Bhagyalakshmi: ಆಸ್ತಿಗಾಗಿ ತಾಂಡವ್‌ಗೆ ವಿಷ ಹಾಕ್ಕಿದ ಶ್ರೇಷ್ಠಾ; ಭಾಗ್ಯ ಮೇಲೆ ಕೊಲೆ ಯತ್ನದ ಕೇಸ್
ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ 'ಭಾಗ್ಯಲಕ್ಷ್ಮಿ' ಈಗ ಹೊಸ ರೋಚಕ ಹಂತಕ್ಕೆ ಬಂದು ತಲುಪಿದೆ. ಪ್ರತಿ ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಸೀರಿಯಲ್ ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಕಥೆಯ ಒಳಹರಿವು ಈಗ ಯಾರೂ ಊಹಿಸದ ಕಡೆಗೆ ತಿರುಗಿದೆ.
ಸಂಸಾರ ಅಂದ ಮೇಲೆ ಅಲ್ಲಿ ಪ್ರೀತಿ, ವಿಶ್ವಾಸ ಇರಬೇಕು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಭಾಗ್ಯಳ ಮುಗ್ಧತೆ ಮತ್ತು ಶ್ರೇಷ್ಠಾಳ ಕುತಂತ್ರದ ನಡುವೆ ಈಗ ದೊಡ್ಡ ಯುದ್ಧವೇ ನಡೆಯುತ್ತಿದೆ. ಮನೆಯ ನೆಮ್ಮದಿ ಹಾಳಾಗುವ ಹಂತಕ್ಕೆ ಬಂದು ನಿಂತಿದೆ.

ಕೌಟುಂಬಿಕ ಕಲಹಗಳ ನಡುವೆಯೇ ಈಗ ಕ್ರಿಮಿನಲ್ ಸಂಚು ಕೂಡ ಆರಂಭವಾಗಿದೆ. ಸದ್ಯದ ಬೆಳವಣಿಗೆಗಳು ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಪ್ರತಿಯೊಂದು ಪಾತ್ರವೂ ಈಗ ಅನಿರೀಕ್ಷಿತವಾಗಿ ವರ್ತಿಸುತ್ತಿದ್ದು, ಕಥೆ ಯಾವ ಕಡೆ ಸಾಗಲಿದೆ ಎಂಬ ಆತಂಕ ಮೂಡಿದೆ.
ಆಸ್ತಿಗಾಗಿ ಶ್ರೇಷ್ಠಾಳ ಸಂಚು...
ಇದುವರೆಗೂ ತಾಂಡವ್‌ನನ್ನು ಶ್ರೇಷ್ಠಾ ಪ್ರೀತಿಸುತ್ತಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದರು. ತಾಂಡವ್ ಕೂಡ ಇದನ್ನು ಬಂದಿದ್ದ. ಆದರೆ ಈಗ ಅವಳ ಅಸಲಿ ಮುಖ ಬಯಲಾಗಿದೆ. ಅವಳಿಗೆ ಬೇಕಿರುವುದು ತಾಂಡವ್ನ ಪ್ರೀತಿಯಲ್ಲ, ಬದಲಾಗಿ ಅವನ ಆಸ್ತಿ. ಹೌದು ಹಣ ಮತ್ತು ಆಸ್ತಿಯ ಮೇಲಿರುವ ಹಸಿವಿನಿಂದಾಗಿ ಶ್ರೇಷ್ಠಾ ಈಗ ರಾಕ್ಷಸಿಯಾಗುತ್ತಿದ್ದಾಳೆ.
ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಅವಳು ಯಾವ ಹಂತಕ್ಕೆ ಬೇಕಾದರೂ ಇಳಿಯಲು ಸಿದ್ಧಳಾಗಿದ್ದಾಳೆ. ಈ ಉದ್ದೇಶಕ್ಕಾಗಿಯೇ ಅವಳು ಈಗ ತಾಂಡವ್ಗೆ ವಿಷ ನೀಡುವಂತಹ ಕೃತ್ಯಕ್ಕೆ ಕೈ ಹಾಕಿದ್ದಾಳೆ. ತಾಂಡವ್ನ ಪ್ರಾಣ ಹೋದರೂ ಪರವಾಗಿಲ್ಲ, ಆಸ್ತಿ ಸಿಕ್ಕರೆ ಸಾಕು ಎನ್ನುವ ಹಂತಕ್ಕೆ ಅವಳ ಕ್ರೌರ್ಯ ತಲುಪಿದೆ.
ಭಾಗ್ಯ ಮೇಲೆ ದೂರು
ತಾಂಡವ್‌ಗೆ ವಿಷ ನೀಡಿದ ಶ್ರೇಷ್ಠಾ, ಅದನ್ನು ಭಾಗ್ಯಳ ಮೇಲೆ ಹಾಕುತ್ತಿದ್ದಾಳೆ. ಭಾಗ್ಯಳೇ ಆಸ್ತಿಗಾಗಿ ತನ್ನ ಗಂಡನಿಗೆ ವಿಷ ಹಾಕಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡುತ್ತಿದ್ದಾಳೆ. ಆಸ್ತಿ ಲಾಲಸೆಯಿಂದ ಈ ಕೃತ್ಯ ನಡೆದಿದೆ ಎಂದು ಬಿಂಬಿಸಿ ಭಾಗ್ಯಳನ್ನು ಜೈಲಿಗೆ ಕಳುಹಿಸುವುದು ಅವಳ ಅಸಲಿ ಪ್ಲಾನ್.
ಭಾಗ್ಯಳಿಗೆ ತಾನು ಮಾಡುತ್ತಿರುವ ದಾನ ಧರ್ಮಗಳೇ ಗೊತ್ತು. ಆಸ್ತಿಗೆ ಆಸೆ ಪಡುವ ಗುಣ ಅವಳದ್ದಲ್ಲ. ಆದರೆ ಈಗ ಶ್ರೇಷ್ಠಾ ಹೆಣೆದಿರುವ ಜಾಲದಲ್ಲಿ ಅವಳು ಸಿಲುಕಿಕೊಂಡಿದ್ದಾಳೆ. ಅಮಾಯಕಿ ಭಾಗ್ಯ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಈಗ ಪರದಾಡುವಂತಾಗಿದೆ.
ಸತ್ಯ ಬಯಲಾಗುತ್ತಾ?
ಶ್ರೇಷ್ಠಾ ಮಾಡುತ್ತಿರುವ ಈ ಸರಣಿ ತಪ್ಪುಗಳೇ ಅವಳಿಗೆ ಮುಳುವಾಗುವ ಸಾಧ್ಯತೆ ಇದೆ. ಆಸ್ತಿಯ ಮೇಲೆ ಕಣ್ಣಿಟ್ಟು ತಾಂಡವ್ ಪ್ರಾಣದ ಜೊತೆ ಆಟವಾಡುತ್ತಿರುವುದು ದೀರ್ಘಕಾಲ ಅಡಗಿರಲು ಸಾಧ್ಯವಿಲ್ಲ. ಭಾಗ್ಯ ಸದ್ಯಕ್ಕೆ ಸಂಕಷ್ಟದಲ್ಲಿದ್ದರೂ, ಅವಳ ಸತ್ಯಸಂಧತೆ ಅವಳನ್ನು ಈ ಸಂಚಿನಿಂದ ಹೊರತರುವ ಭರವಸೆ ಮೂಡಿಸಿದೆ. ಒಂದು ಕಡೆ ತಾಂಡವ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇನ್ನೊಂದೆಡೆ ಶ್ರೇಷ್ಠಾ ತನ್ನ ಮುಂದಿನ ನಡೆಯನ್ನು ಜಾಣ್ಮೆಯಿಂದ ರೂಪಿಸುತ್ತಿದ್ದಾಳೆ.
ಈ ಹಂತದಲ್ಲಿ ಮನೆಯ ಹಿರಿಯರು ಅಥವಾ ಮನೆಯಲ್ಲಿರುವ ಸಿಸಿಟಿವಿ ದೃಶ್ಯಗಳು ಶ್ರೇಷ್ಠಾಳ ಅಸಲಿ ಬಣ್ಣವನ್ನು ಬಯಲು ಮಾಡುತ್ತವೆಯೇ ಎಂಬ ಕುತೂಹಲ ವೀಕ್ಷಕರಲ್ಲಿದೆ. ಭಾಗ್ಯಳನ್ನು ಈ ಕೇಸಿನಲ್ಲಿ ಸಿಲುಕಿಸಿ ತಾನು ಆಸ್ತಿಯ ಒಡತಿಯಾಗಬೇಕು ಎಂಬ ಶ್ರೇಷ್ಠಾಳ ಕನಸು ನನಸಾಗುತ್ತಾ? ಅಥವಾ ಭಾಗ್ಯಳ ಮುಗ್ಧತೆಯೇ ಅವಳಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಮುಂದಿನ ರೋಚಕ ಸಂಚಿಕೆಗಳನ್ನು ತಪ್ಪದೇ ವೀಕ್ಷಿಸಬೇಕು.
ಮುಂದಿನ ಸಂಚಿಕೆ?
ಈ ಘಟನೆಯು ಧಾರಾವಾಹಿಯ ಕಥೆಯನ್ನೇ ಬದಲಿಸಲಿದೆ. ಶ್ರೇಷ್ಠಾಳ ಆಸ್ತಿ ದಾಹದ ವಿಷಯ ಮನೆಯವರಿಗೆ ತಿಳಿಯುತ್ತಾ ಅಥವಾ ಭಾಗ್ಯ ಬಲಿಯಾಗುತ್ತಾಳ ಎನ್ನುವುದೇ ಸದ್ಯದ ಸಸ್ಪೆನ್ಸ್. ತಾಂಡವ್ ಈ ಮಾರಣಾಂತಿಕ ಹಲ್ಲೆಯಿಂದ ಬದುಕುಳಿಯುತ್ತಾನಾ? ಶ್ರೇಷ್ಠಾ ಹೆಣೆದ ಕುತಂತ್ರದ ಬಲೆಗೆ ಪೊಲೀಸರು ಬೀಳುತ್ತಾರಾ? ಭಾಗ್ಯಳ ಬೆನ್ನಿಗೆ ನಿಲ್ಲುವವರು ಯಾರು?
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಈ ಹೈ ವೋಲ್ಟೇಜ್ ಡ್ರಾಮಾ ಈಗ ಟಿಆರ್‌ಪಿ ರೇಟಿಂಗ್‌ನಲ್ಲಿ ದೊಡ್ಡ ಬದಲಾವಣೆ ತರುವ ಸಾಧ್ಯತೆ ಇದೆ. ಭಾಗ್ಯ ಈ ಅಗ್ನಿಪರೀಕ್ಷೆಯಲ್ಲಿ ಹೇಗೆ ಗೆಲ್ಲುತ್ತಾಳೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮತ್ತೊಂದು ಕಡೆ 'ಭಾಗ್ಯಲಕ್ಷ್ಮಿ' ಧಾರಾವಾಹಿ ಮುಗೀತಾ? ಎನ್ನುವ ಅನುಮಾನ ಶುರುವಾಗಿದೆ.


Click it and Unblock the Notifications











