Bhagyalakshmi: ಸಿಕ್ಕಿದ್ದೊಂದು ಕೆಲಸವೂ ಹೋಯ್ತು; ಹೋದಲ್ಲೆಲ್ಲಾ ಭಾಗ್ಯಾಗೇ ಇಂಥವರು ಸಿಗೋದ್ಯಾಕೆ?
ಭಾಗ್ಯಾಗೆ ಮನೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ದುಡಿಯಲೇ ಬೇಕಾದ ಅನಿವಾರ್ಯತೆಯೂ ಇದೆ. ತಾಂಡವ್ ಮುಂದೆ ಹಾಗೆಲ್ಲಾ ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಸ್ವಾಭಿಮಾನ ಎಂಬುದು ಗಂಡನ ಎದುರು ತೋರಿಸಿ ಆಗಿದೆ. ಹೀಗಾಗಿ ಮಕ್ಕಳಿಗಾಗಿ, ಅತ್ತೆ ಮಾವನಿಗಾಗಿ ಭಾಗ್ಯಾ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಭಾಗ್ಯಾಗೆ ಇದೆ. ಈಗ ಬೇರೆ ಭಾಗ್ಯಾಳ ಅಮ್ಮ-ತಂಗಿ ಕೂಡ ಕುಸುಮಾ ಮನೆಗೆ ಬಂದಿದ್ದಾರೆ.
ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಲು ಭಾಗ್ಯಾ ತನ್ನ ಕೈರುಚಿಯನ್ನೇ ಬಂಡವಾಳ ಮಾಡಿಕೊಂಡಿದ್ದಳು. ಅದರಿಂದಾನೇ ಒಂದು ಹೊಟೇಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಆರಂಭದಲ್ಲಿ ಕೆಲಸ ಕೊಟ್ಟ ಮಾಲೀಕ ಭಾಗ್ಯಾಳಷ್ಟೇ ಒಳ್ಳೆಯವರಾಗಿದ್ದರು. ಆದರೆ ಮಹಿಳೆಯೊಬ್ಬಳು ಭಾಗ್ಯಾಳನ್ನ ಆ ಕೆಲಸದಿಂದ ಕಿತ್ತು ಬಿಸಾಕಿದ್ದಾಳೆ. ಇದು ನೋಡುಗರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಯ ಟೆನ್ಷನ್‌ನಲ್ಲಿರುವ ಭಾಗ್ಯಾ
ಭಾಗ್ಯಾ ಫಸ್ಟ್ ಕ್ಲಾಸ್ ಕಾಫಿ, ತಿಂಡಿ, ಅಡುಗೆ ಮಾಡುತ್ತಾಳೆ. ಆ ರುಚಿಗೆ ಮಾರುಹೋದ ಹೋಟೇಲ್ ಮಾಲೀಕ ಕೆಲಸ ಕೊಟ್ಟಿದ್ದರು. ಭಾಗ್ಯಾಳಿಗೆ ಅಂತ ಮಾಲೀಕರು ಸಿಕ್ಕರೆ ತುಂಬಾ ಅನುಕೂಲ. ಆದರೆ ಮನೆಗೆ ಬಂದ ಶ್ರೇಷ್ಠಾ ಎರಡು ಲಕ್ಷದ ಟೆನ್ಷನ್ ಕೊಟ್ಟು ಹೋಗಿದ್ದಳು. ಅದೇ ಯೋಚನೆಯಲ್ಲಿದ್ದ ಭಾಗ್ಯಾ, ಹೊಟೇಲ್‌ಗೆ ಕೊಂಚ ತಡವಾಗಿ ಬಂದಿದ್ದಾಳೆ.
ಭಾಗ್ಯಾಳ ಮನವಿಗೂ ಬಗ್ಗದ ಹೆಂಗಸು
ಇವತ್ತು ಭಾಗ್ಯಾ ಹೊಟೇಲ್‌ಗೆ ಬರುವಷ್ಟರಲ್ಲಿ ಮಾಲೀಕರೇ ಬದಲಾಗಿದ್ದರು. ಅಂಕಲ್ ಜಾಗಕ್ಕೆ ಬಜಾರಿ ಹೆಂಗಸು ಬಂದಿದ್ದಳು. ಭಾಗ್ಯಾಳಿಗೆ ಕೆಲಸಕ್ಕೆ ಬಾರದಂತೆ ಆಜ್ಞೆ ಮಾಡಿದಳು. ಭಾಗ್ಯಾ ಎಷ್ಟೇ ಮನವಿ ಮಾಡಿಕೊಂಡರು ಕೇಳಲಿಲ್ಲ. ಜೋರು ಧ್ವನಿಯಲ್ಲಿ, ಹೊಟೇಲ್‌ಗೆ ಬಂದಿದ್ದವರೆಲ್ಲಾ ನೋಡುವಂತೆ ಕಿರುಚಾಡಿದಳು. ನನ್ನ ಪಿತ್ತ ನೆತ್ತಿಗೇರಿಸಬೇಡ. ಇಲ್ಲಿಂದ ಸುಮ್ಮನೆ ಹೊರಟು ಹೋಗು ಅಂತ ಹೇಳಿದರು, ಭಾಗ್ಯಾ ಮತ್ತೊಮ್ಮೆ ಮನವಿ ಮಾಡಿದಳು. ಕರುಣೆಯೇ ಇಲ್ಲದಂತೆ ಕ್ರೂರವಾಗಿ ನಡೆದುಕೊಂಡ ಆ ಹೆಂಗಸು ಹೊರಗಡೆಯೇ ದಬ್ಬಿದ್ದಳು.
ರೊಮ್ಯಾಂಟಿಕ್ ಮೂಡ್‌ನಲ್ಲಿ ತಾಂಡವ್
ಮನೆಯಲ್ಲಿ ಕಷ್ಟಗಳು ಬಂದರೆ, ಭಾಗ್ಯಾಗೆ ನೋವಾದರೆ ತಾಂಡವ್‌ಗೆ ಸಿಕ್ಕಾಪಟ್ಟೆ ಖುಷಿ. ಆ ಖುಷಿಯನ್ನು ಕೊಟ್ಟವಳು ಶ್ರೇಷ್ಠಾ. ಮೊದಲೇ ಮನೆ ನಡೆಸುವುದಕ್ಕೆ ಒದ್ದಾಡುತ್ತಿದ್ದಾಳೆ ಭಾಗ್ಯಾ. ಅಂಥದ್ರಲ್ಲಿ ತಾಂಡವ್ ಮನೆಯಲ್ಲಿರುವುದಕ್ಕೆ ಅರ್ಧ ಇಎಂಐ ಹಣ ಬೇರೆ ಕೇಳಿದ್ದಾನೆ. ಇದನ್ನೇ ಹೊಂಚುವುದಕ್ಕೆ ಕಷ್ಟಪಡುತ್ತಿರುವ ಭಾಗ್ಯಾಳ ಬಳಿ, ಎರಡು ಲಕ್ಷ ವಾಪಾಸ್ ಕೇಳಿ ಇಕ್ಕಟ್ಟಿಗೆ ಸಿಲುಕಿಸಿರುವುದು ಶ್ರೇಷ್ಠಾ. ಹೀಗಾಗಿ ತಾಂಡವ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ಶ್ರೇಷ್ಠಾಗೆ ಸರ್ಪೈಸ್ ನೀಡಿದ್ದಾನೆ. ಅದರ ಜೊತೆಗೆ ಡೈಮಂಡ್ ಬಳೆ ಬೇರೆ ಕೊಟ್ಟಿದ್ದಾನೆ.

ಭಾಗ್ಯಗೆ ಇಂಥವರು ಸಿಕ್ತಾರಾ..?
ತುಂಬಾ ಒಳ್ಳೆಯವರಾದರೆ ಜೀವನ ಪೂರ್ತಿ ಅಳಬೇಕಾಗುತ್ತದೆ. ಒಳ್ಳೆಯವರಿಗೆ ಕಷ್ಟಗಳು ಜಾಸ್ತಿ ಎಂಬುದು ಲೋಕಾರೂಢಿ ಮಾತು. ಅದರಂತೆ ಭಾಗ್ಯಾಳ ಪರಿಸ್ಥಿತಿ ಕೂಡ ಆಗಿದೆ. ಭಾಗ್ಯಾಳ ಒಳ್ಳೆಯತನಕ್ಕೋ ಏನೋ ಹೋದಲ್ಲೆಲ್ಲಾ ಭಾಗ್ಯಾಳಿಗೆ ಕೆಡುಜು ಬಯಸುವವರೇ ಸಿಗುತ್ತಾರೆ. ಮೊದಲೇ ಶ್ರೇಷ್ಠಾಳಿಂದ ಸಂಸಾರ ಹಾಳಾಗುತ್ತಾ ಇದೆ. ಈಗ ಹೊಟೇಲ್‌ಗೆ ಬಂದ ಆ ಮಹಿಳೆಯಿಂದ ಇದ್ದ ಕೆಲಸವೂ ಹೋಗಿದೆ. ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ಹೋದಲ್ಲೆಲ್ಲಾ ಭಾಗ್ಯಾಗೆ ಯಾಕೆ ಇಂಥವರು ಸಿಗುತ್ತಾರೆ ಎಂದು ಕಮೆಂಟ್ ಮೂಲಕ ಬೇಸರ ಹೊರ ಹಾಕಿದ್ದಾರೆ.


Click it and Unblock the Notifications











