Bhagyalakshmi: ಭಾಗ್ಯಾ ಕೈಯಲ್ಲಿ ತಾಂಡವ್ ಕಳ್ಳಾಟದ ಸಾಕ್ಷಿ; ಮದುವೆ ಹಾಲ್ ಬುಕ್ ಮಾಡಿದ್ದ ರಸೀದಿ ಸಿಕ್ಕೇಬಿಡ್ತು!

By ಎಸ್ ಸುಮಂತ್

ತಾಂಡವ್ ಅಹಂಕಾರ ಮಿತಿ ಮೀರಿದೆ. ಈಗ ಅವನಿಗೆ ಆದಷ್ಟು ಬೇಗ ಭಾಗ್ಯಾ ಡಿವೋರ್ಸ್ ಕೊಡಬೇಕು, ಶ್ರೇಷ್ಠಾ ಜೊತೆಗೆ ಮದುವೆ ಆಗಿ ಬಿಡಬೇಕು, ಸದ್ಯಕ್ಕೆ ಅವನ ತಲೆಯಲ್ಲಿ ಓಡುತ್ತಾ ಇರುವುದು ಇದೆ. ಹೀಗಾಗಿಯೇ ಮನೆಯಲ್ಲಿ ಅಪ್ಪ ಅಮ್ಮನಿಗೂ ಬೆಲೆ ಕೊಡಲ್ಲ. ಅವರ ಕಷ್ಟಕ್ಕೂ ಸ್ಪಂದಿಸಲ್ಲ, ಮಕ್ಕಳನ್ನ ಒಂದು ದಿನ ಪ್ರೀತಿಯಿಂದ ಮಾತನಾಡಿಸಿಲ್ಲ. ಮನೆಯಲ್ಲಿ ಇರುವುದೇ ಒಂದು ಸಂಸಾರ, ಆದರೆ ಯುದ್ಧ ಭೂಮಿಯಂತೆ ಆಗಿದೆ.

ಅತ್ತೆ ಅನ್ನೋದನ್ನು ಮರೆತು ಸುನಂದಾಳಿಗೆ ಬಾಯಿಗೆ ಬಂದ ಹಾಗೇ ಬೈದಿದ್ದಾನೆ. ಬಿಟ್ಟಿ ಕೂಳು ತಿನ್ನುತ್ತೀರಾ ಎಂಬೆಲ್ಲಾ ರೀತಿಯಲ್ಲಿ ಹಂಗಿಸಿದ್ದಕ್ಕೆ ಸುನಂದಾ ಕಣ್ಣೀರು ಹಾಕುತ್ತಾ, ಮನೆಯಿಂದ ಹೊರ ನಡೆದಿದ್ದಾಳೆ. ಯಾವ ತಾಯಿಗೆ ಆಗಲಿ ತನ್ನ ಮಗಳ ಸಂಸಾರ ಚೆನ್ನಾಗಿ ಆಗಲೆಂಬುದೇ ಆಸೆ. ಅದಕ್ಕೆ ಸುನಂದಾ ಒಂದು ಮಾತನಾಡದೆ, ಕುಸುಮಾಗೆ ಹೇಳಿ ಹೊರ ನಡೆದಿದ್ದಾರೆ.

colors kannada serial Bhagyalakshmi Written Update on July 13th episode

ಭಾಗ್ಯಾ ಏಳಿಗೆ ಕಂಡು ತಾಂಡವ್ ಕೆಂಡ

ಭಾಗ್ಯಾ ಈಗ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಹೆಡ್ ಕುಕ್ ಆಗಿದ್ದಾಳೆ. ಅವಳ ಕೈರುಚಿಗೆ ಹೊಟೇಲ್‌ಗೆ ಬರುವ ಕಸ್ಟಮರ್ಸ್ ಜಾಸ್ತಿಯಾಗಿದ್ದಾರೆ. ಹಾಗೇ ಹೊಟೇಲ್‌ನವರು ಕೂಡ ಭಾಗ್ಯಾಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಒಳ್ಳೆ ಸೌಲಭ್ಯವನ್ನು ಒದಗಿಸಿ ಕೊಡುತ್ತಿದ್ದಾರೆ. ಭಾಗ್ಯಾಳನ್ನು ಕರೆದುಕೊಂಡು ಹೋಗಲು ಕಾರು ಬಂದಿದ್ದು, ಡ್ರೈವರ್ ಬ್ಯಾಗ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ಇದನ್ನು ಕಂಡು ತಾಂಡವ್ ಉರಿದುರಿದು ಬೀಳುತ್ತಿದ್ದಾನೆ.

ಎರಡನೇ ಮದುವೆಗೆ ಹಾಲ್ ಬುಕ್

ಶ್ರೇಷ್ಠಾಳನ್ನು ಮದುವೆಯಾಗುವುದಕ್ಕೆ ತಾಂಡವ್ ತುದಿಗಾಲಿನಲ್ಲಿ ನಿಂತಿದ್ದಾನೆ. ಮನೆಯವರುಗೆ ಗೊತ್ತಾಗಿ ಬಿಡಬಹುದಾ ಎಂಬ ಭಯದ ನಡುವೆಯೇ ತಾಂಡವ್ ಮದುವೆಯ ತಯಾರಿಯಲ್ಲಿ ಭಾಗಿಯಾಗಿದ್ದಾನೆ. ಈಗಾಗಲೇ ಶ್ರೇಷ್ಠಾಗೆ ತಾಳಿಯನ್ನು ಕೊಡಿಸಿದ್ದಾನೆ. ಈಗ ಮದುವೆಗಾಗಿ ಹಾಲ್ ಬುಕ್ ಮಾಡಿದ್ದು, ಅದಕ್ಕೆ ತಾಂಡವ್ ತನ್ನ ಅಕೌಂಟ್ ನಿಂದಲೇ ಎರಡು ಲಕ್ಷ ಕೊಟ್ಟಿದ್ದಾನೆ. ಅದು ಬೇರೆ ಭಾಗ್ಯಾ ಕೆಲಸ ಮಾಡುತ್ತಿರುವ ಹೊಟೇಲ್ ನಲ್ಲಿ.

colors kannada serial Bhagyalakshmi Written Update on July 13th episode

ನಾನ್ಯಾಕೆ ಮಾಡಲಿ ಎಂದ ತಾಂಡವ್

ಭಾಗ್ಯಾ ಮೊದಲೆ ಎಚ್ಚರಿಕೆ ಕೊಟ್ಟಿದ್ದಳು. ಶ್ರೇಷ್ಠಾ ಸಹವಾಸವನ್ನು ಸ್ವಲ್ಪ ಕಡಿಮೆ ಮಾಡಿ ಎಂದು. ನನ್ನ ಬಳಿಯೇ ಹಣ ಕದ್ದಿದ್ದಾಳೆ. ಇನ್ನು ನಿಮ್ಮ ಬಳಿ ಏನೇನು ಕದಿಯುತ್ತಾಳೋ. ಹೀಗಾಗಿ ಅವಳ ಸಹವಾಸ ಬಿಡಿ ಎಂದಿದ್ದಳು. ಆದರೆ ತಾಂಡವ್ ಕೇಳಬೇಕಲ್ಲ. ಅವಳ ಜೊತೆ ಸಹವಾಸವಿರಲಿ ಮದುವೆಯನ್ನೇ ಆಗುತ್ತಿದ್ದಾನೆ. ಈಗ ಮದುವೆಗೆ ಹಾಲ್ ಬುಕ್ ಮಾಡಿರುವ ಸತ್ಯ ಭಾಗ್ಯಾ ಮುಂದೆ ಬಯಲಾಗಿದೆ. ಕೇಳಿದರೆ ಸಾಧ್ಯವೇ ಇಲ್ಲ. ನಾನ್ಯಾಕೆ ಅವಳ ಮದುವೆಗೆ ಬುಕ್ ಮಾಡಲಿ ಎಂದು ವಾದ ಮಾಡುತ್ತಿದ್ದಾನೆ.

ಭಾಗ್ಯಾಳಿಗೆ ಸಿಕ್ತು ಸಾಕ್ಷಿ

ಭಾಗ್ಯಾ ಸಾಕ್ಷಿ ಇಲ್ಲದೆ ಸುಮ್ಮನೆ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ. ಭಾಗ್ಯಾ ಕೆಲಸ ಮಾಡುತ್ತಿರುವ ಹೊಟೇಲ್‌ನಲ್ಲೇ ಹಾಲ್ ಬುಕ್ ಮಾಡಿದ್ದು, ಈಗ ಸಿಕ್ಕಿಬಿದ್ದಿದ್ದಾನೆ. ಭಾಗ್ಯಾಳ ಬಳಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾನೆ. ಏನಿದು ಈಗಲಾದರೂ ನಂಬುತ್ತೀರಾ ಅಲ್ವಾ ಎಂದಿದ್ದಾಳೆ ಭಾಗ್ಯಾ. ಸಾಕ್ಷಿಯನ್ನು ಕಂಡ ತಾಂಡವ್ ಏನು ಮಾತನಾಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾನೆ. ಇದನ್ನ ಭಾಗ್ಯಾಳ ಸಾಲ ಎಂಬ ಸುಳ್ಳಿನ ಕಂತೆಯಲ್ಲಿ ಬದಲಾಯಿಸುವ ಶಕ್ತಿ ತಾಂಡವ್‌ಗಿದೆ. ಆದರೆ ಈಗ ಪೂಜಾ ಬೇರೆ ಟಾಂಗ್ ಕೊಟ್ಟಿದ್ದಾಳೆ. ಏನ್ ಬಾವ ಶ್ರೇಷ್ಠಾಳನ್ನ ನೀವೇನಾದರೂ ಮದುವೆಯಾಗುತ್ತಿದ್ದೀರಾ? ಎಂದು ಕೇಳಿದ್ದಾಳೆ.

More from Filmibeat

English summary
colors kannada serial Bhagyalakshmi Written Update on July 13th episode. Here is the details about Tandav was caught with the witness near Bhagya;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X