Ramachari serial: ವಿಕಾಸ್ ಬಾನೇರಿಗೆ ತಿರುಗೇಟು ಕೊಟ್ಟ ರಾಮಾಚಾರಿ

By ಶೃತಿ ಹರೀಶ್ ಗೌಡ

ಇವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ವಿಕಾಸ್ ಬಾನೇರಿಯ ಟೈಯರ್ ಪಂಚರ್ ಆಗಿದೆ. ಅದಕ್ಕಾಗಿ ಚಾರುಗೆ ತುಂಬಾ ಖುಷಿಯಾಗಿದೆ ಅಲ್ಲಿಗೆ ರಾಮಾಚಾರಿ ಬಂದಿದ್ದಾನೆ. ವಿಕಾಸ್ ಬಾನೇರಿಗೆ ರಾಮಾಚಾರಿ ಕ್ಲಾಸ್ ತೆಗೆದುಕೊಂಡಿದ್ದಾನೆ.

ರಾಮಾಚಾರಿಗೆ ವಿಕಾಸ್ ಬಾನೇರಿ ನಾವಿಲ್ಲದಿದ್ದರೇ ನೀವು ಬದುಕೋಲ್ಲ ನಾವು ಕೊಡುವ ಕಾಸಿಗಾಗಿ ನೀವು ಕೆಲಸ ಮಾಡೋದು ಎಂದು ಹೇಳಿದ್ದಾನೆ. ಇದಕ್ಕೆ ರಾಮಾಚಾರಿ ತಿರುಗೇಟು ಕೊಟ್ಟಿದ್ದಾನೆ. ನೀವು ಇಲ್ಲದಿದ್ದರೂ ಸಹ ನಾವು ಬದುಕುತ್ತೇವೆ ರೈತ ತಾನು ಬೆಳೆದ ಬೆಳೆಯನ್ನು ನಿಮ್ಮ ಸೂಪರ್ ಮಾರ್ಕೆಟ್ ಗೆ ತಂದು ಹಾಕುತ್ತಾನೆ, ನೀವು ಬೇಡ ಎಂದರೆ ಅವನು ಪುಟ್‌ಬಾತ್‌ನಲ್ಲಿ ಮಾರಾಟ ಮಾಡಿ ತನ್ನ ಜೀವನವನ್ನ ನಿರ್ವಹಣೆ ಮಾಡುತ್ತಾನೆ ಎಂದು ಉದಾಹರಣೆ ಕೊಟ್ಟಿದ್ದಾನೆ .

 Colors Kannada Ramachari Written Update on March 8th episode

ನಿಮ್ಮ ಕಂಪನಿ ಗೆ ಕೆಲಸಗಾರರು 10 ದಿನ ಬರಲಿಲ್ಲ ಎಂದರೆ ನಿಮ್ಮ ಕಂಪನಿ ದಿವಾಳಿಯಾಗುತ್ತದೆ ನೀವು ಕೊಡುವ ಸಂಬಳದಿಂದ ಅವರೇನು ಜೀವನ ನಿರ್ವಹಣೆ ಮಾಡಲ್ಲ ಸಂಬಳ ಇರದಿದ್ದರೂ ಸಹ ಜೀವನ ನಿರ್ವಹಣೆ ಮಾಡುವ ಕಲೆ ಗೊತ್ತಿದೆ ಎಂದು ಹೇಳಿದ್ದಾನೆ ಇದಕ್ಕೆ ಚಾರು ಸಹ ಸೂಪರ್ ರಾಮಾಚಾರಿ ಎಂದು ಹೇಳಿದ್ದಾಳೆ. ವಿಕಾಸ್ ಬಾನೀರಿಗೆ ಟಾಂಗ್ ಕೊಟ್ಟ ರಾಮಾಚಾರಿ ಅಲ್ಲಿಂದ ಚಾರುಲತಾಳನ್ನು ಕರೆದುಕೊಂಡು ಹೋಗಿದ್ದಾನೆ.

ರಾಮಾಚಾರಿ ತನ್ನ ಗಾಡಿಯ ಮೇಲೆ ಚಾರುಲತಾಳನ್ನು ಕರೆದುಕೊಂಡು ಹೋಗಿದ್ದಕ್ಕೆ ವಿಕಾಸ್ ಬಾನರಿಗೆ ಕೋಪ ಬಂದಿದೆ ಅದನ್ನು ರಸ್ತೆಯಲ್ಲಿ ತೋರಿಸಿದ್ದಾನೆ ತಾನು ತೊಟ್ಟಿದ್ದ ಜಾಕೆಟ್ ಬಿಚ್ಚಿ ಕಾರಿನ ಮೇಲೆ ಎಸೆದು ಕೋಪವನ್ನ ಪ್ರದರ್ಶನ ಮಾಡಿದ್ದಾನೆ.‌ ಈ ಕಡೆ ಮನೆಗೆ ಬಂದಿರುವ ವಿಕಾಸ್ ತಂದೆಯ ಬಳಿ ನಡೆದಿದ್ದ ಎಲ್ಲವನ್ನ ಹೇಳಿಕೊಂಡು ಕೋಪವನ್ನು ತೋರಿಸುತ್ತಿದ್ದಾನೆ ಅದಕ್ಕೆ ತಂದೆ ನೀನು ಈ ಕೋಪವನ್ನೆಲ್ಲ ಬಿಡು ಮೊದಲು ಅವಳನ್ನು ಮದುವೆಯಾಗು ನಂತರ ಇದಕ್ಕೆಲ್ಲ ನೀನು ಉತ್ತರವನ್ನು ಕೊಡುವ ಕಾಲ ಬರುತ್ತದೆ ಎಂದು ಸಮಾಧಾನವನ್ನು ಮಾಡಿದ್ದಾರೆ.

 Colors Kannada Ramachari Written Update on March 8th episode

ಮಹಿಳಾ ದಿನಾಚರಣೆ ಅಂಗವಾಗಿ ಮುರಳಿ ಎಲ್ಲರಿಗೂ ಶುಭಾಶಯಗಳು ಕೋರಿದ್ದಾನೆ ಅಷ್ಟರಲ್ಲಿ ಅಲ್ಲಿಯೇ ಇದ್ದ ನಾರಾಯಣ ಆಚಾರ್ಯರು ಹೆಣ್ಣು ಜಗತ್ತನ್ನೇ ಆಳುತ್ತಿರುವ ಸರ್ವ ಶಕ್ತಿ ಅದಕ್ಕೆ ನಮ್ಮ ಹಿರಿಯರು ಹೇಳಿರುವುದು ಹೆಣ್ಣನ್ನು ಪೂಜಿಸಬೇಕು ಎಂದು ನಾರಾಯಣ ಆಚಾರ್ಯರು ಹೆಣ್ಣಿನ ಶಕ್ತಿಯನ್ನ ಎಲ್ಲರಿಗೂ ತಿಳಿಸಿದ್ದಾರೆ. ಅಲ್ಲಿ ಇದ್ದ ಕೋದಂಡ ಎಣ್ಣೆ ಪ್ರಕೃತಿ ಪ್ರಕೃತಿಯಿಂದಾಗಿ ನಾವು ಎಷ್ಟೆಲ್ಲಾ ಪ್ರಯೋಜನವನ್ನು ಪಡೆಯುತ್ತೇವೆ. ಗಂಗಾ ಮಾತೆ ನಮ್ಮ ಪಾಪವನ್ನ ತೊಳೆಯುತ್ತಿದ್ದಾಳೆ ಪಾರ್ವತಿ ಶಿವನ ಅರ್ಧ ಭಾಗವಾಗಿದ್ದಾಳೆ ಎಂದು ಹೇಳಿದ್ದಾನೆ ಇದಕ್ಕೆ ಎಲ್ಲರೂ ಸಹ ತಲೆದೂಗಿದ್ದಾರೆ.

ರಾಮಾಚಾರಿ ಮೇಲೆ ಚಾರುಗೆ ಅತಿಯಾಗಿ ಪ್ರೀತಿಯಾಗಿದೆ ಇದಕ್ಕಾಗಿ ರಾಮಾಚಾರಿ ಯ ಸ್ಕೂಟರ್ ನಲ್ಲಿ ಬರುತ್ತಿರುವಾಗ ಅವನ ಮೇಲೆ ಕೈಯನ್ನ ಹಾಕಿಕೊಂಡು ಖುಷಿ ಪಡುತ್ತಿದ್ದಾಳೆ ರಾಮಾಚಾರಿ ನಿನ್ನನ್ನು ನಾನು ತಬ್ಬಿಕೊಂಡು ಅವತ್ತು ಕಣ್ಣು ಹೋಯ್ತು ಈಗ ತಾಳಿ ಎಂಬ ಬಂಧನ ಬಿದ್ದಿದೆ ಎಂದು ರಾಮಾಚಾರಿಯನ್ನ ತಬ್ಬಿ ಕೊಂಡಿದ್ದಾಳೆ. ಆದರೆ ರಾಮಾಚಾರಿ ಚಾರುಗೆ ಬುದ್ಧಿ ಹೇಳಿದ್ದಾನೆ ಈಗ ನಾವಿಬ್ಬರು ಪ್ರಕೃತಿಯ ಮುಂದೆ ಅಷ್ಟೇ ಗಂಡ ಹೆಂಡತಿ ನಿಮ್ಮ ಮತ್ತು ನಮ್ಮ ಮನೆಯವರ ಮುಂದೆ ಅಲ್ಲ ಸಮಾಜದ ಮುಂದೆಯೂ ಅಲ್ಲ ಏನಾದರೂ ಅಂದುಕೊಳ್ಳುತ್ತಾರೆ ಎಂದು ಬುದ್ಧಿ ಹೇಳಿದರು ಚಾರು ಕೇಳುತ್ತಿಲ್ಲ ರಾಮಾಚಾರಿಯನ್ನು ತಬ್ಬಿಕೊಂಡು ಕುಳಿತುಕೊಂಡಿದ್ದಾಳೆ.

ಈ ಕಡೆ ಶರ್ಮಿಳ ಮತ್ತು ಆದ್ಯಾ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾರೆ ಅವರನ್ನು ಬಾಗಿಲಲ್ಲೇ ನಿಲ್ಲಿಸಿದ ಮಾನ್ಯತಾ ಎಲ್ಲಿಗೆ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾಳೆ ದೇವಸ್ಥಾನಕ್ಕೆ ಹೋಗಿದ್ದೋ ವಿಹಾನ್ ಕೆಲಸ ಬಂತು ಎಂದು ಅಲ್ಲಿಯೇ ಇಳಿಸಿ ಹೋದ ಎಂದು ಹೇಳಿದ್ದಕ್ಕೆ ನನ್ನ ಅಳಿಯ ಮತ್ತು ಮಗಳು ಕಾರಲ್ಲಿ ಬಂದು ಇಳಿಯುತ್ತಾರೆ ಎಂದು ಹೇಳಿದ್ದಾಳೆ ಅಷ್ಟರಲ್ಲಿ ರಾಮಾಚಾರಿ ಜೊತೆ ಚಾರು ಗಾಡಿಯಲ್ಲಿ ಬಂದಿದ್ದಾಳೆ ಇದನ್ನು ನೋಡಿದ ಮಾನ್ಯತಾ ಕೋಪ ಮಾಡಿಕೊಂಡಿದ್ದಾಳೆ.

More from Filmibeat

English summary
Colors Kannada serial Ramachari Written Update on March 8th episode. Here is the details about to ramachari teach lesson to vikas baneri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X