Bhagyalakshmi: ಶ್ರೇಷ್ಠಾ-ತಾಂಡವ್ ಮದುವೆಗೆ ಕುಸುಮಾ ಹಾರೈಕೆ; ಸತ್ಯ ಗೊತ್ತಾದ್ರೆ ಐತೆ ಮಾರಿ ಹಬ್ಬ!

By ಎಸ್ ಸುಮಂತ್

ಶ್ರೇಷ್ಠಾ, ತಾಂಡವ್‌ನ ಬಿಡುವಂತೆ ಕಾಣಿಸುತ್ತಿಲ್ಲ. ಭಾಗ್ಯಾಳ ಸಂಸಾರ ಹಾಳಾಗುವುದಕ್ಕೆ ಶ್ರೇಷ್ಠಾ ನೀಡುತ್ತಿರುವ ಐಡಿಯಾಗಳೇ ಕಾರಣಗಳಾಗಿವೆ. ಇನ್ನೇನು ಎಲ್ಲವೂ ಚೆನ್ನಾಗಿದೆ, ಸಂಸಾರ ಸರಿ ಆಗ್ತಾ ಇದೆ ಎನ್ನಿವಾಗಲೇ ಶ್ರೇಷ್ಠಾ ನಡುವೆ ಬಂದು, ತಾಂಡವ್ ಮನಸ್ಸು ಹಾಳು ಮಾಡುತ್ತಾಳೆ. ಇದರಿಂದ ಮತ್ತೆ ಕುಸುಮಾ ಮನೆಯಲ್ಲಿ ಯುದ್ಧವೇ ನಡೆಯುತ್ತದೆ.

ತಾಂಡವ್‌ಗೆ ಮಕ್ಕಳೆಂದರೆ ಬಲು ಪ್ರೀತಿ. ಅದನ್ನೇ ಬಂಡವಾಳವಾಗಿಸಿಕೊಂಡು, ತಾಂಡವ್ ಬದಲಾಯಿಸುವ ಪ್ಲ್ಯಾನ್ ಮಾಡಿಕೊಂಡಿದ್ದರು. ಮಗನಿಗೆ ಯಾವುದೋ ಕಾಯಿಲೆ ಇದೆ ಅಂತ ಸುಳ್ಳು ಹೇಳಿ, ಸಂಸಾರ ಸರಿ ಆಗುವಂತೆ ಮಾಡಿದ್ದರು. ಆ ಸಮಯದಲ್ಲಿ ತಾಂಡವ್ ಹಾಗೂ ಭಾಗ್ಯಾ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ ಇದಕ್ಕೂ ಉಳಿ ಹಿಂಡಿದ್ದೇ ಶ್ರೇಷ್ಠಾ.

colors kannada serial Bhagyalakshmi Written Update on April 24th episode

ಭಾಗ್ಯಾಗೆ ಸಿಕ್ತು ಕೆಲಸ

ಭಾಗ್ಯಾ ಹೇಗಾದರೂ ಮಾಡಿ ಮನೆ ನಡೆಸಬೇಕೆಂದು ಕೆಲಸ ಹುಡುಕುತ್ತಿದ್ದಳು. ಮೊದಲಿಗೆ ಒಂದು ಹೊಟೇಲ್‌ನಲ್ಲಿ ಸಿಗಲಿಲ್ಲ‌. ಆ ಹೊಟೇಲ್ ಮಾಲೀಕನ ಗುಣವೂ ಹಾಗೇ ಇತ್ತು. ಅದು ಭಾಗ್ಯಾಗೆ ಸರಿ ಹೊಂದುತ್ತಿರಲಿಲ್ಲ. ಬಳಿಕ ಒಂದು ಹೊಟೇಲ್‌ನಲ್ಲಿ ಟೀ ಮಾಡುವವ ಕೆಲಸ ಬಿಟ್ಟು ಹೊರಟಿದ್ದ. ಆದರೆ ಮಾಲೀಕ ತುಂಬಾ ಒಳ್ಳೆಯ ಮನುಷ್ಯ. ಅಲ್ಲಿಗೆ ಬಂದು ತಾನೂ ಕಾಫಿ ಮಾಡುವುದಾಗಿ ಹೇಳಿ, ಒಂದು ಕಾಫಿ ಮಾಡಿಕೊಟ್ಟಳು ಭಾಗ್ಯಾ. ಓನರ್ ಕಳೆದು ಹೋದ್ರು,‌ ಭಾಗ್ಯಾಳ ಕೈ ರುಚಿಯಿಂದ ಕೆಲಸವೂ ಸಿಕ್ಕಿದೆ.

ಕೋಪದಲ್ಲಿಯೇ ಹೊರಟ ಪೂಜಾ

ಬಾವನ ನಡವಳಿಕೆಯಿಂದ ಪೂಜಾಗೆ ಕೋಪ ಹೆಚ್ಚಾಗಿತ್ತು. ಅದರ ಜೊತೆಗೆ ಶ್ರೇಷ್ಠಾ ಬೇರೆ ಏನೆ ಇವಾಗ ಎಂಬ ಮಾತುಗಳನ್ನು ಆಡಿದ್ದಳು. ತನ್ನ ಅಕ್ಕನ ಸಂಸಾರ ಸರಿ ಆಗಬೇಕು ಎಂದರೆ ಪೂಜಾ ಯಾವ ಹಾದಿಯನ್ನು ಬೇಕಾದರೂ ಹಿಡಿಯುತ್ತಾಳೆ. ಅದೇ ಸ್ಟೈಲ್ ನಲ್ಲೇ ತಾಂಡವ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಮದುವೆ, ಲವ್ವು ಗಿವ್ವು ಅಂತೆಲ್ಲಾ ಹೋದ್ರೆ ಪೊಲೀಸ್ ಠಾಣೆ‌ ಮೆಟ್ಟಿಲೇರಬೇಕಾಗುತ್ತದೆ. ಕಂಬಿ ಹಿಂದೆ ಇರುತ್ತೀರಾ ಅಷ್ಟೇ ಎಂದು ಹೇಳಿ ಬಂದಿದ್ದಾಳೆ.

colors kannada serial Bhagyalakshmi Written Update on April 24th episode

ಶ್ರೇಷ್ಠಾ ತಾಯಿಯಿಂದ ಬೇಸರದ ನುಡಿ

ಇತ್ತ ಶ್ರೇಷ್ಠಾ ತಾಯಿ ಯಶೋಧಾ ಹಾಗೂ ಕುಸುಮಾ ಉತ್ತಮ ಸ್ನೇಹಿತೆಯರಾಗಿದ್ದಾರೆ. ಅದರಲ್ಲೂ ಯಶೋಧಾ ಸಮಯ ಸಿಕ್ಕಾಗೆಲ್ಲಾ ಮಗಳು, ಅಳಿಯನ ಬಗ್ಗೆಯೇ‌ ನೋವು ಹೇಳಿಕೊಳ್ಳುತ್ತಾ ಇರುತ್ತಾರೆ. ಅವನು ಸರಿ ಇದ್ದಂತೆ ಕಾಣುತ್ತಿಲ್ಲ. ಇನ್ನು ತರುಣ್ ಅಪ್ಪ ಅಮ್ಮ ಎನಿಸಿಕೊಂಡವರು ಕೋತಿ ರೀತಿ ಆಡುತ್ತಾರೆ. ಮದುವೆಗೂ ಮುನ್ನವೇ ಸೊಸೆ ಮನೆಗೆ ಬಂದು ಕೂತಿದ್ದಾರೆ ಅಂತೆಲ್ಲಾ ಹೇಳಿ ಬೇಸರ ಮಾಡಿಕೊಂಡಿದ್ದಾರೆ.

ಕುಸುಮಾಗೆ ಸತ್ಯ ಗೊತ್ತಾಗುತ್ತಾ ?

ಕುಸುಮಾ ನೋವಲ್ಲಿದ್ದವರಿಗೆ ಸಮಾಧಾನ ಮಾಡಿದ್ದಾರೆ. ನಂಗೆ ಆ ತರುಣ್ ಬಗ್ಗೇನೆ ಅನುಮಾನ ಇದೆ. ಯಾಕೋ ಆ ಸಂಬಂಧ ಸರಿ ಇಲ್ಲ ಅನ್ನಿಸುತ್ತೆ. ಏನೋ ಒಂದು ಆಗಲಿ, ಮದುವೆಯೊಂದು ಚೆನ್ನಾಗಿ ನಡೆದರೆ ಸಾಕು ಎಂದಿದ್ದಾಳೆ. ಅಷ್ಟರಲ್ಲಾಗಲೇ ಅತ್ತೆ ಪಕ್ಕ ಬಂದು ನಿಂತಿದ್ದ ಪೂಜಾಗೆ ಆ ಮಾತು ಇನ್ನಷ್ಟು ಕೋಪ ತರಿಸಿದೆ. ಸಾಧ್ಯ ಇಲ್ಲ. ಈ ಮದುವೆ ನಡೆಯಲ್ಲ ಎಂದು ಜೋರಾಗಿ ಕಿರುಚಿದ್ದಾಳೆ. ಇದು ಯಶೋಧಾಗೂ ಕೇಳಿಸಿದೆ. ತಕ್ಷಣ‌ ಏನದು ಕುಸುಮಾ ಅವರೇ. ಯಾರದು ಮದುವೆ ಬಗ್ಗೆ ಮಾತನಾಡಿದ್ದು ಎಂದು ಕೇಳಿದಾಗ, ಕುಸುಮಾ ಟಿವಿ ಸದ್ದು ಅಂತ ಹೇಳಿ‌ ಕರೆ ಕಟ್ ಮಾಡಿದ್ದಾರೆ. ಧೈರ್ಯ ಮಾಡಿ ಪೂಜಾ ಎಲ್ಲಾ ವಿಚಾರ ಹೇಳಿದರೆ, ಶ್ರೇಷ್ಠಾ ಕಥೆ ಅಧೋಗತಿ.

More from Filmibeat

English summary
Bhagyalakshmi kannada serial Written Update on April 24th episode. Here is the details about Pooja, is it possible to tell the truth to Kusuma?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X