Ramachari Serial: ಮಾನ್ಯತಾಗೆ ತಿಳಿತು ಸತ್ಯ! ಮುಂದೇನು?

By ಶೃತಿ ಹರೀಶ್ ಗೌಡ

ರಾಮಾಚಾರಿ ಫ್ಯಾಮಿಲಿ ಮೇಲೆ ನಮ್ಮ ಅಮ್ಮನಿಗೆ ತುಂಬಾ ಸಿಟ್ಟು, ನಂಗೆ ಕಣ್ಣು ಹೋಗೋಕ್ಕೆ ರಾಮಾಚಾರಿ ನೇ ಕಾರಣ ಎಂದು ಹೇಳಿದರೆ ಅವನನ್ನು ಹಾಗೂ ಅವನ ಫ್ಯಾಮಿಲಿಯನ್ನು ಸುಮ್ಮನೆ ಬಿಡಲ್ಲ ಯಾವುದೇ ಕಾರಣಕ್ಕೂ ನನ್ನ ಕಣ್ಣು ಹೋಗಿದ್ದು ರಾಮಾಚಾರಿಯಿಂದ ಗೊತ್ತಾಗಬಾರದು ಎಂದು ಚಾರು, ಸಾನ್ವಿ ಬಳಿ ಹೇಳುತ್ತಾ ಇರುತ್ತಾಳೆ ಇದನ್ನು ರೂಮಿನಲ್ಲಿದ್ದ ಮಾನ್ಯತಾ ಕೇಳಿಸಿಕೊಂಡು ಶಾಕ್ ಆಗುತ್ತಾಳೆ.

ರಾಮಾಚಾರಿ ವ್ರತ ಮಾಡಲು ಸಿದ್ಧತೆ ನಡೆಸುತ್ತಿದ್ದಾನೆ, ಅವನ ಜೊತೆಗೆ ಮುರಾರಿ ಸಹ ಹೋಗಿದ್ದಾನೆ. ಥ್ಯಾಂಕ್ಸ್ ಕಣೋ ಮುರಾರಿ ನೀನೊಬ್ಬನಾದರೂ ಸಹ ನನ್ನ ಜೊತೆ ಬಂದೆ ಎಂದು ಹೇಳುತ್ತಾ ಚಾರುಗೆ ಕಣ್ಣು ಬರಲು ವ್ರತ ಕೈಗೊಂಡಿದ್ದಾನೆ. ಆದರೆ ಮಾನ್ಯತಾ ಬೇರೆಯದ್ದೇ ಪ್ಲಾನ್ ಮಾಡುತ್ತಿದ್ದಾಳೆ.

ಚಾರುಲತಾ, ಬಳಿ ಸತ್ಯ ತಿಳಿದುಕೊಂಡ ಮಾನ್ಯತಾ ರೌಡಿಗಳ ಜೊತೆಗೆ ರಾಮಾಚಾರಿ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಹೊರಗೆ ಇದ್ದ ಕೋದಂಡ ಹಾಗೂ ಜಾನಕಿಯನ್ನು ರೌಡಿಗಳು ಎಳೆದುಕೊಂಡು ಬಂದು ಕಟ್ಟಿ ಹಾಕಿದ್ದಾರೆ. ಇನ್ನು ಅಜ್ಜಿಯನ್ನು ಸಹ ಬಿಡದೇ ರೌಡಿಗಳು ಹಗ್ಗದಿಂದ ಕಟ್ಟಿದ್ದಾರೆ ಮೂವರನ್ನು ಒಂದೇ ಹಗ್ಗದಿಂದ ಕಟ್ಟಿದ ಮಾನ್ಯತಾ ಮನೆಯವರಿಗೆ ಬೈಯ್ಯುತ್ತಿದ್ದಾಳೆ.

ರಾಮಾಚಾರಿ ಮನೆಯವರ ಮೇಲೆ ಮಾನ್ಯತಾ ದರ್ಪ

ರಾಮಾಚಾರಿ ಮನೆಯವರ ಮೇಲೆ ಮಾನ್ಯತಾ ದರ್ಪ

ನಮ್ಮ ಮನೆಯ ನೆಮ್ಮದಿ ಕಿತ್ತುಕೊಂಡು ಇರುವ ನಿಮ್ಮನ್ನು ನಾನು ನೆಮ್ಮದಿಯಾಗಿ ಇಡಲು ಬಿಡುವುದಿಲ್ಲ ರಾಮಾಚಾರಿ ನನ್ನ ಮಗಳ ಕಣ್ಣುಗಳನ್ನೇ ಕಿತ್ತುಕೊಂಡು ನಮ್ಮ ಮನೆಯ ನೆಮ್ಮದಿ ಕಿತ್ತುಕೊಂಡಿದ್ದಾನೆ. ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾನ್ಯತಾ ಬೈಯುತ್ತಿದ್ದಾಳೆ. ಮಾನ್ಯತಾ, ರಾಮಾಚಾರಿ ಎಲ್ಲಿ ಎಂದು ಕೇಳುತ್ತಿದ್ದರೂ ಸಹ ಮೂವರು ಬಾಯಿ ಬಿಡದ ಹಿನ್ನೆಲೆಯಲ್ಲಿ ಜಾನಕಿ ಕೋದಂಡ ಹಾಗೂ ಅಜ್ಜಿಗೆ ಒಡೆಯುತ್ತಿದ್ದಾಳೆ.

ರಾಮಾಚಾರಿ ಮನೆಯವರ ಮೇಲೆ ಸೀಮೆಎಣ್ಣೆ ಸುರಿದ ಮಾನ್ಯತಾ

ರಾಮಾಚಾರಿ ಮನೆಯವರ ಮೇಲೆ ಸೀಮೆಎಣ್ಣೆ ಸುರಿದ ಮಾನ್ಯತಾ

ರಾಮಾಚಾರಿ ಮನೆಯವರ ಮೇಲೆ ಸೀಮೆಎಣ್ಣೆಯನ್ನು ಸುರಿದು ನಿಮ್ಮನ್ನು ಇಲ್ಲೇ ಸಾಯಿಸಿ ಅವನಿಗೆ ಬೂದಿಯನ್ನು ತೆಗೆದುಕೊಂಡು ಕೊಡುತ್ತೇನೆ ಎಂದು ಘರ್ಜಿಸುತ್ತಿದ್ದಾಳೆ. ರಾಮಾಚಾರಿ ಎಲ್ಲಿದ್ದಾನೆ ಎಂದು ಹೇಳಿದರೆ ಅವನೊಬ್ಬನನ್ನು ಸಾಯಿಸಿ ನಿಮ್ಮ ಮೂವರನ್ನು ಬಿಟ್ಟುಬಿಡುತ್ತೇನೆ ಅದನ್ನು ಹೇಳದಿದ್ದರೆ ನೀವು ಮೂವರೆ ಮೊದಲು ಬೂದಿಯಾಗುತ್ತೀರ ಎಂದರು ರಾಮಾಚಾರಿ ಮನೆಯವರು ರಾಮಾಚಾರಿ ಎಲ್ಲಿದ್ದಾನೆ ಎಂದು ಬಾಯಿಬಿಡುತ್ತಿಲ್ಲ.

ಮಾನ್ಯತಾಗೆ ಸಿಕ್ತು ರಾಮಾಚಾರಿಯ ಸುಳಿವು

ಮಾನ್ಯತಾಗೆ ಸಿಕ್ತು ರಾಮಾಚಾರಿಯ ಸುಳಿವು

ಈ ಕಡೆ ಚಾರುಗೆ ಚಿಂಟು ಅಕ್ಕ ಅಮ್ಮ ತುಂಬಾ ಕೋಪದಲ್ಲಿ ಇದ್ದರು ಅವನನ್ನು ಸುಮ್ಮನೆ ಬಿಡೋದಿಲ್ಲ ಎಂದು ಹೇಳುತ್ತಿದ್ದರು ಎಂದು ಹೇಳಿದ್ದಾನೆ.‌ ರಾಮಾಚಾರಿ ಫ್ಯಾಮಿಲಿನಾ ಸುಮ್ಮನೆ ಬಿಡೋದಿಲ್ಲ ಎಂದು ಮಾನ್ಯತಾ ಹೇಳಿದ್ದನ್ನು ಚಿಂಟು ಹೇಳಿದ್ದಾನೆ ಇದನ್ನು ಕೇಳಿದ ಚಾರುಗೆ ತುಂಬಾ ಶಾಕ್ ಆಗಿದೆ. ಈ ಕಡೆ ರಾಮಾಚಾರಿಯನ್ನು ಹುಡುಕುತ್ತಿದ್ದ ಮಾನ್ಯತಾಗೆ ರಾಮಾಚಾರಿ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿದೆ. ಮುರಾರಿ, ರಾಮಾಚಾರಿ ವ್ರತ ಆರಂಭಿಸಿರುವ ಬಗ್ಗೆ ಅಜ್ಜಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಫೋನ್ ಬಂದಿದ್ದನ್ನು ನೋಡಿದ ಮಾನ್ಯತಾ ವಿಡಿಯೋ ಕಾಲ್ ರಿಸೀವ್ ಮಾಡಿದ್ದಾಳೆ ಆಗ ಮುರಾರಿ, ಅಜ್ಜಿ ನೋಡಿ ರಾಮಾಚಾರಿ ಶ್ರದ್ದಾ ಭಕ್ತಿಯಿಂದ ವ್ರತವನ್ನು ಮಾಡುತ್ತಿದ್ದಾನೆ ಎಂಬುದನ್ನ ತಿಳಿಸಿದ್ದಾನೆ.

ರಾಮಾಚಾರಿಯ ವ್ರತ ಹಾಳು ಮಾಡುತ್ತಾಳಾ ಮಾನ್ಯತಾ?

ರಾಮಾಚಾರಿಯ ವ್ರತ ಹಾಳು ಮಾಡುತ್ತಾಳಾ ಮಾನ್ಯತಾ?

ಆಗ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಮಾನ್ಯತಾ ನೀನಾದರೂ ನನಗೆ ಸುಳಿವು ನೀಡಿದೆಯಲ್ಲ ಎಂದು ಹೇಳಿದ್ದಾಳೆ. ರೌಡಿಗಳನ್ನು ಮನೆಯಲ್ಲಿ ಬಿಟ್ಟು ಇವರನ್ನು ನೋಡಿಕೊಳ್ಳಿ ನಾನು ಅವನನ್ನ ನೋಡಿಕೊಳ್ಳುತ್ತೇನೆ ನಾನು ಹೇಳಿದ ಮೇಲೆ ಬೆಂಕಿ ಹಚ್ಚುವಿರಂತೆ ಎಂದು ಹೇಳಿ ಮನೆಯಿಂದ ಹೊರಟಿದ್ದಾಳೆ. ಈ ಕಡೆ ರಾಮಾಚಾರಿಗೆ ಮುರಾರಿ ಮಾನ್ಯತಾ ಮನೆಯಲ್ಲಿ ಮಾಡಿರುವ ರಂಪದ ಬಗ್ಗೆ ಹೇಳುತ್ತಿದ್ದಾನೆ ಆದರೆ ಇದ್ಯಾವುದೂ ರಾಮಾಚಾರಿ ಕಿವಿಗೆ ಬೀಳುತ್ತಿಲ್ಲ. ಮನೆಯವರು ದಯವಿಟ್ಟು ವ್ರತವನ್ನು ಹಾಳು ಮಾಡಬೇಡ ಈ ಮನೆಗೆ ಕೇಡು ಎಂದರು ಕೇಳದೇ ಮಾನ್ಯತಾ ಹೊರಟಿದ್ದಾಳೆ. ರಾಮಾಚಾರಿ ಚಾರುಲತಾಗೆ ಕಣ್ಣು ಬರಲು ಮಾಡುತ್ತಿರುವ ವ್ರತವನ್ನು ಮಾನ್ಯತಾ ಹಾಳು ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Colors Kannada serial Ramachari Written Update on January 30th episode. Here is the details about Ramachari family in trouble.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X