Bhagyalakshmi: ಭಾಗ್ಯಾಳಿಗೆ ನಿನ್ನ ಪರಿಚಯ ಮಾಡಿಸ್ತೀನಿ ಅಂತೇಳಿ ತಾಂಡವ್ ಹಾರ್ಟ್ ಬೀಟ್ ಹೆಚ್ಚಿಸಿದ ಶ್ರೇಷ್ಠಾ!

By ಎಸ್ ಸುಮಂತ್

ಪೂಜಾ ಮಾಡುವ ಪ್ಲ್ಯಾನ್ ಆಗಾಗ ಕೈಕೊಡೋದು ಅಲ್ಲದೆ ಕೊಂಚ ವರ್ಕ್ ಕೂಡ ಆಗುತ್ತೆ. ಈಗ ಭಾಗ್ಯಾಳಿಗೆ ಹೇಗಾದರೂ ಮಾಡಿ ವಿಷಯ ತಲುಪಿಸಬೇಕು ಅಂತ ಸುಂದ್ರಿ, ಹಿತ, ಪೂಜಾ ಸೇರಿ ಪ್ಲ್ಯಾನ್ ಮಾಡಿದ್ರು. ಅವರಂದುಕೊಂಡ ಹಾಗೆಯೇ ಪ್ಲ್ಯಾನ್ ವರ್ಕೌಟ್ ಆಗಿದೆ. ಆದರೆ ಪೂಜಾಗೆ ಆತಂಕವೂ ಶುರುವಾಗಿದೆ.

ಶ್ರೇಷ್ಠಾ ಮದುವೆಯಾಗುತ್ತಿರುವ ಹುಡುಗನಿಗೆ ಈಗಾಗಲೇ ಮದುವೆಯಾಗಿದೆ. ಎರಡು ಮಕ್ಕಳು ಇದ್ದಾರೆ ಅನ್ನೋದು ಭಾಗ್ಯಾಗೆ ಗೊತ್ತಾಗಿದೆ. ಈಗ ಶ್ರೇಷ್ಠಾಗೆ ಬುದ್ದಿ ಕಲಿಸಲು ಹೊರಟಿದ್ದಾಳೆ. ಗೊತ್ತಿದ್ದು ಗೊತ್ತಿದ್ದು ಇನ್ನೊಬ್ಬರ ಸಂಸಾರ ಹಾಳು ಮಾಡುವುದಕ್ಕೆ ನಾನು ಬಿಡೋದಿಲ್ಲ. ಆ ಪುಣ್ಯಾತ್ಮನ್ನ ತೋರಿಸು ನಡಿ ಎಂದು ಭಾಗ್ಯಾ ಹಠ ಮಾಡಿದ್ದಾಳೆ. ಇಂಥ ಸನ್ನಿವೇಶಕ್ಕೆ ಪೂಜಾ ಶಾಕ್ ಆಗಿದ್ದಾಳೆ.

colors kannada serial Bhagyalakshmi Written Update on August 3rd episode

ಭಾಗ್ಯಾ ಬಳಿ ನಿಜ ಒಪ್ಪಿಕೊಂಡ ಶ್ರೇಷ್ಠಾ

ಎರಡು ಮಕ್ಕಳಿರುವ ತಂದೆಯನ್ನು ಶ್ರೇಷ್ಠಾ ಮದುವೆಯಾಗ್ತಾ ಇದ್ದಾಳೆ ಎಂಬುದನ್ನೇ ಭಾಗ್ಯಾಳಿಂದ ಸಹಿಸುವುದಕ್ಕೆ ಆಗಲಿಲ್ಲ. ಬೇರೆಯವರ ಸಂಸಾರ ಹಾಳು ಮಾಡುವುದಕ್ಕೆ ನಾನು ಬಿಡಲ್ಲ ಅಂತ ಭಾಗ್ಯ ಹೇಳಿದ್ರೆ, ಇದು ನನ್ನ ಪರ್ಸನಲ್ ವಿಚಾರ ನೀನ್ಯಾರು ಕೇಳೊಕೆ ಅಂದ್ಲು ಶ್ರೇಷ್ಠಾ. ಆದರೆ ಭಾಗ್ಯಾಳ ಎಚ್ಚರಿಕೆಗೆ ಗಾಬರಿಯಾದ ಶ್ರೇಷ್ಠಾ ಹೌದು, ಅವ್ನಿಗೆ ಎರಡು ಮಕ್ಳಿದಾವೆ. ಎನಿವಾಗ ಅಂತಾನೇ ಕೇಳಿದ್ದಾಳೆ.

ಆ ಪುಣ್ಯಾತ್ಮನನ್ನು ನೋಡುವ ಹಠ

ಭಾಗ್ಯಾಗೆ ಈಗ ಇನ್ನಷ್ಟು ಕೋಪ ಬಂದಿದೆ. ಮಕ್ಕಳಿಗೆ ದ್ರೋಹ ಆಗುವುದಕ್ಕೆ ಬಿಡಲ್ಲ, ಈ ಮದುವೆ ನಡೆಯುವುದಕ್ಕೂ ಅವಕಾಶ ಕೊಡಲ್ಲ ಎಂದು ಹಠ ತೊಟ್ಟ ಭಾಗ್ಯಾ ಅವನನ್ನ ನೋಡಲು ಹೊರಟಿದ್ದಾಳೆ. ಅವನ ಹೆಂಡತಿಯನ್ನಾದರೂ ಭೇಟಿ ಮಾಡಿಸು ಎಂದು ಕೇಳಿದ್ದಾಳೆ. ಅದ್ಯಾವುದಕ್ಕೂ ಒಲ್ಲೆ ಎಂದ ಶ್ರೇಷ್ಠಾಗೆ ಮತ್ತೆ ಅವಾಜ್ ಹಾಕಿದ್ದಾಳೆ. ಅವನನ್ನು ಇವತ್ತು ತೋರಿಸಲೇಬೇಕೆಂದು ಭಾಗ್ಯಾ ಕೂಡ ಕಾರು ಹತ್ತಿ ಕುಳಿತಿದ್ದಾಳೆ. ಈಗ ಶ್ರೇಷ್ಠಾಗೆ ಬೇರೆ ದಾರಿ ಇಲ್ಲ. ಹಾಗಂತ ತಾಂಡವ್‌ನ ತೋರಿಸುವಷ್ಟು ಧೈರ್ಯವಂತೆಯೂ ಅವಳಲ್ಲ ಬಿಡಿ.

ತಾಂಡವ್‌ಗೆ ಗಾಬರಿಪಡಿಸಿದ ಶ್ರೇಷ್ಠಾ

ಶ್ರೇಷ್ಠಾ ತಾನೊಬ್ಬಳೇ ಯಾಕೆ ಟೆನ್ಶನ್ ತೆಗೆದುಕೊಳ್ಳಬೇಕು ಅಂತ ಅಕ್ಕಪಕ್ಕದವರಿಗೂ ಸುಲಭವಾಗಿ ಕೊಟ್ಟು ಬಿಡುತ್ತಾಳೆ. ಈಗ ಅದನ್ನೇ ಮಾಡಿದ್ದು. ತಾಂಡವ್ ಏನೋ ಒಂಥರ ಖುಷಿಯಾಗಿದ್ದ. ಅಮ್ಮ ತನ್ನಿಷ್ಟ ಕೇಳಿಬಿಟ್ಟರು ಎಂದು ನೆಮ್ಮದಿಯಾಗಿ ಇದ್ದ. ಆದರೆ ಶ್ರೇಷ್ಠಾಳ ಒಂದು ಕಾಲ್ ಎಲ್ಲವನ್ನು ಹಾಳು ಮಾಡಿಬಿಡ್ತು.

colors kannada serial Bhagyalakshmi Written Update on August 3rd episode

ನಿನ್ನ ಮೀಟ್ ಮಾಡಿಸ್ತೀನಿ ಎಂದ ಶ್ರೇಷ್ಠಾ

ಭಾಗ್ಯಾಳನ್ನ ಕರೆದುಕೊಂಡು, ನಿಮ್ಮ ಮನೆಗೆ ಬರ್ತಾ ಇದ್ದೀನಿ. ಅವಳು ನಿನ್ನನ್ನ ನೋಡಬೇಕಂತೆ. ಬೇಡ ಬೇಡ ಅಂದ್ರು ಹಠ ಮಾಡುತ್ತಿದ್ದಾಳೆ ಎಂದಿದ್ದಾಳೆ. ತಾಂಡವ್‌ಗೆ ಏನು ಹೇಳಬೇಕು, ಏನು ಮಾಡಬೇಕು ಎಂಬುದೇ ತೋಚದಂತೆ ಆಗಿದೆ‌. ಶ್ರೇಷ್ಠಾ ನಿಂಗೇನು ತಲೆ ಕೆಟ್ಟಿದ್ಯಾ? ಅಂತ ಕೇಳಿದ್ರು ಅವಳಲ್ಲಿ ಉತ್ತರವಿಲ್ಲ. ಕಾಲ್ ಕಟ್.

ಭಾಗ್ಯಾಳನ್ನು ತಡೆಯಲು ಹೋದ ಪೂಜಾ

ಶ್ರೇಷ್ಠಾಗೆ ಪೂಜಾಳನ್ನ ಉರಿಸುವುದು ಎಂದರೆ ಇಷ್ಟ. ಹೀಗಾಗಿ ಅಲ್ಲಿ ಪೂಜಾ ಇದ್ದಿದ್ದನ್ನು ಕಂಡು ತಾಂಡವ್‌ಗೆ ಕಾಲ್ ಮಾಡಿ ಹೆದರಿಸಿದ್ದಾಳೆ. ಭಾಗ್ಯಾಳಿಗೆ ಸತ್ಯ ಗೊತ್ತಾಗಬಾರದು ಎಂದು ಪೂಜಾ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಈಗ ಶ್ರೇಷ್ಠಾಳ ನಾಟಕವನ್ನೇ ಸತ್ಯ ಎಂದುಕೊಂಡಿದ್ದಾಳೆ. ಭಾಗ್ಯಾಳನ್ನ ಹೋಗಬೇಡ ಎಂದು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಭಾಗ್ಯಾ, ಪೂಜಾಗೆ ಎಮೋಷನಲ್ ಡೈಲಾಗ್ ಹೊಡೆದಿದ್ದಾಳೆ. ನಿಮ್ಮ ಅಕ್ಕನಿಗೆ ಆಗಿದ್ರೆ ಸುಮ್ನೆ ಇರ್ತಿದ್ದ,‌ ಸುಮ್ನೆ ಬಾ ಅಂತ ಕರೆದುಕೊಂಡು, ಶ್ರೇಷ್ಠಾಳ ಕಾರು ಹತ್ತಿದ್ದಾರೆ.

More from Filmibeat

English summary
Bhagyalakshmi kannada serial today episode. Here is the details about Shrestha decides to meet Bhagya with Tandav;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X