Bhagyalakshmi: ಧಾರೆ ಸೀರೆ ಕೊಡಿಸೋಕೆ ಹೋಗಿ, ಲಗೇಜ್ ಹೊರುವಂತಾಯ್ತು ತಾಂಡವ್ ಸ್ಥಿತಿ!
ಮನೆಯಲ್ಲಿ ಸಾಕಷ್ಟು ಜಗಳಗಳು ಆಗಿವೆ, ಎಚ್ಚರಿಕೆಯನ್ನು ಕೊಡಲಾಗಿದೆ. ಶ್ರೇಷ್ಠಾ ಜೊತೆಗೆ ಯಾವತ್ತಿಗೂ ಹೋಗಬಾರದೆಂದು ಎಚ್ಚರಿಕೆಯನ್ನು ನೀಡಲಾಗಿದೆ. ಯಾವಾಗ ಶ್ರೇಷ್ಠಾ ತನ್ನ ದುಡ್ಡನ್ನು ಕದ್ದಿದ್ದಾಳೆ ಎಂಬುದು ಗೊತ್ತಾಯ್ತೋ ಅಂದಿನಿಂದ ಭಾಗ್ಯಾ ಕೆಂಡಾಮಂಡಲಳಾಗಿದ್ದಾಳೆ. ಶ್ರೇಷ್ಠಾ ತನ್ನ ಮನೆಗೆ ಬರುವುದಿರಲಿ, ತಾಂಡವ್ ಕೂಡ ಅವಳ ಸಹವಾಸ ಮಾಡಬಾರದು ಎಂದೇ ಹೇಳಿದ್ದಾಳೆ.
ಫೋಟೋಶೂಟ್ ಮಾಡಿಸುವ ಜಾಗದಲ್ಲಿ ತಾನೂ ಇದ್ದೆ ಎಂಬುದನ್ನು ಬಾಯಿ ತಪ್ಪಿ ಹೇಳಿ ತಾಂಡವ್ ಲಾಕ್ ಆಗಿದ್ದ. ಅಲ್ಲಿ ನಿನಗೇನು ಕೆಲಸ ಎಂದಾಗ ಫ್ರೆಂಡ್ ಅದು ಇದು ಅಂತ ಬೊಗಳೇ ಬಿಟ್ಟಿದ್ದ. ಆಗಲೂ ಎಚ್ಚರಿಕೆಯೊಂದನ್ನ ಕೊಟ್ಟು ಮನೆಯಲ್ಲಿ ಸುಮ್ಮನೆ ಆಗಿದ್ದರು. ಆದರೆ ಈಗ ಧಾರೆ ಸೀರೆಯ ಜಾಗದಲ್ಲೂ ಸಿಕ್ಕಿ ಬಿದ್ದಿದ್ದಾನೆ.

ತಾಂಡವ್‌ಗೆ ಭಾಗ್ಯಾ ಶಿಕ್ಷೆ
ಶ್ರೇಷ್ಠಾಳನ್ನು ಭೇಟಿ ಮಾಡಬೇಡ ಎಂದು ಭಾಗ್ಯಾ ಹೇಳಿದ್ದರು ಮಾತು ಕೇಳದ ತಾಂಡವ್ ಮತ್ತೆ ಮತ್ತೆ ಅದೇ ತಪ್ಪನ್ನೇ ಮಾಡಿದ್ದಾನೆ. ಶ್ರೇಷ್ಠಾಳಿಗೆ ಧಾರೆ ಸೀರೆ ಕೊಡಿಸಲು ಬಂದು ತಗಲಾಕಿಕೊಂಡಿದ್ದಾನೆ. ಭಾಗ್ಯಾಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಗಂಡ ಅಷ್ಟು ದೂರ ಮಾಡಿದರು, ಭಾಗ್ಯಾ ಸಂಸಾರಕ್ಕಾಗಿ ಎಲ್ಲಾ ನೋವನ್ನು ಸಹಿಸಿಕೊಂಡಿದ್ದಾಳೆ. ಹೀಗಾಗಿಯೇ ಶ್ರೇಷ್ಠಾಳ ಮುಂದೆ ಕೈಹಿಡಿದು ಎಳೆದುಕೊಂಡು ಹೋಗಿದ್ದಾಳೆ. ಜೊತೆಗೆ ಮಾರ್ಕೆಟ್ ನಲ್ಲಿ ತರಕಾರಿ ತರುವುದಕ್ಕೂ ಬಿಟ್ಟಿದ್ದಾಳೆ.
ತರಕಾರಿ ಹೊತ್ತು ಬಂದ ತಾಂಡವ್
ತರಕಾರಿಯ ಬ್ಯಾಗ್‌ನೆಲ್ಲಾ ಪೂಜಾ ತನ್ನ ಬಾವನ ಹೆಗಲ ಮೇಲೆ ಹೊರಿಸಿದ್ದಾಳೆ. ಎಲ್ಲಾ ಬ್ಯಾಗ್‌ಗಳನ್ನು ಕೋಪದಲ್ಲಿಯೇ ಹೊತ್ತು ಬರುವಾಗಲೇ ರಸ್ತೆಯಲ್ಲಿ ತಾಂಡವ್ ಕೆಲಸ ಮಾಡುವ ಬಾಸ್‌ನ ಹೆಂಡತಿ ಕಂಡಿದ್ದಾರೆ. ತನ್ನನ್ನು ಈ ಸ್ಥಿತಿಯಲ್ಲಿ ನೋಡಿದರೆ ಅಷ್ಟೇ ಕಥೆ ಎಂದು ಬಚ್ಚಿಟ್ಟುಕೊಂಡೆ ಮನೆಯ ತನಕ ಬಂದಿದ್ದಾನೆ. ಅಷ್ಟರಲ್ಲಾಗಲೇ ಕೋಪ ಕುತ್ತಿಗೆಯ ತನಕ ಬಂದಿತ್ತು. ಭಾಗ್ಯಾಳ ಮೇಲೆ ಕೆಂಡಕಾರುತ್ತಿದ್ದ.

ಮನೆಗೆ ಬಂದು ತಾಂಡವ್ ರಂಪಾಟ
ಮನೆಗೆ ಬರುತ್ತಿದ್ದಂತೆ ತಾಂಡವ್ ಕೋಪದ ಕಟ್ಟೆ ಒಡೆದಿದೆ. ನನಗೆ ತರಕಾರಿ ತರುವುದಕ್ಕೆ ಹೇಳುತ್ತೀಯಾ ಎಷ್ಟು ಗಾಂಚಾಲಿ ಇರಬೇಡ ನಿನಗೆ ಎಂರು ಮನೆಯವರೆಲ್ಲರ ಮುಂದೆ ಕೂಗಾಡಿದ್ದಾನೆ. ತಾಂಡವ್ ಅರಚಾಡುವುದು, ಕೂಗಾಡುವುದು, ರೇಗಾಡುವುದು ಹೊಸದೇನು ಅಲ್ಲ. ಆದರೂ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಹಂಬಲ. ಹೀಗಾಗಿ ಏನಾಯ್ತಪ್ಪ ನಿಂಗೆ ಅಂತ ಮನೆಯವರೆಲ್ಲಾ ಕೇಳಿದ್ದಾರೆ. ಗೊತ್ತಲ್ಲ ತಾಂಡವ್ ರೋಷಾ ಆಕ್ರೋಶ ಅದೇ ಸ್ಟೈಲ್‌ನಲ್ಲಿ ಭಾಗ್ಯಾ ಮೇಲೆ ಕೂಗಾಡಿದ್ದಾನೆ. ಭಾಗ್ಯಾ ಮಾರ್ಕೆಟ್ ಎಲ್ಲಾ ಸುತ್ತಾಡಿಸಿದ್ದನ್ನ ಹೇಳಿ, ಬೈದಿದ್ದಾನೆ.
ಧಾರೆ ಸೀರೆ ಕಥೆ ಹೇಳಿದ ಭಾಗ್ಯಾ
ಭಾಗ್ಯ ಮೊದಲಿನಂತೆ ಇಲ್ಲವೇ ಇಲ್ಲ. ಈಗ ಗಟ್ಟಿಗಿತ್ತಿ ಭಾಗ್ಯ ಆಗಿದ್ದಾಳೆ. ತಾಂಡವ್ ಮನೆಯವರ ಮುಂದೆ ಜಗಳವಾಡುತ್ತಿದ್ದಂತೆ, ಭಾಗ್ಯಾ ಜೋರು ಧ್ವನಿಯಲ್ಲಿಯೇ ಪ್ರಶ್ನೆ ಮಾಡಿದ್ದಾಳೆ. ನಾನು ಆ ರೀತಿ ಹೇಳಿದ್ದು ಯಾಕೆ ಅನ್ನೋದನ್ನು ಹೇಳ್ರೀ. ಶ್ರೇಷ್ಠಾ ಜೊತೆಗೆ ಧಾರೆ ಸೀರೆ ಕೊಡಿಸುವುದಕ್ಕೆ ಹೋಗಿದ್ದೆ ಅಂತ ಹೇಳಿ ಅಂತ ಸತ್ಯ ಹೇಳಿದ್ದಾಳೆ. ಈ ಮಾತು ಕೇಳಿಸಿಕೊಂಡ ತಾಂಡವ್‌ಗೆ ಶಾಕ್ ಆಗಿದೆ. ಮಾತೇ ಬರದಂತೆ ಮೂಗನಾಗಿ ನಿಂತಿದ್ದಾನೆ. ಕುಸುಮಾ ಬೇರೆ ಮೇಲಿಂದ ಮೇಲಿಂದ ಪ್ರಶ್ನೆ ಮಾಡುತ್ತಲೇ ಇದ್ದಾಳೆ.


Click it and Unblock the Notifications











