Bhagyalakshmi: ಸೊಸೆ ಮುದ್ದು ಯಾಕ್ ಉರ್ಕೊಳ್ತಾ ಇದ್ದೀಯಾ? ತಾಳಿ ಕಟ್ಟೋಕೆ ನಮ್ಮ ಭದ್ರಕಾಳಿ ಬಿಡಲ್ಲ; ಭಾಗ್ಯಾಗೆ ಫುಲ್ ಸಪೋರ್ಟ್
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಈ ಮೊದಲು ಭಾಗ್ಯಾ ಕ್ಯಾರೆಕ್ಟರ್ ತುಂಬಾ ಅಂದ್ರೆ ತುಂಬಾ ಸೈಲೆಂಟ್ ಆಗಿತ್ತು. ಈಗ ಸಿಕ್ಕಾಪಟ್ಟೆ ವೈಲೆಂಟ್. ಭಾಗ್ಯಾ ಈಗಲೂ ಹಾಗೇ ಇರೋದು. ಯಾರಿಗೂ ನೋವು ಮಾಡಲ್ಲ, ಅತ್ತೆ ಮಾವನಿಗೆ ಗೌರವ ಕೊಡುತ್ತಾಳೆ. ಹಿರಿಯರನ್ನು ಹಾಗೇ ಮಾತನಾಡಿಸುತ್ತಾಳೆ. ಆದರೆ ತಾಂಡವ್ ಇದನ್ನೇ ದಡ್ಡತನ ಎಂದು ನಂಬಿ, ತಪ್ಪು ಮಾಡುತ್ತಿದ್ದಾನೆ. ಅದಕ್ಕೆ ಈಗ ಭಾಗ್ಯಾಳ ಕೈಗೆ ಸಿಲುಕಿ ಚಟ್ನಿ ಆಗ್ತಾ ಇದಾನೆ.
ಭಾಗ್ಯಾಳ ಈಗಿನ ಬೆಳವಣಿಗೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಈಗಲೂ ಗಂಡನ ದರ್ಒಕ್ಕೆ ಒಳಗಾಗುವ ಅದೆಷ್ಟೋ ಹೆಣ್ಣು ಮಕ್ಕಳು ಇದ್ದಾರೆ. ಆದರೆ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಹೆಣ್ಣು ಮಕ್ಕಳನ್ನು ಆ ರೀತಿಯ ಕ್ಯಾರೆಕ್ಟರ್ ಇನ್ನಷ್ಟು ವೀಕ್ ಮಾಡುತ್ತದೆ. ಈಗ ಭಾಗ್ಯಾಳಿರುವ ರೀತಿ ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ಪೂರ್ತಿ ತಂದಿದೆ.

ತಗಲಾಕಿಕೊಂಡ ಪ್ರೇಮಿಗಳು
ಧಾರೆ ಸೀರೆಯನ್ನ ಗಂಡನ ಮನೆಯವರೇ ಕೊಡಿಸಬೇಕಾದ ಸಂಪ್ರದಾಯ ಇರುವುದರಿಂದ ತಾಂಡವ್ ಸೀರೆ ಕೊಡಿಸಲು ಬಂದಿದ್ದಾನೆ. ಆದರೆ ಅದೇ ಅಂಗಡಿಯಲ್ಲಿ ಭಾಗ್ಯಾಳನ್ನು ಕಂಡು ಗಾಬರಿಯಾಗಿದ್ದಾರೆ. ಅಲ್ಲಿಯೂ ಭಾಗ್ಯಾಳ ಬಾಯಿ ಮುಚ್ಚಿಸುವುದಕ್ಕೆ ತಾಂಡವ್ ನೋಡಿದ್ದಾನೆ. ಗಂಡನಿಗೆ ಎಚ್ಚರಿಕೆ ಕೊಟ್ಟು ಶ್ರೇಷ್ಠಾಳಿಗೂ ಕೊನೆಯ ಎಚ್ಚರಿಕೆ ಕೊಟ್ಟಿದ್ದಾಳೆ.
ತಾಂಡವ್ - ಶ್ರೇಷ್ಠಾ ಇಬ್ಬರು ಶಾಕ್
ಎಲ್ಲಾ ಮುಗಿದ ಮೇಲೆ ತಾಂಡವ್ ಸರಿ ನೀನು ಇಲ್ಲಿಂದ ಹೊರಡು ನಾನು ಬರ್ತೀನಿ ಅಂತ ಹೇಳಿದ್ದಾನೆ. ಆದರೆ ಭಾಗ್ಯಾ ಅದ್ಯಾವುದಕ್ಕೂ ಅವಕಾಶ ಕೊಡದೇ ತಾಂಡವ್ ಕೈ ಹಿಡಿದು ಎಳೆದುಕೊಂಡು ಹೋಗಿದ್ದಾಳೆ. ಅಂಗಡಿಯಲ್ಲಿದ್ದವರೆಲ್ಲಾ ಅದನ್ನು ನೋಡಿ ಶಾಕ್ ಆಗಿದ್ದಾರೆ. ತಾಂಡವ್ ಅಂತು ಏನು ಮಾತನಾಡುವುದಕ್ಕೂ ಆಗದೆ ಭಾಗ್ಯಾಳ ಜೊತೆಗೆ ಹೋಗಿ ಕಾರಿನಲ್ಲಿ ಕೂತಿದ್ದಾನೆ. ಶ್ರೇಷ್ಠಾ ಇದನ್ನೆಲ್ಲಾ ಕಂಡು ಕೆಂಡಕಾರಿದ್ದಾಳೆ.

ಸೀರೆಗೆ ಹಣ ಕೊಟ್ಟ ಶ್ರೇಷ್ಠಾ
ಭಾಗ್ಯಾಳ ನಡವಳಿಕೆಗೆ ಶ್ರೇಷ್ಠಾ ಕೆಂಡಾಮಂಡಲವಾಗಿದ್ದಾಳೆ. ಸೀರೆಯನ್ನ ಬಿಲ್ ಮಾಡುವುದಕ್ಕೆ ಅದಾಗಲೇ ಕೊಟ್ಟಿದ್ದ ಕಾರಣ, ಬಾಯಿ ಮುಚ್ಚಿಕೊಂಡು ಬಿಲ್ ಕೊಟ್ಟು ಬಂದಿದ್ದಾಳೆ. ಆದರೆ ತಾಳಿ ಒಂದು ಕಟ್ಟಲಿ ಆಮೇಲೆ ಇದೆ ಭಾಗ್ಯಾಳಿಗೆ ಅಂತ ಮನಸ್ಸಲ್ಲಿಯೇ ಶಪಿಸುತ್ತಿದ್ದಾಳೆ. ತಾಳಿ ಕಟ್ಟಿಸಿಕೊಂಡ ಮೇಲೆ ಭಾಗ್ಯಾಳಿಗೆ ಅವಳ ಜಾಗ ತೋರಿಸುತ್ತೀನಿ ಅಂತ ಬೇರೆ ಹೇಳುತ್ತಿದ್ದಾಳೆ. ಮೊದಲೇ ಭಾಗ್ಯಾಳಿಂದ ಕಳ್ಳಿ ಪಟ್ಟ ತೆಗೆದುಕೊಂಡಿರುವುದು ಅಲ್ಲದೆ, ಸರಿಯಾಗಿ ಒದೆ ತಿಂದಿದ್ದಾಳೆ. ಈಗ ಭಾಗ್ಯಾಳಿಗೆ ಸವಾಲು ಹಾಕುವ ಮಟ್ಟಿಗೆ ಹೋಗುತ್ತಿದ್ದಾಳೆ. ಪಾಪ ಶ್ರೇಷ್ಠಾಗೆ ಕುಸುಮಾ ಒಬ್ಬಳಿದ್ದಾಳೆ ಎಂಬುದು ಮರೆತೋಗಿದೆ.
ಸೊಸೆ ಮುದ್ದುಗೆ ಪ್ರೇಕ್ಷಕರಿಂದ ಸಮಾಧಾನ
ಶ್ರೇಷ್ಠಾ ಅದ್ಯಾವಾಗ ತಾಳಿ ಒಂದನ್ನ ಕಟ್ಟಲಿ ಎಂದಳೋ ಆಗಲೇ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಸೊಸೆ ಮುದ್ದುಗೆ ಬುದ್ದಿ ಮಾತು ಹೇಳುತ್ತಿದ್ದಾರೆ. ಭಾಗ್ಯಾ ಮಾತಿಗೆ ಕೋಪ ಮಾಡಿಕೊಂಡಿದ್ದಕ್ಕೆ 'ಸೊಸೆ ಮುದ್ದು ಯಾಕೆ ಅಷ್ಟೊಂದು ಉರ್ಕೊಳ್ತಾ ಇದ್ದೀಯಾ. ತಾಳಿ ಕಟ್ಟುವುದಕ್ಕೆ ನಮ್ಮ ಭದ್ರಕಾಳಿ ಬಿಡಲ್ಲ. ನಿನ್ನ ಕುತ್ತಿಗೆಗೆ ತಾಳಿ ಬೀಳಲ್ಲ ನೇಣು ಹಗ್ಗ ಬೀಳುತ್ತೆ. ಮೊದಲು ತಾಂಡವ್‌ಗೆ ಡಿವೋರ್ಸ್ ತೆಗೆದುಕೊಂಡು ಮದುವೆಯಾಗುವುದಕ್ಕೆ ಹೇಳು, ಇಲ್ಲಂದ್ರೆ ಇಬ್ಬರು ಜೈಲಿಗೆ ಹೋಗ್ತೀರಾ ಅಷ್ಟೇ' ಅಂತ ಸೊಸೆ ಮುದ್ದುಗೆ ಸಲಹೆಯನ್ನು ಕೊಡ್ತಾ ಇದಾರೆ.


Click it and Unblock the Notifications











