Ramachari serial: ಅಜ್ಜಿಗೆ ಗೊತ್ತಾಯ್ತು ರಾಮಾಚಾರಿಯ ಮದುವೆಯ ಸತ್ಯ!

By ಶೃತಿ ಹರೀಶ್ ಗೌಡ
Colors Kannada Ramachari Written Update on March 1st episode

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ತಮ್ಮ ಮನೆಗೆ ಬಂದಿದ್ದಾನೆ. ಚಾರು ಹೇಳುತ್ತಿರುವ ಮಾತು ರಾಮಾಚಾರಿಯ ಕಿವಿಯಲ್ಲಿ ಹಾಗೆ ಉಳಿದಿದೆ. ಏನು ಮಾಡಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಮಾಚಾರಿ ಇದ್ದಾನೆ. ರಾಮಾಚಾರಿ ಮನೆಗೆ ಬಂದ ಕೂಡಲೇ ಎಲ್ಲರೂ ಜಾತಕ ಸರಿಹೊಂದಿತ ಎಂದು ಕೇಳುತ್ತಿದ್ದಾರೆ. ಅದಕ್ಕೆ ರಾಮಾಚಾರಿ ಹೌದು ಎಂದು ಹೇಳಿದ್ದಕ್ಕೆ ಮನೆಯವರೆಲ್ಲರೂ ಸಹ ಖುಷಿಪಟ್ಟಿದ್ದಾರೆ. ಮದುವೆಯಾದರೆ ಸಾಕು ಈ ಕಡೆ ರಾಮಾಚಾರಿ ಮದುವೆಯಾಗುತ್ತದೆ ನಮಗೆ ಅವಳ ಕಾಟ ತಪ್ಪಿದರೆ ಸಾಕು ಎಂದು ಅನ್ನುತ್ತಿದ್ದಾರೆ. ಈ ಕಡೆ ನಾರಾಯಣ ಆಚಾರ್ಯರು ಸಹ ರಾಮಾಚಾರಿ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ರಾಮಾಚಾರಿಯನ್ನು ಮನೆಯವರೆಲ್ಲರೂ ನಿನ್ನ ಮನಸ್ಸಿನಲ್ಲಿ ಯಾವುದೋ ಒಂದು ಚಿಂತೆ ಕಾಡುತ್ತಿದೆ ಅದು ಏನು ಎಂದು ಹೇಳು ಎಂದು ಕೇಳಿದ್ದಾರೆ. ಇದಕ್ಕೆ ರಾಮಾಚಾರಿ ಏನೂ ಇಲ್ಲ ಎಂದಿದ್ದಾನೆ. ಚಾರು ಧರ್ಮಕ್ಕೆ ಮೋಸ ಮಾಡಬಾರದು ಪತಿ ಧರ್ಮಕ್ಕೆ ಮೋಸ ಮಾಡಬಹುದಾ ಎಂದು ಕೇಳಿದ್ದು ರಾಮಾಚಾರಿಯನ್ನು ಚಿಂತೆಗೆ ತಳ್ಳಿದೆ. ಆ ಹೆಂಡತಿಯನ್ನು ಬೇರೆಯವರಿಗೆ ಮದುವೆ ಮಾಡಿಸಲು ಜಾತಕ ನೋಡಿದ್ದು ಎಷ್ಟು ಸರಿ ಎಂದು ಚಾರು ಪ್ರಶ್ನೆ ಮಾಡಿದ್ದನ್ನೇ ಪದೇಪದೇ ರಾಮಾಚಾರಿ ನೆನೆಸಿಕೊಳ್ಳುತ್ತಿದ್ದಾನೆ.

ದೀಪಾ ಜೊತೆಗೆ ರಾಮಾಚಾರಿಗೆ ಮದುವೆ ಮಾಡಿಸಲು ಮನೆಯವರೆಲ್ಲರೂ ಸಹ ಸಿದ್ಧತೆಯನ್ನ ನಡೆಸಿದ್ದಾರೆ. ನಾರಾಯಣ ಆಚಾರ್ಯರು ಸಹ ಒಳ್ಳೆಯ ಸಮಯ ಕೂಡಿ ಬರುತ್ತಿದೆಯಾ ಎಂದು ನೋಡುತ್ತಿದ್ದಾರೆ. ರಾಮಾಚಾರಿ ಮೊದಲು ಶ್ರುತಿ ಮದುವೆಯಾಗಲಿ ನಂತರ ಈ ಮನೆಗೆ ಸೊಸೆ ಬರಲಿ ಎಂದು ಹೇಳಿದ್ದಾನೆ. ಇದಕ್ಕೆ ಮನೆಯವರು‌ ಒಪ್ಪುತ್ತಿಲ್ಲ. ಜವಾಬ್ದಾರಿ ನನಗೆ ಇರಲಿ ನೀನು ಮದುವೆಯಾಗಿ ನಾವು ಕೊಟ್ಟ ಮಾತನ್ನು ಉಳಿಸಿಕೋ ಎಂದು ನಾರಾಯಣಚಾರ್ಯರು ರಾಮಾಚಾರಿಗೆ ಹೇಳಿದ್ದಾರೆ.

ಚಾರು ಮಾನ್ಯತಾ ಬಳಿ ನಾನು ಈಗಲೇ ತುಂಬಾ ನೊಂದಿದ್ದೇನೆ ಈ ಮದುವೆ ಬೇಕಿತ್ತಾ ನನ್ನನ್ನು ಕೇಳದೆ ಮದುವೆಯನ್ನ ಫಿಕ್ಸ್ ಮಾಡಿದ್ದೀರಾ ಎಂದು ಮಾನ್ಯತಾಗೆ ಯಾರು ಕೇಳಿದ್ದಾಳೆ. ಅದಕ್ಕೆ ನಿನಗೆ ಏನು ಬೇಕು ಬೇಡ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ನಮ್ಮ ಸ್ಟೇಟಸ್ ಗೆ ಮ್ಯಾಚ್ ಆಗುವಂತ ಹುಡುಗ ಅವನು ಎಂದು ಮಾನ್ಯತಾ ಚಾರುಗೆ ಹೇಳಿ ಬಾಯಿ ಮುಚ್ಚಿಸಿದ್ದಾಳೆ. ಈ ಕಡೆ ಮಾನ್ಯತಾ ಹೇಳಿದ ಮಾತನ್ನು ಕೇಳಿ ಚಾರು ಬೇಸರದಿಂದ ಅಳುತ್ತಿದ್ದಾಳೆ.

ಮನೆಯಲ್ಲಿ ನಾರಾಯಣಚಾರ್ ಕುಳಿತು ಒಳ್ಳೆಯ ಮುಹೂರ್ತ ನೋಡುವಾಗ ಅಲ್ಲಿಗೆ ಓಡಿ ಬಂದ ಅಜ್ಜಿ ರಾಮಾಚಾರಿಗೆ ಬಯ್ಯುತ್ತಿದ್ದಾರೆ. ನೀನು ನಿಜವಾಗಿಯೂ ನನ್ನ ಮೊಮ್ಮಗನ ಯಾಕೆ ಈ ರೀತಿ ಮೋಸ ಮಾಡಿದೆ ಎಂದು ಕೇಳುತ್ತಿದ್ದಾರೆ. ಇದು ಮುಚ್ಚಿ ಚಿಕ್ಕಮಗಳೂರಿಗೆ ಹೋಗಿ ಚಾರು ಕುತ್ತಿಗೆಗೆ ಯಾಕೆ ತಾಳಿ ಕಟ್ಟಿದೆ ಎಂದು ಕೇಳುತ್ತಿದ್ದಾರೆ. ಇದನ್ನು ಕೇಳಿದ ರಾಮಾಚಾರಿ ಹಾಗೂ ಮನೆಯವರಿಗೆ ತುಂಬಾ ಶಾಕ್ ಆಗಿದೆ.

ರಾಮಾಚಾರಿ ಯಾವುದೋ ಕೆಟ್ಟ ಪರಿಸ್ಥಿತಿಯಲ್ಲಿ ನಾನು ಚಾರು ಕುತ್ತಿಗೆಗೆ ತಾಳಿ ಕಟ್ಟುವ ಹಾಗೆ ಆಯಿತು ಎಂದು ಅಂದಿದ್ದಾನೆ. ರಾಮಾಚಾರಿ ಮಾತು ಕೇಳಿದ ಜಾನಕಿಗೆ ಹೃದಯಘಾತವಾಗಿದೆ. ನಾರಾಯಣ ಆಚಾರ್ಯರು ನೀನು ನನ್ನ ಮಗನಲ್ಲ ನನ್ನ ಮನೆಯಲ್ಲೇ ಮುಳುಗಿಸಿದವಳಿಗೆ ತಾಳಿ ಕಟ್ಟಿದ್ದೀಯ ನಮ್ಮ ಮಾತನ್ನು ಮುರಿದಿದ್ದೀಯ ಈ ಮನೆಗೂ ನಿನಗೂ ಸಂಬಂಧವಿಲ್ಲ ನನ್ನ ಹೆಂಡತಿಯನ್ನು ಮುಟ್ಟಬೇಡ ಎಂದು ರಾಮಾಚಾರಿಗೆ ಹೇಳಿದ್ದಾರೆ.

ನಿನ್ನ ನೆರಳು ಕೂಡ ನನ್ನ ಹೆಂಡತಿಗೆ ಸೋಕಬಾರದು ನೀನು ನನ್ನ ಮಗನಲ್ಲ ಇಲ್ಲಿಂದ ಹೊರಟು ಬಿಡು ಎಂದಾಗ ಇದು ರಾಮಾಚಾರಿ ಕಾಣುತ್ತಿದ್ದ ಕನಸಾಗಿದೆ. ಅಲ್ಲೇ ಇದ್ದ ಅಜ್ಜಿನ ನಾರಾಯಣ ಅಚಾರ್ಯರು ಹೇಗೆ ಗೊತ್ತಿದೆ ಅಮ್ಮ‌ ಎಂದು ಕೇಳಿದಾಗ ಆ ಚಾರು ಕುತ್ತಿಗೆಗೆ ತಾಳಿ ಕಟ್ಟುವುದನ್ನು ನಾನೇ ನನ್ನ ಕಣ್ಣಾರೆ ನೋಡಿದ್ದೇನೆ ಎಂದು ಅಜ್ಜಿ ಹೇಳಿದ್ದಾರೆ. ಕೇಳಿದ ರಾಮಾಚಾರಿಗೆ ತುಂಬಾ ಶಾಕ್ ಆಗಿದೆ ರಾಮಾಚಾರಿ ಸತ್ಯ ಒಪ್ಪಿಕೊಳ್ಳುತ್ತಾನ ನೋಡಬೇಕಿದೆ.

More from Filmibeat

English summary
Colors Kannada Ramachari Written Update on March 1st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X