Nannamma Superstar-3: ನನ್ನಮ್ಮ ಸೂಪರ್ ಸ್ಟಾರ್- 3 ಗ್ರ್ಯಾಂಡ್ ಓಪನಿಂಗ್: ಈ ಬಾರಿ ಯಾರೆಲ್ಲಾ ಭಾಗಿ..?
ನನ್ನಮ್ಮ ಸೂಪರ್ ಸ್ಟಾರ್ ಶೋ ನೋಡುವುದಕ್ಕೆ ಚೆಂದ. ಆ ಪುಟಾಣಿ ಮಕ್ಕಳ ಮಾತು, ಅಮ್ಮಂದಿರ ಮೇಲಿನ ದೂರು, ಅಮ್ಮಂದಿರನ್ನೇ ಚೇಂಜ್ ಮಾಡಿ ಬಿಡೋಣಾ ಎಂಬ ಮುದ್ದು ಮುದ್ದು ಕೋಪ. ಅಬ್ಬಬ್ಬಾ ಮಕ್ಕಳ ಬೇಡಿಕೆಗಳು, ಜಗಳಗಳು ಒಂದಾ-ಎರಡಾ. ಹೀಗಾಗಿಯೇ ನನ್ನಮ್ಮ ಸೂಪರ್ ಸ್ಟಾರ್ ಶೋ ನೋಡಲು ಖುಷಿ, ಆನಂದ.
ಈ ಬಾರಿಯೂ ಮಕ್ಕಳಿಂದ ನಕ್ಕು ನಲಿಯುವುದಕ್ಕೆ, ಅಮ್ಮಂದಿರ ಪರ್ಫಾಮೆನ್ಸ್ ನೋಡುವುದಕ್ಕೆ ತಾರಾ ಅನುರಾಧ, ಸೃಜನ್ ಲೋಕೇಶ್, ಅನು ಪ್ರಭಾಕರ್ ಗೆಸ್ಟ್ ಆಗಿ ಬಂದಿದ್ದಾರೆ. ಮಕ್ಕಳ ಜೊತೆಗೆ ಮಕ್ಕಳಾಗಿ, ಅಮ್ಮ - ಮಕ್ಕಳ ಬಾಂಧವ್ಯ ಎಷ್ಟಿದೆ ಎಂಬುದನ್ನು ಜಗತ್ತಿಗೆ ತೋರಿಸಲು ನನ್ನಮ್ಮಸೂಪರ್ ಸ್ಟಾರ್ ಶುರುವಾಗುತ್ತಿದೆ. ನಕ್ಕು ನಲಿಯಲು ವೀಕೆಂಡ್ ರೆಡಿ ಇರಿ.

ಎರಡು ಸೀಸನ್ ಸಕ್ಸಸ್
ಈಗಾಗಲೇ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಸೀಸನ್ 3 ಆರಂಭವಾಗಿದೆ. ಮಕ್ಕಳ ತುಂಟಾಟ, ತರಲೆ ಪ್ರಶ್ನೆಗಳಿಗೆ ಸೃಜನ್ ಲೋಕೇಶ್ ಸರಿ. ಅವರು ತರಲೆ ಪ್ರಶ್ನೆಗಳನ್ನು ಕೇಳುತ್ತಾ, ಮಕ್ಕಳನ್ನ ಫ್ರೆಂಡ್ ರೀತಿ ಮಾಡಿಕೊಂಡು ಬಿಡುತ್ತಾರೆ. ಅವರ ಜೊತೆಗೆ ತಾರಾ, ಅನುಪ್ರಭಾಕರ್ ಜಡ್ಜ್ ಆಗಿದ್ದಾರೆ. ಈಗಾಗಲೇ ಪ್ರೋಮೋಗಳನ್ನು ನೋಡಿಯೇ ನೋಡುಗರು ಫುಲ್ ಖುಷಿಯಾಗಿದ್ದಾರೆ.
ಲೈವ್ ಬಂದ ತಾರಾ-ಅನುಪ್ರಭಾಕರ್
ಸೀಸನ್ 3 ಆಗಿರುವ ಕಾರಣ ಜನರ ಅಭಿಪ್ರಾಯ, ಅವರ ನಿರೀಕ್ಷೆಗಳು ಬಹಳ ಮುಖ್ಯವಾಗುತ್ತದೆ. ಇದು ಸೋಷಿಯಲ್ ಮೀಡಿಯಾ ಜಮಾನ ಆಗಿರುವ ಕಾರಣ ಸುಲಭವಾಗಿ ಜನರಿಗೆ ಸ್ಟಾರ್‌ಗಳ ಸಂಪರ್ಕ ಸಾಧ್ಯವಾಗುತ್ತದೆ. ಇದೀಗ ತಾರಾ ಹಾಗೂ ಅನು ಪ್ರಭಾಕರ್ ಇಬ್ಬರು ಸೋಷಿಯಲ್ ಮೀಡಿಯಾ ಲೈವ್ ಬಂದು ಜನರ ಅಭಿಪ್ರಾಯಗಳನ್ನು ತಿಳಿದುಕೊಂಡಿದ್ದಾರೆ. ಜೊತೆಗೆ ಅವರಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3 ಬಗ್ಗೆ ಖುಷಿಯಾಗಿರುವುದು ತಿಳಿದಿದೆ.
ಮಕ್ಕಳಿಂದ ನಕ್ಕು ನಲಿದ ಸುಷ್ಮಾ
ಈ ಬಾರಿಯ ಸೀಸನ್ ವಿಶೇಷತೆ ಎಂದರೆ ಸುಷ್ಮಾ ರಾವ್ ಆಂಕರಿಂಗ್. ಮೊದಲೇ ನನ್ನಮ್ಮಸೂಪರ್ ಸ್ಟಾರ್ ಶೋನಲ್ಲಿ ಅಮ್ಮಂದಿರ ಕಾಲೆಳೆಯುವುದರಲ್ಲಿ ಮಕ್ಕಳು ನಿಸ್ಸೀಮರು. ಈಗ ಮಕ್ಕಳಿಂದ ಇನ್ನಷ್ಟು ಮನರಂಜನೆ ಹೊರ ತೆಗೆಸುವುದಕ್ಕೆ ನಿರೂಪಣೆ ಮಾಡಲು ಸೂಕ್ತ ವ್ಯಕ್ತಿಯೇ ಬಂದಿದ್ದಾರೆ. ಮಕ್ಕಳನ್ನು ತರ್ಲೆ ತರ್ಲೆ ಪ್ರಶ್ನೆಗಳನ್ನು ಮಾಡುತ್ತಾ, ತರ್ಲೆ ತರ್ಲೆ ಉತ್ತರ ಸುಷ್ಮಾ ತೆಗೆಯುತ್ತಿದ್ದಾರೆ. ಇದು ನೋಡುಗರ ಮನಸ್ಸನ್ನು ಆನಂದದಿಂದ ತೇಲುವಂತೆ ಮಾಡುತ್ತಿದೆ.

ಯಾರೆಲ್ಲಾ ಭಾಗಿಯಾಗಿದ್ದಾರೆ..?
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ವಿವಿಧ ಕ್ಷೇತ್ರಗಳಿಂದ ಅಮ್ಮ-ಮಕ್ಕಳನ್ನು ಕರೆತರಲಾಗುತ್ತದೆ. ಈ ಬಾರಿಯೂ ನಟನೆ, ಮಾಡೆಲಿಂಗ್, ಗೃಹಿಣಿ, ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ ವಿಭಾಗಗಳಿಂದ ಸ್ಪರ್ಧಿಗಳನ್ನು ಆರಿಸಿ ಕರೆತಂದಿದ್ದಾರೆ. ಅದರಲ್ಲೂ ನಯನಾ ಕಾವೇರಪ್ಪ ತನ್ನ ಮಗ ಸಮರ್ಥ್ ಜೊತೆಗೆ ಬಂದಿದ್ದಾರೆ. ಎಷ್ಟೋ ವರ್ಷಗಳ ಬಳಿಕ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ನಯನಾ ಕಾವೇರಪ್ಪ ಕಮ್ ಬ್ಯಾಕ್ ಆಗುತ್ತಿದ್ದಾರೆ. ಅಂದಿನ ಕಾಲದಲ್ಲಿ ಕಿರುತೆರೆಯಲ್ಲಿ ಎಲ್ಲರ ಮೆಚ್ಚಿನ ನಟಿಯಾಗಿದ್ದವರು ನಯನಾ, ಈಗ ಮಗನೊಂದಿಗೆ ರಂಜಿಸಲು ಬಂದಿದ್ದಾರೆ. ಸೌಂದರ್ಯ - ಧವನ್ ರಾಜ್, ಸಾರಿಕಾ-ಮೃದಿನಿ, ರಮ್ಯಾ - ಚಿರದ್ವಿತಾ, ಮಾನಸ ರವಿ - ಶರವ್, ರಶ್ಮಿ ಗೌಡ - ಅಧಿತಾ, ಶಿಲ್ಪಾ - ವಿಯಾನ್, ಪ್ರಿಯಾಂಕ - ದ್ವಿತಾ, ಉಷಾ ದೀಪಕ್ - ಆರ್ಯನ್ ಬಂದಿದ್ದಾರೆ.


Click it and Unblock the Notifications