Ramachari serial: ಮದುವೆಯ ಬಗ್ಗೆ ಮನೆಯಲ್ಲಿ ಸತ್ಯ ಹೇಳಿಬಿಟ್ಟ ರಾಮಾಚಾರಿ!

By ಶೃತಿ ಹರೀಶ್ ಗೌಡ
Colors Kannada Ramachari Written Update on March 3rd episode

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಸತ್ಯ ಅಜ್ಜಿ ಹೇಳಿದ ಕಥೆಯಿಂದ ನಿಟ್ಟುಸಿರು ಬಿಟ್ಟಿದ್ದಾನೆ. ಆದರೆ ನಾರಾಯಣ ಆಚಾರ್ಯರು ಕೊಟ್ಟ ಶಾಕ್ ಮಾತ್ರ ರಾಮಾಚಾರಿಗೆ ಹಾಗೆ ಉಳಿದುಕೊಂಡಿದೆ.

ನಾರಾಯಣ ಆಚಾರ್ಯರು ಆಂಜನೇಯ ಸ್ವಾಮಿಗೆ ನೀನೇ ಪೂಜೆಯನ್ನ ಸಲ್ಲಿಸಬೇಕು ನಮ್ಮ ಮನೆಯಲ್ಲಿ ಇರುವ ಬ್ರಹ್ಮಚಾರಿ ಎಂದರೆ ಅದು ನೀನೆ ಎಂದು ರಾಮಾಚಾರಿಗೆ ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ಆದರೆ ರಾಮಾಚಾರಿ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ನಿಂತುಕೊಂಡಿದ್ದಾನೆ. ಈ ಕಡೆ ಅದೇ ಸಮಯಕ್ಕೆ ಬಂದಂತಹ ದೀಪಾ ಹಾಗೂ ಆಕೆಯ ಅಪ್ಪ ಹೌದು ರಾಮಾಚಾರಿ ನಿನಗೆ ಇದೇ ಕೊನೆಯ ಪೂಜೆ ಹೋಗಿ ದೇವರಿಗೆ ಪೂಜೆಯನ್ನ ಮಾಡಿ ವಸ್ತ್ರ ತೊಡಿಸಿ ಬಾ ಎಂದು ಅಂದಿದ್ದಾರೆ.‌

ದೀಪಾ ಸಹ ಹೌದು ಮಾಮ ಇದೇ ನೀನು ಬ್ರಹ್ಮಚಾರಿಯಾಗಿ ದೇವರಿಗೆ ಸಲ್ಲಿಸುವ ಕೊನೆಯ ಪೂಜೆಯಾಗಿದೆ, ನಂತರ ಮುಂದಿನ ವರ್ಷ ನಾನು ನಿನ್ನನ್ನು ಮದುವೆಯಾಗಿರುತ್ತೇನೆ ಎಂದು ಹೇಳಿದ್ದಾಳೆ. ಇದೇ ವೇಳೆ ದೀಪಾಳ ಅಪ್ಪ ಹೌದು ರಾಮಾಚಾರಿ ನಿನ್ನ ಮಗ ಹುಟ್ಟಿ ನಂತರ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯ ಎಂದು ರಾಮಾಚಾರಿಯನ್ನು ಕಿಚ್ಚಾಯಿಸಿದ್ದಾನೆ. ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ರಾಮಾಚಾರಿಗೆ ಏನು ಮಾಡಬೇಕು ಏನು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ.

ಸಂಪ್ರದಾಯಕ್ಕೆ ಕಟ್ಟು ಬಿದ್ದ ರಾಮಾಚಾರಿ ನಾನು ಪೂಜೆ ಮಾಡಲು ಸಾಧ್ಯವಿಲ್ಲ ಎಂದಿದ್ದಾನೆ. ಆದರೆ ನಾರಾಯಣ ಆಚಾರ್ಯರು ನಾನು ಈ ಮನೆಯಲ್ಲಿ ಇರುವ ತನಕವೂ ಯಾವುದೇ ಸಂಪ್ರದಾಯವನ್ನು ಮುರಿಯುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಇದಕ್ಕೆ ರಾಮಾಚಾರಿ ಏನು ಮಾಡಬೇಕು ಎಂದು ತಿಳಿಯದೇ ನಾನು ಬ್ರಹ್ಮಚಾರಿ ಅಲ್ಲ ನನಗೆ ಮದುವೆಯಾಗಿದೆ ಎಂದು ಎಲ್ಲರಿಗೂ ಶಾಕ ನೀಡಿದ್ದಾನೆ. ಮನೆಯವರೆಲ್ಲರೂ ಸಹ ರಾಮಾಚಾರಿಯ ಮಾತನ್ನ ಕೇಳಿ ಕಣ್ಣನ್ನು ಬಿಟ್ಟುಕೊಂಡು ರಾಮಾಚಾರಿಯನ್ನೇ ನೋಡುತ್ತಿದ್ದಾರೆ.

ವಿಕಾಸ್ ಬಾನೇರಿ ಕುಟುಂಬದವರು ಚಾರುಲತಾ ನೋಡಲು ಜೈ ಶಂಕರ್ ಮನೆಗೆ ಬಂದಿದ್ದಾರೆ. ವಿಕಾಸ್ ಬಾನೇರಿ ಚಾರುಲತಾಳನ್ನ ನೋಡಿ ಆಕೆಯ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆಗಿದ್ದಾನೆ. ನೋಡಿ ಕಣ್ಣಿಲ್ಲ ಎಂಬುದನ್ನು ಬಿಟ್ಟರೆ ಈಕೆ ಎಲ್ಲದರಲ್ಲೂ ಸೌಂದರ್ಯವತಿ ಈಕೆಯ ಸೌಂದರ್ಯಕ್ಕೆ ನಾನು ಕ್ಲೀನ್ ಬೌಲ್ಡ್ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ.

ನಂತರ ಚಾರು ಎಲ್ಲರಿಗೂ ಜ್ಯೂಸ್ ಕೊಡಲು ಬಂದಾಗ ವಿಕಾಸ್ ಬಾನೇರಿ ಜ್ಯೂಸ್ ಪ್ಲೇಟನ್ನ ಹಿಡಿದುಕೊಂಡು ನಿಮಗೆ ಈ ತೊಂದರೆ ಕೊಡುವುದಿಲ್ಲ ನಾನೇ ನಿಮಗೆ ಯಾವಾಗಲೂ ಆಸರೆಯಾಗಿ ಇರುತ್ತೇನೆ ಎಂದು ಒಂದೇ ಮಾತಿನಲ್ಲಿ ಮನೆಯವರೆಲ್ಲರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾನೆ. ವಿಕಾಸ್ ಬಾನೇರಿಯ ಈ ಮಾತನ್ನು ಕೇಳಿದ ಶರ್ಮೀಳಾ ನಿಮ್ಮ ಬಗ್ಗೆ ಈಗ ಒಳ್ಳೆಯ ಅಭಿಪ್ರಾಯ ಬಂದಿತು ಎಂದಿದ್ದಾಳೆ. ಇದನ್ನು ಕೇಳಿಸಿಕೊಂಡ ಮಾನ್ಯತಾ ನನ್ನ ಸೆಲೆಕ್ಷನ್ ಅಂದ್ರೆ ಹೀಗೆಯೇ ಎಂದು ಶರ್ಮಿಳಾಗಿ ಹೇಳಿದ್ದಾಳೆ.

ಚಾರುಲತಾಗೆ ವಿಕಾಸ್ ಬಾನೇರಿ ನಡೆದುಕೊಳ್ಳುತ್ತಿರುವ ರೀತಿ ಒಂದು ಚೂರು ಇಷ್ಟವಾಗುತ್ತಿಲ್ಲ. ಸಪರೇಟ್ ಆಗಿ ಮಾತನಾಡಬೇಕು ಎಂದು ಚಾರುವನ್ನು ವಿಕಾಸ್ ಬಾನೇರಿ ರೂಮಿಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಆಕೆಯ ಸೌಂದರ್ಯದ ಬಗ್ಗೆ ಹೊಗಳಿದ್ದಾನೆ. ಇದೆಲ್ಲವೂ ಕೂಡ ಚಾರುಗೆ ಸ್ವಲ್ಪವೂ ಸಹ ಇಷ್ಟವಾಗುತ್ತಿಲ್ಲ. ನಾನು ಹೇಗಿದ್ದೇನೆ ಎಂದು ಫೀಲ್ ಮಾಡಿ ಎಂದು ಚಾರು ಕೈಯನ್ನ ಹಿಡಿದುಕೊಂಡು ತನ್ನ ಮುಖದ ತುಂಬೆಲ್ಲ ಮುಟ್ಟಿಸಿಕೊಳ್ಳುತ್ತಿದ್ದಾನೆ. ಇದು ಚಾರುಗೆ ತುಂಬಾ ಕಿರಿಕಿರಿ ಎನಿಸಿದೆ.

More from Filmibeat

English summary
Colors Kannada Ramachari Written Update on March 3rd episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X