Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಮಾಚಾರಿ: ಚಾರುವನ್ನು ಮನೆಗೆ ಕರೆ ತಂದ ರಾಮಾಚಾರಿ! ಮುಂದೇನು?
ಇತ್ತ ಮನೆಯಲ್ಲಿ ಜಾನಕಿ, ರಾಮಾಚಾರಿಗೆ ನೀನು ಅಮ್ಮ ಅಂತಾ ನನ್ನ ಕರೆಯಬೇಡ ನೀನು ಯಾವಾಗ ಚಾರುನಾ ಬಾಲಗಾಲಿಟ್ಟು ಮನೆಯೊಳಗೆ ಕರೆದುಕೊಂಡು ಬಂದ್ಯೋ ಅವಾಗಲೇ ನನಗೂ ನಿನಗೂ ಸಂಬಂಧ ಕಳೆದು ಹೋಗಿದೆ ಎನ್ನುತ್ತಾರೆ. ಅಜ್ಜಿ ಸಹ ಇದಕ್ಕೆ ಧ್ವನಿಗೂಡಿಸಿ ಏನೋ ಕೇಳೋದು ನಿನ್ನ ಮಾತನ್ನು ಇವಳು ನನ್ನ ಮನೆಯ ನಂದಾ ದೀಪವನ್ನೇ ಅರಿಸಿದವಳು ಎನ್ನುತ್ತಾರೆ.
ಆದರೆ ಯಾರಿಗೂ ರಾಮಾಚಾರಿ ಮಾತನ್ನು ಕೇಳೋ ತಾಳ್ಮೆನೆ ಇರಲ್ಲ, ರಾಮಾಚಾರಿಗೆ ಅಜ್ಜಿ ಮತ್ತು ತಾಯಿ ಇಬ್ಬರೂ ಬೈಯ್ಯೋಕೆ ಶುರು ಮಾಡ್ತಾರೆ. ನಮ್ಮ ಪುಣ್ಯಕ್ಕೆ ಸೇರು ಇಟ್ಟು ಮನೆ ತಂಬಿಸಿಕೊಳ್ಳಿ ಅನ್ನಲಿಲ್ಲ. ಕೊನೆಗೂ ನನ್ನ ಬೆನ್ನಿಗೆ ಚೂರಿ ಹಾಕಿಬಿಟ್ಟೆ ಎನ್ನುತ್ತಾರೆ. ನನ್ನ ಸೊಸೆ ನಿನ್ನ ಮಗನ ತರ ನೋಡಿಕೊಂಡಿದ್ಲು, ಇವಾಗ ಅವಳ ಆತ್ಮ ಅದೆಷ್ಟು ನೋವು ಅನುಭವಿಸುತ್ತದೋ ನೀನು ಹೀಗೆ ಮಾಡೋ ಬದಲು ಒಂದು ತೊಟ್ಟು ವಿಷ ಹಾಕಿದ್ರೆ ಸರಿ ಹೋಗೋದು ಎನ್ನುತ್ತಾರೆ. ಇದಕ್ಕೆ ರಾಮಾಚಾರಿ ಮತ್ತು ಚಾರು ಇಬ್ಬರಿಗೂ ಬೇಸರವಾಗುತ್ತದೆ.
ಇತ್ತ ಶೃತಿ ಸಹ ಯಾಕಣ್ಣ ಈ ರೀತಿ ಮಾಡಿದೆ ನೀನು ಇವಳಿಗೆ ತಾಳಿ ಕಟ್ಟಿದ್ಯಾ ನಮ್ಮ ಅಪರ್ಣ ಅತ್ತಿಗೆಗೆ ಮಾಡಿದ ಮೋಸ ನಿನ್ನ ಕಣ್ಮುಂದೆ ಬರಬೇಕಿತ್ತು ಅಂತಾಳೆ. ಯಾಕೆ ಎಲ್ಲಾ ಬಾಯಿಗೆ ಬಂದ ರೀತಿ ಮಾತಾಡುತ್ತೀರಾ ಎನ್ನೋವಾಗ ಶೃತಿ ಅತ್ತಿಗೆ ಕಣ್ಣೀರು ನಮಗೆ ಒಳ್ಳೆಯದು ಮಾಡಲ್ಲ ಅನ್ನುತ್ತಾಳೆ. ಜಾನಕಿ ನೀನು ನಿನ್ನ ನಾಟಕ ನಿಲ್ಲಿಸು ಎಂದು ರಾಮಾಚಾರಿಗೆ ಬೈಯುತ್ತಾರೆ.

ರಾಮಾಚಾರಿ ಮಾತು ಕೇಳದ ಮನೆಯ ಮಂದಿ
ರಾಮಾಚಾರಿ ಚಾರುವನ್ನು ಮದುವೆಯಾಗಿಲ್ಲ ಎಂದು ಹೇಳುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಅಷ್ಟರಲ್ಲಿ ಜಾನಕಿ ರಾಮಾಚಾರಿಗೆ ಹಲವಾರು ಪ್ರಶ್ನೆ ಕೇಳೋಕೆ ಶುರು ಮಾಡುತ್ತಾರೆ. ಆಗ ರಾಮಾಚಾರಿ ಚಾರು ಮೇಡಂಗೆ ಕಣ್ಣು ಹೋಗಿದೆ ಎಂದು ಹೇಳಿದಾಗ ಶಾಕ್ ಆಗೋ ಸರದಿ ಮನೆಯವರದ್ದು ಆಗಿರುತ್ತದೆ. ನನ್ನಿಂದ ಚಾರು ಮೇಡಂಗೆ ಕಣ್ಣು ಹೋಗಿದೆ ಎಂದು ರಾಮಚಾರಿ ಹೇಳುತ್ತಾನೆ. ನಂತರ ಆಫೀಸ್‌ನಲ್ಲಿ ನಡೆದ ಪ್ರಸಂಗವನ್ನು ರಾಮಾಚಾರಿ ಹೇಳುತ್ತಾನೆ ಆಫೀಸ್‌ನಲ್ಲಿ ಕೈತಾಗಿ ಕೆಮಿಕಲ್ ಬಿದ್ದು ಕಣ್ಣಿಗೆ ಕೆಮಿಕಲ್ ತಾಗಿದೆ. ಇದರಿಂದ ಕಣ್ಣನ್ನು ಕಳೆದುಕೊಂಡಿದ್ದಾಳೆ ಎಂದು ಹೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಧ್ವನಿಗೂಡಿಸಿದ ಚಾರು ಇನ್ನೂ ಐದು ದಿನದಲ್ಲಿ ನನ್ನ ಕಣ್ಣು ಬರುತ್ತದೆ. ಇದಕ್ಕೆಲ್ಲ ಕಾರಣ ರಾಮಾಚಾರಿ ನನ್ನ ಕಣ್ಣಿಗೆ ಹಾನಿ ಮಾಡಿದ್ದು ಗೊತ್ತಾದರೆ ಮತ್ತೆ ದ್ವೇಷ ಬೆಳೆಯುತ್ತದೆ ಎಂದು ಹೇಳ್ತಾಳೆ. ನಿಮ್ಮ ಮನೆಯಲ್ಲಿ ಇರೋಕೆ ಅವಕಾಶ ಮಾಡಿಕೊಡಿ ಎಂದು ಚಾರು ಕೈ ಮುಗಿದು ಕೇಳಿಕೊಳ್ತಾಳೆ.

ವಿಹಾನ್-ಆದ್ಯಾ ನಡುವೆ ಪ್ರೇಮ
ಇತ್ತ ವಿಹಾನ್‌ಗೆ ಚಾರು ಅಮ್ಮ ಫೋನ್ ಮಾಡಿ ಸರ್ಪ್ರೈಸ್ ಇದೆ ಬಾ ಅಂತಾ ಕರೆಯುತ್ತಾರೆ. ಇದು ಅದ್ಯಾಗೆ ಬೇಜಾರ್ ಮಾಡಿಸುತ್ತದೆ. ನಮ್ಮ ದೊಡ್ಡಮ್ಮನಿಗೆ ಮನೆಯಲ್ಲಿ ಡೌಟ್ ಬಂದಿದೆ ಎನ್ನುತ್ತಾಳೆ. ನಿಮ್ಮ ಅಕ್ಕನ ಮದುವೆ ಆಗಲಿ ನಾನೇ ಮನೆಗೆ ಬಂದು ಕೇಳುತ್ತೇನೆ ಎಂದು ವಿಹಾನ್ ಹೇಳುತ್ತಾನೆ. ವಿಹಾನ್‌ಗೆ ಆದ್ಯಾ ಅವರತ್ತೆ ಮಾನ್ಯತಾಳ ಸವತಿ ಮಗಳು ಎಂಬ ವಿಚಾರ ಗೊತ್ತಿಲ್ಲ.

ಶೈಲೂನೇ ಚಾರು ಅನ್ನೋ ವಿಷಯ ರಾಮಾಚಾರಿಗೆ ಗೊತ್ತಾಗುತ್ತಾ?
ರಾಮಾಚಾರಿ ಚಾರುಗೆ ಸೇವೆ ಮಾಡಿದ ನಂತರ ಶೈಲೂಗೆ ಫೋನ್ ಮಾಡ್ತಾನೆ ಆಗ ಚಾರು ಮಲಗಿದ್ದ ರೂಮ್‌ನಿಂದ ಫೋನ್ ರಿಂಗ್ ಆಗೋ ಸೌಂಡ್ ಕೇಳಿ ರಾಮಾಚಾರಿ ಬರ್ತಾನೆ ನಂತರ ಫೋನ್ ರಿಂಗ್ ಆಗೋದು ನಿಂತು ಹೋಗುತ್ತದೆ. ಲಾಕ್ ಓಪನ್ ಮಾಡಿದ ರಾಮಾಚಾರಿ ಡಾರ್ಲಿಂಗ್ ಅಂತಾ ಇದೆ ಮೇಡಂ ಅಂದಾಗ ನನ್ನ ಮಾಮ್ ಕರೆ ಮಾಡಿರೋದು ಮಾಡಬೇಡ ರಾಮಾಚಾರಿ ಸಿಕ್ಕಿ ಹಾಕಿಕೊಳ್ತಿನಿ ಅಂತಾಳೆ.

ಶೈಲೂ ಬಳಿ ಹೇಳಿದ ರಾಮಚಾರಿ
ಅದಕ್ಕೆ ರಾಮಾಚಾರಿ ಅಂದರೇನು ಮೇಡಂ ಅಂದಾಗ ನಾನು ಕಲ್ಕತ್ತಾದಲ್ಲಿ ಇರೋದು ಅಂತ ಹೇಳಿರೋದು ಎಂದು ಸಮಜಾಯಿಷಿ ಕೊಡ್ತಾಳೆ ಚಾರು. ನಂತರ ಚಾರು ಹೊರಗೆ ಬಂದು ಶೈಲೂ ಜೊತೆಗೆ ಮಾತಾಡೋಕೆ ಶುರು ಮಾಡ್ತಾನೆ. ಮೇಡಂ ಇವತ್ತು ನನ್ನಿಂದ ಒಂದು ತಪ್ಪು ನಡೆದು ಹೋಯ್ತು ಎಂದು ಆಫೀಸ್‌ನಲ್ಲಿ ನಡೆದ ಎಲ್ಲಾ ಕಥೆನೂ ಶೈಲು ಬಳಿ ಹೇಳ್ತಾನೆ. ಆಗ ಶೈಲು ಇರುವಷ್ಟು ದಿನ ಪ್ರೀತಿಯಿಂದ ನೋಡಿಕೊಂಡು ಕರ್ಮಫಲ ತೀರಿಸಿಕೊಳ್ಳಿ ಎಂದು ಹೇಳುತ್ತಾಳೆ. ಇದರಿಂದಾಗಿ ರಾಮಾಚಾರಿ ಮನಸ್ಸಿಗೆ ಒಂದು ತರ ನೆಮ್ಮದಿ ಆಗುತ್ತದೆ. ಸದ್ಯಕ್ಕೆ ಚಾರುಗೆ ಕಣ್ಣು ಹೋಗೊರೋ ವಿಷಯ ಗೊತ್ತಿಲ್ಲ ಮುಂದೇನು ಎಂಬುದೇ ಕುತೂಹಲಕಾರಿ