For Quick Alerts
  ALLOW NOTIFICATIONS  
  For Daily Alerts

  ರಾಮಾಚಾರಿ: ಚಾರುಗೆ ಕಚ್ಚಿದ ಹಾವು! ಉಳಿಯುತ್ತಾ ಜೀವ?

  By ಶೃತಿ ಹರೀಶ್ ಗೌಡ
  |

  ರಾಮಾಚಾರಿ ಧಾರಾವಾಹಿಯ ಹೊಸ ಎಪಿಸೋಡ್‌ನ ಪ್ರಾರಂಭದಲ್ಲಿ ಮಾನ್ಯತಾ ಮನೆಯವರೆಲ್ಲರನ್ನೂ ಬರೋದ್ದಕ್ಕೆ ಹೇಳ್ತಾಳೆ. ಶರ್ಮಿಳಾ, ಆದ್ಯ, ಸರ್ವೇಶ್ ಎಲ್ಲರೂ ಕೂಡ ಮಾನ್ಯತಾ ಬಳಿ ಬರುತ್ತಾರೆ. ಆಗ ಶರ್ಮೀಳಾ ಏನಕ್ಕೆ ಅಕ್ಕ ನಮ್ಮನ್ನು ಬರ ಹೇಳಿದ್ದು ಎಂದು ಕೇಳುತ್ತಾಳೆ ಆಗ ಆದ್ಯ ನಾನು ಹೊರಡ್ತೀನಿ ಅಮ್ಮ ಎಂದು ಶರ್ಮಿಳಾಗೆ ತಿಳಿಸುತ್ತಾಳೆ. ಇಂದ ಕೋಪಗೊಂಡ ಮಾನ್ಯತಾ ನೀನು ಕೂಡ ಇರಬೇಕು ಎಂದು ಹೇಳ್ತಾಳೆ.

  ನಂತರ ಚಾರು ಮದುವೆಯ ಸಂಬಂಧ ನನ್ನ ಅಣ್ಣನ ಮಗ ಮನೆಗೆ ಬರುತ್ತಿದ್ದಾನೆ ಆಗ ನೀವು ಯಾರು ಇರಕೂಡದು ಎಂದು ಮಾನ್ಯತಾ ಆದೇಶ ಮಾಡುತ್ತಾಳೆ. ಇದಕ್ಕೆ ಆಧ್ಯಾ ಮಾತ್ರ ತಿರುಗಿತು ನೀಡುತ್ತಾಳೆ. ಇದರಿಂದ ಕೋಪಗೊಂಡ ಮಾನ್ಯತಾ ಚಿಲ್ಟಾರಿ ಪಲ್ಟಾರಿಗಳೆಲ್ಲ ನನ್ನ ಮುಂದೆ ಮಾತಾಡುವ ರೀತಿ ಆಯಿತು ಎಂದು ಕೋಪದಿಂದ ಕುದಿದು ಹೋಗ್ತಾಳೆ. ಶರ್ಮೀಳ ಆಧ್ಯಾಳ ಬಾಯಿ ಮುಚ್ಚಿಸಿ ನಾವು ಇರೋದಿಲ್ಲ ಎಂದು ಹೇಳ್ತಾಳೆ.

  ಯಾರು ರಾಮಾಚಾರಿಯ ಮನೆಯಲ್ಲಿ ಮಲಗಿರುತ್ತಾಳೆ ಆದರೆ ಸಡನ್ನಾಗಿ ಎದ್ದು ರೆಸ್ಟ್ ರೂಮ್ಗೆ ಹೋಗಲು ತಾನೇ ಹೋಗುತ್ತಾಳೆ. ಹೋಗುವಾಗ ಹೂವಿನ ಪಾರ್ಟ್ ಗಳೆಲ್ಲ ತಾಕಿ ಚಾರು ಮೇಲೆ ಬಿದ್ದುಬಿಡುತ್ತವೆ. ಇದರಿಂದ ರಾಮಾಚಾರಿಗೆ ಎಚ್ಚರವಾಗಿ ಮೇಡಂ ಏನಾಯ್ತು ಎಂದು ಮೇಲೆ ಹೇಳುತ್ತಾನೆ. ಬಂದ ಶಬ್ದಕ್ಕೆ ಮನೆಯವರೆಲ್ಲ ಸಹ ಹೊರಗೆ ಬಂದು ನೋಡುತ್ತಾರೆ.

  ಚಾರುಳನ್ನು ಅಡ್ಡಗಟ್ಟಿದ ಹಾವು

  ಚಾರುಳನ್ನು ಅಡ್ಡಗಟ್ಟಿದ ಹಾವು

  ನಂತರ ಚಾರು ನಾನು ರೆಸ್ಟ್ ರೂಮ್‌ಗೆ ಹೋಗಬೇಕಿತ್ತು ಎಂದು ತಿಳಿಸುತ್ತಾಳೆ. ಆಗ ರಾಮಾಚಾರಿ ಶೃತಿಗೆ ಹೇಳುತ್ತಾನೆ ಆದರೆ ಶೃತಿ ಮಾತ್ರ ಕರೆದುಕೊಂಡು ಹೋಗಲ್ಲ. ಮನೆಯವರು ಯಾರು ಸಹ ಚಾರುನಾ ರೆಸ್ಟ್ ರೂಮ್‌ಗೆ ಕರೆದುಕೊಂಡು ಹೋಗೋದಿಲ್ಲ. ಇದರಿಂದ ಚಾರುಲತಾಗೆ ಅಳುನೆ ಬಂದಂತಾಗುತ್ತದೆ. ರಾಮಾಚಾರಿ ರೆಸ್ಟ್ ರೂಮ್‌ಗೆ ಕರೆದುಕೊಂಡು ಹೋಗಿ ಎಲ್ಲಿ ಬಾಗಿಲು ನಲ್ಲಿ ಇದೆ ಎಂಬುದನ್ನು ತಿಳಿಸುತ್ತಾನೆ. ಇತ್ತ ಚಾರುಗೆ ಬಚ್ಚಲು ಮನೆಯಲ್ಲಿ ಹಾವು ಇರೋದು ಕಾಣಿಸೋದೆ ಇಲ್ಲ. ಬುಸ್ ಬುಸ್ ಎಂದು ಶಬ್ದ ಮಾಡಿದರು ಸಹ ಚಾರು ಅಷ್ಟೇನು ತಲೆ ಕೆಡಿಸಿಕೊಳ್ಳಲ್ಲ. ರಾಮಾಚಾರಿ ಹೊರಗೆ ನಿಂತಾಗ ಅಕ್ಕಪಕ್ಕದ ಮನೆಯವರು ಹಾವು ಬಂದ ಸುದ್ದಿಯನ್ನು ರಾಮಾಚಾರಿಗೆ ಹೇಳ್ತಾರೆ. ರಾಮಾಚಾರಿ ಭಯದಿಂದ ಚಾರು ಮೇಡಂ ಎಂದು ಕೂಗಿಕೊಂಡು ಒಳಗೆ ಹೋಗುತ್ತಾನೆ.

  ಚಾರುಗೆ ಕಚ್ಚಿದ ಹಾವು

  ಚಾರುಗೆ ಕಚ್ಚಿದ ಹಾವು

  ಬಚ್ಚಲು ಮನೆಯಲ್ಲಿದ್ದ ಚಾರುಲತಾಗೆ ನಂತರ ಹಾವಿರುವುದು ಗೊತ್ತಾಗುತ್ತದೆ. ನಂತರ ರಾಮಾಚಾರಿ ಬಾಗಿಲು ತಗೆಯಿರಿ ಎಂದು ಹೇಳ್ತಾನೆ. ಆದರೆ ಚಾರುಗೆ ತುಂಬಾ ಭಯವಾಗುತ್ತಿರುತ್ತದೆ. ರಾಮಾಚಾರಿ ಭಯ ಆಗುತ್ತಿದೆ ಹಾವು ಮುಂದೆ ಹೋಗೋಕೆ ಬಿಡ್ತಿಲ್ಲ ಎಂದು ಹೇಳ್ತಾಳೆ. ಅಷ್ಟರಲ್ಲಿ ಹಾವು ಚಾರು ಕಾಲಿಗೆ ಕಚ್ಚೇ ಬಿಡುತ್ತದೆ.

  ಮನೆಯವರಿಗೆ ರಾಮಾಚಾರಿ ಮಾತು ಕೇಳಿ ಶಾಕ್

  ಮನೆಯವರಿಗೆ ರಾಮಾಚಾರಿ ಮಾತು ಕೇಳಿ ಶಾಕ್

  ಇನ್ನೂ ಚಾರುವನ್ನು ಬಚ್ಚಲು ಮನೆಯಿಂದ ಕರೆದುಕೊಂಡ ರಾಮಾಚಾರಿ ಏನಾಗಲ್ಲ ಮೇಡಂ ಎಂದು ಸಮಾಧಾನ ಮಾಡ್ತಾನೆ. ಮನೆಯವರು ಎನಾಯ್ತು ರಾಮಾಚಾರಿ ಎಂದು ಕೇಳಿದರು ಉತ್ತರವನ್ನು ಕೊಡೋದಿಲ್ಲ. ಬಿಸಿ ನೀರು ಮತ್ತೆ ದೀಪ ಚಾಕು ತಂದು ವಿಷ ತಗೆಯೋಕೆ ಪ್ರಯತ್ನ ಪಡ್ತಾನೆ. ಈ ವೇಳೆ ಮುರಾರಿಗೆ ಫೋನ್ ಮಾಡಿ ನಾಗ್ತಳ್ಳಿ ಸೊಪ್ಪು ತಕೋಬಾ ಎಂದು ಹೇಳಿದಾಗ ಮನೆಯವರಿಗೆ ಶಾಕ್ ಆಗುತ್ತದೆ. ಚಾರುಗೆ ರಾಮಾಚಾರಿ ಸಮಾಧಾನ ಮಾಡ್ತಾ ಇರ್ತಾನೆ. ಚಾರು ತುಂಬಾ ಅಳೋಕೆ ಶುರು ಮಾಡ್ತಾಳೆ , ಇತ್ತ ಮುರಾರಿ ಸೊಪ್ಪು ತಂದು ಹರೆಯೋದ್ದಕ್ಕೆ ಹೇಳಿ, ನಂತರ ಸೊಪ್ಪನ್ನು ಚಾರುಗೆ ಕುಡಿಸ್ತಾನೆ. ಚಾರು ವಾಂತಿ ಮಾಡೋಕೆ ಹೋದಾಗ ಚಾರುಗೆ ಕುಡಿಸ್ತಾನೆ. ನೀನು ಸಾಯೋದಿಲ್ಲ ಮೇಡಂ ನಾನು ನಿಮ್ಮ ಬಿಟ್ಟು ಹೋಗಲ್ಲ ಎಂದು ಹೇಳ್ತಾನೆ.

  ಆದ್ಯಾನೇ ಎರಡನೇ ಅತ್ತೆ ಮಗಳು ಎಂದು ಗೊತ್ತಾಗುತ್ತಾ?

  ಆದ್ಯಾನೇ ಎರಡನೇ ಅತ್ತೆ ಮಗಳು ಎಂದು ಗೊತ್ತಾಗುತ್ತಾ?

  ಇತ್ತ ವಿಯಾನ್ ಅವರ ಅತ್ತೆ ಮಾನ್ಯತಾ ಮನೆಗೆ ಬರ್ತಾ ಇರ್ತಾನೆ . ಕಾರಿನಲ್ಲಿ ಬರೋವಾಗ ಫೋನ್ ಮಾಡಿ ಆದಷ್ಟು ಬೇಗ ನಿಮ್ಮ ಮನೆಗೆ ಹೆಣ್ಣು ಕೇಳೋಕೆ ಬರ್ತಿನಿ ಅಂತಾನೆ. ಅಷ್ಟರಲ್ಲಿ ಆದ್ಯ ಇರೋ‌ ಕಡೆ ಶರ್ಮೀಳಾ ಬರ್ತಾಳೆ. ಆದ್ಯಾ ಫೋನ್‌ನಲ್ಲಿ ಮಾತಾಡೋದನ್ನು ಕೇಳಿಸಿಕೊಂಡು ಶಾಕ್ ಆಗ್ತಾಳೆ. ಈಗ ಆದ್ಯಾನೇ ಎರಡನೇ ಅತ್ತೆ ಮಗಳು ಎಂದು ಗೊತ್ತಾಗುತ್ತಾ ಎಂಬುದೇ ಕುತೂಹಲಕಾರಿಯಾಗಿದೆ.

  English summary
  Colors Kannada serial Ramachari Written Update on January 9th episode. Here is the details about Charu in trouble.
  Tuesday, January 10, 2023, 19:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X