Antarapata: ಆರಾಧನಾಳ ಬಾಳಲ್ಲೂ ಅಮಲಾ ಆಟ: ಸತ್ಯ ತಿಳಿಸೋದು ಯಾರು..?

By ಎಸ್ ಸುಮಂತ್

ಆರಾಧನಾಳನ್ನು ಸುಶಾಂತ್ ಮನಸಾರೆ ಇಷ್ಟಪಟ್ಟಿದ್ದ. ಶ್ರೀಮಂತಿಕೆಯ ಜೀವನಕ್ಕಿಂತ ವಠಾರದ ಜೀವನವೇ ಖುಷಿ ಕೊಟ್ಟಿತ್ತು. ಹೀಗಾಗಿಯೇ ಸುಶಾಂತ್ ಅರಮನೆ ಬಿಟ್ಟು ಮತ್ತೆ ವಠಾರಕ್ಕೆ ಬಂದಿದ್ದ. ಆದರೆ ಆರಾಧನಾಳ ಮೇಲಿನ ಪ್ರೀತಿ ಹೇಳಿಕೊಳ್ಳುವುದಕ್ಕೆ ಆತನಿಂದ ಆಗಿರಲಿಲ್ಲ. ಆದರೂ ವಿಧಿ ಅವರನ್ನು ಒಂದು ಮಾಡಿತ್ತು.

ಯಾವುದೋ ಇಕ್ಕಟ್ಟಿಗೆ ಸಿಲುಕಿ ರಾಜ್, ಆರಾಧನಾಳನ್ನು ಮದುವೆಯಾಗಿಬಿಟ್ಟ. ಕಳೆದ ಇಪ್ಪತ್ತು ವರ್ಷದಿಂದ ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದ ದ್ವೇಷವನ್ನು ಬಿಡುವುದಕ್ಕೆ ಆರಾಧನಾಳಿಗೂ ಇಷ್ಟವಿರಲಿಲ್ಲ. ತಾಯಿಗೂ ಸತ್ಯ ತಿಳಿಸಿದಳು. ಆರಾಧನಾಗೆ ತಾಯಿ ಎಂದರೆ ಪಂಚಪ್ರಾಣ. ಹೀಗಾಗಿಯೇ ಎಲ್ಲವನ್ನು ಅವಳಿಗಾಗಿ ಸಹಿಸಿಕೊಂಡಳು. ಮಹೇಶನನ್ನು ಅವನಿಗಾಗಿಯೇ ಸಹಿಸಿಕೊಂಡಳು. ಈಗ ಸುಶಾಂತ್‌ನನ್ನು ಕೂಡ.

Colors kannada Serial Antarapata Written Update on March 5th episode

ಮಧ್ಯ ದಾರಿಯಲ್ಲೇ ಇಳಿದ ಆರಾಧನಾ

ಸುಶಾಂತ್ ಜೊತೆಗೆ ಆರಾಧನಾ ಮನೆಯವರು, ವಠಾರದವರೆಲ್ಲಾ ಸೇರಿ ಒಂದಷ್ಟು ಶಾಸ್ತ್ರಗಳನ್ಮು ಮಾಡಿ, ಮನೆಗೆ ಕಳುಹಿಸಿದರು. ಆರಾಧನಾ ಕೂಡ ಅಲ್ಲಿಂದ ಲಗೇಜ್ ಎತ್ತುಕೊಂಡು, ಸುಶಾಂತ್ ಕಾರಿನಲ್ಲಿ ಹೊರಟಳು. ಆದರೆ ಮಧ್ಯ ದಾರಿಯಲ್ಲಿಯೇ ಕಾರು ನಿಲ್ಲಿಸಿ, ಲಗೇಜು ತೆಗೆದುಕೊಂಡು ಇಳಿದ ಆರಾಧನಾ ಸೀದಾ ಹೊರಟುಬಿಟ್ಟಳು. ಇದು ಸುಶಾಂತ್‌ಗೆ ಶಾಕ್ ಆಗಿತ್ತು. ಆರಾಧನಾ ಕ್ಷಮಿಸಿದ್ದಾಳೆ, ನನ್ನನ್ನು ಒಪ್ಪಿದ್ದಾಳೆ ಎಂದುಕೊಂಡಿದ್ದನು. ಅದೆಲ್ಲವೂ ಆರಾಧನಾ ವರ್ತನೆಯಿಂದ ಸುಳ್ಳಾಗಿತ್ತು.

ತಂದೆಯ ತಪ್ಪಿಲ್ಲವೆಂದ ಸುಶಾಂತ್

ಆರಾಧನಾ ಕೋಪ ಯಾಕೆ ಎಂಬುದು ಸುಶಾಂತ್‌ಗೆ ಚೆನ್ನಾಗಿಯೇ ಅರಿವಿದೆ. ಆದರೆ ಏನು ಮಾಡದ ಪರಿಸ್ಥಿತಿ ಅವನದ್ದು. ಮಧ್ಯದಾರಿಯಲ್ಲಿ ಇಳಿದ ಆರಾಧನಾ ಬಳಿ, ತಂದೆಯ ತಪ್ಪು ಏನು ಇಲ್ಲ ಎಂದೇ ವಾದ ಮಾಡಿದ. ನಾನು ಕೂಡ ನೀವೂ ಹೇಳಿದ ಮೇಲೆ ತಂದೆಯನ್ನೇ ಅನುಮಾನಿಸಿದ್ದೆ, ತಂದೆಯದ್ದೇ ತಪ್ಪು ಎಂದುಕೊಂಡಿದ್ದೆ. ಆದರೆ ಎಲ್ಲದನ್ನು ವಿಚಾರಿಸಿದಾಗ ನೀವೂ ಕೂಡ ತಪ್ಪು ತಿಳಿದಿದ್ದೀರಾ ಎಂಬುದು ಅರ್ಥವಾಯಿತು. ನಿಮ್ಮ ತಂದೆಯ ಸಾವಿಗೆ ನಮ್ಮ ತಂದೆ ಕಾರಣ ಅಲ್ಲ. ಮನೆಗೆ ಬನ್ನಿ ಅದನ್ನು ಪ್ರೂವ್ ಮಾಡುತ್ತೇನೆ ಎಂದೆ ಮನವಿ ಮಾಡಿಕೊಂಡಿದ್ದಾನೆ. ಆದರೂ ಆರಾಧನಾಗೆ ಆ ಮಾತು ಕೇಳುವ ತಾಳ್ಮೆಯೂ ಇರಲಿಲ್ಲ.

ಸುಶಾಂತ್‌ನನ್ನು ಬಿಟ್ಟು ಹೊರಟ ಆರಾಧನಾ

ಸುಶಾಂತ್ ಎಷ್ಟು ಹೇಳಿದರೂ ಆರಾಧನಾಗೆ ತಲೆಯಲ್ಲಿ ಇದ್ದದ್ದು ಮೋಸ ಮಾಡಿದ್ದಾನೆ ಎಂಬುದು. ಇಷ್ಟು ದಿನ ಜೊತೆಗೆ ಇದ್ದರು ಸುಳ್ಳು ಹೇಳಿದ್ದಾನೆ ಎಂಬುದು. ಒಂದು ಕಡೆ ಸುಳ್ಳು ಹೇಳಿರುವುದು ಮತ್ತೊಂದು ಕಡೆ ಧರ್ಮೇಂದ್ರ ಪ್ರಧಾನ್ ಮಗ ಎಂಬುದು. ಈ ಎರಡನ್ನು ಆರಾಧನಾಳಿಂದ ಸಹಿಸುವುದಕ್ಕೆ ಅಸಾಧ್ಯವಾಗಿತ್ತು. ಹೀಗಾಗಿ ನನ್ನ ದಾರಿ ನನಗೆ, ನಿಮ್ಮ ದಾರಿ‌ ನಿಮಗೆ. ಅಮ್ಮನಿಗೆ ನೋವಾಗಬಾರದು ಎಂಬ ಕಾರಣಕ್ಕೆ ನಿಮ್ಮ ಜೊತೆಗೆ ಬಂದೆ ವಿನಃ. ನಿಮ್ಮ ಮನೆಗೆ ಬಂದು ಸಂಸಾರ ಮಾಡುತ್ತೀನಿ ಅಂತ ಅಲ್ಲ ಎಂದಿದ್ದಾಳೆ.

Colors kannada Serial Antarapata Written Update on March 5th episode

ಆರಾಧನಾಗೆ ಸತ್ಯ ತಿಳಿಯೋದು ಹೇಗೆ..?

ಧರ್ಮೆಂದ್ರ ಪ್ರಧಾನ್ ಮನೆಯಲ್ಲಿ ದೊಡ್ಡ ಶತ್ರು ಅಂದ್ರೆ ಅಮಲಾ. ಮಗಳಾಗಿದ್ದುಕೊಂಡೆ ಕುಟುಂಬಕ್ಕೆ ಸಾಕಷ್ಟು ಕೆಟ್ಟದ್ದನ್ನೆ ಮಾಡುತ್ತಾಳೆ. ಎಲ್ಲಾ ಆಸ್ತಿಯೂ ತನಗೆ ಬೇಕು ಎಂಬ ದುರಾಸೆಯ ಹೆಣ್ಣು ಆಕೆ. ಹೀಗಾಗಿಯೇ ಮನೆಗೆ ಅದರಲ್ಲೂ ತಂದೆಗೆ, ತಮ್ಮನಿಗೆ ಕೆಟ್ಟದ್ದನ್ನೇ ಬಯಸುತ್ತಾ ಇರುತ್ತಾಳೆ. ಈಗ ಆರಾಧನಾಳ ತಂದೆಯ ಸಾವಿಗೂ ಅಮಲಾಳೇ ಕಾರಣ ಎಂಬುದನ್ನು ಮೂರ್ತಿಯರೆ ತಿಳಿಸಬೇಕಾಗಿದೆ.

More from Filmibeat

English summary
Antarapata kannada serial today episode; Here is the details about Aradhana left on the way;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X