Ramachari Serial: ರಾಮಾಚಾರಿ ವ್ರತ ಹಾಳು ಮಾಡಿದ ಮಾನ್ಯತಾ!
ಚಾರುಲತಾ, ಮಾನ್ಯತಾಗೆ ಫೋನ್ ಮಾಡಿ ಕಟ್ ಮಾಡಿದ ಮೇಲೆ ಅವರ ಅಮ್ಮ ಮಾತನಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾ ಇರುತ್ತಾಳೆ ಈ ಕಡೆ ಮಾನ್ಯತಾ ರಾಮಾಚಾರಿಯನ್ನು ಹುಡುಕಿಕೊಂಡು ಬರುತ್ತಿದ್ದಾಳೆ ನಂತರ ರಾಮಾಚಾರಿ ಇರುವ ಸ್ಥಳಕ್ಕೆ ಮಾನ್ಯತಾ ತಲುಪಿದ್ದಾಳೆ. ಈ ಕಡೆ ಮುರಾರಿ ಮಾನ್ಯತೆಗೆ ಚಾರುಲತಾಗೆ ಕಣ್ಣು ಬರಲು ಈ ರೀತಿಯ ವ್ರತವನ್ನು ರಾಮಾಚಾರಿ ಮಾಡುತ್ತಿದ್ದಾನೆ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ.
ಆದರೂ ಸಹ ಮಾನ್ಯತಾ ನಾನೇನು ನಂಬಲು ಚಾರು ಅಲ್ಲ ಎಂದು ಮುರಾರಿಗೆ ಹೇಳಿದ್ದಾಳೆ. ನನ್ನನ್ನು ಎದುರಿಸಲು ಆಗದೆ ಈ ರೀತಿ ಒಂಟಿ ಕಾಲಿನ ಮೇಲೆ ನಿಂತಿಕೊಂಡಿದ್ದೀಯ ನಾಚಿಕೆ ಆಗಲ್ವಾ ಎಂದು ರಾಮಾಚಾರಿಗೆ ಮಾನ್ಯತಾ ಬೈಯುತ್ತಿದ್ದಾಳೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ರಾಮಾಚಾರಿ ತನ್ನ ಧ್ಯಾನ ಮತ್ತು ಪೂಜೆಯಲ್ಲಿ ಮುಳುಗಿ ಹೋಗಿದ್ದಾನೆ. ರಾಮಾಚಾರಿ ಎಂದು ಕಿರುಚಿಕೊಳ್ಳುತ್ತಿದ್ದಾಳೆ ಮಾನ್ಯತಾ. ಆದರೆ ಮುರಾರಿ, ಮೇಡಂ ಅವನಿಗೆ ಕೇಳಿಸೋದಿಲ್ಲ ಅವನ ಮನಸಿನ ತುಂಬಾ ಶಿವನೇ ತುಂಬಿಕೊಂಡಿದ್ದಾನೆ ಸಂಜೆಗೆ ವ್ರತ ಮುಗಿಯುತ್ತದೆ ಎಂದು ಹೇಳಿದರು ಕೇಳೋದಿಲ್ಲ.
ಈ ಕಡೆ ಮುರಾರಿಯನ್ನು ಸಹ ರೌಡಿಗಳು ಹೊಡೆಯುತ್ತಾ ಇರುತ್ತಾರೆ ಮಾನ್ಯತಾ ರೌಡಿಯ ಕೈಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ರಾಮಾಚಾರಿಗೆ ಹೊಡೆಯಲು ಶುರು ಮಾಡುತ್ತಾಳೆ. ಅದಕ್ಕೂ ಸಹ ಜಗ್ಗದೇ ರಾಮಾಚಾರಿ ಮಂತ್ರವನ್ನು ಹೇಳುತ್ತಾ ಇರುತ್ತಾನೆ. ಈ ಕಡೆ ಮನೆಯವರು ತುಂಬಾ ಟೆನ್ಶನ್ ಆಗಿ ನನ್ನ ಮಗನಿಗೆ ಏನಾಯಿತು ಎಂದು ಜಾನಕಿ ಅಳಲು ಶುರು ಮಾಡಿದ್ದಾಳೆ. ಅಜ್ಜಿ ಸಹ ಭಗವಂತ ನನ್ನ ಮೊಮ್ಮಗನಿಗೆ ಕಷ್ಟ ಕೊಡಬೇಡ ಎಂದು ಅಜ್ಜಿ ಸಹ ಅಳುತ್ತಾ ಇರುತ್ತಾಳೆ.

ರಾಮಾಚಾರಿ ಮನೆಯವರಿಗೆ ರೌಡಿಗಳ ಕಿರುಕುಳ
ಈ ಕಡೆ ರಾಮಾಚಾರಿಗೆ ಚೆನ್ನಾಗಿ ಮಾನ್ಯತಾ ಹಾಗೂ ರೌಡಿಗಳು ಹೊಡೆಯುತ್ತಾ ಇದ್ದಾರೆ ಅದನ್ನು ನೋಡುತ್ತಿರುವ ಮಾನ್ಯತಾಗೆ ತುಂಬಾ ಖುಷಿಯಾಗಿದೆ. ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಸಹ ರೌಡಿಗಳು ತುಂಬಾನೇ ಟಾರ್ಚರ್ ಕೊಡುತ್ತಿದ್ದಾರೆ. ಮುದುಕಿ ನಿನ್ನನ್ನು ಕೊಂದು ಹಾಕಿ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದೇ ಒಂದು ಕಡ್ಡಿ ಗಿರಿದರೆ ನೀವೆಲ್ಲರೂ ಸ್ಮಶಾನ ಸೇರುತ್ತೀರ ಎಂದು ರೌಡಿಗಳು ಹೇಳಿದ್ದನ್ನು ಕೇಳಿದ ಜಾನಕಿ ಕೋದಂಡ ಹಾಗೂ ಅಜ್ಜಿ ಬಹಳ ನಡುಗುತ್ತಿದ್ದಾರೆ.

ವ್ರತ ಹಾಳು ಮಾಡಿದ ಮಾನ್ಯತಾ
ರೌಡಿಗಳು ಹೊಡೆದ ನಂತರ ಕಣ್ಣು ಬಿಟ್ಟ ರಾಮಾಚಾರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಪರಿವೇ ಇಲ್ಲ ಕಣ್ಣು ಬಿಟ್ಟು ನೋಡಿದರೆ ಅಲ್ಲಿ ಮಾನ್ಯತಾ ಮತ್ತು ರೌಡಿಗಳು ಇದ್ದಾರೆ ಇಲ್ಲಿ ಏನಾಗುತ್ತಿದೆ ಎಂದು ಕೇಳಿದ್ದಕ್ಕೆ ಮಾನ್ಯತಾ ಏನಾಗುತ್ತಿದೆ ಎಂದು ನಾನು ಹೇಳುತ್ತೇನೆ ಎಂದು ಗುಡುಗುತ್ತಿದ್ದಾಳೆ. ಅಲ್ಲಿ ಮನೆಯಲ್ಲಿ ಸಹ ಏನು ಆಗಬೇಕು ಅದೇ ಆಗುತ್ತಿದೆ ಕುಟುಂಬವು ಸುಟ್ಟು ಬೂದಿ ಆಗುತ್ತಿದೆ ಎನ್ನುತ್ತಾಳೆ.

ಮಾನ್ಯತಾ ಬಳಿ ನಿಜ ಹೇಳಿದ ರಾಮಾಚಾರಿ
ನನ್ನ ಮಗಳ ದೃಷ್ಟಿಯನ್ನು ಶಾಶ್ವತವಾಗಿ ಕಿತ್ತುಕೊಂಡು ನನ್ನ ಮಗಳಿಗೆ ಕಣ್ಣು ಬರಲಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದೀಯಾ ಈ ರೀತಿ ಹೇಳಿ ಬಚಾವಾಗಬಹುದು ಎಂದು ಕೊಂಡಿದ್ದೀಯಾ. ಚಾರು, ಮೇಡಂ ಗೆ ನೋವಾಗಬಾರದು ಎಂದುಕೊಂಡು ನಾನು ಸತ್ಯ ಹೇಳಲಿಲ್ಲ ಮೇಡಂ ಎಂದು ಮಾನ್ಯತಾ ಬಳಿ ರಾಮಾಚಾರಿ ಹೇಳುತ್ತಾನೆ ಸ್ಪೆಷಲ್ ಟ್ರೀಟ್ಮೆಂಟ್ ಕೊಟ್ಟಾಗ ಕಣ್ಣು ಬಂದರು ಬರಬಹುದು ಎಂಬ ಭರವಸೆ ಇತ್ತು ಆದರೆ ಅದು ಸಹ ಸುಳ್ಳು ಆಯಿತು. ನೀವು ನಮ್ಮ ಮನೆಗೆ ಬಂದಾಗ ಸತ್ಯ ಹೇಳಬೇಕು ಎಂದುಕೊಂಡಿದ್ದೆ ಆದರೆ ನೀವು ಕೇಳುವ ತಾಳ್ಮೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾನೆ.

ಯಾರು ಕಾಪಾಡುತ್ತಾರೆ ರಾಮಾಚಾರಿ ಕುಟುಂಬವನ್ನು?
ಸುಳ್ಳು ಹೇಳಬೇಡ ಜೀವ ಹೋಗಿರುವ ಬಳ್ಳಿಗೆ ಮತ್ತೆ ನೀರಾಕಿದ್ದೇ ಚಿಗುರುತ್ತಾ ಶಾಶ್ವತವಾಗಿ ಹೋಗಿರುವ ಕಣ್ಣು ವಾಪಸ್ ಬರುತ್ತಾ ನಾನು ವಿಜ್ಞಾನ ನಂಬುತ್ತೇನೆ ಅಜ್ಞಾನವನ್ನಲ್ಲ ಎಂದುಕೊಂಡು ರಾಮಾಚಾರಿಯನ್ನ ಮರಕ್ಕೆ ಕಟ್ಟಿ ಹಾಕಿ ಹಿಂಸೆಯನ್ನು ನೀಡುತ್ತಿದ್ದಾಳೆ. ನನ್ನ ಮಗಳು ಕಣ್ಣಿಲ್ಲದ ಅನುಭವಿಸುತ್ತಿರುವ ನೋವು ನಿನಗೆ ಗೊತ್ತಾಗಬೇಕು ಎಂದರೆ ನಿನ್ನ ಮನೆಯಲ್ಲಿ ಹೆಣಗಳು ಉರುಳುತ್ತಿರ ಬೇಕು ಎಂದು ಹೇಳುತ್ತಿದ್ದಾಳೆ ಈ ಕಡೆ ರೌಡಿಗೆ ಫೋನ್ ಮಾಡಿದ ಮಾನ್ಯತಾ ಅವರ ಮನೆಯವರನ್ನೆಲ್ಲಾ ರಾಮಾಚಾರಿಗೆ ತೋರಿಸುತ್ತಿದ್ದಾರೆ ಇದರಿಂದ ರಾಮಾಚಾರಿ ಕಣ್ಣೀರು ಹಾಕುತ್ತಿದ್ದಾನೆ. ರಾಮಾಚಾರಿ ಕುಟುಂಬವನ್ನು ಈಗ ಯಾರು ಕಾಪಾಡುತ್ತಾರೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











