Bhagyalakshmi: ಇರೋದು ಶ್ರೇಷ್ಠಾ ಮನೆಯಲ್ಲಿ.. ಕೆಲಸ ಭಾಗ್ಯಾ ಪರವಾಗಿ.. ಸುಂದ್ರಿಗೆ ಶಬ್ಬಾಶ್

By ಎಸ್ ಸುಮಂತ್

ತಾಂಡವ್‌ಗೆ ಹೇಗಾದರೂ ಮಾಡಿ ಭಾಗ್ಯಾಳನ್ನು ಮನೆಯಿಂದ ಹೊರ ಹಾಕಬೇಕು ಎಂಬುದಷ್ಟೇ ತಲೆಯಲ್ಲಿ ಇರುವುದು. ಅದಕ್ಕೆ ಅಂತ ಅವನು ಹುಡುಕಿದ ದಾರಿಗಳು ಕಡಿಮೆ ಏನು ಇಲ್ಲ.

ಆರಂಭದಲ್ಲಿ ಶ್ರೇಷ್ಠಾ ಮೇಲೆ ಲವ್ ಶುರುವಾದಾಗ ಮನೆ ಕಡೆಗೆ ಗಮನ ಬಿಟ್ಟ ತಾಂಡವ್. ಆದರೆ ಭಾಗ್ಯಾ ಓದುವುದಕ್ಕೆ ಅಂತ ಯಾವಾಗ ಹೊರಟಳೋ ಅಂದಿನಿಂದ ತಾಂಡವ್‌ನ ಕರಾಳ ಮುಖ ಬದಲಾಗುತ್ತಾ ಹೋಗ್ತಿದೆ. ತುಂಬಾ ಚೀಪ್ ಆಗಿ ಯೋಚನೆಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾನೆ.

Colors kannada serial Bhagyalakshmi Written Update on April 30th episode

ಮನೆಯಲ್ಲಿ ಮಕ್ಕಳು ಕಷ್ಟ ಪಡುತ್ತಿದ್ದಾರೆ. ಅಪ್ಪ ಅಮ್ಮ ನೆಮ್ಮದಿಯಿಲ್ಲದ ದಿನಗಳನ್ನು ದೂಡುತ್ತಿದ್ದಾರೆ. ಎಷ್ಟೇ ಕಷ್ಟವಾದರೂ ಸರಿ ಸೊಸೆಯನ್ನು ಬಿಟ್ಟು ಕೊಡುವುದಿಲ್ಲ ಅಂತಾನೇ ಅಪ್ಪ ಅಮ್ಮ ಹೇಳುತ್ತಿದ್ದಾರೆ. ಸೊಸೆ ಇಲ್ಲದೆ ಹೋದಲ್ಲಿ ನಾವೂ ಮನೆಯಲ್ಲಿ ಇರಲ್ಲ ಎಂದೇ ಹೇಳುತ್ತಿದ್ದಾರೆ. ಆದರೂ ತಾಂಡವ್‌ಗೆ ಅದ್ಯಾವುದು ಬೇಡ. ಮೊದಲು ಭಾಗ್ಯಾ ಮನೆಯಿಂದ ತೊಲಗಬೇಕು ಅಷ್ಟೇ.

ಕೆಲಸ ಮಾಡಲೇಬೇಕೆಂದು ನಿರ್ಧಾರ

ಮನೆ ನಡೆಸಬೇಕು, ಇಎಂಐ ಕಟ್ಟಬೇಕು, ಮೊಮ್ಮಕ್ಕಳನ್ನು ಓದಿಸಬೇಕು. ಇದೆಲ್ಲಾ ಭಾಗ್ಯಾ ಒಬ್ಬಳಿಂದ ಆಗುತ್ತಾ. ಅಥವಾ ಬರುತ್ತಿರುವ ಪೆನ್ಶನ್‌ನಿಂದ ಸಾಕಾಗುತ್ತದಾ? ಇದು ಕುಸುಮಾ ಹಾಗೂ ಧರ್ಮರಾಜ್‌ಗೆ ಕಾಡುತ್ತಿರುವ ಸಂಕಟವಾಗಿತ್ತು. ಅದೇ ಸಮಯಕ್ಕೆ ಅತ್ತೆ ಮಾವನ ರೂಮಿಗೆ ಬಂದಳು ಭಾಗ್ಯಾ. ಆದರೆ ಯಾವುದೇ ಕಷ್ಟ ತೋರಿಸದೇ ಎಲ್ಲಾ ಖರ್ಚಿನಲ್ಲೂ ಹಿಡಿತ ಇರಲಿ ಎಂದಷ್ಟೆ ಹೇಳಿದ್ದಾರೆ.

ತಾಂಡವ್ ದುರಂಹಕಾರ

ಭಾಗ್ಯಾಗೆ ಮನೆಯ ಕಷ್ಟ ಚೆನ್ನಾಗಿಯೇ ಗೊತ್ತಿದೆ. ಕಷ್ಟ ನೆನೆಸಿಕೊಂಡು ಕಣ್ಣು ಒದ್ದೆಯಾಗಿದೆ. ಅಷ್ಟರಲ್ಲಿ ಮಕ್ಕಳು ಅಲ್ಲಿಗೆ ಬಂದಿದ್ದಾರೆ. ಮಕ್ಕಳ‌ ಮುಂದೆ ಈರುಳ್ಳಿಯಿಂದ ಬಂದ ಕಣ್ಣೀರು ಅಂತ ನೋವನ್ನ ಮರೆಮಾಚಿದ್ದಾಳೆ. ಆದರೆ ಅದೇ ಸಮಯಕ್ಕೆ ಬಂದಂತ ತಾಂಡವ್ ಮತ್ತಷ್ಟು ವ್ಯಂಗ್ಯವಾಡಿದ್ದಾನೆ. ನಿಂಗೆ ಕಡೆಯ ಅವಕಾಶ ಕೊಡುತ್ತೀನಿ. ಮನೆಯಿಂದ ಹೊರಟು ಹೋಗು ಎಂದಿದ್ದಾನೆ.

ಕುಸುಮಾಳಿಂದ ಎಚ್ಚರಿಕೆಯ ಮಾತು

ಮಗನ ಕೆಟ್ಟ ನಡವಳಿಕೆ ಮಿತಿಮೀರಿದೆ. ಮನೆಯಿಂದ ಹೋಗದೆ ಇದ್ದರೆ ನಾನು ಏನು ಮಾಡುತ್ತೀನೋ ನನಗೆ ಗೊತ್ತಿಲ್ಲ ಎಂದು ಭಾಗ್ಯಾಗೆ ಧಮ್ಕಿ ಹಾಕುವಾಗಲೇ ಕುಸುಮಾ ಬಂದಿದ್ದಾಳೆ. ಏನೋ ಮಾಡ್ತೀಯಾ ಎಂದು ಗದರಿದ್ದಾಳೆ. ಆಗಲೂ ಬಗ್ಗದ ತಾಂಡವ್ ಮತ್ತೆ ಹಣದ ವಿಚಾರವನ್ನೇ ಎತ್ತಿದ್ದಾನೆ. ಮಗನಿಗೆ ಕಡೆಯದಾಗಿ ಎಚ್ಚರಿಕೆ ನೀಡಿದ್ದಾಳೆ. ಒಂದು ವೇಳೆ ಮನೆಯಿಂದ ಹೋಗಬೇಕೆಂದಾದರೇ ಭಾಗ್ಯಾ ಒಬ್ಬಳೆ ಅಲ್ಲ ನಾವೆಲ್ಲರೂ ಹೋಗ್ತೀವಿ ಎಂದೇ ಹೇಳಿದ್ದಾಳೆ. ಕುಸುಮಾಳ ಮಾತು ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾನೆ ತಾಂಡವ್.

ಪೂಜಾಗೆ ತಿಳಿಯಿತು ಡೈಮಂಡ್ ವಿಚಾರ

ಸುಂದ್ರಿ ಕಾಟವನ್ನು ಶ್ರೇಷ್ಠಾಳಿಂದ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಹಾಗಂತ ಹೇಳಿರುವ ಸುಳ್ಳುಗಳಿಂದ ಸುಂದ್ರಿಯನ್ನು ದೂರ ಮಾಡಲು ಆಗುವುದಿಲ್ಲ. ಇದೀಗ ಸುಂದ್ರಿ, ಶ್ರೇಷ್ಠಾ ಮನೆಯಲ್ಲಿ ಆಗುವ ಎಲ್ಲಾ ಅವಾಂತರವನ್ನು ಪೂಜಾಗೆ ತಿಳಿಸಿದ್ದಾಳೆ. ಮನೆಯಲ್ಲಿ ಕೆಟ್ಟದಾಗಿ ನಡೆದುಕೊಳ್ಳುವ ತಾಂಡವ್, ಶ್ರೇಷ್ಠಾಗೆ ಡೈಮಂಡ್ ಕೊಟ್ಟಿರುವ ವಿಚಾರ ಈಗ ಪೂಜಾ ಕಿವಿಗೆ ಬಿದ್ದಿದೆ. ತಾಂಡವ್‌ಗೆ ಮತ್ತೆ ಎಚ್ಚರಿಕೆ ಕೊಡಲು ಹೋಗಿದ್ದಾಳೆ. ಆದರೆ ತಾಂಡವ್ ಮಿತಿಮೀರಿ ಆಡಿದ್ದಾನೆ. ಏನೇ ಮಾಡ್ಕೊಳ್ತೀಯ ಅಂತ ಅವಾಜ್ ಹಾಕಿದ್ದಾನೆ. ಇದು ಪೂಜಾಗೆ ಉರಿದಿದೆ. ಮುಂದೆ ಗ್ರಹಚಾರ ಕಾದಿದೆ.

More from Filmibeat

English summary
Bhagyalakshmi kannada serial today episode. Here is the details about tandav bad behavior;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X