Nannamma Superstar: ಕರಿಮಣಿ ಮಾಲೀಕ ಕೋಕಿಲ.. ಸಾಧುಕೋಕಿಲ..: ಕಲರ್ಸ್ ಕನ್ನಡ ಟ್ರೆಂಡ್ ಬ್ರೇಕ್ ಮಾಡುತ್ತಾ..?
ಎಲ್ಲಿ ನೋಡಿದರೂ ಕರಿಮಣಿ ಮಾಲೀಕ ನೀನಲ್ಲ.. ನೀನಲ್ಲ ನೀನಲ್ಲ ಹಾಡೇ ಗುನುಗುತ್ತಾ ಇದ್ದಾರೆ. ರೀಲ್ಸ್ ಓಪನ್ ಮಾಡಿದರಂತೂ ಕೇಳುವುದೇ ಬೇಡ, ಹತ್ತು ನಿಮಿಷದಲ್ಲಿ ಎರಡು ಆದರೂ ಆ ಹಾಡು ಬಂದು ಹೋಗಿರುತ್ತದೆ. ಕರಿಮಣಿ ಮಾಲೀಕ ಟ್ರೆಂಡ್ ಶುರುವಾಗಿ ಬಹಳ ದಿನಗಳೇ ಆಯಿತು. ಆರಂಭದಲ್ಲಿ ಇದ್ದ ಕ್ರೇಜ್ ಈಗ ಅದಕ್ಕೆ ಇಲ್ಲ. ಅಯ್ಯೋ ಮತ್ತೇನಾ ಎಂಬ ಬೇಸರದಲ್ಲಿಯೇ ಜನ ಅದನ್ನು ಕೇಳುತ್ತಿದ್ದಾರೆ.
ಈಗಲೂ ನಮ್ಮದೊಂದು ಇರಲಿ ಅಂತಾನೇ ಹಲವರು ಕರಿಮಣಿ ಮಾಲೀಕ ಹಾಡಿಗೆ ರೀಲ್ಸ್ ಮಿಕ್ಸ್ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಈಗ ಅದನ್ನ ಬ್ರೇಕ್ ಮಾಡುತ್ತಾ ಎಂಬುದೇ ಪ್ರಶ್ನೆ. ಬೇರೆ ಯಾವುದಾದರೂ ಸಾಂಗ್ ಟ್ರೆಂಡ್ ಮಾಡುತ್ತಾ ಎಂಬುದನ್ನು ನೋಡಬೇಕಿದೆ.

ರಿಯಾಲಿಟಿ ಶೋನಲ್ಲೂ ಕರಿಮಣಿ ಮಾಲೀಕ
ಕರಿಮಣಿ ಮಾಲೀಕನ ಫೀವರ್ ಸಂಪೂರ್ಣವಾಗಿ ಇನ್ನು ಕಡಿಮೆಯಾಗಿಲ್ಲ. ಆಗ ವಾವ್ ವಾಟ್ ಎ ಸಾಂಗ್ ಅಂತ ಎಲ್ಲರೂ ರೀಲ್ಸ್ ಮಾಡ್ತಾ ಇದ್ದರು. ಈಗ ನಮ್ಮದು ಒಂದಿರಲಿ ಅಂತ ಡ್ಯಾನ್ಸ್ ಮಾಡುತ್ತಾರೆ. ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಈ ಸಾಂಗ್ ರಾರಾಜಿಸುತ್ತಿದೆ. ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿಗಿಲಿ ಗಿಲಿ ಮಹಾ ಸಂಗಮವಾಗಿದೆ. ಈ ಸಂಗಮದಲ್ಲಿ ಎರಡು ಕಡೆಯ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಡ್ಯಾನ್ಸ್ ಪರ್ಫಾಮೆನ್ಸ್ ಕೂಡ ಇದ್ದು, ಆ ಡ್ಯಾನ್ಸ್‌ಗೆ ಕರಿಮಣಿ ಮಾಲೀಕನದ್ದೇ ಆಯ್ಕೆ ಮಾಡಿಕೊಂಡಿದ್ದಾರೆ.
ನಿರಂಜನ್ ಅಲ್ವೇ ಅಲ್ಲ ಕರಿಮಣಿ ಮಾಲೀಕ
ಡ್ಯಾನ್ಸ್ ವೇದಿಕೆಯಲ್ಲಿ ಆ ಕಡೆ ಒಂದು ಈ ಕಡೆ ಒಂದು ಫೋಟೋಗಳನ್ನು ಇಡಲಾಗಿದೆ. ಆದರೆ ಫೋಟೋಗಳನ್ನು ಬಟ್ಟೆಯ ಮೂಲಕ ಮುಚ್ಚಿಡಲಾಗಿದೆ. ಡ್ಯಾನ್ಸ್ ಮಾಡುತ್ತಾ ಕರಿಮಣಿ ಮಾಲೀಕ ಸಾಲು ಬಂದಾಗ ಆ ಫೋಟೋ ಮೇಲಿನ ಬಟ್ಟೆ ತೆರೆಯಬೇಕು. ಆಗ ಪುನೀತ ಆಚಾರ್ಯ, ನಿರಂಜನ್ ಇರುವ ಫೋಟೋ ಬಟ್ಟೆಯನ್ನು ತೆಗೆದಿದ್ದಾರೆ. ನೋಡಿದ ಕೂಡಲೇ ನೋ.. ಕರಿಮಣಿ ಮಾಲೀಕ ನಿರಂಜನ್ ಅಲ್ಲ ಎಂಬ ರೇಂಜಿಗೆ ಹೇಳಿ ಹೋಗಿದ್ದಾರೆ. ಪುನೀತ ವಾಂತಿ ಮಾಡಿಕೊಂಡಿದ್ದು ನೋಡಿ, ನಿರಂಜನ್ ಶಾಕ್ ಆಗಿದ್ದಾರೆ.
ಕರಿಮಣಿ ಮಾಲೀಕ ಕಡೆಗೂ ಸಿಕ್ಕಾಯ್ತು
ಅಲ್ಲಿಂದ ಹಾಡು ಮುಂದುವರೆದಿದೆ. ಮತ್ತೊಂದು ಫೋಟೋ ಕಡೆಗೆ ಪಯಣ ಬೆಳೆದಿದೆ. ಅಲ್ಲಿ ಸೃಜನ್ ಲೋಕೇಶ್ ಫೋಟೋ ಅನಾವರಣವಾಗಿದೆ. ಅದನ್ನು ಒಪ್ಪದ ಡ್ಯಾನ್ಸರ್‌ಗಳಿಗೆ, ಅವ್ರು ಅಲ್ಲ ಇವ್ರು ಅಲ್ಲ ಮತ್ತ್ಯಾರು ಎಂಬ ಪ್ರಶ್ನೆ ಕೇಳಿದ್ದಾರೆ. ಆಗ ಬಂದ ಸಾಲುಗಳೇ ಕರಿಮಣಿ ಮಾಲೀಕ ಕೋಕಿಲ.. ಸಾಧು ಕೋಕಿಲಾ ಎಂಬುದು. ಭರತನಾಟ್ಯ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿ ಸಖತ್ ಮನರಂಜನೆ ನೀಡಿದ್ದಾರೆ. ಆ ಹಾಡಿಗೆ ಕ್ಯಾಪ್ಶನ್ ಬೇರೆ ಕೊಟ್ಟಿದ್ದು, ಜೋಶ್‌ನಲ್ಲಿ ಕುಣಿದ ಕರಿಮಣಿ ಒಡತಿಯರು ಟ್ರೆಂಡ್ ಬ್ರೇಕರ್ಸ್ ಆಗೋ ಚಾನ್ಸಸ್ ಇದೆಯಾ..? ಎಂದಿದ್ದಾರೆ.

ಸಾಧು ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
ಹಾಡು ಹಾಡುತ್ತಲೇ ಸಾಧುಕೋಕಿಲಾ ಅವರನ್ನು ಸ್ಟೇಜ್‌ಗೆ ಕರೆತಂದಿದ್ದಾರೆ. ಅವರಿಂದಾನೂ ಒಂದೆರಡು ಸ್ಟೆಪ್ಸ್ ಹಾಕಿಸಿದ್ದಾರೆ. ಸಾಧು ಕೋಕಿಲಾ ಕಾಮಿಡಿ ಮಾಡಿದರು ಚೆಂದ, ಡ್ಯಾನ್ಸ್ ಮಾಡಿದರು ಚೆಂದ. ಅವರ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಕಡೆಗೂ ಕರಿಮಣಿ ಮಾಲೀಕ ಕೋಕಿಲಾ ಸಿಕ್ಕಿದ್ರಲ್ಲ ಎಂದು ಕಮೆಂಟ್ಸ್ ಹಾಕುತ್ತಿದ್ದಾರೆ.


Click it and Unblock the Notifications











