Ramachari serial:ಕಣ್ಣು ಕಾಣುತ್ತಿರುವ ಸತ್ಯ ಹೇಳಿದ ರಾಮಾಚಾರಿ
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ವಿಕಾಸ್ ಮನೆಯವರು ಚಾರುಲತಾಳನ್ನ ನೋಡಲು ಬಂದಿದ್ದಾರೆ. ಚಾರುಲತಾ ಬ್ಯೂಟಿಗೆ ವಿಕಾಸ್ ಬಾನೇರಿ ಫಿದಾ ಆಗಿದ್ದಾನೆ. ಈ ಕಡೆ ರಾಮಾಚಾರಿ ಬಿಸಿ ತುಪ್ಪದಂತೆ ಸತ್ಯವನ್ನ ಹೇಳಲು ಆಗದೆ ನುಂಗಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾನೆ.
ಜಾನಕಿ ಮಗನಿಗೆ ನೀನು ಮದುವೆಯಾಗಿರುವ ಹುಡುಗಿಯ ಹೆಸರನ್ನು ಹೇಳದಿದ್ದರೆ ನನಗೆ ನಿಜವಾಗಲೂ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದ್ದಾರೆ. ಅಮ್ಮನ ಪರಿಸ್ಥಿತಿಯನ್ನು ನೋಡಿದ ರಾಮಾಚಾರಿ ಒಂದು ಕ್ಷಣ ಗಾಬರಿಯಾಗಿದ್ದಾನೆ. ಶೃತಿ ಹಾಗೂ ದೀಪಾ ನಾರಾಯಣ ಆಚಾರ್ಯರು ಸಹ ದಿಗ್ಭ್ರಾಂತರಾಗಿ ನಿಂತಿದ್ದಾರೆ. ರಾಮಾಚಾರಿಗೆ ಸತ್ಯವನ್ನು ಹೇಳಿದರೆ ತನ್ನ ತಾಯಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದಾಗಿ ನನಗೂ ಹಾಗೂ ದೀಪಾಗೂ ಒಂದು ವರ್ಷವಾಗಿದೆ ಎಂಗೇಜ್ಮೆಂಟ್ ಮಾಡಿ ನಾನು ಈಗ ಮದುವೆಯಾದವನಂತೆ ಅಲ್ಲವೇ ಎಂದು ಎಲ್ಲರಿಗೂ ರಾಮಾಚಾರಿ ಸುಳ್ಳು ಹೇಳಿದ್ದಾನೆ. ಇದರಿಂದಾಗಿ ಮನೆಯಲ್ಲಿ ತಿಳಿ ವಾತಾವರಣ ನಿರ್ಮಾಣವಾಗಿದೆ. ದೀಪಾಗೆ ಮತ್ತಷ್ಟು ಖುಷಿಯಾಗಿದೆ ಮಾವನ ಮನಸ್ಸಿನಲ್ಲಿ ನಾನೇ ಇದ್ದೇನೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ದೀಪ ಖುಷಿಯಿಂದ ಇದ್ದಾಳೆ ಮನೆಯವರೆಲ್ಲರೂ ಸಹ ಸಂತೋಷವನ್ನು ಪಟ್ಟಿದ್ದಾರೆ.
ರಾಮಾಚಾರಿ ಗೆ ಫೋನ್ ಮಾಡಿದ ಚಾರು ನಾನು ಬೆಟ್ಟದ ಮೇಲಿಂದ ಬಿದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾಳೆ ಇದರಿಂದ ರಾಮಾಚಾರಿ ನೀವು ಯಾವ ಪರಿಸ್ಥಿತಿಯಲ್ಲಿ ಇದ್ದಿರೋ, ನಾನು ಸಹ ಅದೇ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದ್ದಾನೆ. ನೀವು ಸುಳ್ಳು ಹೇಳಿದ್ರೆ ಇವತ್ತಿಗೆ ಗಂಡಿನ ಕಡೆಯವರು ನನ್ನ ನೋಡಲು ಬರುತ್ತಿರಲಿಲ್ಲ ಸತ್ಯ ಹೇಳಿ ಸುಮ್ಮನೇ ನೀನು ಇರಲಾರದನ್ನು ಮಾಡಿಬಿಟ್ಟೆ ಎಂದು ರಾಮಾಚಾರಿ ಗೆ ಬೈಯುತ್ತಿದ್ದಾಳೆ.
ಆ ವಿಕಾಸ್ ಬಾನೇರಿ ನನ್ನ ಕೈಗೆ ಮುತ್ತು ಕೊಟ್ಟು ಹೋದ ಇದು ನನಗೆ ಎಷ್ಟು ಇರಿಟೇಟ್ ಮಾಡುತ್ತಿದೆ ಅವನನ್ನು ಕೊಚ್ಚಿ ಹಾಕಬೇಕು ಎಂಬಷ್ಟು ಕೋಪ ಬಂದಿತ್ತು ನಿನ್ನ ಹೆಂಡತಿಗೆ ಯಾವನೋ ಮುತ್ತು ಕೊಟ್ಟರೆ ನಿನಗೆ ಕೋಪ ಬರೋದಿಲ್ವ ಎಂದು ರಾಮಾಚಾರಿಗೆ ಚಾರು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಇನ್ನೂ ಸ್ವಲ್ಪ ದಿಸಾ ತಡೆದುಕೊಳ್ಳಿ ಎಂದು ರಾಮಾಚಾರಿ ಚಾರುಗೆ ಹೇಳಿದ್ದಾನೆ ಅಲ್ಲಿಗೆ ಬಂದ ಸಾನ್ವಿ ನಿನ್ನ ಪರಿಸ್ಥಿತಿಯೇ ಅವನಿಗೂ ಇರಬಹುದು ಅಲ್ವಾ ಎಂದು ಹೇಳಿ ಸಮಾಧಾನ ಮಾಡಿದ್ದಾಳೆ.
ನನಗೆ ಕಣ್ಣು ಕಾಣುತ್ತಿರುವ ವಿಷಯವನ್ನ ಚಾರು ಮನೆಯವರ ಮುಂದೆ ಹೇಳಿದ್ದಾಳೆ ಇದನ್ನು ಕೇಳಿದ ಮನೆಯವರು ತುಂಬಾ ಖುಷಿ ಪಟ್ಟಿದ್ದಾರೆ. ಮಾನ್ಯತಾ ನಿಜವಾಗಿಯೂ ಕಣ್ಣು ಕಾಣಿಸುತ್ತಿದೆ ಎಂದು ಪರೀಕ್ಷೆ ಮಾಡಿದ್ದಾಳೆ ಇದಕ್ಕೆ ಅಮ್ಮ ನೀನು ಹಾಕಿರುವ ಬಟ್ಟೆ ಇಂತಹದ್ದು ಎಂದು ಹೇಳಿ ಎಲ್ಲರೂ ಹಾಕಿರುವ ಬಟ್ಟೆ ಬಗ್ಗೆ ಚಾರು ಹೇಳಿದ್ದಾಳೆ. ಇದೇ ವೇಳೆ ಮಾನ್ಯತಾ ಚಾರುವನ್ನು ತಬ್ಬಿಕೊಂಡು ಕೆನ್ನೆಗೆ ಹಣೆಗೆ ಮುತ್ತನ್ನು ಕೊಟ್ಟಿದ್ದಾಳೆ ನನಗೆ ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದ್ದಾಳೆ.
ಶರ್ಮೀಳಾ ಸಹ ಚಾರುಗೆ ಮುತ್ತನ್ನು ಇಟ್ಟಿದ್ದಾಳೆ ಆದ್ಯ ಅಕ್ಕನನ್ನ ತಬ್ಬಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಚಾರು ನನಗೆ ಕಣ್ಣು ಬರಲು ರಾಮಾಚಾರಿ ಯ ಕಠಿಣ ಶ್ರಮ ಕಾರಣ ಎಂದು ಹೇಳುತ್ತಿದ್ದರೆ ಮಾನ್ಯವರೆಲ್ಲರೂ ಖುಷಿ ಪಟ್ಟರೆ ಮಾನ್ಯತಾ ಮಾತ್ರ ಇದರಿಂದ ಬೇಸರಪಟ್ಟಿದ್ದಾಳೆ ಇದಕ್ಕೆ ನನ್ನ ಅಳಿಯನ ಕಾಲ್ಗುಣ ಕಾರಣ ಎಂದು ಹೇಳಿದ್ದಾಳೆ.
ಈ ಮಾತನ್ನು ಕೇಳಿದ ಚಾರುಗೆ ತುಂಬಾ ಬೇಸರವಾಗಿದೆ ರಾಮಾಚಾರಿಗೆ ಇಲ್ಲಿ ಸಿಕ್ಕಿದ್ದು ಮಾತ್ರ ಬೇರೆಯವರಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಮನೆಯಲ್ಲಿರುವ ಎಲ್ಲರೂ ತುಂಬಾ ಖುಷಿ ಪಟ್ಟಿದ್ದು ಸರ್ವೇಶ ಹಬ್ಬದ ಅಡುಗೆ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟರೆ ಮಾನ್ಯತಾ ಬಾನೇರಿ ಕುಟುಂಬದವರಿಗೆ ಕರೆ ಮಾಡಿ ಈ ವಿಷಯ ಹೇಳುತ್ತೇನೆ ಎಂದು ಹೊರಟಿದ್ದಾಳೆ.


Click it and Unblock the Notifications











