Bhagyalakshmi: ಭಾಗ್ಯಾ ಗುಡುಗಿದರೆ ತಾಂಡವ್ ಉಸಿರೇ ಬರಲ್ಲ: ಆದ್ರೂ ಡಿವೋರ್ಸ್ ಬೇಕಂತೆ!

By ಎಸ್ ಸುಮಂತ್

ಭಾಗ್ಯಾಳನ್ನು ಕಂಡರೆ ಸದಾ ಕೆಂಡಕಾರುವ ತಾಂಡವ್ ಅವಳ ಓದನ್ನು ನಿಲ್ಲಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ. ಭಾಗ್ಯಾಗೆ ನಾಲ್ಕು ಅಕ್ಷರ ಗೊತ್ತಿಲ್ಲ, ಅವಳು ಓದಿಲ್ಲ ಅಂತ ಅದ್ಯಾವಾಗ ತಾಂಡವ್ ಹಾಗೂ ತನ್ವಿ ವ್ಯಂಗ್ಯ ಮಾಡುವುದಕ್ಕೆ ಶುರು ಮಾಡಿದರೋ ಅಂದೇ ಕುಸುಮಾ ಸೊಸೆಯನ್ನು ಶಾಲೆಗೆ ಕಳುಹಿಸುವ ನಿರ್ಧಾರ ಮಾಡಿದಳು. ಆದರೆ ತಾಂಡವ್ ರಂಪಾಟವನ್ನೇ ಮಾಡಿದ. ಯಾವುದೇ ಪ್ರಯೋಜನವಾಗದೆ ಇದ್ದಾಗ ಪ್ರೀತಿಯ ನಾಟಕವಾಡಿದ. ಆ ಮೂಲಕವೂ ಭಾಗ್ಯಾಳ ಶಾಲೆ ತಪ್ಪಿಸುವುದಕ್ಕೆ ಆಗಲೇ ಇಲ್ಲ. ಸತ್ಯ ತಿಳಿದ ಭಾಗ್ಯಾಳೆ ಅವನಿಂದ ಅಂತರ ಕಾಯ್ದುಕೊಂಡಳು.

ಶಾಲೆಗೆ ಹೋಗುವುದಕ್ಕೆ ಶುರು ಮಾಡಿದಾಗ ಅತ್ತೆಯ ಗೌರವ ಜಾಸ್ತಿ ಆಯ್ತು. ಸನ್ಮಾನಗಳು ಹೆಚ್ಚಾದವು. ಇದನ್ನ ತಾಂಡವ್‌ನಿಂದ ಸಹಿಸುವುದಕ್ಕೆ ಆಗದೇ ಮನೆ ಬಿಟ್ಟು ಹೋಗಿ ಎಲ್ಲಾ ಜವಾಬ್ದಾರಿಗಳನ್ನು ಭಾಗ್ಯಾಳೇ ನಿಭಾಯಿಸುವಂತೆ ಆಯ್ತು. ಆಗಲೂ ಮನೆಯಲ್ಲಿ ಯಾರೂ ಜಗ್ಗಲಿಲ್ಲ. ಈಗ ತಾಂಡವ್ ಮನೆಗೆ ಬಂದಿದ್ದಾನೆ. ಈಗಲೂ ಬದಲಾಗದೆ ಮನೆಯವರಿಗೆ ಹೆಚ್ಚಿನ ನೋವು ಕೊಡುತ್ತಿದ್ದಾನೆ.

colors kannada serial Bhagyalakshmi Written Update on April 18th episode

ಪರೀಕ್ಷೆಗಾಗಿ ಭಾಗ್ಯಾ, ತನ್ವಿ ಸಿದ್ಧತೆ

ತಾಂಡವ್ ಈಗ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಮಕ್ಕಳು ಬೇರೆ, ತಾನೇ ಬೇರೆ ಎಂಬಂತೆ ಇದ್ದಾನೆ. ಮನೆಯವರಿಗೆ ಕಷ್ಟವಾದರೇನೆ ತಾಂಡವ್‌ಗೆ ಖುಷಿ ಆಗುವುದು. ಆದರೆ ಕಷ್ಟಗಳಿಗೆಲ್ಲಾ ಎದೆಗುಂದುವವರಲ್ಲ ಕುಸುಮಾ ಸೊಸೆ ಹಾಗೂ ಮೊಮ್ಮಕ್ಕಳು. ಓದುವ ಕಡೆಗೆ ಇಬ್ಬರು ಗಮನ ನೀಡಿದ್ದಾರೆ. ಕುಸುಮಾ ಬೆಂಬಲವಾಗಿ ನಿಂತಿದ್ದಾಳೆ.

ನಾಟಕ ಶುರು ಮಾಡಿದ ತಾಂಡವ್

ತಾಂಡವ್ ಒಂದಲ್ಲ ಒಂದು ರಾದ್ಧಾಂತ ಶುರು ಮಾಡುತ್ತಲೇ ಇರುತ್ತಾನೆ. ಒಟ್ಟು ಅವನಿಗೆ ಭಾಗ್ಯಾ ಮನೆಯಲ್ಲಿ‌ ಇರಬಾರದು. ಭಾಗ್ಯಾಳನ್ನು ನೋಡಿದಾಗೆಲ್ಲಾ ಉರಿದು ಉರಿದು ಬೀಳುತ್ತಾನೆ. ಈಗ ಮತ್ತೆ ಭಾಗ್ಯಾಳ ಬಟ್ಟೆ ತಂದು ಹಾಲ್‌ನಲ್ಲಿ ಬಿಸಾಡಿದ್ದಾನೆ. ಇದು ಭಾಗ್ಯಾಳ ತಾಯಿ ಪುಷ್ಪಾ ಹಾಗೂ ಪೂಜಾಳನ್ನು ಕೆರಳಿಸಿದೆ. ಮತ್ತೆ ನಿನ್ನ ಹೊಸ ನಾಟಕ ಶುರು ಮಾಡಿದ್ಯಾ ಅಂತ ಬೀಗ್ತಿ ಅಮ್ಮನನ್ನ ಕರೆದಿದ್ದಾಳೆ.

colors kannada serial Bhagyalakshmi Written Update on April 18th episode

ಅಪ್ಪನ ಗುಟ್ಟು ರಟ್ಟು ಮಾಡಿದ ತನ್ವಿ

ತಾಂಡವ್ ಮಾತಿನ ಮೇಲೆ ಅಷ್ಟೊಂದು ಕಂಟ್ರೋಲ್ ಇಲ್ಲ. ಬಾಯಿಗೆ ಬಂದ ಮಾತನ್ನ ಎದುರು ಇರುವವರಿಗೆ ನೋವಾಗುತ್ತಾ ಇಲ್ವಾ ಎಂಬುದನ್ನು ನೋಡದೆ ಬೈಯ್ಯುತ್ತಾನೆ. ಈಗ ಭಾಗ್ಯಾಳಿಗೂ ಅದೇ ದಾಟಿಯಲ್ಲಿ ಬೈದಿದ್ದಾನೆ. ನೀನು ಮೊದಲು ನನ್ನ ಮನೆಯಿಂದ ತೊಲಗು. ಓ ಆ ಹಾಳು ಕೊಂಪೆಯಲ್ಲಿ ಜೀವನ ಮಾಡೋದು ಕಷ್ಟ. ನಿಂಗೊಂದು ಲಕ್ಸುರಿ ಮನೆ ಬೇಕು ಅಲ್ವಾ. ಈ ಕ್ರೆಡಿಟ್ ಕಾರ್ಡ್ ತಗೋ, ಹಣ ತಗೋ, ಇದರಲ್ಲಿ ಕಾರು ತಗೋ ಅಂತ ವ್ಯಾಲೇಟ್‌ನಲ್ಲಿದ್ದ ಎಲ್ಲಾ ದಾಖಲೆಯನ್ನು ಬಿಸಾಡಿದ್ದಾನೆ. ಅವನಿಗೆ ಗೊತ್ತಿಲ್ಲ ಅದರಲ್ಲು ಭಾಗ್ಯಾಳ ಹಾಲ್ ಟಿಕೆಟ್ ಇದ್ದದ್ದು. ಇದು ತನ್ವಿ ಕಣ್ಣಿಗೆ ಬಿದ್ದಿದೆ.

ಭಾಗ್ಯ ಧ್ವನಿ ಏರಿಸಿದರೆ ತಾಂಡವ್ ಗಢ ಗಢ

ತನ್ವಿ ಹಾಲ್ ಟಿಕೆಟ್ ನೋಡಿ ಅಮ್ಮನಿಗೆ ಹೇಳಿದ್ದಾಳೆ. ಹಾಲ್ ಟಿಕೆಟ್ ನೋಡಿದ ಕೂಡಲೇ ತಾಂಡವ್ ಭಯಗೊಂಡಿದ್ದಾನೆ. ಆ ಹಾಲ್ ಟಿಕೆಟ್ ಕೈಗೆತ್ತಿಕೊಂಡ ಭಾಗ್ಯಾ, ಒಂದು ಕ್ಷಣ ಅವತ್ತು ಪರೀಕ್ಷೆಯಲ್ಲಾದ ಯಡವಟ್ಟುಗಳನ್ನು ನೆನೆದಿದ್ದಾಳೆ. ಅಮ್ಮ-ಅಪ್ಪ ಕೂಡ ಪ್ರಶ್ನೆ ಮಾಡಿದ್ದಾರೆ. ಉತ್ತರ ಕೊಡದ ತಾಂಡವ್‌ಗೆ ಜೋರು ಧ್ವನಿಯಲ್ಲಿಯೇ ಭಾಗ್ಯ ಪ್ರಶ್ನೆ ಮಾಡಿದ್ದಾಳೆ. ಹಾಲ್ ಟಿಕೆಟ್ ಕಳೆದು ಹೋಗಿದ್ದ ಅಥವಾ ಕದ್ದಿದ್ದ ಅಂತ. ಭಾಗ್ಯಾಳ ಧ್ವನಿಗೆ ತಾಂಡವ್ ಸೈಲೆಂಟ್ ಆಗಿದ್ದಾನೆ.

More from Filmibeat

English summary
Bhagyalakshmi kannada serial today episode. Here is the details about Tandav is shocked by Bhagya's words;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X