Bhagyalakshmi: ಕುಸುಮಾ ಅಷ್ಟು ಕೆಟ್ಟವಳಲ್ಲ ಅನ್ಸುತ್ತೆ; ಸೊಸೆ ಜೊತೆ ಅತ್ತೆಗೂ ಶ್ರೀನಾಥ್ ಸನ್ಮಾನ
ಭಾಗ್ಯಾ ಮನೆಯಲ್ಲಿ ಮುಚ್ಚಿಟ್ಟು ಕೆಲಸಕ್ಕೆ ಬರುತ್ತಿದ್ದಾಳೆ. ಮನೆ ನಡೆಯಬೇಕು, ಮಕ್ಕಳು ಸಂತೋಷವಾಗಿರಬೇಕೆಂಬುದಷ್ಟೇ ಅವಳ ಉದ್ದೇಶ. ಅತ್ತೆ ಮಾವನಿಗೆ ಸತ್ಯ ಹೇಳಲು ಹೋದಾಗಲು ಅಡತಡೆಗಳಾಗಿದ್ದಾವೆ. ಹೀಗಾಗಿ ಸುಳ್ಳನೇ ಮುಂದುವರೆಸಿದ್ದಾಳೆ ಭಾಗ್ಯಾ. ಆದರೆ ಈಗ ಮುಚ್ಚಿಟ್ಟ ಸತ್ಯವೆಲ್ಲಾ ಟಿವಿ ಮೂಲಕ ಬಯಲಾಗಿದೆ.
ಶ್ರೇಷ್ಠಾಳ ಬಳಿ ಸಾಲ ತೆಗೆದುಕೊಂಡಿದ್ದೀನಿ ಎಂದಾಗಲೂ ಕುಸುಮಾ ಸೊಸೆಯನ್ನು ಕ್ಷಮಿಸಿದಳು. ಮನೆ ಇಎಂಐ ಕಟ್ಟುವುದಕ್ಕೆ ಸಾಲ ತಂದಿದ್ದೀನಿ ಎಂದಾಗಲೂ ಕ್ಷಮಿಸಿದಳು. ತಾಂಡವ್ ಭಾಗ್ಯಾಳ ವಿರುದ್ಧವಾಗಿ ಮಾತನಾಡಿದಾಗ ಸೊಸೆಯ ಪರವಾಗಿ ನಿಂತಳು. ಆದರೆ ಟಿವಿಯಲ್ಲಿ ಸೊಸೆಯ ಸಾಧನೆ ಕಂಡಯ ಮೌನಿಯಾದಳು. ಇದು ತಾಂಡವ್ ಗೆದ್ದಷ್ಟೇ ಖುಷಿ ತಂದುಕೊಟ್ಟಿದೆ. ಕುಸುಮಾ, ಪ್ರೇಕ್ಷಕರು ಊಹೆ ಮಾಡಿದಷ್ಟು ಕೆಟ್ಟವಳಾಗಿರುವುದಿಲ್ಲ ಅನ್ಸುತ್ತೆ.

ಭಾಗ್ಯಾಳನ್ನು ಸನ್ಮಾನಿಸಲಿರುವ ಶ್ರೀನಾಥ್
ಪ್ರಣಯ ರಾಜ ಶ್ರೀನಾಥ್ ಅವರನ್ನು ನೋಡಿ ಎಷ್ಟೋ ತಿಂಗಳುಗಳು ಕಳೆದು ಹೋಗಿತ್ತು. ಇದೀಗ ಮತ್ತೆ ಅವರ ನಟನೆಯನ್ನು ನೋಡುವ ಸೌಭಾಗ್ಯ ಸಿಕ್ಕಿದೆ. ಪ್ರಣಯ ರಾಜ ಶ್ರೀನಾಥ್ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಗೆ ವಿಶೇಷ ಅತಿಥಿಯಾಗಿ ಬಂದಿದ್ದಾರೆ. ಶ್ರೀನಾಥ್ ಅವರ ಕಡೆಯಿಂದಾನೇ ಅತ್ತೆ ಸೊಸೆಯ ಸಂಬಂಧ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆಯೂ ಇದೆ. ಯಾಕಂದ್ರೆ ಭಾಗ್ಯಾಳ ಸಾಧನೆ ಮೆಚ್ಚಿ ಸನ್ಮಾನಿಸುವುದಕ್ಕೆ ಶ್ರೀನಾಥ್ ಬಂದಿದ್ದಾರೆ.
ಭಾಗ್ಯಾಗೆ ಧೈರ್ಯ ತುಂಬಿದ ಶ್ರೀನಾಥ್
ಭಾಗ್ಯಾಳ ಸಾಧನೆ ಈಗ ಫೈವ್ ಸ್ಟಾರ್ ಹೊಟೇಲ್ ಹೆಮ್ಮೆ ಎನಿಸುತ್ತಿದೆ. ಟಿವಿಯಲ್ಲೆಲ್ಲಾ ಭಾಗ್ಯಾಳ ಫೋಟೋ, ಅವಳ ಛಲ ಎಲ್ಲವೂ ಪ್ರಸಾರವಾಗಿರುವುದರಿಂದ ಫೈವ್ ಸ್ಟಾರ್ ಹೊಟೇಲ್ ಗೇನೆ ಪ್ರಚಾರ ಸಿಕ್ಕಂತೆ ಆಗಿದೆ. ಹೀಗಾಗಿ ಹೊಟೇಲ್‌ನವರಿಂದಾನೂ ಭಾಗ್ಯಾಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಆದರೆ ಭಾಗ್ಯಾಗೆ ಇದು ಮುಜುಗರ ಉಂಟು ಮಾಡಿದೆ. ವೇದಿಕೆ ಮುಂಭಾಗಕ್ಕೆ ಬಂದ ಭಾಗ್ಯಾ ಶ್ರೀನಾಥ್ ಅವರನ್ನು ನೋಡಿ, ಕೈ ಮುಗಿಯುತ್ತಲೇ ಇದ್ದಳು. ಮಾತನಾಡುವುದಕ್ಕೂ ಅಂಜುತ್ತಿದ್ದಳು. ಆಗ ಶ್ರೀನಾಥ್ ಅವರೇ ಧೈರ್ಯ ಹೇಳಿದ್ದಾರೆ. ಬಳಿಕ ಎಲ್ಲರಿಂದ ಚಪ್ಪಾಳೆ ಹೊಡೆಸಿದ್ದಾರೆ.

ಹೊಟೇಲ್ ನೋಡಿ ಕುಸುಮಾಗೆ ಆಶ್ಚರ್ಯ
ಕುಸುಮಾಗೆ ಸೊಸೆಯ ವಿಚಾರ ತಿಳಿದು ಏನು ಹೇಳಬೇಕು ಎಂಬುದು ಅರ್ಥವಾಗಲಿಲ್ಲ. ಮೌನವಾಗಿ ರೂಮಿಗೆ ಹೋಗಿ ಬಿಟ್ಟಳು. ಈಗ ಸೊಸೆಯನ್ನು ಹುಡುಕಿಕೊಂಡು ಫೈವ್ ಸ್ಟಾರ್ ಹೊಟೇಲ್ ಗೆ ಬಂದಿದ್ದಾಳೆ. ಇಷ್ಟು ದೊಡ್ಡ ಹೋಟೆಲ್‌ನಲ್ಲಿ ಭಾಗ್ಯಾ ಕುಕ್ ಆಗಿದ್ದಾಳಾ..? ಇಲ್ಲಿ ಅವಳಿಗೆ ಕೆಲಸ ಹೇಗೆ ಸಿಕ್ಕಿತು. ಭಜನೆಗೆ ಹೋಗ್ತೀನಿ ಅಂತ ನನ್ನತ್ರ ಸುಳ್ಳು ಹೇಳಿ ಇಲ್ಲಿ ಕೆಲಸಕ್ಕೆ ಬರ್ತಾ ಇದ್ಲಾ ಎಂದು ತಾನೂ ತಿಂದ ಕೈ ರುಚಿ ಭಾಗ್ಯಾದೆ ಅಲ್ವಾ ಅಂತ ನೆನೆಸಿಕೊಂಡಿದ್ದಾಳೆ.
ಅತ್ತೆಗೂ ಸಿಗಬಹುದಾ ಸನ್ಮಾನ?
ಕುಸುಮಾ ತುಂಬಾ ಕೆಟ್ಟವಳೇನು ಅಲ್ಲ. ಕುಸುಮಾಳನ್ನು ಹೊಗಳಿದರೆ ಸಾಕು ಮನಸ್ತಾಪವನ್ನೆಲ್ಲಾ ಮರೆತು ಬಿಡುತ್ತಾಳೆ. ಅದರಲ್ಲೂ ಸೊಸೆಯ ವಿಚಾರಕ್ಕೆ ಯಾರಾದರೂ ಹೊಗಳೊದರೆ ಖಂಡಿತ ಕರಗಿ ಹೋಗುತ್ತಾಳೆ. ಈಗ ಕಾರ್ಯಕ್ರಮ ಬೇರೆ ದೊಡ್ಡ ಮಟ್ಟಕ್ಕೆ ಆಗುತ್ತಿದೆ. ಭಾಗ್ಯಾಳ ಭಾಷಣವೂ ನಡೆಯಲಿದೆ. ಈ ಭಾಷಣದಲ್ಲಿ ಭಾಗ್ಯಾ ಖಂಡಿತ ಅತ್ತೆಯ ಗುಣಗಾನ ಮಾಡುತ್ತಾಳೆ. ಈ ಅಡುಗೆ ಕಲೆಯನ್ನು ಕಲಿಸಿಕೊಟ್ಟಿದ್ದೆ ಕುಸುಮಾ ಆಗಿರುವ ಕಾರಣ ಅತ್ರೆಯನ್ನು ಭಾಗ್ಯಾ ಹೊಗಳದೆ ಇರುವುದಿಲ್ಲ. ಸೊಸೆಯ ಮಾತುಗಳಿಗೇನೆ ಕುಸುಮಾ ಕೋಪ ತಣ್ಣಗಾಗುತ್ತದೆ.


Click it and Unblock the Notifications











