Ramachari serial: ಅಜ್ಜಿ ಕಂಡಿದ್ದ ಕನಸು; ಈಗ ಅದೇ ನನಸಾಗಿದೆ!
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಅಜ್ಜಿ ಬಂದು ರಾಮಾಚಾರಿ ಆ ಚಾರು ಅನ್ನು ಮದುವೆಯಾಗಿದ್ದಾನೆ ನಾನೇ ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ ಅದಕ್ಕೆ ಮನೆಯವರು ಎಲ್ಲಿ ಎಂದು ಕೇಳಿದ್ದಾರೆ.
ಅಜ್ಜಿ ಮನೆಯವರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಬೇಕಿದೆ. ಈಗ ರಾಮಾಚಾರಿ ಸಹ ಮೌನವಾಗಿ ನಿಂತಿದ್ದಾನೆ. ನಾರಾಯಣ ಆಚಾರ್ಯರು ಅಜ್ಜಿಯನ್ನು ನೀನು ಎಲ್ಲಿ ನೋಡಿದೆ ಹೇಳು ಎಂದು ಕೇಳುತ್ತಿದ್ದಾರೆ. ಅದಕ್ಕೆ ಅಜ್ಜಿ ನನ್ನ ಕನಸಿನಲ್ಲಿ ರಾಮಾಚಾರಿ ಆ ಚಾರುಲತಾಗೆ ತಾಳಿಯನ್ನ ಕಟ್ಟಿದ್ದ ಎಂದು ಹೇಳಿದ್ದಾರೆ. ಇದೇ ವೇಳೆ ಮನೆಯವರೆಲ್ಲರೂ ಕನಸಿನಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅಜ್ಜಿ ನನ್ನ ಕನಸಿನಲ್ಲೂ ಸಹ ನನ್ನ ಮೊಮ್ಮಗ ಅವಳ ಕುತ್ತಿಗೆಗೆ ತಾಳಿಯನ್ನ ಕಟ್ಟಬಾರದು ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ರಾಮಾಚಾರಿ ನಿಟ್ಟುಸಿರು ಬಿಟ್ಟು ಸದ್ಯ ಎಂದು ಅಂದುಕೊಂಡಿದ್ದಾನೆ. ಆದರೆ ಚಾರುಗೆ ತಾಳಿ ಕಟ್ಟಿದ್ದು ಹಾಗೂ ಚಾರುಲತಾಗೆ ಮಾತು ಕೊಟ್ಟಿದ್ದು ಮಾತ್ರ ರಾಮಾಚಾರಿಯನ್ನು ತುಂಬಾ ಕೊರೆಯುತ್ತಿದೆ. ಕಾಯಾ ವಾಚಾ ಮನಸಾ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ನಿಮಗೆ ಕಣ್ಣಾಗಿ ಇರುತ್ತೇನೆ ಎಂದು ಕೊಟ್ಟ ಮಾತು ರಾಮಾಚಾರಿಯನ್ನು ಪದೇ ಪದೇ ಕಾಡುತ್ತಿದೆ.
ಚಾರುಗೆ ಕಣ್ಣು ಕಾಣಿಸುತ್ತಿರುವ ವಿಷಯವನ್ನು ತಿಳಿದ ಸಾನ್ವಿಗೆ ಶಾಕ್ ಆಗಿದೆ. ಯಾಕೆ ನೀನು ಈ ರೀತಿ ಕಣ್ಣು ಕಾಣದವಳ ಹಾಗೆ ನಾಟಕ ಮಾಡುತ್ತಿದ್ದೀಯ ಎಂದು ಸಾನ್ವಿ ಚಾರುಲತಾಳನ್ನ ಕೇಳಿದ್ದಾಳೆ. ಅದಕ್ಕೆ ಚಾರು ರಾಮಾಚಾರಿಯನ್ನು ಪಡೆದುಕೊಳ್ಳಲು ನಾನು ಈ ರೀತಿ ಮಾಡಿದೆ ಎಂದು ಹೇಳಿದ್ದಾಳೆ. ಅದಕ್ಕೆ ಸಾನ್ವಿ ಏನು ಹೇಳುತ್ತಿದ್ದೀಯ ರಾಮಾಚಾರಿಗೆ ನಿನಗೆ ಕಣ್ಣು ಕಾಣಿಸುತ್ತಿರುವ ವಿಷಯ ಗೊತ್ತಿಲ್ವಾ ಎಂದು ಕೇಳಿದ್ದಾಳೆ. ಇದಕ್ಕೆ ರಾಮಾಚಾರಿ ಹಾಗೂ ತಾನು ಮದುವೆಯಾಗಿದ್ದನ್ನು ಸಾನ್ವಿಗೆ ಹೇಳುತ್ತಿದ್ದಾಳೆ.
ನಾನು ಇಲ್ಲಿಂದ ಹೋಗುವಾಗ ನನಗೆ ಕಣ್ಣು ಕಾಣಿಸುತ್ತಿರಲಿಲ್ಲ ಆದರೆ ಆಶ್ರಮಕ್ಕೆ ಹೋದ ಬಳಿಕ ನನಗೆ ಕಣ್ಣು ಕಾಣಿಸುತ್ತಿದೆ ನಾನು ರಾಮಾಚಾರಿಯನ್ನ ಪಡೆದುಕೊಳ್ಳಲು ಈ ರೀತಿ ಸುಳ್ಳು ಹೇಳುವ ಅನಿವಾರ್ಯತೆ ಬಂತು ನಾನು ಸತ್ಯ ಹೇಳಿದರೆ ರಾಮಾಚಾರಿ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾನ್ವಿ ಬಳಿ ಚಾರು ಹೇಳುತ್ತಿದ್ದಾಳೆ. ಆದರೆ ಈಗ ಏಕೆ ಹೆಣ್ಣು ನೋಡುತ್ತಿರುವ ಶಾಸ್ತ್ರಕ್ಕೆ ರೆಡಿಯಾಗುತ್ತಿದ್ದೀಯ ಎಂದು ಕೇಳಿದ್ದಾಳೆ. ಇದು ದೇವರೇ ನಮಗೆ ಕೊಟ್ಟಿರುವ ಅಗ್ನಿ ಪರೀಕ್ಷೆ ಎಂದು ಚಾರು ಹೇಳಿದ್ದಾಳೆ.
ಶರ್ಮಿಳಾ ಹಾಗೂ ಜಯಶಂಕರ್ ಇಬ್ಬರೂ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲಿಗೆ ಬಂದ ಮಾನ್ಯತಾ ಶರ್ಮಿಳಗೆ ಅವಮಾನವನ್ನು ಮಾಡುತ್ತಿದ್ದಾಳೆ. ನನ್ನ ಅಣ್ಣನ ಮಗನನ್ನೇ ಬುಟ್ಟಿಗೆ ಹಾಕಿಕೊಂಡು ನಿನ್ನ ಮಗಳು ಮೆರೆಯುತ್ತಿದ್ದಾಳೆ. ಈಗ ಮೆರೆಯುವ ಸಮಯ ನನ್ನದು ಈಗ ನನ್ನ ಸ್ಟೇಟಸ್‌ಗೆ ಮ್ಯಾಚ್ ಆಗುವಂತ ಹುಡುಗನನ್ನ ನಾನು ಚಾರುಗೆ ಮದುವೆ ಮಾಡುತ್ತಿದ್ದೇನೆ ನೀನು ಅದೆಲ್ಲವನ್ನು ನೋಡಿ ಹೊಟ್ಟೆ ಉರಿದುಕೊ ಎಂದು ಮಾನ್ಯತಾ ಶರ್ಮೀಳಾಗೆ ಹೇಳುತ್ತಿದ್ದಾಳೆ. ಅಷ್ಟರಲ್ಲಿ ಹುಡುಗನ ಕಡೆಯವರು ಚಾರು ಮನೆಗೆ ಬಂದಿದ್ದಾರೆ.
ಹೊರಗಡೆ ಹೋಗುತ್ತಿರುವ ರಾಮಾಚಾರಿಗೆ ಕರೆದು ನಾರಾಯಣ ಆಚಾರ್ಯರು ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಬಾ ಎಂದು ವಸ್ತ್ರವನ್ನ ಕೊಟ್ಟಿದ್ದಾರೆ. ಆದರೆ ಅಣ್ಣನಿಗೆ ಈ ಕೆಲಸವನ್ನ ಹೇಳಿ ಎಂದು ರಾಮಾಚಾರಿ ಹೇಳಿದ್ದಾನೆ ಅದಕ್ಕೆ ನಾರಾಯಣ ಆಚಾರ್ಯರು ಇದನ್ನು ಬ್ರಹ್ಮಚಾರಿ ಮಾತ್ರ ಮಾಡುವ ಪೂಜೆಯಾಗಿದೆ ಎಂದು ಹೇಳಿದ್ದಾರೆ. ಇದನ್ನ ಕೇಳಿಸಿಕೊಂಡ ರಾಮಾಚಾರಿ ಗಲಿಬಿಲಿಗೊಂಡಿದ್ದಾನೆ.


Click it and Unblock the Notifications











