Bhagyalakshmi: ತಾಂಡವ್ ಮಾತುಗಳನ್ನೇ ಬಂಡವಾಳ ಮಾಡಿಕೊಂಡ ಭಾಗ್ಯಾ: ಕ್ಯಾಟರಿಂಗ್, ಹೆಡ್ ಮಸಾಜ್ ಶುರು ಮಾಡೋದೆ!
ತಾಂಡವ್ ಎಷ್ಟರಮಟ್ಟಿಗೆ ಮನೆಯವರನ್ನು ಕುಗ್ಗಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ ಎಂದರೆ, ಭಾಗ್ಯಾಳಿಗೆ ದುಡಿಮೆಯಿಲ್ಲ, ಅಪ್ಪನಿಗೆ ಬರುವ ಪೆನ್ಶನ್ ಸಾಕಾಗಲ್ಲ ಎಂಬುದು ಗೊತ್ತಿದ್ದೆ, ಮನೆಯ ಇಎಂಐ ಕಟ್ಟುವಂತೆ ತಾಕೀತು ಮಾಡಿದ್ದಾನೆ. ಸ್ವಾಭಿಮಾನದಿಂದ ಬದುಕುತ್ತಿದ್ದವರನ್ನು ಕೆಣಕಿದ್ದಾನೆ. ಮಕ್ಕಳಿಗಾಗಿ, ಅತ್ತೆ ಮಾವನಿಗಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಿರುವ ಭಾಗ್ಯಾ, ಈಗ ಹಣದ ವಿಚಾರ ಬಂದರೆ ಸೋತು ಬಿಡುತ್ತಾಳಾ. ಚಾನ್ಸೇ ಇಲ್ಲ. ತಾಂಡವ್‌ಗೆ ಥಂಡಾ ಹೊಡೆಸಿದ್ದಾಳೆ.
ಶಾಲೆಗೆ ಹೋಗುತ್ತಿರುವ ಭಾಗ್ಯಾ ತಾನೂ ಕೂಡ ಅರ್ಧ ಹಣ ಕೊಡುತ್ತೇನೆ ಎಂದಿದ್ದಾಳೆ. ಹೇಳಿದಷ್ಟೇ ಸುಲಭವಾಗಿಲ್ಲ ದಾರಿ. ಹಾಗಂತ ಕೊಟ್ಟ ಮಾತಿಗೆ ಮೀರುವುದು ಅಲ್ಲ. ಓದುವುದರ ಜೊತೆಗೆ, ಮನೆ ಕೆಲಸದ ಜೊತೆಗೆ, ದುಡಿಮೆಯ ಮಾರ್ಗ ಹುಡುಕುತ್ತಾ ಹೊರಟಿದ್ದಾಳೆ.

ಭಾಗ್ಯಾಳಿಗೆ ಸೂಚನೆ ಕೊಟ್ಟ ಬಾಬಾ
ಭಾಗ್ಯಾಗೆ ಈಗ ಮನೆ ನಡೆಸಬೇಕಾದ ಅನಿವಾರ್ಯತೆ ಇದೆ. ಜವಾಬ್ದಾರಿಯನ್ನು ಒತ್ತುಕೊಂಡಿದ್ದಾಳೆ. ಪರೀಕ್ಷೆಯನ್ನು ಮುಗಿಸಿ, ಅದೇ ಯೋಚನೆಯಲ್ಲಿ ನಡೆದುಕೊಂಡು ಬರುತ್ತಾ ಇದ್ದಳು. ಆಗ ಸಿಕ್ಕಿದ್ದೆ ಬಾಬಾ. ಅವಳಿಗೆ ಧೈರ್ಯ ಹೇಳುವ ಜೊತೆಗೆ, ಇಷ್ಟರಲ್ಲಿಯೇ ದುಡಿಯುವ ದಾರಿಯೂ ಸಿಗಲಿದೆ ಎಂದೇ ಹೇಳಿದ್ದಾರೆ. ಭಾಗ್ಯಾಳಿಗೆ ಅವರು ಕೊಟ್ಟ ಭರವಸೆಯೇ ದಾರಿ ದೀಪವಾಗುತ್ತಿದೆ.
ತಾಂಡವ್ ಮಾತಿಂದ ಸಿಕ್ತು ಐಡಿಯಾ
ತನ್ವಿ ಕೂಡ ಪರೀಕ್ಷೆ ಮುಗಿಸಿ ಬಂದಿದ್ದಾಳೆ. ಅಮ್ಮನನ್ನೇ ಹುಡುಕುತ್ತಾ ಬಂದ ತನ್ವಿಗೆ, ರಸ್ತೆಯಲ್ಲಿ ನಿಂತಿರುವುದು ಕಂಡಿದೆ. ಆಗ ಅಮ್ಮ ಮನೆಗೆ ಹೋಗೋಣಾ ಬಾ. ಮೊದಲು ನೀನು ಹಲ್ವಾ ಮಾಡಿಕೊಡು. ನೀನು ಮಾಡುವ ಅಡುಗೆ ಮುಂದೆ ಯಾವ ರುಚಿಯೂ ಇಲ್ಲ ಎಂದಿದ್ದಾಳೆ. ಆಗ ಭಾಗ್ಯಾಳಿಗೆ ನಾನ್ಯಾಕೆ ಇದಕ್ಕೆ ಸಂಬಂಧಿಸಿದ ಬಿಸಿನೆಸ್ ಮಾಡಬಾರದು ಅಂತಾನೆ ಅನ್ನಿಸಿದೆ. ಅದೇ ಸಮಯಕ್ಕೆ ತಾಂಡವ್ ಆಡಿದ ಮಾತುಗಳು ನೆನಪಿಗೆ ಬಂದಿವೆ. ಹೆಡ್ ಮಸಾಜ್ ಮಾಡುವಾಗ, ನೀನು ಒಂದು ಕ್ಯಾಟರಿಂಗ್ ಹಾಗೇ ಹೆಡ್ ಮಸಾಜ್ ಪಾರ್ಲರ್ ಓಪನ್ ಮಾಡಿಬಿಡು. ಒಳ್ಳೆ ಸಂಪಾದನೆ ಮಾಡ್ತೀಯ ಎಂದಿದ್ದ. ಆ ಮಾತುಗಳೆಲ್ಲಾ ಭಾಗ್ಯಾಳಿಗೆ ದುಡಿಯುವ ಮಾರ್ಗವನ್ನು ಹುಡುಕಿಕೊಟ್ಟಿದೆ.

ಹೊಟೇಲ್‌ನಲ್ಲಿ ಕೆಲಸ ಹುಡುಕಿದ ಭಾಗ್ಯಾ
ಬಂಗಾರಿಯನ್ನು ಮನೆಗೆ ಕಳುಹಿಸಿದ್ದಾಳೆ. ನಾನು ಮಾರ್ಕೆಟ್‌ಗೆ ಹೋಗಿ ಬರುತ್ತೇನೆ ಎಂದು. ಆದರೆ ಕೆಲಸ ಹುಡುಕಾಟದಲ್ಲಿ ತೊಡಗಿದ್ದಾಳೆ. ಭಾಗ್ಯಾ ಎಂದಿಗೂ ಅತ್ತೆಯ ಮಾತು ಮೀರಿದವಳಲ್ಲ. ಟೈಲರಿಂಗ್ ಮಾಡ್ತೀನಿ ಎಂದಾಗಲೇ ಕುಸುಮಾ ಬೈದಿದ್ದಳು. ಈಗ ಕೆಲಸಕ್ಕೆ ಹೋಗುತ್ತೀನಿ ಎಂದರೆ ಬಿಡುತ್ತಾರಾ ಎಂಬ ಆತಂಕ ಭಾಗ್ಯಾಳದ್ದು. ಆದರೂ ಅನಿವಾರ್ಯತೆ ಇದೆ, ಜವಾಬ್ದಾರಿ ಹೊತ್ತುಕೊಂಡಿದ್ದೀನಿ ಅಂತ ಕೆಲಸ ಹುಡುಕಿ ಹೊಟೇಲ್ ಕಡೆಗೆ ಹೊರಟಿದ್ದಾಳೆ.
ಶ್ರೇಷ್ಠಾಳಿಗೆ ಎಚ್ಚರಿಕೆ ಕೊಟ್ಟ ಪೂಜಾ
ಇತ್ತ ತಾಂಡವ್ ಆಟ ಮಿತಿಮೀರಿದೆ. ಆಫೀಸ್‌ನಲ್ಲಿ ಬೆಸ್ಟ್ ಅವಾರ್ಡ್ ಪಡೆದುಕೊಂಡಿದ್ದಾನೆ. ಇದು ಪೂಜಾಳಿಂದ ಸಹಿಸಲು ಆಗಿಲ್ಲ. ಒಂದು ಕಡೆ ಶ್ರೇಷ್ಠಾ ವಿಚಾರ ಮತ್ತೊಂದು ಕಡೆ ಅಕ್ಕನ ಸಂಸಾರದ ತಾಪತ್ರಯ. ರೊಚ್ಚುಗೆದ್ದ ಪೂಜಾ ನೇರವಾಗಿ ಆಫೀಸಿಗೆ ಬಂದಿದ್ದಾಳೆ. ಎಲ್ಲರ ಮುಂದೆ ಒಂದು ರೌಂಡ್ ತಾಂಡವ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬಳಿಕ ಪಕ್ಕಕ್ಕೆ ಕರೆದುಕೊಂಡು ಹೋಗಿ, ಶ್ರೇಷ್ಠಾ ವಿಚಾರದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇನ್ನೊಂದು ವಾರದಲ್ಲಿ ಅದೇಗೆ ನೀವೂ ಶ್ರೇಷ್ಠಾಳನ್ನು ಮದಯವೆಯಾಗುತ್ತೀರಿ. ನಮ್ಮ ಅಕ್ಕನಿಗೆ ಅನ್ಯಾಯವಾಗಲು ಬಿಡಲ್ಲ ಎಂದಿದ್ದಾಳೆ. ಹಾಗೇ ಶ್ರೇಷ್ಠಾಳಿಗೂ ಎಚ್ಚರಿಕೆ ನೀಡಿದ್ದಾಳೆ.


Click it and Unblock the Notifications











