆ ಮಗಳ ನೋವಿನಲ್ಲಿ ಭಾಗಿಯಾಗಿದ್ದಾರೆ. ಆದರೆ ಚಾರುಲತಾ ಮಾತ್ರ ತುಂಬಾ ಕಾನ್ಫಿಡೆನ್ಸ್ ನಲ್ಲಿ ತನಗೆ ಕಣ್ಣು ಬರುತ್ತದೆ ಎನ್ನುತ್ತಾ ಇದ್ದಾಳೆ. ಈ ಕಡೆ ಸರ್ವೇಶ ಸಹ ಅಳುತ್ತಿದ್ದಾನೆ ಮನೆಯವರಿಗೆಲ್ಲರಿಗೂ ಸಹ ಚಾರುಲತಾಳೆ ಧೈರ್ಯವನ್ನು ಹೇಳುತ್ತಿದ್ದಾಳೆ.

15 ದಿನಗಳಲ್ಲಿ ನನಗೆ ಕಣ್ಣು ಬರುತ್ತದೆ ನಾನು ಸಹ ಎಲ್ಲರಂತೆ ಪ್ರಪಂಚವನ್ನು ನೋಡುತ್ತೇನೆ. ಅಲ್ಲಿಯವರೆಗೂ ನೀವು ಸುಮ್ಮನೆ ಇರಿ ಎನ್ನುತ್ತಿದ್ದಾಳೆ. ನಾನು ಕಣ್ಣು ಬಂದ ಮೇಲೆ ಪಾರ್ಟಿ ಹೋಟೆಲ್ ಎಂದೂ ತಿರುಗಾಡಿಕೊಂಡು ಇರುತ್ತೇನೆ ಆದರೆ ಮಗಳನ್ನು ನೋಡಿ ಮಾನ್ಯತಾ ತುಂಬಾ ದುಃಖಿಸುತ್ತಿದ್ದಾಳೆ. ಆದರೆ ಚಾರುಲತಾ ನನ್ನ ಕಣ್ಣು ಹೋಗಲು ಯಾರು ಕಾರಣರಲ್ಲ ಎಂದು ಹೇಳಿದರು ಸಹ ಮಾನ್ಯತಾ ಅನುಮಾನಿಸುತ್ತಿದ್ದಾಳೆ.

ಈ ಕಡೆ ಚಾರುಲತಾ ನನ್ನನ್ನು ಅಮೆರಿಕಾದ ಡಾಕ್ಟರ್ ಟ್ರೀಟ್ಮೆಂಟ್ ಮಾಡುತ್ತಿದ್ದಾರೆ ಎಂದು ಹೇಳಿದರು ಸಹ ಮಾನ್ಯತಾ ಎಲ್ಲೋ ಒಂದು ಕಡೆ ಭರವಸೆ ಇಟ್ಟುಕೊಂಡು ಅವರ ಫ್ಯಾಮಿಲಿ ಡಾಕ್ಟರ್ ಸುದರ್ಶನ್ ರವರಿಗೆ ಫೋನ್ ಮಾಡಲು ಹೊರಟಿದ್ದಾಳೆ. ಡಾಕ್ಟರ್‌ಗೆ ಫೋನ್ ಮಾಡುವ ಸಂಬಂಧ ಜೈ ಶಂಕರ್ ಬಳಿ ಚರ್ಚೆ ನಡೆಸಿದ್ದಾಳೆ. ನಾನು ಚಾರುಲತಾ ರಿಪೋರ್ಟ್ ಎಲ್ಲವನ್ನು ಸುದರ್ಶನ್ ಅವರಿಗೆ ಕಳುಹಿಸಿದ್ದೇನೆ ಅವರು ಏನು ಹೇಳುತ್ತಾರೆ ನೋಡೋಣ ಎಂದು ಜೈ ಶಂಕರ್ ಬಳಿ ಹೇಳುತ್ತಾಳೆ.

ಮಗಳ ಬಗ್ಗೆ ಸತ್ಯ ತಿಳಿದುಕೊಂಡ ಮಾನ್ಯತಾ

ಮಗಳ ಬಗ್ಗೆ ಸತ್ಯ ತಿಳಿದುಕೊಂಡ ಮಾನ್ಯತಾ

ಡಾ.ಸುದರ್ಶನ್ ಮಾನ್ಯತಾ ಜೊತೆ ಮಾತನಾಡುತ್ತಾ ನಾನು ನಿಮಗೆ ಹೇಳುವ ವಿಷಯದಿಂದ ಶಾಕ್ ಆಗುತ್ತದೆ ನಿಮ್ಮ ಮಗಳಿಗೆ ಶಾಶ್ವತವಾಗಿ ಕಣ್ಣು ಬರೋದಿಲ್ಲ ಎಂದು ತಿಳಿಸುತ್ತಾರೆ. ಮಾತು ಕೇಳಿದ ಮಾನ್ಯತಾಗೆ ತುಂಬಾ ಶಾಕ್ ಆಗುತ್ತದೆ. ನಡೆದ ಎಲ್ಲಾ ವಿಷಯವನ್ನು ಮಾನ್ಯತಾ ಬಳಿ ಸುದರ್ಶನ್ ಹೇಳುತ್ತಾರೆ. ಇನ್ನು ಮಗಳಿಗೆ ಕಣ್ಣು ಬಾರದನ್ನು ನೆನೆಸಿಕೊಂಡ ಮಾನ್ಯತಾಗೆ ಮತ್ತಷ್ಟು ಸಂಕಟ ಶುರುವಾಗಿದೆ. ಚಾರುಲತಾ ಅಮ್ಮನನ್ನು ಸಮಾಧಾನ ಮಾಡುತ್ತಿದ್ದಾಳೆ ಅಮ್ಮ ಇನ್ನೂ 15 ದಿನಗಳಲ್ಲಿ ನನಗೆ ಕಣ್ಣು ಬರುತ್ತದೆ ಸುಮ್ಮನಿರು ಎಂದು ಸಮಾಧಾನ ಮಾಡುತ್ತಿದ್ದಾಳೆ.

ಮುರಾರಿ ಮಾತಿಗೆ ಒಪ್ಪಿದ ರಾಮಾಚಾರಿ

ಮುರಾರಿ ಮಾತಿಗೆ ಒಪ್ಪಿದ ರಾಮಾಚಾರಿ

ಸತ್ಯವನ್ನು ಒಪ್ಪಿಕೊಳ್ಳಲು ಚಾರುಲತಾ ಮನೆಗೆ ಮುರಾರಿ ಜೊತೆಗೆ ಬರುತ್ತಿದ್ದಾನೆ. ಆದರೆ ಮುರಾರಿ ಗಾಡಿಯನ್ನು ಸೈಡಿಗೆ ಹಾಕಲು ರಾಮಾಚಾರಿ ಹೇಳಿದ್ದಾನೆ. ಯಾಕೋ ಮುರಾರಿ ಗಾಡಿಯನ್ನು ಸೈಡಿಗೆ ಹಾಕಲು ಹೇಳಿದೆ ಎಂದು ಕೇಳಿದ್ದಕ್ಕೆ ಮುರಾರಿ ನೀನು ಈಗ ಸತ್ಯ ಒಪ್ಪಿಕೊಳ್ಳಲು ಹೋದರೆ ತಪ್ಪಾಗುತ್ತದೆ ಎಂದು ಹೇಳಿದ್ದಾನೆ. ರಾಮಾಚಾರಿ ಗೆ ಬಿಡಿಸಿ ಇನ್ನು 15 ದಿನಗಳಲ್ಲಿ ಪವಾಡ ನಡೆದರೂ ನಡೆಯಬಹುದು ನೀನು ತಾಳ್ಮೆಯಿಂದ ಇರು ನಂತರ ಬೇಕಾದರೆ ಸತ್ಯವನ್ನು ಒಪ್ಪಿಕೋ ಎಂದು ಹೇಳಿದ್ದಾನೆ.

ಕೈಚೆಲ್ಲಿದ ಆಯುರ್ವೇಧ ವೈದ್ಯರು

ಕೈಚೆಲ್ಲಿದ ಆಯುರ್ವೇಧ ವೈದ್ಯರು

ರಾಮಾಚಾರಿ ಆಯುರ್ವೇಧ ಪಂಡಿತರ ಬಳಿ ಹೋಗಿದ್ದಾನೆ. ಪಂಡಿತರು ಪ್ರತಿಯೊಂದು ರಿಪೋರ್ಟನ್ನು ನೋಡಿ ರಾಮಾಚಾರಿ ಇಲ್ಲೇ ಚಾರುಲತಾಗೆ ಶಾಶ್ವತವಾಗಿ ಕಣ್ಣು ಬರುವುದಿಲ್ಲ ಎಂದು ಹೇಳಿದ್ದಾರೆ ನಾನು ಸಹ ಏನು ಚಿಕಿತ್ಸೆಯನ್ನು ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಟ್ರೀಟ್ಮೆಂಟ್ ಕೊಟ್ಟರು ಸಹ ಅವರಿಗೆ ದೃಷ್ಟಿ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ಆಗ ಪಂಡಿತರು ಇರೋ ಸತ್ಯವನ್ನು ಒಪ್ಪಿಕೊಂಡು ಮುಂದೆ ಹೋಗುವುದೇ ಸರಿ ಎಂದು ರಾಮಾಚಾರಿ ಬಳಿ ಹೇಳಿದ್ದಾರೆ.

ಚಾರುಲತಾಗಾಗಿ ವ್ರತ ಹಿಡಿದ ರಾಮಾಚಾರಿ

ಚಾರುಲತಾಗಾಗಿ ವ್ರತ ಹಿಡಿದ ರಾಮಾಚಾರಿ

ಚಾರುಲತಾಗಾಗಿ ರಾಮಾಚಾರಿ ವ್ರತವನ್ನು ಮಾಡುತ್ತಿದ್ದಾನೆ ಸಮಸ್ಯೆಯನ್ನು ನಾನೇ ಸರಿ ಮಾಡುತ್ತೇನೆ ಎಂದು ಹೇಳುತ್ತಾನೆ. ದೇವರ ಬಳಿ ಬೇಡಿಕೊಳ್ಳುತ್ತೇನೆ ಎಂದು ರಾವಣನ ಕಥೆಯನ್ನು ಅಣ್ಣ ಕೋದಂಡ ಹೇಳುತ್ತಾನೆ. ಆದರೂ ಸಹ ರಾಮಾಚಾರಿ ಚಾರುಲತಗಾಗಿ ಅರಳಿ ಮರದ ಬಳಿ ಒಂಟಿ ಕಾಲಿನ ವ್ರತವನ್ನು ಕೈಗೊಂಡಿದ್ದಾನೆ. ರಾಮಾಚಾರ್ಯ ಈ ಮಾತನ್ನು ಕೇಳಿದ ಮನೆಯವರಿಗೆಲ್ಲ ಶಾಕ್ ಆಗಿದೆ.

More from Filmibeat

English summary
Colors Kannada serial Ramachari Written Update on January 26th episode. Here is the details about to the doctor reveals that Charulatha has permanently lost her eyesight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X