Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್‌ಗಿಲ್ಲ ಉಳಿಗಾಲ
ಹೆಣ್ಣಿನ ಸಹನೆಯನ್ನು ಕೆಲವೊಮ್ಮೆ ವೀಕ್ನೆಸ್ ಎಂದುಕೊಂಡರೆ ಚಂಡಿ ಚಾಮುಂಡಿಯಾಗುವುದು ಕೂಡ ಗೊತ್ತಿರುತ್ತೆ. ಆ ಬೆಳವಣಿಗೆ ತಾಂಡವ್ ಹಾಗೂ ಭಾಗ್ಯಾಳ ಜೀವನದಲ್ಲಿ ನಡೆಯುತ್ತಾ ಇದೆ. ಭಾಗ್ಯಾ ಇಷ್ಟು ದಿನ ಗಂಡ, ಮನೆ, ಮಕ್ಕಳು, ಅತ್ತೆ, ಮಾವ ಅಂತಷ್ಟೇ ಬದುಕಿದಳು. ಇದಷ್ಟೇ ಪ್ರಪಂಚ ಎಂದುಕೊಂಡಳು. ಆದರೆ ಗಂಡ ಎಂಬ ಪಿಶಾಚಿ, ಬೇರೆಯದ್ದೇ ಅವತಾರ ತೆಗೆದ. ಈಗ ಸಹನಾಮೂರ್ತಿಯಂತಿದ್ದ ಭಾಗ್ಯಾ ಈಗ ರೌದ್ರವತಾರ ತಾಳಿದ್ದಾಳೆ.
ಭಾಗ್ಯಾಳಿಂದ ಏನು ಆಗಲ್ಲ ಅಂತ ಹೇಳಿ ಹೇಳಿ, ಅವಳಿಂದ ಅಸಾಧ್ಯವಾದುದ್ದೆಲ್ಲವನ್ನು ಸಾಧ್ಯವಾಗಿಸುತ್ತಿದ್ದಾನೆ. ಈಗ ಮನೆ ನಡೆಸುವ ಜವಾಬ್ದಾರಿಯನ್ನು ಭಾಗ್ಯಾಳೇ ತೆಗೆದುಕೊಳ್ಳುವಷ್ಟು ಧೈರ್ಯ ಬಂದಿದೆ. ಅದು ತಾಂಡವ್ ನೋಯಿಸುವ ಮಾತುಗಳಿಂದಾನೇ ಬಂದಿದೆ. ಭಾಗ್ಯಾ ಒಮ್ಮೆ ಹಠ ತೊಟ್ಟರೆ ಮುಗಿದೇ ಹೋಯ್ತು.

ಕೆಲಸಕ್ಕಾಗಿ ಭಾಗ್ಯ ಹುಡುಕಾಟ
ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಹಠ ಮಾಡಿ ಕುಳಿತಿದ್ದಾಳೆ. ನನ್ನನ್ನು ನಂಬಿರುವವರನ್ನು ನಾನು ಕಾಪಾಡಲೇಬೇಕೆಂದರೆ ನಾನು ಕೆಲಸ ಮಾಡಲೇಬೇಕೆಂದು ನಿರ್ಧಾರ ಮಾಡಿದ್ದಾಳೆ. ಅತ್ತೆಗೆ ಆಮೇಲೆ ಸಮಾಧಾನ ಮಾಡಿದರಾಯ್ತು ಎಂದು ಹೊಟೇಲ್ ಒಂದಕ್ಕೆ ಕೆಲಸ ಕೇಳಿಕೊಂಡು ಬಂದಿದ್ದಾಳೆ. ಆರಂಭದಲ್ಲಿಯೇ ರಗಡ್ ಇರುವಂತ ಓನರ್ ಬಳಿ ಬಂದಿದ್ದಾಳೆ. ಆತ ಇರುವವರುಗೇನೆ ಸಂಬಳ ಕೊಡುವುದಕ್ಕೆ ಕಿರುಚಾಡುತ್ತಿದ್ದಾನೆ. ಇನ್ನು ಭಾಗ್ಯಾಳಿಗೆಲ್ಲಿ ಕೆಲಸ ಸಂಬಳ ಕೊಡುತ್ತಾನೆ.
ಗಂಡನ ಮಾತುಗಳಿಂದ ಬಂದಿದೆ ಹಠ
ಆರಂಭದಲ್ಲಿ ಆ ವ್ಯಕ್ತಿಯ ನಡವಳಿಕೆ ನೋಡಿ ಭಾಗ್ಯಾ ಹೊರಗೆ ಬಂದು ಬಿಟ್ಟಳು. ಆದರೆ ಅದೇ ರೀತಿ ಇದ್ದರೆ ನಡೆಯುತ್ತಾ. ಮತ್ತೆ ಗಂಡನ ಅವಮಾನದ, ಅನುಮಾನದ ಮಾತುಗಳು ನೆನಪಿಗೆ ಬಂದಿವೆ. ಇದೀಗ ಹೊರಗೆ ಬಂದಿದ್ದವಳು ಮತ್ತೆ ಹೊಟೇಲ್ ಒಳಗೆ ಹೋಗಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆ ಓನರ್ ಮತ್ತೆ ಜೋರು ಧ್ವನಿಯಲ್ಲಿಯೇ ಮಾತನಾಡಿದ್ದಾನೆ, ಭಿಕ್ಷೆ ಕೇಳಲು ಬಂದವರಂತೆ ನಡೆದುಕೊಂಡಿದ್ದಾನೆ. ಕೆಲಸ ಕೇಳಿದ ಕೂಡಲೇ ಸಾಧ್ಯವೇ ಇಲ್ಲ ಎಂಬಂತೆ ಹೇಳಿದ್ದಾನೆ. ಇದು ಭಾಗ್ಯಾಳಿಗೆ ಬೇಸರ ತರಿಸಿದೆ. ಮೊದಲ ಪ್ರಯತ್ನದಲ್ಲಿಯೇ ಹೀಗಾಯ್ತಲ್ಲ ಎಂದು ಸಂಕಟ ಪಟ್ಟಿದ್ದಾಳೆ.

ಶ್ರೇಷ್ಠಾಳಿಂದ ಹೇಗೆ ತಪ್ಪಿಸಿಕೊಳ್ತಾನೆ?
ಇತ್ತ ಪೂಜಾ ಬಂದು ಜೋರು ಗಲಾಟೆ ಮಾಡಿದ್ದಾಳೆ. ಇದಕ್ಕೆ ಬಗ್ಗದ ಶ್ರೇಷ್ಠಾ, ಹೌದು ಕಣೇ ಏನಿವಾಗ. ನಾನು ತಾಂಡವ್ ಇನ್ನು ಹತ್ತು ದಿನದಲ್ಲಿ ಮದುವೆಯಗುತ್ತಿದ್ದೀವಿ. ನಿನ್ನಿಂದ ಏನು ಮಾಡುವುದಕ್ಕೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪೂಜಾ, ಅದೇಗೆ ಮದುವೆಯಾಗುತ್ತೀರಿ ನೋಡುತ್ತೀನಿ ಅಂತ ಎಚ್ಚರಿಕೆ ಕೊಟ್ಟು ಹೋಗಿದ್ದಾಳೆ. ಈಗ ಶ್ರೇಷ್ಠಾ ಕೂಡ ಒಂದೆಜ್ಜೆ ಮುಂದಿಟ್ಟು, ತಾಂಡವ್ ಮನೆಯವರಿಗೆ ಸತ್ಯ ಹೇಳುತ್ತೀನಿ ಎಂದು ಹೊರಟಿದ್ದಾಳೆ.
ಶ್ರೇಷ್ಠಾಳಿಂದ ಬಯಲಾಗುತ್ತಾ ಸತ್ಯ?
ಪೂಜಾ ಜೊತೆಗೆ ಜಗಳವಾದ ಮೇಲೆ ತಾಂಡವ್, ಶ್ರೇಷ್ಠಾಳನ್ನು ಹುಡುಕಿದ್ದಾನೆ. ಕಾಣದೆ ಇದ್ದಾಗ ಕಾಲ್ ಮಾಡಿದ್ದಾನೆ. ಆದರೆ ಆಗಲೇ ಶ್ರೇಷ್ಠಾ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ. ನಾನು ನಿಮ್ಮ ಮನೆಗೆ ಹೋಗುತ್ತಾ ಇದ್ದೀನಿ, ಎಲ್ಲಾ ಸತ್ಯವನ್ನು ಹೇಳಿ ಬರುತ್ತೀನಿ ಎಂದಿದ್ದಾಳೆ. ಇದು ತಾಂಡವ್‌ಗೆ ನಡುಕ ಹುಟ್ಟಿಸಿದೆ. ಆತ ಕೂಡ ಮನೆ ಕಡೆಗೆ ಹೊರಟಿದ್ದಾನೆ. ಶ್ರೇಷ್ಠಾ ಸತ್ಯ ಹೇಳಿದರೆ ನನ್ನ ಜೀವನವೇ ಹಾಳಾಗಿ ಹೋಗುತ್ತಲ್ಲ ಎಂಬ ಭಯದಲ್ಲಿದ್ದಾನೆ. ಶ್ರೇಷ್ಠಾ, ತಾಂಡವದ ಮನೆಗೆ ಬಂದು ನಿಂತಿದ್ದಾಳೆ. ಧೈರ್ಯ ಮಾಡಿ ಸತ್ಯ ಹೇಳುವ ಉಸಾಬರಿಗೆ ಹೋಗುವುದು ಕಷ್ಟ. ಇವತ್ತಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂಬುದನ್ನು ನೋಡಬೇಕಿದೆ.


Click it and Unblock the Notifications











