Antarapata: ಮದುವೆ ಸಂಭ್ರಮದಲ್ಲಿದ್ದ ರೇವತಿಗೆ ಅಳಿಯ ಹಿನ್ನೆಲೆ ಕೇಳಿ ಶಾಕ್..!

By ಎಸ್ ಸುಮಂತ್

ಆರಾಧನಾ ಬದುಕಲ್ಲಿ ಈಗ ಹೊಸ ಗಾಳಿ ಬೀಸುತ್ತಿದೆ ಎಂದು ರೇವತಿ ಖುಷಿ ಪಡುತ್ತಿದ್ದಾಳೆ. ರೇವತಿಗೆ ಮೊದಲು ತನ್ನ ಎರಡನೇ ಗಂಡನ ಕಾಟದಿಂದ, ಮಗಳನ್ನು ರಕ್ಷಿಸಬೇಕು ಎಂಬುದೇ ಆಗಿತ್ತು. ಅದಕ್ಕೆ ಅಂತ ಸಾಕಷ್ಟು ಕಷ್ಟ ಪಟ್ಟರು ಅದು ಸಾಧ್ಯವಾಗಿರಲಿಲ್ಲ. ಅಮ್ಮನನ್ನು ಬಿಟ್ಟು ಆರಾಧನಾ ಎಲ್ಲಿಯೂ ಹೋಗುವುದಕ್ಕೆ ಇಷ್ಟ ಪಡುತ್ತಿರಲಿಲ್ಲ. ಆರಾಧನಾಳ ವೀಕ್ನೆಸ್ ಅನ್ನೇ ಮಹೇಶ್ ಬಂಡವಾಳ ಮಾಡಿಕೊಂಡು ಆರಾಧನಾಳಿಗೆ ಕಷ್ಟ ಕೊಡುತ್ತಿದ್ದ.

ರಾಜ್ ಶ್ರೀಮಂತ ಮನೆತನದ ಹುಡುಗ ಅಲ್ಲದೇ ಸಾಮಾನ್ಯ ಹುಡುಗನಾಗಿ ಆರಾಧನಾಳ ಮನೆಗೆ ಬಂದು, ಆರಾಧನಾಳ ಕಷ್ಟ ಸುಖದಲ್ಲಿ ಭಾಗಿಯಾಗಿದ್ದ. ಆ ಸಮಯದಲ್ಲಿ ಆರಾಧನಾಳಿಗೆ ರಾಜ್ ಮೇಲೆ ಪ್ರೀತಿಯಾಗಿತ್ತು. ಆದರೆ ಇಬ್ಬರು ಹೇಳಿಕೊಳ್ಳುವುದಕ್ಕೆ ಸಾಧ್ಯವೇ ಆಗಿರಲಿಲ್ಲ. ಅಷ್ಟರಲ್ಲಿಯೇ ಮದುವೆಯೇ ಆಗೋಗಿದೆ.

Colors kannada Serial antarapata Written Update on March 4th episode

ಎಲ್ಲರ ಹಾರೈಕೆಯೊಂದಿಗೆ ಮದುವೆ

ಆರಾಧನಾಳ ನಡತೆ ಬಗ್ಗೆಯೇ ಮಹೇಶ ಪ್ರಶ್ನೆ ಮಾಡಿದ್ದ. ಯಾರೋ ಮಾಡಿದ ಪ್ಲ್ಯಾನ್‌ನಿಂದ ಒಂದೇ ರೂಮಿನಲ್ಲಿ ರಾಜ್ ಹಾಗೂ ಆರಾಧನಾ ತಗಲಾಕಿಕೊಂಡಿದ್ದರು. ಇದನ್ನೇ ಹಿಯಾಳಿಸಿದ್ದ ಮಹೇಶ. ರೇವತಿ ಕೂಡ ಅನುಮಾನ ಪಟ್ಟವಳಂತೆ ಮಾಡಿದಳು. ಅದು ಮಗಳ ಜೀವನ ಸರಿಯಾಗಲೆಂದು. ಆ ಕ್ಷಣದಲ್ಲಿ ರಾಜ್, ಮನೆಯೊಳಗಿದ್ದ ಅರಿಶಿನದ ಕೊಂಬನ್ನು ತಂದು ಆರಾಧನಾಳಿಗೆ ಕಟ್ಟಿದ. ಈಗ ವಠಾರದ ಸಮ್ಮುಖದಲ್ಲಿ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡಿದ್ದಾರೆ.

ಸತ್ಯ ತಿಳಿದ ಆರಾಧನಾ ಸೈಲೆಂಟ್

ಶಾಸ್ತ್ರಗಳನ್ನು ಮಾಡುವಾಗ ಆರಾಧನಾ ಯಾವುದೋ ಯೋಚನೆಯಲ್ಲಿ ಮುಳುಗಿ ಹೋಗಿದ್ದಳು. ರೇವತಿ ಅದನ್ನು ಗಮನಿಸಿದ್ದಾಳೆ. ಕೊಂಚವೂ ನಗುವು ಇಲ್ಲ, ಖುಷಿಯೂ ಇಲ್ಲ. ಹಾರ ಬದಲಾಯಿಸುವಾಗಲೂ ಆರಾಧನಾ ಮುಖದಲ್ಲಿ ಸಂತಸವಿರಲ್ಲಿಲ್ಲ. ಯಾಕಂದ್ರೆ ಆರಾಧನಾಳ ಬಳಿ ರಾಜ್ ಅದಾಗಲೇ ಸತ್ಯವನ್ನು ಹೇಳಿದ್ದ. ತಾನೂ ಯಾರ ಮಗನೆಂದು ತಿಳಿಸಿದ್ದ. ಇದು ಆರಾಧನಾಳನ್ನು ತುಂಬಾ ಕಾಡಿತ್ತು. ಕಾಲ ಮಿಂಚಿ ಹೋಗಿರುವ ಬಗ್ಗೆ ಯೋಚನೆಯಾಗಿತ್ತು. ಗಾಡೆ ಯೋಜನೆಯಲ್ಲಿ ಆರಾಧನಾ ಮುಳುಗಿದ್ದನ್ನು ರೇವತಿ ಕಂಡು ಹಿಡಿದಿದ್ದಳು.

ರೇವತಿಗೆ ಸತ್ಯ ತಿಳಿಸಿದ ಆರಾಧನಾ

ಮಗಳು ಬೇಸರದಲ್ಲಿದ್ದ‌ನ್ನು ಕಂಡ ರೇವತಿ, ಕ್ಷಮೆ ಕೇಳಿದ್ದಾಳೆ. ನಾನು ಕೂಡ ಅವತ್ತು ಅನುಮಾನ ಪಟ್ಟಿದ್ದು ನಿನ್‌ ಜೀವನ ಸರಿಯಾಗಲಿ ಅಂತ ಅಷ್ಟೆ ಎಂದಿದ್ದಾಳೆ. ಅರಿಶಿನ ಹಚ್ಚುವಾಗ, ಮಗಳ ಬೇಸರವನ್ನು ಕೇಳಿದ ರೇವತಿಗೆ ಶಾಕಿಂಗ್ ಸುದ್ದಿ ಕೇಳಿಸಿದೆ. ತಾಯಿಗೂ ಸತ್ಯವನ್ನು ಹೇಳಿದ್ದಾಳೆ ಆರಾಧನಾ. 'ಅಮ್ಮ ನಾನು ಸೊಸೆಯಾಗಿ ಹೋಗುತಚತಾ ಇರೋದು ಧರ್ಮೆಂದ್ರ ಪ್ರಧಾನ್ ಮನೆಗೆ' ಎಂದಿದ್ದಾಳೆ. ಇದನ್ನು ಕೇಳಿದ ರೇವತಿಗೆ ತಾನೂ ಏನು ಮಾಡಬೇಕು ಎಂಬುದೇ ತೋಚದಂತೆ ಆಗಿದೆ.

Colors kannada Serial antarapata Written Update on March 4th episode

ದೇವೇಂದ್ರ ಪ್ರಧಾನ್ ಹೆಸರು ಕೇಳಿ ಶಾಕ್

ಆರಾಧನಾ ಒಬ್ಬರನ್ನು ದ್ವೇಷಿಸುತ್ತಿದ್ದಳು ಎಂದರೆ ಅದು ಧರ್ಮೆಂದ್ರ ಪ್ರಧಾನ್ ಅವರನ್ನು. ತನ್ನ ತಂದೆ ಸಾವಿಗೆ ಕಾರಣರಾದವನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಹಠ ತೊಟ್ಟಿದ್ದಳು. ಆ ಬಗ್ಗೆ ರಾಜ್ ಬಳಿಯೂ ಹೇಳಿದ್ದಳು. ಆದರೆ ರಾಜ್ ಸತ್ಯವನ್ನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈಗ ಮದುವೆ ಆಗಿದೆ. ಈಗ ಸತ್ಯ ಮುಚ್ಚಿಟ್ಟರೆ ಅಪರಾಧವಾಗುತ್ತದೆ. ಹೀಗಾಗಿ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಆದರೆ ಆರಾಧನಾಳ ತಂದೆಯ ಸಾವಿಗೆ ಧರ್ಮೇಂದ್ರ ಪ್ರಧಾನ್ ಕಾರಣ ಎಂಬುದಷ್ಟೇ ಎಂದುಕೊಂಡಿದ್ದಾರೆ. ಅದು ಸತ್ಯವಾ..? ಅದರ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯಾ ಎಂಬುದು ಇನ್ನು ಮೇಲೆ ಗೊತ್ತಾಗಬೇಕಿದೆ.

More from Filmibeat

English summary
colors kannada Serial Antarapata Written Update on March 4th episode. Here is the details about Revathi knows the truth about Raj;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X