Bhagyalakshmi: ಭಾಗ್ಯಾ ಅಷ್ಟು ಹೇಳಿದ್ರು ಶ್ರೇಷ್ಠಾ ಜೊತೆಗೆ ತಾಂಡವ್ ಶಾಪಿಂಗ್; ಸಿಕ್ಕಿಬಿದ್ರೆ ಚಟ್ನಿನೆ!
ಶ್ರೇಷ್ಠಾ ಬಯಸುತ್ತಿರುವುದೇ ಭಾಗ್ಯಾ ಲೈಫ್‌ನಲ್ಲಿ ನಡೆಯುತ್ತಿದೆ. ತಾಂಡವ್ ಯಾವ ವಿಚಾರವೂ ಮನೆಯವರಿಗೆ ತಿಳಿಯುವುದು ಬೇಡ ಅಂತ ನಿಭಾಯಿಸುತ್ತಿದ್ದರೆ, ಶ್ರೇಷ್ಠಾಮಾತ್ರ ಗುಟ್ಟು ರಟ್ಟಾಗಲಿ, ನಮ್ಮಮದುವೆ ವಿಚಾರ ಭಾಗ್ಯಾಗೆ ತಿಳಿಯಲಿ ಅಂತಾನೇ ಬಯಸುತ್ತಿದ್ದಾಳೆ. ಅದಕ್ಕೆ ಮನೆಯಲ್ಲಿ ಲಗ್ನ ಪತ್ರಿಕೆ ಭಾಗ್ಯಾಳ ಕೈಗೆ ಸಿಕ್ಕಿಬಿಡುತ್ತದೆ, ಅಮ್ಮ ನೋಡಿ ಬಿಡುತ್ತಾರೆ ಎಂದು ತಾಂಡವ್ ಟೆನ್ಶನ್ ಮಾಡಿಕೊಂಡಿದ್ದರೆ, ಶ್ರೇಷ್ಠಾ ಮಾತ್ರ ಮನಸ್ಸಲ್ಲಿಯೇ ಹಾರೈಸುತ್ತಿದ್ದಳು.
ಭಾಗ್ಯಾ ಮೊದಲಿನಂತೆಯೆ ಇದ್ದಿದ್ದರೆ ತಾಂಡವ್ ಗಿರುಗಿಟ್ಟಲೇ ಆಡಿಸಿ ಬಿಡುತ್ತಿದ್ದ. ಆದರೆ ಭಾಗ್ಯಾ ಈಗ ಸ್ಟ್ರಾಂಗ್ ಗರ್ಲ್. ಸಂಸಾರವನ್ನು ತಾಂಡವ್ ನಡೆಸದೇ ಹೋದರೂ ಭಾಗ್ಯಾಳಿಗೆ ಈಗ ಆ ಶಕ್ತಿ ಇದೆ. ಮಕ್ಕಳಿಗೆ ಫೀಸ್ ಕಟ್ತಾಳೆ, ಅತ್ತೆ ಮಾವನ ಆರೋಗ್ಯ ನೋಡಿಕೊಳ್ತಾಳೆ. ಎಲ್ಲವೂ ಹೊಟೇಲ್ ಕೆಲಸದಿಂದ ಸಾಧ್ಯವಾಗಿದೆ. ಈಗ ಉಳಿದಿರುವುದು ಗಂಡನನ್ನು ಸರಿ ದಾರಿಗೆ ತರುವ ಕೆಲಸ.

ಶಾಪಿಂಗ್ ಬಂದ ಶ್ರೇಷ್ಠಾ-ತಾಂಡವ್
ತಾಂಡವ್ ಹಾಗೂ ಶ್ರೇಷ್ಠಾ ಮದುವೆಯ ದಿನಾಂಕ ಹತ್ತಿರ ಬರುತ್ತಿದೆ. ಹೀಗಾಗಿಯೇ ಎಲ್ಲಾ ತಯಾರಿಗಳು ನಡೆಯುತ್ತಿವೆ. ಈಗಾಗಲೇ ತಾಳಿ ತೆಗೆದುಕೊಂಡು ಆಗಿದೆ. ಫೋಟೋಶೂಟ್ ಮಾಡಿಸಲು ಹೋಗಿ ಗ್ರಹಚಾರ ಬಿಡಿಸಿಕೊಂಡಿದ್ದಾಳೆ. ಮದುವೆ ಹಾಲ್ ಕೂಡ ಬುಕ್ ಮಾಡಿ ಆಗಿದೆ. ಈಗ ಮದುಮಗಳಿಗೆ ಸೀರೆ ಕೊಡಿಸಲು ಬಂದಿದ್ದಾನೆ ತಾಂಡವ್.
ವರದಿ ಒಪ್ಪಿಸಿದ ತಾಂಡವ್
ಶ್ರೇಷ್ಠಾ ವಿಚಾರಕ್ಕೆ ಭಾಗ್ಯಾ ಕೊಟ್ಟ ಎಚ್ಚರಿಕೆಯನ್ನು ಕೇಳಿದರೇನೆ ತಾಂಡವ್ ಎದೆ ನಡುಗಿತ್ತು. ಭಾಗ್ಯಾ ಒಂದೊಂದೆ ಎಚ್ಚರಿಕೆಯ ಮಾತುಗಳನ್ನ ಹಾಡುತ್ತಾ ಇದ್ದರೆ, ತಾಂಡವ್ ತಂಡಾ ಹೊಡೆದಂತೆ ನಿಂತು ಬಿಟ್ಟಿದ್ದ. ಈಗ ಅದೆಲ್ಲವನ್ನು ತಂದು ಶ್ರೇಷ್ಠಾಳ ಬಳಿ ವರದಿ ಒಪ್ಪಿಸುತ್ತಿದ್ದಾನೆ. ಭಾಗ್ಯಾ, ನಿನ್ನ ಜೊತೆಗೆ ಸೇರಬೇಡ ಅಂದ್ಲು. ಇವತ್ತೆ ಅದೆಲ್ಲಾ ನಿಲ್ಲಿಸಿ ಬೊಡಬೇಕು ಅಂತ ಅವಾಜ್ ಹಾಕಿದ್ದಾಳೆ ಇನ್ನು ಮುಂದೆ ಅವಳ ಸಹವಾಸ ಮಾಡಿದರೆ ಚೆನ್ನಾಗಿರಲ್ಲ ಅಂತ ವಾರ್ನ್ ಮಾಡಿದ್ದಾಳೆ. ಎಲ್ಲರನ್ನು ರೂಲ್ ಮಾಡೋ ರೇಂಜಿಗೆ ಬಂದಿದ್ದಾಳೆ ಆ ಭಾಗ್ಯಾ ಅಂತ ಶ್ರೇಷ್ಠಾ ಬಳಿ ದೂರು ಹೇಳಿದ್ದಾನೆ.

ಭಾಗ್ಯಾ ನೋಡಿ ಖುಷಿಯಾದ ಶ್ರೇಷ್ಠಾ
ತಾಂಡವ್ ತನ್ನ ಪ್ರೇಯಸಿಗಾಗಿ ಸೀರೆ ತೆಗೆಯಲು ಬಂದ ಅಂಗಡಿಗೇನೆ ಭಾಗ್ಯಾ ಹಾಗೂ ಪೂಜಾ ಕೂಡ ಬಂದಿದ್ದಾರೆ. ಈಗ ಭಗ್ಯಾ ಚೆನ್ನಾಗಿ ದುಡಿಯುತ್ತಿರುವ ಕಾರಣ ತನಗಿಷ್ಟ ಬಂದಿದ್ದನ್ನ, ಮಕ್ಕಳಿಗೆ ಬೇಕಾದ್ದನ್ನೆಲ್ಲಾ ತೆಗೆದುಕೊಳ್ಳುತ್ತಾಳೆ. ಮೊದಲಾದರೇ ಎಲ್ಲದನ್ನು ಗಂಡನ ಬಳಿ ಕೇಳಬೇಕಿತ್ತು. ಅದಕ್ಕೆ ಹೊರಗಡೆ ಬರ್ತಾ ಇದ್ದದ್ದೇ ಕಡಿಮೆ.
ಕಥೆ ಊಹಿಸಿದ ವೀಕ್ಷಕರು
ಭಾಗ್ಯಾ ಮತ್ತು ಪೂಜಾ ಅದೇ ಅಂಗಡಿಗೆ ಬಂದಿದ್ದನ್ನು ಶ್ರೇಷ್ಠಾ ಗಮನಿಸಿದ್ದಾಳೆ. ಆದರೆ ಪ್ರೇಕ್ಷಕರಿಗೆ ಇದು ಮೊದಲೇ ಅರಿವಿದೆ. ತಾಂಡವ್ ಹಾಗೂ ಶ್ರೇಷ್ಠಾ, ಭಾಗ್ಯಾಳ ಕೈಗೆ ಸಿಕ್ಕಿ ಬೀಳುವುದಕ್ಕೆ ಸಾಧ್ಯವೇ ಇಲ್ಲ. ಹೇಗಾದರೂ ಮಾಡಿ ಬಚಾವ್ ಆಗುತ್ತಾರೆ. ತಾಂಡವ್‌ಗೆ ಎದುರು ನಿಂತು ಮಾತನಾಡುವಾಗ ಇರುವ ಧೈರ್ಯ, ಶ್ರೇಷ್ಠಾ ಜೊತೆಗೆ ಸಿಕ್ಕಿ ಬಿದ್ದಾಗ ಇರುವುದಿಲ್ಲ. ಹೀಗಾಗಿ ಅವರು ಈಗಲೇ ಸಿಕ್ಕಿಬೀಳಲ್ಲ ಅನ್ನೋದು ಒಂದಷ್ಟು ವೀಕ್ಷಕರ ಅಭಿಪ್ರಾಯವಾದರೆ, ಇನ್ನೊಂದಷ್ಟು ಪ್ರೇಕ್ಷಕರು ತಾಂಡವ್ ಏನಾದರೂ ಈಗ ಸಿಕ್ಕಿಬಿದ್ದರೆ ಸರಿಗೆ ಬೀಳುತ್ತೆ ಒದೆ ಎನ್ನುತ್ತಿದ್ದಾರೆ.


Click it and Unblock the Notifications











