ಚಾರು ಕುರಿತು ರಾಮಾಚಾರಿಯ ನಿರ್ಧಾರ ಏನು?

By ಶೃತಿ ಹರೀಶ್ ಗೌಡ

ಮಾನ್ಯತಾ ಬಂದು ರಾಮಾಚಾರಿಯನ್ನು ಬಾಯಿಗೆ ಬಂದಂತೆ ಬೈದು ಹೋಗ್ತಾಳೆ. ನಿನ್ನ ಕಂಪನಿಯಲ್ಲಿ ನಿಮಗೆ ಮಾರ್ಯಾದೆ ಇಲ್ಲ ಎಂದು ಅವಮಾನ ಮಾಡ್ತಾಳೆ. ನಂತರ ತನ್ನ ಮಗಳಿಗೆ ಫೋನ್ ಮಾಡಿ ರಾಮಾಚಾರಿಗೆ ಬೈದದ್ದನ್ನು ಹೇಳುತ್ತಾಳೆ. ಇದರಿಂದ ಚಾರುಗೆ ಬೇಜಾರಾಗುತ್ತದೆ, ಆದರೆ ಚಾರು ತನ್ನ ಅಮ್ಮನಿಗೆ ಆ ರೀತಿ ಮಾತಾಡಬೇಡ ಅಂತಾಳೆ.

ಅವನ ಪಾಡಿಗೆ ಅವನನ್ನು ಬಿಡಿ ಅವನೇನು ನಮ್ಮ ತಂಟೆಗೆ ಬರ್ತಾನ ಎಂದು ಹೇಳ್ತಾಳೆ. ಆದರೆ ಚಾರು ಅಮ್ಮ ಮಾನ್ಯತಾ ಅವನು ನಮಗೆ ಹೊಟ್ಟೆ ಉರಿಸಿರೋದು ಏನು ಕಮ್ಮಿನಾ ಎಂದು ಹೇಳ್ತಾಳೆ. ‌ನೀನು ಬಿಟ್ಟರು ನಾನು ಆ ರಾಮಾಚಾರಿನಾ ನಾನು ಸುಮ್ಮನೆ ಬಿಡೋದಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡ್ತಾಳೆ.‌ ಇದೆಲ್ಲವನ್ನೂ ಚಾರು ಇದ್ದ ವಾರ್ಡ್ ಪಕ್ಕದಲ್ಲಿ ಮಾತಾಡುತ್ತಾಳೆ. ಸಡನ್ ಆಗಿ‌ ಸಾನ್ವಿ ಬಂದು ಕರ್ಟನ್ ಎಳೆಯುತ್ತಾಳೆ.

ಇತ್ತ ಮಾನ್ಯತಾ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿರುತ್ತಾಳೆ. ಬಬ್ಲಿ ಸಾರ್ ಮತ್ತು ಟೀಂ ಮಾನ್ಯತಾ ಕಣ್ಣಿನಿಂದ ಚಾರುನಾ ಯಾವ ರೀತಿ ಕಣ್ಣಿನ ಬ್ಯಾಡೇಂಜ್ ತಗೆಸೋದು ಎಂಬುದನ್ನು ಡಿಸ್ಕಸ್ ಮಾಡ್ತಾ ಇರ್ತಾರೆ. ಅಲ್ಲಿಗೆ ನರ್ಸ್ ಬಂದು ಬನ್ನಿ ಡಿಸ್ಚಾರ್ಜ್ ಪ್ರೋಸೆಸ್ ಮುಗಿದಿದೆ ಎಂದು ಕರೆಯುತ್ತಾರೆ.

ವಾರ್ಡ್‌ನಿಂದ ಚಾರುವನ್ನು ಶಿಫ್ಟ್ ಮಾಡಿಸುವಾಗ ಮಾನ್ಯತಾ ಇದ್ಯಾರಪ್ಪ ಈ ರೀತಿಯಲ್ಲಿ ಬರ್ತಾ ಇರೋದು ಎಂದು ನೋಡ್ತಾ ಇರ್ತಾಳೆ ಅಷ್ಟರಲ್ಲಿ ಸಡನ್ ಆಗಿ ರಾಮಾಚಾರಿ ಬಂದು ಮಾನ್ಯತಾ ಮುಂದೆ ನಿಂತುಕೊಳ್ತಾನೆ. ರಾಮಾಚಾರಿ ಬಂದ ರೀತಿ ನೋಡಿ ಮಾನ್ಯತಾ ಏನು ರಾಮಾಚಾರಿ ಎಂದು ಕೇಳುತ್ತಾಳೆ.

ಮಾನ್ಯತಾ ಕ್ಷಮೆ ಕೇಳಿದ ರಾಮಾಚಾರಿ!

ಮಾನ್ಯತಾ ಕ್ಷಮೆ ಕೇಳಿದ ರಾಮಾಚಾರಿ!

ಇತ್ತ ಮಾನ್ಯತಾಳ ಮುಂದೆ ಬಂದು ನಿಂತುಕೊಂಡ ರಾಮಾಚಾರಿ ಮಾನ್ಯತಾ ಕ್ಷಮೆ ಕೇಳುತ್ತಾನೆ. ಆಗಲೂ ಸಹ ಮಾನ್ಯತಾ ಸ್ವಾಭಿಮಾನಿ ರಾಮಾಚಾರಿ ನನ್ನ ಹತ್ರ ಕ್ಷಮೆ ಕೇಳೋದಾ ಎಂದು ಅವಮಾನಿಸ್ತಾಳೆ. ಇದೆಲ್ಲವನ್ನೂ ಚಾರು ಸಹ ಕೇಳಿಸಿಕೊಳ್ತಾಳೆ. ಕೆಲವೊಮ್ಮೆ ಗೊತ್ತಾಗದೇ ಮಾಡದ ತಪ್ಪಿಗೆ ಕ್ಷಮೆ ಕೇಳಬೇಕು ಮೇಡಂ ಇಲ್ಲದಿದ್ದರೆ ಪಾಪಪ್ರಜ್ಞೆ ಕಾಡುತ್ತದೆ ಎಂದು ರಾಮಾಚಾರಿ ಹೇಳುತ್ತಾನೆ. ಕೊನೆಗೂ ನಿನಗೆ ಕ್ಷಮೆ ಕೇಳಬೇಕು ಅನಿಸ್ತಲ್ಲ ಗ್ರೇಟ್ ಅಂತಾಳೆ. ನಾನು ನಿನ್ನ ಕ್ಷಮಿಸಲ್ಲ, ಆದರೆ ಕ್ಷಮಿಸೋ ಅಂತಾ ತಪ್ಪು ಮಾಡು ಕ್ಷಮಿಸೋಕೆ ಆಗದೇ ಇರೋವಂತ ತಪ್ಪು ಮಾಡಬೇಡ ಎಂದು ರಾಮಾಚಾರಿಗೆ ಮಾನ್ಯತಾ ಹೇಳುತ್ತಾಳೆ ಮನಸಿನಲ್ಲಿ ನಾನು ಕ್ಷಮಿಸೋಕೆ ಆಗದಂತಹ ತಪ್ಪು ‌ಮಾಡಿದ್ದೇನೆ ಮೇಡಂ ಎಂದು ರಾಮಾಚಾರಿ ಅಂದುಕೊಳ್ತಾನೆ.

ರಾಮಾಚಾರಿಗೆ ವಾರ್ನ್ ಮಾಡಿದ ಮಾನ್ಯತಾ

ರಾಮಾಚಾರಿಗೆ ವಾರ್ನ್ ಮಾಡಿದ ಮಾನ್ಯತಾ

ಇತ್ತ ರಾಮಾಚಾರಿಗೆ ಮಾನ್ಯತಾ ವಾರ್ನ್ ಮಾಡ್ತಾಳೆ. ನನ್ನ ಮಗಳಿಗೆ ನಾನು ಹುಡುಗನನ್ನು ನೋಡ್ತಾ ಇದ್ದೀನಿ ಅದು ಮೂರನೇ ವ್ಯಕ್ತಿಯಿಂದ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಆ ಮೂರನೇ ವ್ಯಕ್ತಿ ನೀನೇ ಆದರೆ ಭೂಮಿಯ ಮೇಲೆ ನಿನ್ನ ಉಸಿರು ಇರೋದಿಲ್ಲ ಎಂದು ಹೇಳಿ ವಾರ್ನ್ ಮಾಡುತ್ತಾಳೆ. ಇತ್ತ ಮಾನ್ಯತಾ ಚಪ್ಪಲಿಯನ್ನು ನೋಡಿ ತನ್ನ ಮಗಳ ಚಪ್ಪಲಿ ಆಫೀಸ್‌ನಲ್ಲಿ ಈ ರೀತಿ ಚಪ್ಪಲಿ ಹಾಕೋರು ಯಾರಿದ್ದಾರೆ ಎಂದು ಶಾಕ್ ಆಗ್ತಾಳೆ. ತನ್ನ ಬೇಬಿ ಎಂದುಕೊಂಡು ವೀಲ್ ಚೇರ್ ಮೇಲಿದ್ದ ಹುಡುಗಿಯ ಶಾಲನ್ನು ತಗೆಯಲು ಹೋಗುತ್ತಾಳೆ.ಆದರೆ ವೀಲ್ ಚೇರ್ ಮೇಲೆ ಚಾರು ಬದಲು ಸಾನ್ವಿ ಕುಳಿತಿರುತ್ತಾಳೆ.

ಚಾರುವನ್ನು ಮನೆಗೆ ಕರೆತಂದ ರಾಮಾಚಾರಿ

ಚಾರುವನ್ನು ಮನೆಗೆ ಕರೆತಂದ ರಾಮಾಚಾರಿ

ಸ್ವಾನಿಯನ್ನು ನೋಡಿದ ಮಾನ್ಯತಾ ಇದೇನು ಎಂದು ಕೇಳಿದಾಗ ಸಣ್ಣ ಆಕ್ಸಿಡೆಂಟ್ ಅಂತಾ ಹೇಳುತ್ತಾಳೆ. ಚಾರು ಕೊಲ್ಕತ್ತಾಗೆ ಹೋದ ಕಾರಣ ರಾಮಾಚಾರಿ ಜೊತೆಗೆ ಬಂದಿದ್ದೇನೆ ಎಂದು ಹೇಳುತ್ತಾಳೆ. ಅಲ್ಲಿಗೆ ಬಂದಿದ್ದ ಗಂಡಾಂತರ ಪಾರು ಆಯಿತು ಎಂದು ನಿಟ್ಟುಸಿರು ಬಿಡುತ್ತಾರೆ. ಇನ್ನೂ ರಾಮಾಚಾರಿ ಮನೆಗೆ ಇನ್ನು ಬಂದಿಲ್ಲ ಎಂದು ಟೆನ್ಶನ್ ಆಗಿದ್ದ ಮನೆಯವರಿಗೆ ರಾಮಾಚಾರಿ ಹಾಗೂ ಚಾರುವನ್ನು ಒಟ್ಟಿಗೆ ನೋಡಿ ಶಾಕ್ ಆಗುತ್ತದೆ. ಚಾರುಗೆ ರಾಮಾಚಾರಿ ಬಲಗಾಲಿಟ್ಟು ಒಳಗೆ ಬನ್ನಿ ಮೇಡಂ ಎಂದಾಗ ಮನೆಯವರೆಲ್ಲರೂ ಕೂಡ ರಾಮಾಚಾರಿಯನ್ನೇ ನೋಡುತ್ತಾ ಇರುತ್ತಾರೆ. ಮುಂದೆ ಏನು ಆಗುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Ramachari Written Update on January 5th episode. Here is the details about Ramachari take care Charu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X