Bhagyalakshmi: ತಾಂಡವ್ ಬದಲಾಯಿಸಲು ಕುಸುಮಾ ಹರಸಾಹಸ : ಪದೇ ಪದೆ ಪಕ್ಕದ್ಮನೆಯವರೆಂದು ವ್ಯಂಗ್ಯ!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಬದಲಾಯಿಸುವುದಕ್ಕೆ, ಸೊಸೆ ಸಂಸಾರ ಸರಿ ಮಾಡುವುದಕ್ಕೆ ಕುಸುಮಾ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಆದರೂ ತಾಂಡವ್ ಬದಲಾಗುತ್ತಿಲ್ಲ. ಹೀಗಾಗಿ ಮನೆಯನ್ನೇ ಇಬ್ಬಾಗ ಮಾಡಲಾಗಿದೆ. ಆದರೂ ತಲೆ ಕೆಡಿಸಿಕೊಳ್ಳದ ತಾಂಡವ್, ತಾನೇ ಗೆಲ್ಲುವುದು ಎಂಬಂತೆ ಬಿಂಕ ತೋರಿಸಿದ್ದಾನೆ.
ತಾಂಡವ್ ಹಬ್ಬದ ವಾತಾವರಣದಲ್ಲೂ ಒಬ್ಬಂಟಿಯಾಗಿದ್ದಾನೆ. ಮನೆಯವರ ಬಳಿ ಮಾತನಾಡಿದರು ಲಾಭವಿಲ್ಲ. ಸವಾಲನ್ನು ಧೈರ್ಯವಾಗಿ ಸ್ವೀಕಾರ ಮಾಡಿರುವ ತಾಂಡವ್ ಈಗ ಹಿಂದೇಟು ಹಾಕುವಂತೆಯೂ ಇಲ್ಲ, ಸೋಲು ಒಪ್ಪಿಕೊಳ್ಳುವುದಕ್ಕೆ ಸ್ವಾಭಿಮಾನವೂ ಒಪ್ಪುವುದಿಲ್ಲ. ಆದರೆ ಕುಸುಮಾ ಮಾತ್ರ ವ್ಯಂಗ್ಯ ಮಾಡುತ್ತಲೇ ಇದ್ದಾಳೆ.

ತೋರಣದಲ್ಲೂ ಅರ್ಧ ಭಾಗ
ತಾಂಡವ್ ಯಾವಾಗ ಹೇಳಿದ ಮಾತು ಕೇಳಲಿಲ್ಲ ಆಗಲೇ ಕುಸುಮಾ ಮನೆಯನ್ನು 2 ಭಾಗವಾಗಿ ಮಾಡಿದಳು. ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಇಬ್ಬಾಗವಾಗಿಯೇ ಆಚರಣೆ ನಡೆಯುತ್ತಿದೆ. ಮನೆಯವರೆಲ್ಲ ಕೆಲಸವನ್ನು ಹಂಚಿಕೊಂಡೆ ಮಾಡುತ್ತಿದ್ದಾರೆ. ತೋರಣವನ್ನು ಇಡೀ ಮನೆಗೆ ಕಟ್ಟಲಾಗಿತ್ತು. ಆದರೆ ಕುಸುಮಾ ಅದನ್ನು ಭಾಗ್ಯಾಳಿಂದ ಸರಿ ಮಾಡಿಸಿದ್ದಾಳೆ. ಅರ್ಧ ಭಾಗ ಮಾತ್ರ ಕಟ್ಟುವಂತೆ ಸೂಚನೆ ನೀಡಲಾಗಿದ್ದು, ಇನ್ನರ್ಧ ಭಾಗ ಪಕ್ಕದ ಮನೆಯವರಿಗೆ ಸೇರಿದ್ದು. ಅದನ್ಯಾಕೆ ನಾವೂ ಕಟ್ಟಬೇಕು ಎಂದಿದ್ದಾಳೆ.
ಮಗನನ್ನೇ ಭಿಕ್ಷುಕನೆಂದ ಕುಸುಮಾ
ತಾಂಡವ್‌ಗೆ ಇದು ಕೇಳಿಸಲೆಂದೆ ಜೋರಾಗಿ ಹೇಳಿದ್ದ ಕುಸುಮಾ ಮಾತಿಗೆ ಆಗ ತಾನೇ ಎದ್ದಿದ್ದ ತಾಂಡವ್ ಕೆಳಗೆ ಬಂದಿದ್ದಾನೆ. ಅಮ್ಮ ಏನಿದು..? ಯಾಕೆ ಹೀಗೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ ಕುಸುಮಾಗೆ ಅದನ್ನು ಕೇಳುವ ತಾಳ್ಮೆ ಇರಲಿಲ್ಲ. ಯಾರು ನೀವೂ ಭಿಕ್ಷುಕರಾ? ಬೆಳ್ ಬೆಳಗ್ಗೆನೆ ಬಂದು ಬಿಟ್ಟಿದ್ದೀರಾ ಅಂತೆಲ್ಲಾ ವ್ಯಂಗ್ಯವಾಡಿದ್ದಾಳೆ. ತಕ್ಷಣ ಮಾತಿಗೆ ಸಪೋರ್ಟ್ ಮಾಡಿದ ತಾಂಡವ್ ತಂದೆ, ಅವರು ಪಕ್ಕದ ಮನೆಯವರು ಕುಸುಮಾ ಎಂದಿದ್ದಾರೆ. ಆಗ ಕುಸುಮಾ ಮತ್ತಷ್ಟು ರೇಗಿಸಿದ್ದು, ಪಕ್ಕದ ಮನೆಯವರು ಯಾಕೆ ಅಮ್ಮ ಅಮ್ಮ ಅಂತ ಬರೋದು ಎಂದು ತಾಂಡವ್‌ಗೆ ಮತ್ತಷ್ಟು ಕೋಪ ಬರಿಸಿದ್ದಾಳೆ.

ಪಕ್ಕದ ಮನೆಯವರೆಂದೆ ರೇಗಿಸಿದ ಕುಸುಮಾ
ಇನ್ನು ಮನೆಯಲ್ಲಿ ಹಬ್ಬದ ಅಡುಗೆ ಕಾರ್ಯ ಶುರುವಾಗಿದೆ. ತಾಂಡವ್‌ನನ್ನು ಬಗ್ಗಿಸುವುದಕ್ಕೆ ಈ ಮಾರ್ಗವೂ ಒಂದು. ಹೀಗಾಗಿಯೇ ಭಾಗ್ಯಾಳಿಗೆ ಹೆಚ್ಚು ರುಚಿಯಾದ ಅಡುಗೆ ಮಾಡುವುದಕ್ಕೆ ಹೇಳಿದ್ದಾಳೆ. ಅಷ್ಟರಲ್ಲಿ ತಾಂಡವ್ ಕೂಡ ಅಡುಗೆ ಮನೆಗೆ ಬಂದಿದ್ದಾನೆ. ಎಲ್ಲಿಯೂ ಸೋಲಬಾರದು ಎಂದು ತಾಂಡವ್ ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳುವುದಕ್ಕೆ ಬಂದಿದ್ದಾನೆ.
ಭಾಗ್ಯಾಳನ್ನೇ ಮತ್ತೆ ತಪ್ಪಾಗಿ ತಿಳಿದ ತಾಂಡವ್
ಅಡುಗೆ ಮನೆಗೆ ಬಂದ ತಾಂಡವ್‌ಗೂ ಕುಸುಮಾ ರೇಗಿಸಿದ್ದಾಳೆ. ಬಳಿಕ ಅಡುಗೆ ಮನೆಯನ್ನು ಕೇವಲ 2 ಗಂಟೆಗಳ ಕಾಲ ಮಾತ್ರ ಬಿಡಲಾಗುತ್ತೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾಳೆ. ಆಗಲು ಭಾಗ್ಯಾ ಕ್ಷಮಿಸುವ ರೀತಿ ನೋಡಿದ್ದಾಳೆ. ಅದನ್ನು ತಾಂಡವ್ ತಪ್ಪಾಗಿಯೇ ತಿಳಿದು ಮತ್ತೆ ಬೈದಿದ್ದಾನೆ. ಉದ್ದೇಶ ಹೇಳಿ ಭಾಗ್ಯಾ ಅಲ್ಲಿಂದ ಹೋಗಿದ್ದಾಳೆ. ಅಡುಗೆ ಮಾಡಿಕೊಳ್ಳಲು ಬರದೇ ತಾಂಡವ್ ಪೇಚಿಗೆ ಸಿಲುಕಿದ್ದಾನೆ. ಇನ್ನು ತನ್ವಿ ಕೂಡ ಸಾಕಷ್ಟು ಬದಲಾಗಿದ್ದಾಳೆ. ಅಮ್ಮನೇ ಗೆಲ್ಲಬೇಕು. ಅಮ್ಮನ ಬಳಿ ಏನನ್ನು ಕೇಳಬಾರದು ಅಂತಾನೆ ನಿರ್ಧಾರ ಮಾಡಿದ್ದಾಳೆ. ಮಕ್ಕಳು ಕೂಡ ಭಾಗ್ಯಾ ಪರ ನಿಂತಿರುವುದೇ ಮತ್ತಷ್ಟು ಬಲ ತುಂಬಿದೆ.


Click it and Unblock the Notifications











