Bhagyalakshmi: ಬಿಲ್ಡಪ್ ಕೊಡಲು ಹೋಗಿ ತಾನೇ ಕರೆತಂದ ಅಡುಗೆಯವಳಿಂದ ಎಡವಿದ ತಾಂಡವ್!
ಏನೇ ಆದರೂ ತಾಂಡವ್ ಬುದ್ದಿ ಕಲಿಯುವಂತೆ ಕಾಣಿಸುತ್ತಿಲ್ಲ. ತಾಂಡವ್‌ಗೆ ಈಗ ಹೆಂಡತಿ ಇಷ್ಟವಾಗುತ್ತಿಲ್ಲ. ಎರಡು ಮಕ್ಕಳಿಗೆ ತಾಯಿಯ ಪ್ರೀತಿ, ಹಾರೈಕೆ ಇಲ್ಲದೆ ಇದ್ದರು ಸರಿ, ತಂದೆ ತಾಯಿಗೆ ಸೊಸೆಯ ಕಾಳಜಿ ತೋರದೆ ಹೋದರೂ ಸರಿ, ತಾಂಡವ್ ಗೆ ಹೆಂಡತಿ ಮಾತ್ರ ಬೇಡ. ಭಾಗ್ಯಾ ನನಗೆ ಮ್ಯಾಚ್ ಆಗುತ್ತಿಲ್ಲ, ಹಳ್ಳಿ ಗುಗ್ಗು, ಹರಳೆಣ್ಣೆ ಮುಖದವಳು, ಎಮ್ಮೆ ಅಂತೆಲ್ಲಾ ನಿಂದಿಸುತ್ತಾನೆ.
ಅಪ್ಪ ಅಮ್ಮ ಒಳ್ಳೆಯ ರೀತಿಯಲ್ಲಿಯೇ ಬುದ್ದಿ ಹೇಳುವುದಕ್ಕೆ ಪ್ರಯತ್ನ ಪಟ್ಟರು. ಆದರೂ ತಾಂಡವ್ ಗೆ ಅದೆಲ್ಲಾ ಅರ್ಥವಾಗುತ್ತಿಲ್ಲ. ಅರ್ಥ ಮಾಡಿಕೊಳ್ಳುವ ರೀತಿಯೊಂದನ್ನು ಬಿಟ್ಟು, ಜಿದ್ದಿಗೆ ಬಿದ್ದಿದ್ದಾನೆ. ಅದಕ್ಕಾಗಿಯೇ ಮನೆ ಇಬ್ಭಾಗವಾಗಿದ್ದರು, ಅಡುಗೆ ಮಾಡಲು ಬೇರೆಯವರನ್ನು ಕರೆದುಕೊಂಡು ಬಂದಿದ್ದಾನೆ. ಆದರೆ ಈಗ ಅವಳು ತಿರುಗಿ ಬಿದ್ದಿದ್ದಾಳೆ.

ಹಬ್ಬದೂಟಕ್ಕೆ ಕುಳಿತ ಮನೆಯವರು
ಕುಸುಮಾ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಣ ಹೆಚ್ಚು ಇಲ್ಲದೆ ಹೋದರು ಎಲ್ಲರಲ್ಲೂ ನೆಮ್ಮದಿ ಇದೆ. ಇರುವಷ್ಟರಲ್ಲಿಯೇ ತೃಪ್ತಿ ಪಟ್ಟುಕೊಂಡು ಸಂತಸವಾಗಿದ್ದಾರೆ. ಭಾಗ್ಯಾಳ ಬುದ್ದಿವಂತಿಕೆ ಎಲ್ಲಿಯೂ ಹಬ್ಬದ ಖುಷಿಯನ್ನು ಹಾಳಾಗುವಂತೆ ಮಾಡಿಲ್ಲ. ದೀಪಾಗೆ ಸತ್ಯ ತಿಳಿಯುವುದಕ್ಕೂ ಮುನ್ನ ಮಾಡಿದ್ದ ಎಲ್ಲಾ ಅಡುಗೆಯನ್ನು ಹಾಳು ಮಾಡಿದ್ದಳು. ಭಾಗ್ಯಾ ಎಷ್ಟೇ ಆಗಲಿ ಕುಸುಮಾಳ ಸೊಸೆ. ರೈಸ್ ಬಾತ್ ಮಾಡಲು ಇಟ್ಟಿದ್ದ ಅನ್ನಕ್ಕೆ ನೀರು ಜಾಸ್ತಿ ಆಯ್ತು ಅಂತ ತಲೆ ಕೆಡಿಸಿಕೊಳ್ಳದೇ ಅದಕ್ಕೆ, ಬೇಳೆ, ಪೌಡರ್ ಹಾಕಿ ಬಿಸಿಬೇಳೆ ಬಾತ್ ಮಾಡಿದ್ದಾಳೆ.
ತಾಂಡವ್ ಬಿಲ್ಡಪ್
ತಾಂಡವ್ ಎಷ್ಟು ಸ್ವಾರ್ಥಿಯಾಗಿ ಯೋಚನೆ ಮಾಡುತ್ತಿದ್ದಾನೆ ಎಂದರೆ, ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿರುತ್ತದೆ ಎಂಬುದನ್ನು ಯೋಚನೆ ಮಾಡುತ್ತಿಲ್ಲ. ಮಕ್ಕಳಿಗೆ ತಿಂಡಿ, ಸ್ವೀಟ್ ಎಂದರೆ ಇಷ್ಟ ಎಂದು ಗೊತ್ತಿದ್ದರು, ಅದನ್ನೇ ಒತ್ತಿ ಒತ್ತಿ ಹೇಳುತ್ತಿದ್ದಾನೆ. ಹಬ್ಬದೂಟವನ್ನು ಹೇಳಿ ಮಕ್ಕಳ ಮನಸ್ಸನ್ನು ಕದಲಿಸುವ ಕೆಲಸ ಮಾಡುತ್ತಿದ್ದಾನೆ. ಆದರೆ ಮಕ್ಕಳು ಯಾವುದೇ ಕಾರಣಕ್ಕೂ ವಿಚಲಿತವಾಗುವ ಮಾತೇ ಇಲ್ಲ. ಯಾಕಂದ್ರೆ ಅಮ್ಮನನ್ನು ಉಳಿಸಿಕೊಳ್ಳಬೇಕು ಎಂಬ ಆಸೆ ಅವರಲ್ಲಿದೆ.

ಖುಷಿಯಿಂದ ತಿಂದ ಮಕ್ಕಳು
ಭಾಗ್ಯಾ ಹೆಚ್ಚೇನು ಮಾಡದೆ ಹೋದರೂ ಮಾಡಿರುವುದನ್ನು ರುಚಿರುಚಿಯಾಗಿ ಮಾಡಿರುತ್ತಾಳೆ. ಅದು ಮನೆಯವರೆಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿಯೇ ಭಾಗ್ಯಾ ಮಾಡಿದ ಬಿಸಿಬೇಳೆ ಬಾತನ್ನು ಹಾಕಿಸಿಕೊಂಡು ನೆಮ್ಮದಿಯಾಗಿ ತಿಂದಿದ್ದಾರೆ. ಸತ್ಯ ಅರ್ಥ ಮಾಡಿಕೊಂಡ ದೀಪಾ ಕೂಡ ಭಾಗ್ಯಾ ಮನೆಯವರ ಜೊತೆಗೆ ಊಟಕ್ಕೆ ಕುಳಿತಿದ್ದಾಳೆ. ಭಾಗ್ಯಳ ಕೈರುಚಿ ಸವಿದು ಖುಷಿ ಪಟ್ಟಿದ್ದಾಳೆ. ಇದನ್ನು ಕಂಡು ಕುಸುಮಾ ಮನೆಯವರಿಗೆ ಸಂತಸವಾದರೆ, ತಾಂಡವ್ ಉರಿದುರಿದು ಬಿದ್ದಿದ್ದಾನೆ.
ಅಡುಗೆಯಲ್ಲಿ ಯಡವಟ್ಟು
ತಾಂಡವ್ ಮನೆಯವರೆಲ್ಲರಿಗೂ ಉರಿಸಲು ಹಬ್ಬಕ್ಕಾಗಿ ಏನೆಲ್ಲಾ ಅಡುಗೆ ಮಾಡಿದ್ದಾರೆ ಎಂಬುದನ್ನು ಬಾಯಿ ಬಿಟ್ಟು ಹೇಳುತ್ತಾ ಒಂದೊಂದೇ ಐಟಂ ತಂದು ಟೇಬಲ್ ಮೇಲೆ ಇಟ್ಟುಕೊಂಡಿದ್ದಾನೆ. ತಟ್ಟೆಗೆ ಒಂದೊಂದೇ ಐಟಂ ಹಾಕಿಕೊಳ್ಳುತ್ತಾ, ಇದು ಪೂರಿ ಸಾಗು, ಇದು ಹೋಳಿಗೆ. ಈಗ ಮೊದಲು ಪೂರಿ ತಿನ್ನೋಣ ಎಂದು ಒಂದು ತುತ್ತು ಬಾಯಿಗೆ ಇಟ್ಟಾಗಲೇ ಗೊತ್ತಾಗಿದ್ದು ಅಡುಗೆ ಎಷ್ಟು ಹಾಳಾಗಿದೆ ಎಂಬುದು. ಆದರೆ ಮನೆಯವರ ಮುಂದೆ ಅದನ್ನು ತೋರ್ಪಡಿಸುವುದಕ್ಕೆ ಆಗುವುದಿಲ್ಲ. ಈಗ ಸ್ವೀಟ್ ತಿನ್ನೋಣ ಅಂತ ಹೋದಾಗಲೇ ಅದು ಸರಿ ಇಲ್ಲ ಅಂತ ಗೊತ್ತಾಗಿದ್ದು. ದೀಪಾಳನ್ನು ಬೈಕೊಂಡು, ಸುಮ್ಮನೆ ತಿಂದಿದ್ದಾನೆ.


Click it and Unblock the Notifications











