Bhagyalakshmi: ದೀಪಾಗೆ ಮಕ್ಕಳಿಂದ ತಿಳಿಯಿತು ಸತ್ಯ; ಇನ್ಮೇಲೆ ತಾಂಡವ್ ಸಂಬಳ, ಭಾಗ್ಯಾಗೆ ಸಹಾಯ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್, ಭಾಗ್ಯಾಳಿಂದ ಡಿವೋರ್ಸ್ ಪಡೆದು ಶ್ರೇಷ್ಠಾಳನ್ನು ಮದುವೆಯಾಗಬೇಕೆಂಬ ಪಣ ತೊಟ್ಟಿದ್ದಾನೆ. ಅದಕ್ಕೆ ತಾಂಡವದ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಪ್ರಯತ್ನಗಳು ಅಷ್ಟಿಷ್ಟಲ್ಲ. ಶ್ರೇಷ್ಠಾಳ ಮಾತು ಕೇಳಿ ಮನೆ ಮುರುಕು ಐಡಿಯಾಗಳನ್ನೇ ಬಳಕೆ ಮಾಡುತ್ತಿದ್ದಾನೆ. ಆದರೆ ಆ ಐಡಿಯಾಗಳು ಅವನಿಗೆ ಉಲ್ಟಾ ಆಗುತ್ತಿವೆ.
ಇದ್ದರೆ ಈ ರೀತಿಯ ಅತ್ತೆ ಇರಬೇಕಪ್ಪ ಎಂಬಷ್ಟು ಒಳ್ಳೆಯವರು ಕುಸುಮಾ. ತಪ್ಪು ಯಾರು ಮಾಡಿದ್ದಾರೋ ಅವರಿಗೇನೆ ಶಿಕ್ಷೆ ನೀಡುವುದು. ಅದು ಮಗ ಆದರೂ ಸರಿ ಗಂಡ ಆದರೂ ಸರಿ. ಸೊಸೆಯದ್ದೇನು ತಪ್ಪಿಲ್ಲ ಎಂದು ಗೊತ್ತಾದ ಮೇಲೆ ಸೊಸೆಯ ಪರವಾಗಿ ನಿಂತಿದ್ದಾಳೆ. ಇದನ್ನೇ ರಿವೇಂಜ್ ಆಗಿ ತೆಗೆದುಕೊಂಡಿದ್ದಾನೆ. ಸಂಸಾರವನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಿದ್ದಾನೆ.

ಸತ್ಯವೇ ಬೇರೆ ದೀಪಾಗೆ ಹೇಳಿರುವುದೇ ಬೇರೆ
ತಾಂಡವ್ ನಾಟಕ ಮಾಡುವುದರಲ್ಲಿ ಎಕ್ಸ್ ಪರ್ಟ್. ಈಗ ದೀಪಾಳನ್ನು ಕರೆದುಕೊಂಡು ಬಂದಿರುವುದು ಕೂಡ ಒಂದು ನಾಟದಿಂದಾನೇ. ಭಾಗ್ಯಾ ಡಿವೋರ್ಸ್ ಕೇಳುತ್ತಿದ್ದಾಳೆ. ಮನೆಯವರನ್ನೆಲ್ಲಾ ತನ್ನತ್ತ ಸೆಳೆದುಕೊಂಡಿದ್ದಾಳೆ. ಅವಳಿಂದ ಮಕ್ಕಳು ಹಾಗೂ ಅಮ್ಮ ಅಪ್ಪ ಮತ್ತೆ ನನಗೆ ಸಿಗಬೇಕು. ಆ ರೀತಿ ನೀವೂ ಮಾಡಬೇಕು ಎಂದೇ ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದಾನೆ. ದೀಪಾ ಕೂಡ ಇದನ್ನೇ ಸತ್ತ ಎಂದು ನಂಬಿದ್ದಾಳೆ.
ಭಾಗ್ಯಾಳ ಅಡುಗೆ ಹಾಳು
ಭಾಗ್ಯಾ ಕೆಟ್ಟವಳು ಎಂದೇ ನಂಬಿರುವ ದೀಪಾ, ಅವಳಿಗೆ ತೊಂದರೆ ಕೊಡುವುದಕ್ಕೆ ನೋಡುತ್ತಾ ಇರುತ್ತಾಳೆ. ಮೊದಲೇ ಹಣವಿಲ್ಲ, ಮಕ್ಕಳಿಗೆ ಹೊಟ್ಟೆ ತುಂಬಿಸಬೇಕು ಎಂದು ಭಾಗ್ಯಾ ಸೌಧೆಯೆಲ್ಲಾ ಬಳಕೆ ಮಾಡಿಕೊಂಡು ಅಡುಗೆ ಮಾಡಿದರೆ, ಅಲ್ಲಿಗೆ ಬಂದು ನೀರು ಹಾಕಿ ಹೋಗಿದ್ದಾಳೆ ದೀಪಾ. ಹೀಗೆ ಹೆಜ್ಜೆ ಹೆಜ್ಜೆಗೂ ಕಷ್ಟ ಕೊಡುವುದಕ್ಕೆ ನಿಂತಿದ್ದಾಳೆ. ಭಾಗ್ಯಾಳ ಸತ್ಯ ತಿಳಿಯದೆ ಕಷ್ಟದ ಕೂಪಕ್ಕೆ ತಳ್ಳುತ್ತಿದ್ದಾಳೆ.

ತಾಂಡವ್ ಅಸಲಿಯಾಟ ಬಯಲು
ಆದರೆ ತಾಂಡವ್ ಕಡೆಯಿಂದ ದೀಪಾಗೆ ಸತ್ಯ ಬಯಲಾಗಿದೆ. ದೀಪಾ, ಶ್ರೇಷ್ಠಾ ನೀಡಿದ ಕಾಂಟ್ಯಾಕ್ಟ್ ನಿಂದಾನೇ ಸಿಕ್ಕಿದ್ದು. ಈಗ ಮನೆಯಲ್ಲಿ ಆಗುತ್ತಿರುವ ಗಲಾಟೆಯನ್ನು ಶ್ರೇಷ್ಠಾಳಿಗೆ ಹೇಳಬೇಕು ಎಂಬ ಖುಷಿಯಲ್ಲಿ ರೂಮಿಗೆ ಬಂದಿದ್ದಾನೆ. ನೀನು ಕಳುಹಿಸಿದ ಶೆಫ್ ನಿಂದ ತುಂಬಾನೇ ಹೆಲ್ಪ್ ಆಗ್ತಾ ಇದೆ. ಈ ಸಲ ಭಾಗ್ಯಾಗೆ ಡಿವೋರ್ಸ್ ಕೊಟ್ಟೆ ಕೊಡುತ್ತೀನಿ ಎಂದಿದ್ದಾನೆ. ಇದು ಮೊದಲೇ ಅನುಮಾನಗೊಂಡ ದೀಪಾ ಕಿವಿಗೆ ಬಿದ್ದಿದೆ. ತಾಂಡವ್ ಬಳಿ ಆ ಬಗ್ಗೆ ಕ್ಲಾರಿಟಿಯನ್ನು ಕೇಳಲು ಹೋದಾಗ, ತಾಂಡವ್ ಹಣದ ಅಹಂಕಾರ ತೋರಿಸಿದ್ದಾನೆ. ನಿನಗೆ ಹಣ ಕೊಡುತ್ತಿದ್ದೀವಿ. ಸುಮ್ಮನೆ ಹೇಳಿದಷ್ಟು ಮಾಡು ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ.
ಮಕ್ಕಳಿಂದ ಸತ್ಯ ಬಯಲು
ದೀಪಾಗೆ ಅವನಾಡಿದ ಮಾತುಗಳು ಜೀರಜಿಂಬೆಯಂತೆ ಕೊರೆಯುತ್ತಿತ್ತು. ಅಲ್ಲಿಗೆ ಬಂದ ಭಾಗ್ಯಾ, ನನ್ನ ಗಂಡನಿಗೆ ಸ್ವೀಟ್ ಇಷ್ಟ. ಮಜ್ಜಿಗೆಗೆ ಇಂಗು ಜಾಸ್ತಿ ಹಾಕಿ ಅಂತೆಲ್ಲ ಆರೋಗ್ಯ ಕಾಳಜಿ ಮಾಡಿದ್ದು ದೀಪಾಗೆ ಆಶ್ಚರ್ಯ ಎನಿಸಿದೆ. ಬಳಿಕ ಮಕ್ಕಳು ಬಂದಾಗ ಅವರ ಬಳಿಯೇ ಕೇಳಿದ್ದಾಳೆ. ನಮ್ಮಪಪ್ಪಾ ಅಮ್ಮನಿಗೆ ಡಿವೋರ್ಸ್ ಕೊಡಬೇಕು ಎಂದುಕೊಂಡಿದ್ದಾರೆ ಎಂದು ಸತ್ಯ ಹೇಳಿದ್ದಾರೆ. ಇದನ್ನು ಕೇಳಿದ ದೀಪಾಗೆ ಶಾಕ್ ಆಗಿದೆ. ಇನ್ನೂ ಮುಂದೆ ತಾಂಡವ್ ಹಣದಲ್ಲೇ ತಾಂಡವ್ ಗೆ ಬುದ್ದಿ ಕಲಿಸುವ ಕೆಲಸ ಮಾಡಿ, ಸಂಸಾರ ಸರಿದಾರಿಗೆ ತರುವುದರಲ್ಲಿ ದೀಪಾ ಪಾತ್ರ ಮಹತ್ವ ಪಡೆಯಬಹುದು.


Click it and Unblock the Notifications











