Bhagyalakshmi: ನಿನ್ ಗಂಡ ಎಂದಿದ್ದಷ್ಟೇ ಶ್ರೇಷ್ಠಾ; ಚಪ್ಪಲಿ ಕಿತ್ತೋಗ್ತವೆ ಎಂದ ಭಾಗ್ಯಾಗೆ ವೀಕ್ಷಕರ ಚಪ್ಪಾಳೆ!

By ಎಸ್ ಸುಮಂತ್

ಶ್ರೇಷ್ಠಾಳ ಅಮ್ಮ ರಘುನನ್ನೇ ಅಳಿಯ ಮಾಡಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಸ್ವಂತ ತಮ್ಮ ಅಲ್ವಾ ಹೀಗಾಗಿ. ಆದರೆ ಶ್ರೇಷ್ಠಾ ತಾನೂ ಬೆಂಗಳೂರಿನಲ್ಲಿಯೇ ಇರಬೇಕೆಂಬ ಆಸೆಯಿಂದ, ತಾಂಡವ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರಿಂದ ರಘು ಮದುವೆಯಾಗುವುದಕ್ಕೆ ಒಪ್ಪಲಿಲ್ಲ. ಮನೆಯಲ್ಲೆಲ್ಲಾ ತಾಂಡವ್‌ನ ತರುಣ್ ಎಂದು ಪರಿಚಯ ಮಾಡಿಕೊಟ್ಟು, ಮದುವೆಗೆ ಒಪ್ಪಿಸಿದ್ದಾಳೆ.

ಶ್ರೇಷ್ಠಾಳನ್ನು ಮೊದಲೆಲ್ಲಾ ತಮ್ಮ ಮನೆಯವರಂತೆಯೇ ಕಾಣುತ್ತಿದ್ದ ಕುಸುಮಾ ಮನೆಯವರು ಈಗ ಅವಳನ್ನ ದೂರ ಇಟ್ಟಿದ್ದಾರೆ. ಕಳ್ಳಿ ಎಂಬುದು ಅರ್ಥವಾಗಿದೆ. ಆದರೆ ಶ್ರೇಷ್ಠಾ ಮದುವೆಯಾಗುತ್ತಿರುವುದು ತಾಂಡವ್‌ ಎಂಬ ಸತ್ಯ ಗೊತ್ತಾಗುವ ಅದಷ್ಟೋ ಸನ್ನಿವೇಶಗಳು ಫೇಲ್ ಆಗಿವೆ. ಈಗ ಜಸ್ಟ್ ನಿನ್ನ‌ ಗಂಡನ್ನೇನು ಮದುವೆ ಆಗ್ತಾ ಇದ್ದೀನಾ ಅಂತ ಕಂಪ್ಲೀಟ್ ಮಾಡುವಷ್ಟರಲ್ಲಿ ಶ್ರೇಷ್ಠಾ ಕಪಾಳಕ್ಕೆ ಬಿದ್ದಿದೆ.

colors kannada serial Bhagyalakshmi Written Update on August 2nd episode

ಶ್ರೇಷ್ಠಾಳ ಕೆಲಸಕ್ಕೆ ರೊಚ್ಚಿಗೆದ್ದ ಭಾಗ್ಯಾ

ಭಾಗ್ಯಾಗೆ ಶ್ರೇಷ್ಠಾ ನಿರ್ಧಾರ ಇಷ್ಟವಾಗಲಿಲ್ಲ. ಬೇರೆಯವರ ಸಂಸಾರ ಹಾಳು ಮಾಡಿ, ಮದುವೆಯಾಗುತ್ತಿದ್ದಾಳೆ ಎಂಬುದನ್ನು ಸಹಿಸುವುದಕ್ಕೆ ಸಾಧ್ಯವೇ ಅಗಲಿಲ್ಲ. ಅಲ್ಲಿಂದ ಹೊರಟವಳನ್ನು ಅಡ್ಡ ಹಾಕಿ, ಕ್ಲಾರಿಟಿ ತೆಗೆದುಕೊಳ್ಳುತ್ತಿದ್ದಾಳೆ. ಕಾರಿಗೆ ಅಡ್ಡ ನಿಂತು ಕೆಳಗೆ ಇಳಿಸಿದ್ದಾಳೆ. ನನ್ನ ಪ್ರಶ್ನೆಗೆ ಉತ್ತರ ಬೇಕು ಅಂತಾನೇ ಕೇಳಿದ್ದಾಳೆ.

ಭಾಗ್ಯಾಗೆ ಅವಾಜ್ ಹಾಕಿದ ಶ್ರೇಷ್ಠಾ

ಶ್ರೇಷ್ಠಾಗೆ ಮೊದಲೇ ಮಂತ್ರವಾದಿಗಳ ನೆಪದಲ್ಲಿ ಹಿತ ಹಾಗೂ ಪೂಜಾ ಹಿಂಸೆ ನೀಡಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಭಾಗ್ಯಾ ಬೇರೆ ಬಂದಿದ್ದು, ಇನ್ನಷ್ಟು ಕೋಪ ತರಿಸಿತ್ತು. ಭಾಗ್ಯಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದರ ಪರಿಣಾಮ ನೀನ್ಯಾರೆ ನನ್ನ ಲೈಫ್ ಬಗ್ಗೆ ಕೇಳುವುದಕ್ಕೆ ಅಂತ ಶ್ರೇಷ್ಠಾ ಜೋರು ಮಾಡಿದ್ದಾಳೆ. ಭಾಗ್ಯಾಳಿಗೆ ಏಕವಚನದಲ್ಲಿಯೇ ಮಾತನಾಡಿಸಿದ್ದಾಳೆ. ಆದರೆ ಭಾಗ್ಯಾ ಅಷ್ಟಕ್ಕೆ ಸುಮ್ಮನೆ ಆಗಿದ್ದೆ ಇಲ್ಲ. ಶ್ರೇಷ್ಠಾಳಿಗೆ ಕಿವಿ ಮಾತನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ.

colors kannada serial Bhagyalakshmi Written Update on August 2nd episode

ಚಪ್ಪಲಿ ಕೊತ್ತೋಗ್ತವೆ ಎಂದು ಎಚ್ಚರಿಕೆ

'ಬೇರೆಯವರ ಹೆಣ್ಣು ಮಗಳ ಸಂಸಾರ ಹಾಳು ಮಾಡುವುದಕ್ಕೆ ನಾನು ಬಿಡುವುದಿಲ್ಲ. ಆ ಎರಡು ಮಕ್ಕಳನ್ನ ನೋಡಿದರಾದರೂ ನಿನಗೆ ಹೊಟ್ಟೆ ಉರಿಯಲ್ವಾ? ಹೇಳು ಶ್ರೇಷ್ಠಾ ಈಗ ಕೇಳಿದ್ದೆಲ್ಲವೂ ಸತ್ಯವಾ?' ಎಂದು ಗದರಿದ್ದಾಳೆ. ಆಗ ಶ್ರೇಷ್ಠಾ ಇದು ನನ್ನ ವೈಯಕ್ತಿಕ ವಿಚಾರ‌. ಅದೆಲ್ಲ ಕಟ್ಟಿಕೊಂಡು ನೀನೇನು ಮಾಡ್ತೀಯಾ. ನಾನೇನು ನಿನ್ನ ಗಂಡನ ಜೊತೆ ಅಂದಿದ್ದೇ ತಡ, ಭಾಗ್ಯಾ ಕೈ ಶ್ರೇಷ್ಠಾಳ ಕಪಾಳಕ್ಕೆ ಬಾರಿಸಿತ್ತು. ಚಪ್ಪಲಿ ಕಿತ್ತೋಗ್ತವೇ ಶ್ರೇಷ್ಠಾ ಅಂತ ಎಚ್ಚರಿಕೆ ಕೊಟ್ಟಿದ್ದಾಳೆ. ಗಂಡನ ವಿಚಾರಕ್ಕೆ ಬಂದರೆ ಭಾಗ್ಯಾ ಸುಮ್ಮನೆ ಬಿಡುವವಳಲ್ಲ ಅನ್ನೋದು ಶ್ರೇಷ್ಠಾಗು ಗೊತ್ತು. ಆದರೂ ಹೋಗಿ ಹೋಗಿ ತಗಲಾಕಿಕೊಳ್ಳುತ್ತಾಳೆ.

ಭಾಗ್ಯಾ ಸಪೋರ್ಟ್‌ಗೆ ವೀಕ್ಷಕರು

ಭಾಗ್ಯಾ ಯಾವಾಗೆಲ್ಲಾ ಶ್ರೇಷ್ಠಾ ಕಪಾಳಕ್ಕೆ ಬಾರಿಸುತ್ತಾಳೋ ಹಾಗೆಲ್ಲ ಪ್ರೇಕ್ಷಕರು ಚಪ್ಪಾಳೆ ಹೊಡೀತಾರೆ. ಭಾಗ್ಯಗೆ ಬೆಂಬಲವಾಗಿ ನಿಲ್ತಾರೆ. ಈಗ ಚಪ್ಪಲಿ ಕಿತ್ತೋಗ್ತವೇ ಶ್ರೇಷ್ಠಾ ಎಂದಿದ್ದೇ ತಡ, ಭಾಗ್ಯಕ್ಕನಿಗೆ ರಿಯಾಯಿತಿ ದರದಲ್ಲಿ ಚಪ್ಪಲಿ ಕಳುಹಿಸಲು ರೆಡಿಯಾಗಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಚಪ್ಪಲಿಯದ್ದೇ ಚರ್ಚೆ ಶುರುವಾಗಿದೆ. ಶ್ರೇಷ್ಠಾ, ಭಾಗ್ಯಾಳ ಸಂಸಾರ ಹಾಳು ಮಾಡುವುದು ನೋಡುಗರಿಗೆ ಇಷ್ಟವಿಲ್ಲ.

More from Filmibeat

English summary
Bhagyalakshmi kannada serial today episode. Here is the details about Bhagya slapped Shrestha;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X