Ramachari serial: ಮಂಗಳ ಸೂತ್ರ ನೋಡಿ ಶಾಕ್ ಆದ ಮಾನ್ಯತಾ!

By ಶೃತಿ ಹರೀಶ್ ಗೌಡ

ಈವರೆಗೆ ರಾಮಾಚಾರಿ ಧಾರಾವಾಹಿಯಲ್ಲಿ ವಿಕಾಸ್ ಬಾನೇರಿಗೆ ರಾಮಾಚಾರಿ ಬುದ್ಧಿಯನ್ನು ಕಲಿಸಿದ್ದಾನೆ. ಈ ಕಡೆ ವಿಕಾಸ್ ಬಾನೇರಿಯ ಮನೆಯವರು ರಾಮಾಚಾರಿ ಮನೆಯವರ ಜಾಗದ ಮೇಲೆ ಕಣ್ಣನ್ನ ಹಾಕಿ ಬೆದರಿಕೆ ಹಾಕಿ ಬಂದಿದ್ದಾರೆ.

ರಾಮಾಚಾರಿ ಜೊತೆ ಚಾರು ಮನೆಗೆ ಬಂದಿದ್ದಾಳೆ ಇದನ್ನು ನೋಡಿದ ಮಾನ್ಯತಾಗೆ ತುಂಬಾ ಕೋಪ ಬಂದಿದೆ ಅದಕ್ಕೆ ನೀನು ವಿಕಾಸ್ ಬಾನೇರಿ ಜೊತೆ ಹೋಗಿಲ್ವಾ ಎಂದು ಕೇಳಿದ್ದಾಳೆ ಇದಕ್ಕೆ ರಾಮಾಚಾರಿ ನಿಮ್ಮ ಹೈಕ್ಲಾಸ್ ಅಳಿಯನ ಕಾರು ಪಂಚರ್ ಆಯಿತು ಅದಕ್ಕಾಗಿ ಅದೇ ರಸ್ತೆಯಲ್ಲಿ ನಾನು ಬರುತ್ತಿದ್ದೆ ಚಾರು ಮೇಡಂ ನನ್ನು ಮನೆಗೆ ಬಿಟ್ಟು ಹೋಗು ಎಂದು ಹೇಳಿದರು ಅದಕ್ಕೆ ಮನೆಗೆ ಬಿಡಲು ಬಂದಿದ್ದೇನೆ ಎಂದು ಹೇಳಿದ್ದಾನೆ.

Colors Kannada Ramachari Written Update on March 9th episode

ಈ ಕಡೆ ಆದ್ಯಾ ಶರ್ಮೀಳಾ ಜೊತೆ ದೊಡ್ಡಮ್ಮ ಆಡುವ ಮಾತಿಗೆ ಅವರಿಗೆ ಸರಿಯಾದ ರೀತಿ ಆಯಿತು ಎಂದು ಹೇಳಿದ್ದಾಳೆ. ಇದಕ್ಕೆ ಶರ್ಮೀಳಾ ಆ ರೀತಿಯಲ್ಲ ಮಾತನಾಡಬಾರದು ಎಂದು ಆದ್ಯಗೆ ಬುದ್ಧಿಯನ್ನ ಹೇಳಿದ್ದಾಳೆ. ಮಾನ್ಯತಾ ಮಾತ್ರ ರಾಮಾಚಾರಿ ಜೊತೆ ಚಾರು ಬಂದಿದ್ದಕ್ಕೆ ಕೋಪವನ್ನು ಮಾಡಿಕೊಂಡಿದ್ದಾಳೆ.

ರಾಮಾಚಾರಿ ಮನೆಯಲ್ಲಿ ಎಲ್ಲರೂ ದೇವಸ್ಥಾನದ ಜಾಗ ಕೇಳುತ್ತಿರುವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ ನಮಗೆ ಧಮ್ಕಿಯನ್ನು ಬೇರೆ ಹಾಕಿದರು ಈ ವಿಚಾರ ರಾಮಾಚಾರಿಗೆ ತಿಳಿಯಬಾರದು ಎಂದು ನಾರಾಯಣ ಆಚಾರ್ಯರು ಮಾತನಾಡಿದ್ದಾರೆ.‌ ಅಷ್ಟರಲ್ಲಿ ರಾಮಾಚಾರಿ ನಾನು ಎಲ್ಲವನ್ನು ಕೇಳಿಸಿಕೊಂಡಿದ್ದೇನೆ ದೇವಸ್ಥಾನದ ಜಾಗವನ್ನು ಯಾರಿಗೂ ಕೊಡುವುದಿಲ್ಲ ಎಂದು ಮನೆಯಲ್ಲಿ ಎಲ್ಲರಿಗೂ ತಿಳಿಸಿದ್ದಾನೆ ಇದರಿಂದ ಮನೆಯವರೆಲ್ಲರಿಗೂ ಕೂಡ ಸಂತೋಷವಾಗಿದೆ.

Colors Kannada Ramachari Written Update on March 9th episode

ಚಿಂಟು ಚಾರುಲತಾ ರೂಮಿನಲ್ಲಿ ಬರೆದುಕೊಳ್ಳುತ್ತಾ ಇದ್ದಾನೆ ನಂತರ ಅಕ್ಕನ ಬಳಿ ಮಾತನಾಡಲು ತಿರುಗಿದ್ದಾನೆ ಕುತ್ತಿಗೆಯಲ್ಲಿ ಇದ್ದ ಮಂಗಳಸೂತ್ರ ಹೊರಗೆ ಬಂದಿದೆ. ಅದೇ ಈ ಕ್ಷಣ ಚಾರು ಕುತ್ತಿಗೆಯಲ್ಲಿದ್ದ ಸೂತ್ರದ ಬಗ್ಗೆ ಕೇಳಿದ್ದಾನೆ ಅದಕ್ಕೆ ಚಾರು ಟರ್ಮರಿಕ್ ಮೈಗೆ ಒಳ್ಳೆಯದು ಎಂದು ಹಾಕಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.‌ ಇದಕ್ಕೆ ಚಿಂಟು ಅಕ್ಕ ನೀನು ಸುಳ್ಳು ಹೇಳುತ್ತಿದ್ದೀಯ ನಾನು ಫಿಲಂನಲ್ಲಿ ನೋಡಿದ್ದೇನೆ ಈ ರೀತಿ ದಾರ ಕಟ್ಟಿಕೊಂಡರೆ ಮದುವೆಯಾಗಿದೆ ಎಂದು ಅರ್ಥ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.

ಇನ್ನು ಅಲ್ಲಿಂದ ಮಾನ್ಯತಾ ಬಳಿ ಹೋದ ಚಿಂಟು ಅಕ್ಕನ ಕತ್ತಿನಲ್ಲಿ ಅರಿಶಿಣದ ದಾರ ಇದೆ ಎಂದು ಹೇಳಿದ್ದಾನೆ ಇನ್ನು ಚಿಂಟು ಮಾತು ಕೇಳಿದ ಮಾನ್ಯತ ಗೆ ತುಂಬಾ ಶಾಕ್ ಆಗಿ ಚಾರು ರೂಮಿಗೆ ಬಂದಿದ್ದಾಳೆ. ಚಾರು ಕತ್ತಿನಲ್ಲಿದ್ದ ಅರಿಶಿಣದ ದಾರವನ್ನ ನೋಡಿ ಏನು ಇದು ಎಂದು ಕೇಳಿದ್ದಾಳೆ ಅದಕ್ಕೆ ಚಾರು ತಡವರಿಸಿದ್ದಾಳೆ. ನನಗೆ ಕಣ್ಣು ಕಾಣದ್ದಕ್ಕೆ ಧಾತ್ರಿ ವನದಲ್ಲಿ ಕಟ್ಟಿದ ದಾರ ಇದು ನಾನು ಮೂರು ತಿಂಗಳಿನವರೆಗೂ ಇದನ್ನು ಹಾಕಿಕೊಳ್ಳಬೇಕು ಎಂದು ಸುಳ್ಳನ್ನ ಹೇಳಿದ್ದಾಳೆ.

ಇನ್ನು ನಾನು ಮದುವೆ ಯಾಗಿರುವುದರಿಂದ ಯಾರಿಗೂ ಸಹ ನೆಮ್ಮದಿ ಇಲ್ಲ ನಾನು ಚಾರುವನ್ನೇ ದೂರ ಮಾಡಿಕೊಳ್ಳಬೇಕು ಎಂದು ರಾಮಾಚಾರಿ ನಿರ್ಧರಿಸಿದ್ದಾನೆ ನಮ್ಮ ಮದುವೆಗೆ ಯಾವುದೇ ಅರ್ಥ ಇಲ್ಲ ಎಂದು ಚಾರು ಕುತ್ತಿಗೆಗೆ ತಾಳಿ ಕಟ್ಟಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ಇದ್ದಾನೆ ಈ ಕಡೆ ನಾರಾಯಣ ಆಚಾರ್ಯರು ಆಸ್ಪತ್ರೆ ಸೇರಿದಾಗ ನಾರಾಯಣ ಆಚಾರ್ಯರಿಗೆ ದೀಪಳನ್ನು ಮದುವೆಯಾಗುತ್ತೇನೆ ಎಂದು ಕೊಟ್ಟ ಮಾತನ್ನು ಸಹ ರಾಮಾಚಾರಿ ನೆನಪಿಸಿ ಕೊಂಡು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಾನೆ.

ಹೇಗಿದ್ದರೂ ಎರಡು ಮನೆಯವರಿಗೂ ಕೂಡ ನಮ್ಮ ಮದುವೆ ಯಿಂದ ಸುಮ್ಮನೆ ನೆಮ್ಮದಿ ಇಲ್ಲ ನಾನು ಹೇಗಾದರೂ ಮಾಡಿ ಚಾರುವನ್ನ ದೂರ ಮಾಡಿಕೊಳ್ಳಬೇಕು. ಒಳ್ಳೆಯ ಸಂಬಂಧ ಚಾರುಲತಾರಿಗೆ ಒದಗಿ ಬಂದಿದೆ ಎಂದು ಅಂದುಕೊಂಡು ಇದೇ ಸರಿ ಎಂದುಕೊಂಡಿದ್ದಾನೆ ಒಳ್ಳೆಯ ಸಮಯವನ್ನು ನೋಡಿ ಚಾರುಗೆ ಈ ವಿಷಯವನ್ನೆಲ್ಲ ಹೇಳಬೇಕು ಎಂದುಕೊಂಡಿದ್ದಾನೆ.

More from Filmibeat

English summary
Colors Kannada serial Ramachari Written Update on March 9th episode. Here is the details about to manyatha shocking about charu's mangala sutra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X