Bhagyalakshmi: ಏನ್ ಗುರು ಇದು.. ನಿರೀಕ್ಷೆಗೂ ಮೀರಿ ಟ್ವಿಸ್ಟ್; ಭಾಗ್ಯಾ ಹತ್ರ ಲಾಕ್ ಆದ್ರು ತಾಂಡವ್-ಶ್ರೇಷ್ಠಾ!

By ಎಸ್ ಸುಮಂತ್

ಹಿಂದಿನ ಪ್ರೋಮೋ, ಎಪಿಸೋಡ್ ನೋಡಿದಾಗ ಶ್ರೇಷ್ಠಾ - ತಾಂಡವ್ ಭಾಗ್ಯಾಳ ಬಳಿ ತಗಲಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಚಾವ್ ಆಗಿ ಬಿಡುತ್ತಾರೆ ಎಂದೇ ಊಹೆ ಮಾಡಲಾಗಿತ್ತು. ಕೆಲವರು ಈ ಸೀನ್ ಅನ್ನು ಎಳೀತಾರೆ ಅಂತಾನೇ ನಿರೀಕ್ಷೆ ಮಾಡಿದ್ದರು. ಆದರೆ ಆ ಕಲ್ಪನೆ ಹುಸಿಯಾಗಿದೆ, ಒಳ್ಳೆ ಟ್ವಿಸ್ಟ್ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಸಿಕ್ಕಿದೆ.

ಶ್ರೇಷ್ಠಾಗೆ ಕನಸು ಒಂದೆರಡಲ್ಲ. ಸದ್ಯದ ಬೆಳವಣಿಗೆಯಲ್ಲಿ ಭಯದ ವಾತಾವರಣದಲ್ಲಿ ತಾಂಡವ್ ಸೀರೆ ಶಾಪಿಂಗ್ ಗೆ ಜೊತೆಯಲ್ಲಿ ಬಂದಿರುವುದೇ ಹೆಚ್ಚು. ಅಂಥದ್ರಲ್ಲಿ ಶ್ರೇಷ್ಠಾ, ಡಿನ್ನರ್ ಹೋಗೋಣ ಅಂತ ಬೇರೆ ಕರಿತಿದ್ದಾಳೆ. ಮೊದಲೇ ಭಾಗ್ಯಾ ಹಾಕಿದ ಅವಾಜ್‌ಗೆ ನಡುಗಿ ಹೋಗಿರುವ ತಾಂಡವ್, ಮದುವೆ ನಿಮ್ಮ ಊರಲ್ಲಷ್ಟೇ ಆಗ್ಬೇಕು. ತಲೆ ತಿನ್ಬೇಡ, ಬೇಗ ಬೇಗೆ ಸೀರೆ ತಗೊ ಎಂದಿದ್ದಾನೆ.

Colors kannada serial Bhagyalakshmi Written Update on July 18th episode

ಬಟ್ಟೆ ತೆಗೆದುಕೊಳ್ಳಲು ಬಂದ ಭಾಗ್ಯಾ

ಈಗಾಗಲೇ ತಾಂಡವ್ ತನ್ನ ಪ್ರೇಯಸಿ ಶ್ರೇಷ್ಠಾಳನ್ನು ಕರೆದುಕೊಂಡು ಬಂದು ಸೀರೆ ಕೊಡಿಸುವುದಕ್ಕೆ ರೆಡಿಯಾಗಿದ್ದಾನೆ. ಆದರೂ ಅವನಿಗೆ ಭಾಗ್ಯಾಳದ್ದೆ ಭಯ ಕಾಡುತ್ತಿದೆ. ಶ್ರೇಷ್ಠಾ ಜೊತೆಗೆ ಇದ್ದರು ಆ ಕಡೆ ಈ ಕಡೆ ನೋಡುತ್ತಲೆ ಇದ್ದಾನೆ. ಇನ್ನು ಭಾಗ್ಯಾ ತನ್ನ ತಂಗಿ ಪೂಜಾ ಜೊತೆಗೆ ಈಗ ಅದೇ ಅಂಗಡಿಗೆ ಬಂದಿದ್ದಾಳೆ.

ಭಾಗ್ಯಾಳನ್ನು ನೋಡಿದ ಶ್ರೇಷ್ಠಾ-ತಾಂಡವ್

ತಾಂಡವ್ ಹಾಗೂ ಶ್ರೇಷ್ಠಾ ಬಟ್ಟೆ ತೆಗೆದುಕೊಳ್ಳುವುದಕ್ಕಿಂತ ನಿಂತು ಮಾತಾಡಿದ್ದೇ ಹೆಚ್ಚು. ಹೀಗೆ ಮಾತನಾಡುವಾಗಲೇ ಭಾಗ್ಯಾ ಮತ್ತು ಪೂಜಾ ಅಂಗಡಿಗೆ ಎಂಟ್ರಿಯಾಗಿದ್ದಾರೆ. ಅವರಿಬ್ಬರನ್ನು ನೋಡಿ ಇವರಿಬ್ಬರು ಗಾಬರಿ ಆಗಿದ್ದಾರೆ. ಗೊತ್ತಲ್ಲ ತಾಂಡವ್ ಮಾತು, ಈ ದರಿದ್ರದವಳು ಇಲ್ಲಿಗೂ ಬಂದಳಾ ಎಂದು, ಓಡಿ ಹೋಗಿ ಬಚ್ಚಿಟ್ಟುಕೊಂಡಿದ್ದಾನೆ. ತಾಂಡವ್ ಜೊತೆಗೆ ಶ್ರೇಷ್ಠಾ ಕೂಡ ಬಚ್ಚಿಟ್ಟುಕೊಂಡಿದ್ದಾಳೆ. ಭಾಗ್ಯಾ ಎದುರು ಬಂದರೆ, ಶ್ರೇಷ್ಠಾ ಜೊತೆಗಿದ್ದರೆ ಹೇಯ್ ಎಮ್ಮೆ ಅಂತ ಕರೆಯೋ ಧೈರ್ಯ ಇಲ್ಲ.

ಶಾಪಿಂಗ್ ನಿಲ್ಲಿಸಿದ ಶ್ರೇಷ್ಠಾ

ಭಾಗ್ಯಾಳನ್ನು ನೋಡಿದ ತಕ್ಷಣ ಇಬ್ಬರಿಗೂ ಏನು ಮಾಡಬೇಕು ಎಂದೇ ಅರ್ಥವಾಗಿಲ್ಲ. ಮೊದಲು ಬಚ್ಚಿಟ್ಟುಕೊಂಡವರಿಗೆ ನೆನಪಾಗಿದ್ದು ಭಾಗ್ಯಾಳ ಕಪಾಳಮೋಕ್ಷದ ಕೈ ರುಚಿ. ಮೊದಲು ಈ‌ ಶಾಪಿಂಗ್ ಮೊಟಕುಗೊಳಿಸಿ ಹೊರಡೋದು ಅಂತ ನಿರ್ಧಾರ ಮಾಡಿದರು. ಸಧ್ಯಕ್ಕೆ ತೆಗೆದುಕೊಂಡಿರುವುದೇ ಸಾಕು ಎಂದು ಭಾಗ್ಯಾ ಒಳಗೆ ಹೋಗುತ್ತಾ ಇದ್ದದ್ದನ್ನೇ ಕಾದು, ಬಿಲ್‌‌ ಮಾಡಿಸಲು ಓಡಿ ಹೋದ. ಮತ್ತೊಂದು ದಿನ ಶಾಪಿಂಗ್ ಮಾಡಿದರೆ ಆಯಿತು ಎಂದು.

Colors kannada serial Bhagyalakshmi Written Update on July 18th episode

ಟ್ವಿಸ್ಟ್‌ಗೆ ಜೈಕಾರ ಹಾಕಿದ ವೀಕ್ಷಕರು

ಬಿಲ್ ಮಾಡಿಸಿದಾಗ ತಾಂಡವ್‌ಗೆ ಕ್ಯಾಶ್ ಅಥವಾ ಕಾರ್ಡ್ ಎಂದು ಬಿಲ್ ಮಾಡುವವ ಕೇಳಿದಾಗ, ಹಿಂದಿನಿಂದ ಧ್ವನಿಯೊಂದು ಬಂದಿದೆ. ಯಾವುದಾದರೂ ಸರಿ ಎಂಬ ಧ್ವನಿ. ಅದು ಭಾಗ್ಯಾಳದ್ದು. ಹಿಂದೆ ತಿರುಗಿ‌ ನೋಡಿದ ತಾಂಡವ್‌ಗೆ ಭಾಗ್ಯಾಳ ದರ್ಶನ. ದಂಗು ಬಡಿದು ಹೋದ. ವೀಕ್ಷಕರು ಈ ದೃಶ್ಯ ನಿರೀಕ್ಷೆ ಮಾಡಿರಲಿಲ್ಲ. ಬಹುಶಃ ತಾಂಡವ್ ಬಚಾವ್ ಆಗುತ್ತಾನೆ ಎಂದುಕೊಂಡಿದ್ದರು. ಆದರೆ ನಿರ್ದೇಶಕರು ಕೊಟ್ಟ ಟ್ವಿಸ್ಟ್‌ಗೆ ನೋಡುಗರು ಶಬ್ಬಾಶ್ ಎಂದಿದ್ದಾರೆ. ಇವತ್ತಿನ ಎಪಿಸೋಡಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

More from Filmibeat

English summary
colors kannada serial Bhagyalakshmi Written Update on July 18th episode. Here is the details about Shrestha and Tandav trapped in a saree shop
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X