Bhagyalakshmi: ಭಾಗ್ಯಾಳಾ ಹೊಸ ಅವತಾರಕ್ಕೆ ಕವನವನ್ನೇ ಬರೆದ ಆ ವ್ಯಕ್ತಿ ಯಾರೂ?
'ಭಾಗ್ಯಲಕ್ಷ್ಮೀ' ಧಾರಾವಾಹಿ ನೋಡಿದಾಗ ಅದೆಷ್ಟೋ ಜನ ಅತ್ತೆಯ ವಿಚಾರಕ್ಕೆ ಗಮನ ಕೊಟ್ಟಿದ್ದಾರೆ. ನಮಗೂ ಇಂಥ ಅತ್ತೆ ಸಿಗಬಾರದಾ ಅಂತ. ಅದೇ ಥರ ಸೊಸೆಯ ಪಾತ್ರವೂ ಅಷ್ಟೇ ಅದ್ಭುತವಾಗಿರುವ ಕಾರಣ ಎಷ್ಟೋ ಅತ್ತೆಯಂದಿರು ಇದ್ದರೆ ಇಂಥೊಬ್ಬಳು ಸೊಸೆ ಇರಬೇಕು ಎಂದೇ ಭಾವಿಸಿದ್ದಾರೆ. ಭಾಗ್ಯಾಳಂಥ ಸೊಸೆಯಿದ್ದರೆ ಅತ್ತೆ ಮಾವನಿಗೆ ಚಿಂತೆಯಿಲ್ಲ. ಕುಸುಮಾಳಂತ ಅತ್ತೆಯಿದ್ದರೆ ಯಾವ ಹೆಣ್ಣು ಗಂಡನ ಮನೆ ಬಿಟ್ಟು ಬರೋದಿಲ್ಲ. ಇದು 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಎಲ್ಲರ ಮನಮುಟ್ಟಿದ ಸಂದೇಶ.
ಅಷ್ಟೇ ಅಲ್ಲ ಈಗಷ್ಟೇ ವರ್ಷ ತುಂಬಿ. ಯಶಸ್ವಿ ಹೆಚ್ಚುವರಿ ಎಪಿಸೋಡ್ ಗಳನ್ನು ಮುಗಿಸಿದೆ. ಆದರೆ ಪ್ರಸ್ತುತ ಜಗತ್ತು ಹೇಗಿದೆ..? ಈ ಜಗತ್ತಿನಲ್ಲಿರುವ ಸಂಬಂಧಗಳು ಯಾವುದಕ್ಕೆ ಹಾತೊರೆಯುತ್ತವೆ..? ಸಂಬಂಧ ಉಳಿಸಿಕೊಳ್ಳುವ ಹಂಬಲವಾ..? ಜವಾಬ್ದಾರಿಯಿಂದ ನುಣುಚಿಕೊಳ್ಳುವ ಆತುರವಾ ಎಂಬೆಲ್ಲಾ ವಿಚಾರಗಳನ್ನು ಉತ್ತಮವಾಗಿ ತೆರೆದಿಟ್ಟಿದ್ದು ಇದೇ ಭಾಗ್ಯಲಕ್ಷ್ಮೀ. ಇದೀಗ ಹೊಸ ಅಧ್ಯಾಯ ಶುರುವಾಗಿದೆ.

ಭಾಗ್ಯಾಳಿಗೆ ಹೊಸ ರೂಪಕೊಟ್ಟ ಅತ್ತೆ
ಅತ್ತೆ ಕುಸುಮಾಗೆ ತನ್ನ ಸಂಸಾರ ಚೂರಾಗುವುದು ಇಷ್ಟವಿಲ್ಲ. ಮಗ ದಾರಿ ತಪ್ಪಿರುವುದು ಗೊತ್ತಾಗಿದೆ. ಶ್ರೇಷ್ಠಾಳ ಹಿಂದೆ ಬಿದ್ದಿರುವುದು ಗೊತ್ತಾಗಿದೆ. ಆದರೆ ಮನೆಯಲ್ಲಿ ಮಕ್ಕಳಿದ್ದಾರೆ. ಅವರಿಂದ ಭಾಗ್ಯಾಳನ್ನು ದೂರ ಮಾಡಲು ಸಾಧ್ಯವಿಲ್ಲ. ತಾಂಡವ್‌ಗೆ ಸವಾಲು ಹಾಕಿದ್ದ ಕುಸುಮಾ, ಈಗ ಸೊಸೆಯನ್ನು ಬದಲಾಯಿಸಿದ್ದಾಳೆ.
ಅಮ್ಮನನ್ನು ಕಂಡು ಮಕ್ಕಳು ಫಿದಾ
ತಾಂಡವದ ಯಾವಾಗಲೂ ಹೇಳುವುದು ದಡ್ಡಿ, ಎಮ್ಮೆ, ಅದೇ ಸೀರೆ, ಅದೇ ಜಡೆ ಅಂತ. ಈಗ ಭಾಗ್ಯಾ ಬ್ಯೂಟಿಫುಲ್ ಆಗಿಕಾಣಿಸಿಕೊಂಡಿದ್ದಾಳೆ. ಒಂದು ಕ್ಷಣ ನೋಡಿದಾಗ ವಾವ್ ಎನ್ನುವ ಫೀಲ್ ಬರಬೇಕು ಅಷ್ಟು ಅದ್ಭುತವಾಗಿ ರೆಡಿಯಾಗಿದ್ದಾಳೆ. ಇದೆಲ್ಲಾ ಕ್ರೆಡಿಟ್ ಕುಸುಮಾಗೆ ಸಲ್ಲಬೇಕು. ಯಾಕಂದ್ರೆ ಸದಾ ಟ್ರೆಡಿಷನಲ್ ಆಗಿದ್ದ ಭಾಗ್ಯಾಳಿಗೆ ಅದೇ ಸೀರೆ ಉಡಿಸಿ ಕೊಂಚ ಮಾಡ್ರನ್ ಲುಕ್ ಟಚ್ ಕೊಟ್ಟಿದ್ದಾಳೆ. ಅಮ್ಮನ ಹೊಸ ಅವತಾರಕ್ಕೆ ಮಕ್ಕಳಂತು ಫಿದಾ ಆಗಿದ್ದಾರೆ. ಅಮ್ಮನನ್ನು ಅಪ್ಪಿಕೊಂಡು ಹಿಂಗೆ ಇರಿ ಅಮ್ಮ ಎಂದು ಮನತುಂಬಿ ಹಾರೈಸಿದ್ದಾರೆ.

ತಾಂಡವ್ ಮನಸ್ಸಲ್ಲಿ ಪ್ರೀತಿ ಹುಟ್ಟುತ್ತಾ?
ಪ್ರೀತಿ ಅನ್ನೋದು ಮೇಲ್ನೋಟಕ್ಕೆ ಬರುವಂತದ್ದಲ್ಲ. ಸದಾ ಪ್ರಾಕ್ಟಿಕಲ್ ವಿಚಾರಗಳನ್ನೇ ತಿಳಿಸುತ್ತಿದ್ದ 'ಭಾಗ್ಯಲಕ್ಷ್ಮೀ' ಧಾರಾವಾಹಿ ಗಂಡ ಹೆಂಡತಿ ವಿಚಾರದಲ್ಲಿ ಸತ್ಯಕ್ಕೆ ಹತ್ತಿರವಾದ ವಿಚಾರ ಹೇಳುತ್ತಿಲ್ವಾ ಅಂತ. ತಾಂಡವ್ ಮನಸ್ಸಲ್ಲಿ ಭಾಗ್ಯಾ ಮೇಲಿನ ಪ್ರೀತಿ ಕಾಣೆಯಾಗಿದೆ. ಮನೆಯಲ್ಲಿ ಮಾಡಿದ್ದ ಮದುವೆಯ ಸಂಬಂಧದ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಶ್ರೇಷ್ಠಾ ಎಂಬ ಆಕರ್ಷಣೆ ಶುರುವಾಗಿದೆ. ಈಗಲೂ ಕೇವಲ ಹದಿನೈದು ದಿನಕ್ಕಾಗಿ ಕಾಯುತ್ತಿದ್ದಾನೆ. ಡಿವೋರ್ಸ್ ಸಿಗುತ್ತದೆ ಎಂಬ ಭರವಸೆಯಲ್ಲಿರುವ ತಾಂಡವ್‌ಗೆ ಭಾಗ್ಯಾ ಬದಲಾದರೆ ಪ್ರೀತಿ ಹುಟ್ಟುವುದಕ್ಕೆ ಸಾಧ್ಯವಾಗತ್ತಾ?
ಹೊಸ ಲುಕ್ಕಿಗೆ ಕವನ ಬರೆದ ವ್ಯಕ್ತಿ
ಭಾಗ್ಯಾಳನ್ನು ಪ್ರೀತಿಸುವ ಜನ ಜಾಸ್ತಿ ಇದ್ದಾರೆ. ಬದಲಾದ ವಿಡಿಯೋಗೆ ಪಾಸಿಟಿವ್ ಕಮೆಂಟ್ಸ್ ಬಂದಿವೆ. ನಮ್ಮ ಭಾಗ್ಯಕ್ಕನನ್ನು ಇನ್ನು ಚೆನ್ನಾಗಿಯೇ ಕಾಣಿಸ್ತಾ ಇದ್ರು ಎಂದಿದ್ದಾರೆ. ಜೊತೆಗೆ ಒಂದು ಕವನವನ್ನು ಬರೆದಿದ್ದಾರೆ. 'ಮಾವನ ಉಪಚರಿಸುವ ಭರದಲ್ಲಿ ಮರೆತಿದ್ದಳು ತನ್ನ ಕಂಗಳ ಕಾಂತಿಯ ಚಿಲುಮೆಯನ್ನು, ಮಕ್ಕಳ ಕುಶಲೋಪಚಾರಗಳಲ್ಲಿ ಕಂಡುಕೊಂಡಿದ್ದಳು ಅವಳ ನಗುವನ್ನು ಆದರೆ ಮರೆತ್ತಿದಳು ತನ್ನ ನಗುವಿನ ಅಂದವನ್ನು, ಅತ್ತೆಯ ಆಜ್ಞೆಯನ್ನು ಮೀರದ ತನ್ನ ಪ್ರತಿಜ್ಞೆಯಲ್ಲಿ, ಬಚ್ಚಿಟ್ಟಿದ್ದಳು ಅವಳ ಅಂದದ ಮೈಮಾಟದ ಸೊಬಗನ್ನು, ಗಂಡನ ಸೇವೆಯೇ ದೇವರ ಸೇವೆ ಎಂದು ಮಗ್ನಳಾಗಿದ್ದ ಅವಳಿಗೆ ಆ ದೇವ ನೀಡಿದ ಅಂದದ ಬಗ್ಗೆ ಅರಿವೇ ಇರಲಿಲ್ಲ, ಆದರೆ ಅವಳ ಸೌಂದರ್ಯದ ಚೆಲುವನ್ನು ಅಂತರಂಗ ಸೌಂದರ್ಯದವರು ಗುರುತಿಸಿದಾಗ ಅರಿವಾಯಿತು ಇವಳು ಮೀನಿನ ಕಣ್ಣಿನವಳು, ಆಕರ್ಷಕ ನಗುವಿನವಳು, ಕಾಮನಬಿಲ್ಲಿನಂತ ಮೈಮಾಟದವಳು, ರಮ್ಯವಾದ ಮೊಗದವಳು, ಅಂದದ ಚೆಂದದ ಸುಂದರ ಚೆಲುವಿನ ಸೌಂದರ್ಯವಂತಳು ಎಂದು. ಇವಳ್ಯಾರು ಗೊತ್ತೇ?' ಎಂದು ಕವನ ಬರೆದಿದ್ದಾರೆ.


Click it and Unblock the Notifications











