Ramachari Serial: ಒತ್ತಾಯ ಮಾಡಿದರೂ ವ್ರತ ಬಿಡಲೊಪ್ಪದ ರಾಮಾಚಾರಿ!

By ಶೃತಿ ಹರೀಶ್ ಗೌಡ

ಇಷ್ಟು ದಿನ ದುರಹಾಂಕರದಲ್ಲಿ ಮೆರೆಯುತ್ತಿದ್ದ ಮಾನ್ಯತಾಗೆ ಮಗಳ ಪರಿಸ್ಥಿತಿ ಕಂಡು ಕಣ್ಣೀರು ಬರುತ್ತಿದೆ. ಜೈಶಂಕರ್ ಕಾಲ ಬಳಿ ಬಂದ ಮಾನ್ಯತಾ ಅಳುತ್ತಾ ಕುಳಿತಿದ್ದಾಳೆ. ಜೈಶಂಕರ್ ಮಾನ್ಯತಾಳನ್ನು ಸಮಾಧಾನ ಮಾಡುತ್ತಾ ಮಗಳ ಪರಿಸ್ಥಿತಿಗೆ ಕಣ್ಣೀರು ಹಾಕುತ್ತಿದ್ದಾನೆ. ಡಾಕ್ಟರ್‌ಗೆ ಫೋನ್ ಮಾಡಿದ ವಿಷಯವನ್ನು ಜೈಶಂಕರ್ ಬಳಿ ಮಾನ್ಯತಾ ಹೇಳುತ್ತಿದ್ದಾಳೆ. ನನ್ನ ಮಗಳಿಗೆ ಶಾಶ್ವತವಾಗಿ ಕಣ್ಣು ಬರೋದಿಲ್ಲ ಎಂದು ಡಾಕ್ಟರ್ ಹೇಳಿದರು ಎಂದು ಹೇಳಿದ್ದಾಳೆ. ಈ ಮಾತು ಕೇಳಿದ ಜೈಶಂಕರ್‌ಗೆ ಶಾಕ್ ಆಗಿದೆ.

ಹೌದು, ಜೈ ನಂಗೆ ಡಾಕ್ಟರ್ ಹೇಳಿದ ಮಾತು ನನ್ನ ಮಗಳ ಪರಿಸ್ಥಿತಿ ಎರಡನ್ನು ನೆನೆದು ಸಂಕಟಪಡುತ್ತಿದ್ದೇನೆ ಎಂದಾಗ ಜೈಶಂಕರ್ ಕೂಡ ಕಣ್ಣೀರು ಹಾಕ್ತಾನೆ. ಚಾರು ಭವಿಷ್ಯದ ಬಗ್ಗೆ ನಾನು ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದೆ ಅವಳನ್ನು ಕಂಪನಿಯ ಸಿಇಒ ಮಾಡಿ ದೇಶ ವಿದೇಶ ಸುತ್ತಿಸಬೇಕು, ಮಿಸ್ ಇಂಡಿಯಾ ಮಾಡಬೇಕು ಎಂದು ಎಲ್ಲ ಅಂದುಕೊಂಡಿದ್ದೆ ಎಂದು ಮಾನ್ಯತಾ ಕಣ್ಣೀರು ಹಾಕುತ್ತಾಳೆ. ಈ ಕಡೆ ಜೈ ಹದಿನೈದು ದಿನ ಕಣ್ಣು ಬರೋದಿಲ್ಲ ಅಂದುಕೊಂಡೇ ಬೇಸರವಾಗಿತ್ತು ಈಗ ಶಾಶ್ವತವಾಗಿ ಕಣ್ಣು ಬರೋದಿಲ್ಲ ಅಂದುಕೊಳ್ಳೊದ್ದನ್ನು ನೆನೆಸಿಕೊಂಡರೆ ಭಯವಾಗುತ್ತಿದೆ ಎನ್ನುತ್ತಾನೆ.

ಚಾರುಲತಾಗೆ ಕಣ್ಣೀಗಾಗಿ ಈಗ ದೇವರ ಮೊರೆಯ‌ನ್ನು ರಾಮಾಚಾರಿ ಹೋಗಿದ್ದಾನೆ. ಮನೆಯವರಯ ವ್ರತ ಮಾಡುವುದು ಎಷ್ಟು ಬೇಡವೆಂದು ಹೇಳಿದರು ಸಹ ಮಾತು ಕೇಳದೆ ಕಠಿಣ ವ್ರತವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಅದು ಕಠಿಣ ವ್ರತ ಎಂದು ಅಜ್ಜಿ, ಜಾನಕಿ, ಕೋದಂಡ ಹೇಳಿದರು ಸಹ ಕೇಳದೆ ಇನ್ನೂ ಹದಿನೈದು ದಿನಗಳಲ್ಲಿ ಚಾರು ಮೇಡಂಗೆ ಕಣ್ಣು ಬರುವ ರೀತಿ ಮಾಡಲು ನಂಗೆ ಕೊನೆ ಭರವಸೆಯಾಗಿ ಇರೋದು ಆ ದೇವರೊಬ್ಬನೇ ಅವನೇ ದಾರಿ ತೋರಿಸುವವನು ಎಂದು‌ಮನೆಯವರಿಗೆ ಹೇಳುತ್ತಿದ್ದಾನೆ.

ವ್ರತ ಮಾಡಿಯೇ ತೀರುತ್ತೇನೆಂದ ರಾಮಾಚಾರಿ

ವ್ರತ ಮಾಡಿಯೇ ತೀರುತ್ತೇನೆಂದ ರಾಮಾಚಾರಿ

ಈ ಕಡೆ ರಾಮಾಚಾರಿ ಮಾಡಲು ಹೊರಟಿರುವ ವ್ರತದ ಬಗ್ಗೆ‌ ಮನೆಯವರಿಗೆ ಭಯ‌ ಶುರುವಾಗಿದೆ. ವ್ರತ ಸರಿಯಾಗಿ ಆಗದೇ ಇದ್ದರೆ ಕೇಳಿದ್ದಕ್ಕೆಈ ಮನೆಯವರಿಗೂ ಕೇಡು ಎಂದು ಅಜ್ಜಿ ಜಾನಕಿ ಹೇಳುತ್ತಿದ್ದರು ಗೊತ್ತು ಎಂದು ರಾಮಾಚಾರಿ ಹೇಳಿದ್ದಾನೆ.‌ ಎಲ್ಲವೂ ಗೊತ್ತಿದ್ದು ನೀನು ಇಂತಹ ನಿರ್ಧಾರ ತಗೆದುಕೊಂಡು ವ್ರತ ಮಾಡುವುದು ಎಷ್ಟು ಸರಿ ಎಂದು ಅಜ್ಜಿ ಕೇಳಿದ್ದಕ್ಕೆ ನಾನು ನನಗಾಗಿ ವ್ರತ ಮಾಡುತ್ತಿಲ್ಲ. ಬೇರೆಯವರಿಗಾಗಿ ಮಾಡುತ್ತಿದ್ದೇನೆ ಅದರಿಂದ ಬಂದ ಪ್ರತಿಫಲವನ್ನು ನಾನೇ ಅನುಭವಿಸುತ್ತೇನೆ ದೇವರ ಮೇಲೆ ಭಾರ ಹಾಕಿ ವ್ರತ ಮಾಡೋದಾಗಿ ರಾಮಾಚಾರಿ ಹೇಳಿದ್ದಾನೆ.

ರಾಮಾಚಾರಿ ಮನವೊಲಿಕೆಯಲ್ಲಿ ಸೋತ ಅಜ್ಜಿ

ರಾಮಾಚಾರಿ ಮನವೊಲಿಕೆಯಲ್ಲಿ ಸೋತ ಅಜ್ಜಿ

ರಾಮಾಚಾರಿ ಮಲಗಿರುವ ಜಾಗಕ್ಕೆ ಬಂದ ಅಜ್ಜಿ ರಾಮಾಚಾರಿ ಮನವೊಲಿಕೆ ಮಾಡುವಲ್ಲಿ ಸೋತಿದ್ದಾರೆ. ಪರಿಯಾಗಿ ಬೇಡಿದರೂ ಸಹ ರಾಮಾಚಾರಿ ನಾನು ಇಟ್ಟ ಹೆಜ್ಜೆ ಹಿಂದೆ‌ ಇಡುವ ಮಾತೇ ಇಲ್ಲ ಅಜ್ಜಿ ಎಂದು ಹೇಳಿದ್ದಾನೆ. ಈ ಕಡೆ ತನ್ನ ತಾತ ಹೇಗೆ ತೀರಿಕೊಂಡರು ಎಂಬುದನ್ನು ಅಜ್ಜಿ ರಾಮಾಚಾರಿಗೆ ಹೇಳುತ್ತಿದ್ದಾರೆ. ವ್ರತ ಕಂಪ್ಲೀಟ್ ಆಗದೇ ಮನೆಗೆ ನಿನ್ನ ತಾತಾ ಬಂದರು ಬಂದ ಮೂರೇ ದಿನಕ್ಕೆ ಸತ್ತು ಹೋದರು ಎಂದು ಅಜ್ಜಿ ಹೇಳಿದ್ದಾರೆ. ಆದರೂ ರಾಮಾಚಾರಿ ಅಜ್ಜಿಗೆ ನಾನು ವ್ರತ ಮಾಡುತ್ತೇನೆ ನೀನು ಆಶೀರ್ವಾದ ಮಾಡು ಎಂದು ಕೇಳಿದ್ದಾನೆ‌.

ವಿಹಾನ್ ಜೊತೆಗೆ ಮದುವೆ ನಿರಾಕರಿಸಿದ ಚಾರು

ವಿಹಾನ್ ಜೊತೆಗೆ ಮದುವೆ ನಿರಾಕರಿಸಿದ ಚಾರು

ಮಾನ್ಯತಾ ಮತ್ತು ಜೈಶಂಕರ್ ಚಾರುಲತಾಗೆ ಊಟ ತಗೆದುಕೊಂಡು ಬಂದಿದ್ದಾಳೆ ಈ ವೇಳೆ ಬೇಬಿ ನಿನ್ನ ಹತ್ರ ನಾನು ಎನೋ‌ ಕೇಳಬೇಕು ಅಂದಾಗ ಕೇಳಮ್ಮ ಎಂದಾಗ ಮಾನ್ಯತಾ ವಿಹಾನ್ ಜೊತೆಗೆ ನಿನ್ನ ಮದುವೆ ಮಾಡುವುದಾಗಿ ತಿಳಿಸಿದ್ದಾಳೆ. ಆದರೆ ಚಾರುಲತಾ ಮಾತ್ರ ವಿಹಾನ್ ಮದುವೆಯಾಗಲು ನಂಗಿಷ್ಟ ಇಲ್ಲ ಎಂದು ಹೇಳಿದ್ದಾಳೆ. ಆಗ ಜೈಶಂಕರ್ ಅವಳ ಅಭಿಪ್ರಾಯ ಕೇಳು ಎಂದಿದ್ದೇ ಎನ್ನುತ್ತಾರೆ.

ಕಣ್ಣು ಬರುತ್ತಾ ಚಾರುಗೆ?

ಕಣ್ಣು ಬರುತ್ತಾ ಚಾರುಗೆ?

ಮಾನ್ಯತಾ ನೀನು ನಾನೆತ್ತ ಮಗಳು ನನ್ನ ಮಾತು ಕೇಳಬೇಕು ಎಂದಾಗ ನೀನು ನನ್ನ ಹೆತ್ತಿರಬಹುದು ನನ್ನ ಹೃದಯವನ್ನು ಅಲ್ಲ ನಾನು ನನ್ನ ಹೃದಯದ ಮಾತನ್ನು ಕೇಳುತ್ತೇನೆ ಎನ್ನುತ್ತಾಳೆ. ನಂತರ ಅಲ್ಲಿಂದ ಹೊರಗೆ‌ ಹೋಗಲು ಪ್ರಯತ್ನಿಸಿದಾಗ ಗೋಡೆ ಚಾರುಲತಾ ತಲೆಗೆ ತಾಕಿದಾಗ ನೋವಾಗುತ್ತದೆ. ಈ ವೇಳೆ ಚಾರುಲತಾ ಅಮ್ಮ ಎನ್ನುತ್ತಾಳೆ. ಈ‌ ಅಮ್ಮನಿಗೆ ನಿನ್ನ ಬೇಕು ಬೇಡ ಗೊತ್ತಿದೆ ಬಾ ಊಟ ಮಾಡು ಎಂದು ಕರೆಯುತ್ತಾಳೆ.
ರಾಮಾಚಾರಿ ವ್ರತದಿಂದ ಚಾರುಗೆ ಕಣ್ಣು ಬರುತ್ತಾ ನೋಡಬೇಕಿದೆ.

More from Filmibeat

English summary
Colors Kannada serial Ramachari Written Update on January 27th episode. Here is the details about to the Manyatha and Jai worried about Charulatha's eyes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X