Ramachari serial: ರಾಮಾಚಾರಿಗೆ ಸತ್ಯ ಹೇಳಿದ ಚಾರುಲತಾ!
ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ಚಾರುಲತಾಗೆ ಕಣ್ಣು ಬಂದಿರುವ ವಿಷಯವನ್ನ ಕೇಳಿ ಮನೆಯವರೆಲ್ಲರೂ ತುಂಬಾ ಖುಷಿಯಾಗಿ ಇದ್ದಾರೆ ಮಾನ್ಯತಾ ಮಾತ್ರ ಮಗಳಿಗೆ ಕಣ್ಣು ಬಂದಿರುವುದಕ್ಕೆ ದುಪ್ಪಟ್ಟು ಖುಷಿಯಾಗಿ ಇದ್ದು ಇದು ನನ್ನ ಅಳಿಯನ ಕಾಲ್ಗುಣ ಎಂದಿಲ್ಲ ಹೊಗಳಿ ಅಟ್ಟಕ್ಕೇರಿಸಿದ್ದಾಳೆ.
ರಾಮಾಚಾರಿ ಗೆ ಚಾರು ಕರೆಯನ್ನ ಮಾಡಿದ್ದಾಳೆ ರಾಮಾಚಾರಿ ದೇವಸ್ಥಾನಕ್ಕೆ ಹೋಗಿ ಬರುವಾಗ ಫೋನ್ ಮಾಡಿದ ಚಾರು ರಾಮಾಚಾರಿ ನಿನಗೊಂದು ಸರ್ಪ್ರೈಸ್ ಕಾದಿದೆ ನಾನು ಹೇಳುವ ಲೊಕೇಶನ್ ಗೆ ಬಾ ಎಂದು ರಾಮಾಚಾರಿಗೆ ಹೇಳಿದ್ದಾಳೆ ಆಗ ಮೇಡಂ ಎಂದು ರಾಮಾಚಾರಿ ಕರೆದಿದ್ದಕ್ಕೆ ಏನು ಮೇಡಂ ಎಂದೆಲ್ಲಾ ಕರೆಯುತ್ತಿದ್ದೀಯ ಎಂದು ಪ್ರಶ್ನೆ ಮಾಡಿದ್ದಾಳೆ. ನಾನು ನೀಡುತ್ತಿರುವ ಸರ್ಪ್ರೈಸ್ ನಿನಗೂ ಸಹ ಖುಷಿಯನ್ನ ತಂದು ಕೊಡಲಿದೆ ಎಂದು ರಾಮಾಚಾರಿಗೆ ಚಾರು ಹೇಳಿದ್ದಾಳೆ.

ಈ ಕಡೆ ರಾಮಾಚಾರಿ ಮೇಡಮ್ ಮೇಡಮ್ ಎಂದು ಕರೆಯುತ್ತಿರೋದಕ್ಕೆ ಕೋಪ ಮಾಡಿಕೊಂಡ ಚಾರು ಏನು ಇತರ ಇಲ್ಲ ಕಾಯುತ್ತಿದ್ದೀಯ ನಾನು ಈಗ ನಿನ್ನ ಹೆಂಡತಿ ಹೇಳೇ ಚಾರು , ಹೋಗೆ ಬಾರೇ ಎಂದೆಲ್ಲ ಕರಿ ನೀನು ಅವಾಗ ನನಗೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾಳೆ. ಇದಕ್ಕೆ ರಾಮಾಚಾರಿ ನನಗೆ ಇನ್ನೂ ಅಭ್ಯಾಸ ಇಲ್ಲ ಅದಕ್ಕಾಗಿ ನನಗೆ ಸ್ವಲ್ಪ ಅಭ್ಯಾಸವಾಗಬೇಕು ಎಂದು ಅಂದಿದ್ದಾನೆ. ಸರಿ ಸರಿ ಅಭ್ಯಾಸ ಮಾಡಿಕೋ ಎಂದು ಚಾರು ರಾಮಾಚಾರಿಗೆ ಹೇಳಿದ್ದಾಳೆ.
ರಾಮಾಚಾರಿ ಚಾರು ಹೇಳಿರುವ ಲೊಕೇಶನ್ ಗೆ ಬಂದು ಕಾಯುತ್ತಿದ್ದಾನೆ ಅಷ್ಟರಲ್ಲಿ ಕಾರಿನಲ್ಲಿ ಬಂದ ಚಾರು ಓಡೋಡಿ ರಾಮಾಚಾರಿ ಬಳಿ ಬರುತ್ತಿದ್ದಾಳೆ ಇದನ್ನು ನೋಡಿದ ರಾಮಾಚಾರಿ ಗಾಬರಿಯಿಂದ ರಸ್ತೆಯನ್ನು ದಾಟಿಸಿಕೊಂಡು ಬಂದಿದ್ದಾನೆ. ಮೇಡಂ ಏನಾಗಿದೆ ನಿಮಗೆ ನಿಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ರಾಮಾಚಾರಿ ಚಾರು ಬಳಿ ಕೇಳಿದ್ದಾನೆ. ಇದಕ್ಕೆ ಎನು ಆಗಲ್ಲ ಎಂದು ರಾಮಾಚಾರಿ ಬಳಿ ಚಾರು ಹೇಳಿದ್ದಾಳೆ.
ಇದಕ್ಕೆ ಇದಕ್ಕೆ ಚಾರು ನನಗೆ ತುಂಬಾ ಚೆನ್ನಾಗಿ ಕಣ್ಣು ಕಾಣುತ್ತಿದೆ ಇದು ನಿನ್ನ ಪರಿಶ್ರಮ ಎಂದು ರಾಮಾಚಾರಿಗೆ ಹೇಳಿದ್ದಾಳೆ. ಇವಾಗ ಕಣ್ಣು ಕಂಡರೆ ಏನು ಪ್ರಯೋಜನ ಮೇಡಂ ಇದಕ್ಕಿಂತ ಮೊದಲು ಕಂಡಿದ್ದರೆ ನಾನು ನಿಮ್ಮ ಕುತ್ತಿಗೆಗೆ ತಾಳಿ ಕಟ್ಟುವುದಾದರೂ ತಪ್ಪುತ್ತಿತ್ತು ಎಂದು ಹೇಳಿದ್ದಾನೆ. ಇದಕ್ಕೆ ಚಾರು ಇದು ಆ ದೇವರ ಒಂದು ಗಂಟು ಇರಬಹುದು ಇಲ್ಲದಿದ್ದರೆ ನನಗೆ ಯಾಕೆ ಲೇಟಾಗಿ ಕಣ್ಣು ಕಾಣಿಸುತ್ತಿತ್ತು ಎಂದು ಹೇಳಿದ್ದಾಳೆ.
ರಾಮಾಚಾರಿ ಮತ್ತು ಚಾರು ಇಬ್ಬರು ಮಾತನಾಡುತ್ತಿದ್ದಾಗ ಅಲ್ಲಿಗೆ ವಿಕಾಸ್ ಬಾನೇರಿ ಬಂದಿದ್ದಾನೆ ಇದನ್ನು ಇದನ್ನು ನೋಡಿದ ಚಾರುಗೆ ಸಹಿಸಲು ಆಗುತ್ತಿಲ್ಲ ಕಾರನ್ನು ಇಳಿದ ವಿಕಾಸ್ ಬಾನಿಗೆ ಚಾರುವ ನಾ ತಬ್ಬಿಕೊಂಡು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿ ಬಾ ನಿನ್ನನ್ನು ದೊಡ್ಡ ರೆಸ್ಟೋರೆಂಟ್ ಗೆ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಇದನ್ನೆಲ್ಲಾ ನೋಡುತ್ತಿರುವ ರಾಮಾಚಾರಿ ಗೆ ತುಂಬಾ ಬೇಸರವಾಗಿದೆ.
ಮಿಡಲ್ ಕ್ಲಾಸ್ ಜನರ ಸಹವಾಸ ನಮಗೆ ಬೇಡ ಎಂದ ವಿಕಾಸ್ ಬಾನೇರಿಗೆ ರಾಮಾಚಾರಿ ಸರಿಯಾಗಿ ಬುದ್ಧಿಯನ್ನ ಕಲಿಸಿದ್ದಾನೆ. ಕರೆದುಕೊಂಡು ಹೋಗುತ್ತಿದ್ದಾಗ ಕಾರ್ ಟಯರ್ ಪಂಚೆರ್ ಆಗಿದೆ ಇದನ್ನು ನೋಡಿದ ರಾಮಾಚಾರಿ ಈಗ ನೀವು ಹೇಗೆ ಹೋಗುತ್ತೀರಾ ಎಂದು ವಿಕಾಸ್ ಬಾನೇರಿ ಬಳಿ ಕೇಳಿದ್ದಾನೆ. ಅದಕ್ಕೆ ಕ್ಯಾಬ್‌ನಲ್ಲಿ ಹೋಗುತ್ತೇನೆ ಎಂದು ಹೇಳಿದ್ದಾನೆ.
ಆ ಕ್ಯಾಬನ್ನು ಓಡಿಸುವ ಡ್ರೈವರ್ ಮಿಡಲ್ ಕ್ಲಾಸ್ ನವನು ಅದೇ ರೀತಿ ಪಂಚರ್ ಹಾಕುವವನು ಸಹ ಮಿಡ್ಲ್ ಕ್ಲಾಸ್ ನವನೆ ಅದೇ ಯಾಕೆ ನಿಮ್ಮ ಶೂ ಪಾಲಿಶ್ ಮಾಡುವವನು, ನಿಮ್ಮ ಶೂ ಪಾಲಿಶ್ , ಬಟ್ಟೆ ಐರನ್, ನೀವು ಕಟ್ಟಿರುವ ಮನೆ , ಆಫೀಸ್, ನೀವು ಕುಳಿತು ಕೊಳ್ಳುವ ಚೇರ್ , ನಿಮ್ಮ ಆಫೀಸ್‌ನಲ್ಲಿ ಕೆಲಸ ಮಾಡುವವರು ಎಲ್ಲರೂ ಸಹ ಮಿಡಲ್ ಕ್ಲಾಸ್ ನವರೇ ಎಂದು ಹೇಳಿದ್ದಾನೆ ಇದನ್ನು ಕೇಳಿದ ಚಾರುಗೆ ತುಂಬಾ ಖುಷಿಯಾಗಿದೆ ಆದರೆ ವಿಕಾಸ್ ಬಾನೇರಿಗೆ ಮಾತ್ರ ಮೈ ಪರಚಿಕೊಂಡಂತೆ ಆಗುತ್ತಿದೆ. ರಾಮಾಚಾರಿ ವಿಕಾಸ್ ಬಾನೇರಿಗೆ ನೀವು ಮಿಡಲ್ ಕ್ಲಾಸ್ ಜನರ ಮೇಲೆ ಎಷ್ಟು ಡಿಪೆಂಡ್ ಆಗಿದ್ದೀರಾ ನೋಡಿ ಎಂದು ಹೇಳಿದ್ದಾನೆ.


Click it and Unblock the Notifications











