Bhagyalakshmi: ಶ್ರೇಷ್ಠಾ ಸಹವಾಸ ಬಿಡ್ಬೇಕು ಅಷ್ಟೇ; ಭಾಗ್ಯಾ ಮಾತಿಗೆ ಬೆವರಿದ ತಾಂಡವ್, ವೀಕ್ಷಕರ ಸೆಲೆಬ್ರೇಷನ್!
ಭಾಗ್ಯಾಳನ್ನ ಸುಮ್ಮ ಸುಮ್ಮನೆ ದಡ್ಡಿ ಅಂತಾನೆ ತಾಂಡವ್. ಅವಳ ತಾಳ್ಮೆ, ಅವಳ ತಗ್ಗಿ ಬಗ್ಗಿ ನಡೆಯುವ ಗುಣವನ್ನೇ ಅವನು ಅಸಾಹಕತೆ, ಕೈಲಾಗದವಳು ಎಂದು ಟ್ರೀಟ್ ಮಾಡುತ್ತಿದ್ದಾನೆ. ಹೀಗಾಗಿ ಡಿವೋರ್ಸ್ ಕೊಟ್ಟು ಶ್ರೇಷ್ಠಾಳನ್ನು ಮದುವೆಯಾಗುವ ತಯಾರಿ ನಡೆಸಿದ್ದಾನೆ. ಅದು ಸಾಧ್ಯ ಆಗುವುದಕ್ಕೆ ಪೂಜಾ, ಹಿತ ಬಿಡಲ್ಲ ಅನ್ನೋದು ಇಬ್ಬರಿಗೂ ಗೊತ್ತಿಲ್ಲ.
ಶ್ರೇಷ್ಠಾ ಕಷ್ಟಕ್ಕೆ ಸಹಾಯ ಮಾಡಿದ್ದಾಳೆ ಅಂತ ಅವಳಿಗೆ ಗೌರವ ಕೊಡ್ತಾ ಇದ್ದಳು ಭಾಗ್ಯಾ. ಹಾಗೇ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಒಂದು ಲಕ್ಷ ಹಣವನ್ನು ಕೊಟ್ಟಿದ್ದಳು. ಅದ್ಯಾವಾಗ ಶ್ರೇಷ್ಠಾ ಎರಡು ಲಕ್ಷ ಹಣ ಕದ್ದಿದ್ದಾಳೆ ಎಂಬುದು ಗೊತ್ತಾಯ್ತೋ ಗ್ರಹಚಾರವನ್ನೇ ಬಿಡಿಸಿದ್ದಳು. ಅಂದು ಶ್ರೇಷ್ಠಾಗೆ ಕೊಟ್ಟ ಹೊಡೆತ ಆಗಾಗ ತಾಂಡವ್‌ಗೂ ಕಾಡುತ್ತಾ ಇರುತ್ತದೆ. ಆದರೂ ಮೊಂಡು ಧೈರ್ಯದಿಂದ ಶ್ರೇಷ್ಠಾ ಜೊತೆಗೆ ಮದುವೆಗೆ ತಯಾರಿ ನಡೆಸುತ್ತಲೇ ಇರುತ್ತಾನೆ.

ಹಣ ಕೊಟ್ಟ ವಿಚಾರ ಒಪ್ಪಿಕೊಂಡ ಮಗ
ಶ್ರೇಷ್ಠಾ ಮದುವೆಗೆ ಹಾಲ್ ಬುಕ್ ಮಾಡಿದ್ದನ್ನ ಪೂಜಾ ಹೇಳಿದ್ದಾಳೆಂದು ಭಾಗ್ಯಾಳಿಗೆ ರೇಗಿದ. ಆದರೆ ಭಾಗ್ಯಾ ಸಾಕ್ಷಿ ತೋರಿಸುತ್ತಿದ್ದಂತೆ ಸೈಲೆಂಟ್ ಆಗಿ ನಿಂತು ಬಿಟ್ಟ. ಹೊಟೇಲ್‌ನವರಿಗೆ ನಿಮ್ಮ ಮೇಲೆ ವಿಶೇಷವಾದ ಕೋಪ ಏನಾದರೂ ಇದೆಯಾ? ಅವರೇ ಈ ಬಿಲ್ ಅನ್ನ ರೆಡಿ ಮಾಡಿಟ್ಟಿದ್ದಾರಾ? ಎಂದು ಕೇಳಿದಾಗ, ಅಪ್ಪ - ಅಮ್ಮನು ಗದರಿ ಕೇಳುತ್ತಿದ್ದಂತೆ ತಾಂಡವ್ ಸತ್ಯ ಒಪ್ಪಿಕೊಂಡ.
ಅವಳ್ಯಾವ ಸೀಮೆ ಫ್ರೆಂಡ್ ಎಂದ ಭಾಗ್ಯಾ
ಶ್ರೇಷ್ಠಾ ನನ್ನ ಫ್ರೆಂಡ್. ಫ್ರೆಂಡ್ ಕೇಳಿದಾಗ ಸಹಾಯ ಮಾಡದೇ ಇರುವುದಕ್ಕೆ ಆಗಲ್ಲ ಎಂದ ಕೂಡಲೇ ಭಾಗ್ಯಾ ಜೋರಾಗಿ ಗದರಿದ್ದಾಳೆ. ಫ್ರೆಂಡ್ ಅಂತೆ ಫ್ರೆಂಡ್. ಅವಳ್ಯಾವ ಸೀಮೆ ಫ್ರೆಂಡ್ ರೀ. ನಿಮ್ಮ ಹೆಂಡತಿಯ ತಂಗಿ ಮದುವೆಯಲ್ಲೇ ಹಣ ಕದ್ದು, ನಮಗೆ ಸಹಾಯ ಮಾಡುವ ನೆಪ ತೋರಿಸಿದ್ದಾಳೆ. ಅವಳು ಫ್ರೆಂಡ್ ಅಂತೆ. ಏನೋ ಗತಿ ಇಲ್ಲದವರಿಗೆ ಸಹಾಯ ಮಾಡಿದರೆ ಒಪ್ಪಿಕೊಳ್ಳಬಹುದು. ನಿಮ್ಮ ಥರಾನೇ ಅವಳು ದುಡಿಯುತ್ತಾಳೆ ಅಲ್ವಾ? ಅವಳಿಗ್ಯಾಕೆ ನೀವು ಸಹಾಯ ಮಾಡಬೇಕು ಎಂದು ಕೇಳಿದ್ದಾಳೆ.

ಕೇಳೋಕೆ ನೀನ್ಯಾರು ಎಂದ ತಾಂಡವ್
ತಾಂಡವ್ ಕ್ಯಾರೆಕ್ಟರ್ ಎಲ್ಲರಿಗೂ ಗೊತ್ತಲ್ಲ. ನೆಲಕ್ಕೆ ಬಿದ್ದರು ಮೀಸೆ ಮಣ್ಣಾಗಲ್ಲ ಎಂಬ ಗುಣದವನು. ಬದಲಾಗುವ ಜಾಯಮಾನವೇ ಅಲ್ಲ. ಒಪ್ಪಿಕೊಳ್ಳುವ ಗುಣವಂತು ಬರುವುದೇ ಇಲ್ಲ. ಭಾಗ್ಯಾ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ, ಅದನ್ನೆಲ್ಲಾ ಕೇಳೋಕೆ ನೀನ್ಯಾರು. ನನ್ನ ದುಡ್ಡು ನನ್ನ ಇಷ್ಟ ಎಂದ ತಾಂಡವ್ ಗೆ ಸರಿಯಾಗಿಯೇ ಪಾಠ ಕಲಿಸಿದ್ದಾಳೆ ಭಾಗ್ಯಾ.
ಭಾಗ್ಯಾಳ ಗಟ್ಟಿತನಕ್ಕೆ ಬಂತು ಚಪ್ಪಾಳೆ
ತಾಂಡವ್ ಆಡಿದ ಒಂದೊಂದು ಮಾತಿಗೂ ಭಾಗ್ಯಾ ಕೌಂಟರ್ ಕೊಟ್ಟಿದ್ದಾಳೆ. ನಾನು ಕಷ್ಟ-ಸುಖದಲ್ಲಿ ಜೊತೆಯಾಗಿರ್ತೀನಿ ಅಂತ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡ, ಇನ್ನು ಡಿವೋರ್ಸ್ ಕೊಡದ ನಿಮ್ಮ ಹೆಂಡತಿ. ಶ್ರೇಷ್ಠಾ ಸಹವಾಸ ಬಿಡಬೇಕು ಅಂದ್ರೆ ಬಿಡಬೇಕು ಅಷ್ಟೇ ಎಂದಿದ್ದಾಳೆ. ಭಾಗ್ಯಾಳ ಗತ್ತು, ತನ್ನ ಸಂಸಾರಕ್ಕಾಗಿ ಮಾಡುತ್ತಿರುವ ಹೋರಾಟ ಎಲ್ಲವೂ ನೋಡುಗರಿಗೆ ಇಷ್ಟವಾಗಿದೆ. ಹೀಗಾಗಿಯೇ ಭಾಗ್ಯಾಳ ಮಾತಿಗೆ ವೀಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಭಾಗ್ಯಕ್ಕ ನೀನ್ ಸೂಪರ್ ಬಿಡಕ್ಕ, ಭಾಗ್ಯಕ್ಕಾಳ ಮಾತಿಗೆ ತಾಂಡವ್ ತಂಡಾ ಹೊಡೆದುಬಿಟ್ಟ ಅಂತೆಲ್ಲ ಕಮೆಂಟ್ ಹಾಕುತ್ತಿದ್ದಾರೆ. ಒಟ್ಟಾರೆ ಭಾಗ್ಯಾಳ ಈ ಧೈರ್ಯ ನಡೆಗೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ.


Click it and Unblock the Notifications











