Bhagyalakshmi: ಭಾಗ್ಯಾಳನ್ನು ಹೊರಗೆ ಹಾಕಲು ಆಗಲ್ಲ; ಇನ್ನಾದರೂ ಸ್ಯಾಡಿಸ್ಟ್ ಮನಸ್ಥಿತಿ ಬಿಡ್ತಾನಾ ತಾಂಡವ್?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಷ್ಟವೇ ಬರಲಿ, ಸುಖವೇ ಇರಲಿ ಅತ್ತೆ, ಸೊಸೆಯನ್ನ ಬಿಟ್ಟು ಕೊಡಲ್ಲ, ಸೊಸೆ ಅತ್ತೆ-ಮಾವನನ್ನು ಬಿಟ್ಟುಕೊಡಲ್ಲ. ತನಗಾಗಿ ಇಷ್ಟೆಲ್ಲಾ ಹೋರಾಡುವ ಅತ್ತೆ-ಮಾವನ ಸೇವೆಗೆ ಸದಾ ಸಿದ್ಧ ಈ ಭಾಗ್ಯಾ. ಆದರೆ ಅದು ತಾಂಡವ್ ಗೆ ಅದೇಕೋ ಅರ್ಥವೇ ಆಗುತ್ತಿಲ್ಲ. ಅರ್ಥವಾದರೂ ಅದನ್ನು ಮಾನವೀಯತೆಯ ದೃಷ್ಟಿಯಿಂದ ನೋಡುವುದಕ್ಕೆ ಹೋಗ್ತಾನು ಇಲ್ಲ. ಯಾಕಂದ್ರೆ ತಾಂಡವ್ ಗೆ ಭಾಯ್ಯಾ ಹೋಗಿ, ಶ್ರೇಷ್ಠಾ ಬರಬೇಕಲ್ಲ ಅದಕ್ಕೆ.
ಶ್ರೇಷ್ಠಾಳ ಮೇಲ್ನೋಟದ ಪ್ರೀತಿಗೆ ಬಿದ್ದಿದ್ದಾನೆ ತಾಂಡವ್. ಅದಕ್ಕೆ ಹನಿಯನ್ನೇ ಮುಂದೆ ಕುಸುಮಾ ಸೊಸೆ ಮಾಡುವುದಕ್ಕೆ ಹೊರಟಿದ್ದಾನೆ. ತಾಂಡವ್ ನ ಪ್ರೀತಿಯ ಹನಿ ಕುಸುಮಾ ಫ್ಯಾಮಿಲಿಗೆ ಸೊಸೆಯಾಗಿರಲು ಸಾಧ್ಯವೇ ಇಲ್ಲ ಎಂಬುದು ತಾಂಡವ್ ಗೂ ಗೊತ್ತು. ಆದರೂ ತನ್ನ ಮನದಾಳದ ದುರಾಸೆಯನ್ನು ಮಾತ್ರ ಬಿಡುವಂತೆ ಕಾಣಿಸುತ್ತಿಲ್ಲ.

ಮನೆಯವರಿಂದ ತಾಂಡವ್‌ಗೆ ಕ್ಲಾಸ್
ಭಾಗ್ಯಾ ಹಾಗೂ ತನ್ವಿಗೆ ಇಂದು ಪರೀಕ್ಷೆ ಇತ್ತು. ಚೆನ್ನಾಗಿ ಓದಿಕೊಂಡಿರುವ ಭಾಗ್ಯಾ ಹಾಗೂ ತನ್ವಿ ಪರೀಕ್ಚೆ ಬರೆಯಲು ಹೊರಟಿದ್ದರು. ಆದರೆ ಅವರಿಬ್ಬರನ್ನು ತಾಂಡವ್ ತಡೆದಿದ್ದಾನೆ. ತುಂಬಾ ಮುಖ್ಯವಾದ ವಿಚಾರವನ್ನು ಮಾತನಾಡಬೇಕು ನಿಲ್ಲಿ ಎಂದು ನಿಲ್ಲಿಸಿದ್ದಾನೆ. ಭಾಗ್ಯಾ ಶಾಲೆಗೆ ಹೋಗಬಾರದು, ಪರೀಕ್ಚೆ ಬರೆಯಬಾರದು, ಎಸ್ಎಸ್ಎಲ್ಸಿ ಕಂಪ್ಲೀಟ್ ಮಾಡಬಾರದು ಅಂತಾನೇ ತಾಂಡವ್ ಮಾಡಿದ ಗೇಮ್ ಗಳು ಕಡಿಮೆ ಏನು ಅಲ್ಲ. ಈಗ ಪರೀಕ್ಷೆಗೆ ಸಮಯವಾಗಲೀ ಎಂದೇ ತಡೆದಿದ್ದಾನೆ.
ಭಾಗ್ಯಾಳನ್ನು ಕಟ್ಟಿ ಹಾಕಲು ತಾಂಡವ್ ಪ್ಲ್ಯಾನ್
ಪರೀಕ್ಷೆಗೆ ಹೊರಟವರನ್ನು ತಡೆದಿದ್ದು ಯಾಕೆ. ಅದೇನೆ ಇದ್ದರು ಬಂದ ಮೇಲೆ ಮಾತಾಡಿವಂತೆ ಬಿಡು ಎಂದು ಕುಸುಮಾ ಹೇಳಿದರು, ಇದು ಬಹಳ ಮುಖ್ಯ. ಭಾಗ್ಯಾ ಹತ್ರ ಮಾತನಾಡಲೇಬೇಕು ಎಂದಿದ್ದಾನೆ. ಭಾಗ್ಯಾ ಈಗ ತುಂಬಾ ಸ್ಟ್ರಾಂಗ್ ಅಂಡ್ ಸ್ವಾಭಿಮಾನಿಯಾಗಿದ್ದಾಳೆ. ಅದೇನು ಹೇಳಿ ಅಂತ ಧೈರ್ಯವಾಗಿ ಕೇಳಿದ್ದಾಳೆ. ಆಗ ತಾಂಡವ್ ಮನೆಯ ಲೋನ್ ವಿಚಾರ ತೆಗೆದಿದ್ದಾನೆ.
ಭಾಗ್ಯಾಳ ಉತ್ತರಕ್ಕೆ ತತ್ತರಿಸಿದ ತಾಂಡವ್
'ಮನೆಯನ್ನು ಅರ್ಧ ಭಾಗ ಮಾಡಿದರೆ ಸಾಲದು ಅದರ ಇಎಂಐನಲ್ಲೂ ಅರ್ಧ ಖರ್ಚು ನೋಡಿಕೊಳ್ಳಬೇಕು. ನಾನ್ಯಾಕೆ ನಿಮ್ಮೆಲ್ಲರದ್ದು ಹಣ ಕಟ್ಟಬೇಕು. ಕಟ್ಟೋದಕ್ಕೆ ಆಗದೆ ಹೋದರೆ ನಿನ್ನ ಜೊತೆಗೆ ಇರುವ ಎಲ್ಲರನ್ನು ಕರೆದುಕೊಂಡು ಹೋಗ್ತಾ ಇರು' ಅಂತಾನೇ ಹೇಳಿದ್ದಾಳೆ. ಇದಕ್ಕೆ ಕುಸುಮಾ ವಿರೋಧ ವ್ಯಕ್ತಪಡಿಸಿದ್ದಾಳೆ. ಭಾಗ್ಯಾ ಪರವಾಗಿ ಮಾತನಾಡುವುದಕ್ಕೆ ಧ್ವನಿ ಎತ್ತಿದಾಗಲೇ ಭಾಗ್ಯಾ, ಆಯ್ತು ಮನೆಯ ಅರ್ಧ ಹಣ ನಾನು ಕೊಡುತ್ತೇನೆ. ಹಣ ಕೇಳಿ ನನ್ನನ್ನು ಶಾಲೆಯಿಂದ ಹಿಂದೆ ಕರೆಸಿಕೊಳ್ಳಬಹುದು ಎಂದುಕೊಳ್ಳಬೇಡಿ. ನಮ್ಮ ಅತ್ತೆ, ಮಾವನಿಗಾಗಿ, ಮಕ್ಕಳಿಗಾಗಿ ನಾನು ನಿಲ್ಲುತ್ತೇನೆ. ಇನ್ಮೇಲೆ ಪ್ರತಿ ತಿಂಗಳ ಅರ್ಧ ಖರ್ಚು ನನ್ನದೇ ಅಂತ ಹೇಳಿ ಹೊರಟಿದ್ದಾಳೆ.

ಅಪ್ಪ-ಅಮ್ಮನಿಂದಾನೂ ಕ್ಲಾಸ್
ಭಾಗ್ಯಾ ಮಗಳನ್ನು ಕರೆದುಕೊಂಡು ಹೊರಟಾಗ ಕುಸುಮಾ ಮಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಗೆಲ್ಲುವುದಾದರೇ ಅಪ್ಪ ಅಮ್ಮನನ್ನು ಪ್ರೀತಿಯಿಂದ ಗೆಲ್ಲು. ಈ ರೀತಿ ಹಣದಿಂದ ಅಲ್ಲ. ನನ್ನ ಸೊಸೆ ಹಣ ಕೊಡುತ್ತಾಳೆ. ಎಲ್ಲಿಂದ ಆದರೂ ಅದರ ಅಗತ್ಯ ನಿನಗಿಲ್ಲ. ಪಕ್ಕದ ಮನೆಯವರು ಪಕ್ಕಕ್ಕೆ ಸರಿದರೆ ಒಳ್ಳೆಯದು ಅಂತ ಹೇಳು ಕುಸುಮಾ ಹಾಗೂ ಗಂಡ ಒಳ ನಡೆದಿದ್ದಾರೆ. ತಾಂಡವ್‌ಗೆ ಏನೋ ಮಾಡಲು ಹೋಗಿ ಏನು ಮಾಡಿದೆ ನಾನು ಎಂಬಂತೆ ಆಗಿ ಸುಮ್ಮನೆ ನಿಂತಿದ್ದಾನೆ.


Click it and Unblock the Notifications











