Bhagyalakshmi: ತಾಂಡವ್ 'ಹನಿ' ಲಾಕ್; ತನ್ವಿ ನೋಡಿದ್ರೆ ಸಖತ್ ಟ್ವಿಸ್ಟ್!
ತಾಂಡವ್‌ಗೆ ಶ್ರೇಷ್ಠಾಳಿಂದ ಗ್ರಹಚಾರ ವಕ್ಕರಿಸುತ್ತಲೇ ಇರುತ್ತೆ. ಒಂದಲ್ಲ ಒಂದು ಸಮಸ್ಯೆಯಿಂದ ಲಾಕ್ ಆಗುತ್ತಲೇ ಇರುತ್ತಾನೆ. ಶ್ರೇಷ್ಠಾಳಿಂದ ಸಿಕ್ಕಿಬಿದ್ದಾಗೆಲ್ಲಾ ಶ್ರೇಷ್ಠಾಳನ್ನು ಬೈದು ಸುಮ್ಮನೆ ಆಗುತ್ತಾನೆ. ಮತ್ತೆ ಅದೇ ಶ್ರೇಷ್ಠಾ ಸಹವಾಸವನ್ನೇ ಮಾಡುತ್ತಾನೆ. ಈಗ ಇಬ್ಬರ ಸಂಬಂಧ ಮದುವೆ ಹಂತದ ತನಕ ಬಂದು ನಿಂತಿದೆ.
ಮದುವೆಯ ಎಲ್ಲಾ ತಯಾರಿಯೂ ನಡೆದಿದೆ. ಈಗ ಶ್ರೇಷ್ಠಾಳ ಜಾತಕದಲ್ಲಿ ಯಾವುದೋ ದೋಷ ಇದೆಯಂತೆ. ಹೀಗಾಗಿ ಮೊದಲು ಬಾಳೆ ಗಿಡದ ಜೊತೆಗೆ ಮದುವೆ ಆಗಿ, ಆ ನಂತರ ತಾಂಡವ್‌ನ ಮದುವೆಯಾಗಬೇಕಂತೆ. ಈ ವಿಚಾರವನ್ನು ತಾಂಡವ್‌ಗೆ ಹೇಳುವುದಕ್ಕೆ ಶ್ರೇಷ್ಠಾ ಕರೆ ಮಾಡಿದ್ದಳು. ಆದರೆ ಆ ಕರೆಯಿಂದಾನೇ ಗ್ರಹಚಾರ ಇಬ್ಬರಿಗೂ ಕೆಟ್ಟಿದೆ.

ಭಾಗ್ಯಾಳ ಬಳಿ ಶ್ರೇಷ್ಠಾ ಮಾತು
ತಾಂಡವ್‌ಗೆ ಮನೆಯಲ್ಲಾದ ವಿಚಾರ ಹೇಳುವುದಕ್ಕೆ ಶ್ರೇಷ್ಠಾ ಕಾಲ್ ಮಾಡಿದ್ದಾಳೆ. ಆದರೆ ತಾಂಡವ್ ಫೋನ್ ಡೈನಿಂಗ್ ಟೇಬಲ್ ಮೇಲೆ ಬಿದ್ದಿದ್ದರಿಂದ ಭಾಗ್ಯಾ ಕಾಲ್ ರಿಸೀವ್ ಮಾಡಿದ್ದಾಳೆ. ಆ ಕಡೆಯಿಂದ ಹಲೋ ಎನ್ನುವುದಕ್ಕೂ ಬಿಡದ ಶ್ರೇಷ್ಠಾ, ತಾಂಡವ್ ನನ್ನ ಕಾಲ್ ರಿಸೀವ್ ಮಾಡುವುದಕ್ಕೆ ಇಷ್ಟೊತ್ತಾ' ಅಂತ ಏಕವಚನದಲ್ಲಿಯೇ ಮಾತನಾಡಿದ್ದಾಳೆ. ಅದು ಶ್ರೇಷ್ಠಾ ಎಂದು ಗೊತ್ತಾದ ಕೂಡಲೇ ಭಾಗ್ಯಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಭಾಗ್ಯಾಳ ಜೊತೆಗೆ ತಂದೆ-ತಾಯಿ ಭಾಗಿ
ತಾಂಡವ್‌ಗೆ ಫೋನ್ ಎಲ್ಲಿ ಬಿಟ್ಟಿದ್ದೀನಿ ಎಂಬುದು ನೆನಪಿಲ್ಲ. ಹುಡುಕಿಕೊಂಡು ಬಂದಿದ್ದಾನೆ. ಅದು ಭಾಗ್ಯಾ ಕೈನಲ್ಲಿ ಇದ್ದದ್ದು ಕಂಡು ಶಾಕ್ ಆಗಿದ್ದಾನೆ. ಕೋಪದಲ್ಲಿ ಬೈದು ಸಿಕ್ಕಿ ಬಿದ್ದಿದ್ದಾನೆ. ಆಗ ಶ್ರೇಷ್ಠಾಳ ಕಾಲ್ ಬಂದಿದ್ದು, ಅವಳ ಮದುವೆಗೆ ಏನೋ ಸಮಸ್ಯೆ ಆದರೆ ನೀವ್ಯಾಕೆ ಅವರ ಅಪ್ಪ ಅಮ್ಮ ಹತ್ತಿರ ಮಾತನಾಡಬೇಕು ಎಂದು ಭಾಗ್ಯಾ ಬೈದಿದ್ದಾಳೆ. ಶ್ರೇಷ್ಠಾ ಕಾಲ್ ಮಾಡಿರುವುದು, ಏನೇನೋ ಮಾತನಾಡಿರುವುದು ತಾಂಡವ್‌ಗೆ ಕನ್ಫರ್ಮ್ ಆಗಿದೆ. ಶ್ರೇಷ್ಠಾ ಬಗ್ಗೆ ಮನಸ್ಸೊಳಗೆ ಬೈದುಕೊಂಡು ಸುಮ್ಮನೆ ಆಗಿದ್ದಾನೆ.

ಬ್ಲಾಕ್ ಮಾಡುವಂತೆ ಸೂಚನೆ
ಕುಸುಮಾಗೂ ಇದು ಶಾಕ್ ಆಗಿದೆ. ಮಗನಿಗೆ ಶ್ರೇಷ್ಠಾ ವಿಚಾರಕ್ಕೆ ಬೈದಿದ್ದಾಳೆ. ಇವತ್ತಿಂದ, ಈ ಕ್ಷಣದಿಂದ ಅವಳಿಂದ ದೂರ ಇರಬೇಕು. ಮೊದಲು ಅವಳ ನಂಬರ್‌ನ ನೀನು ಡಿಲೀಟ್ ಮಾಡು. ಇನ್ಯಾವತ್ತು ಅವಳಿಗೆ ಕಾಲ್ ಮಾಡಬಾರದು ಎಂದಾಗ ತನ್ವಿ ಮಧ್ಯೆ ಮಾತನಾಡಿ, ಡಿಲೀಟ್ ಮಾಡಿದರೆ ಪ್ರಯೋಜನ ಇಲ್ಲ ಅಜ್ಜಿ. ಶ್ರೇಷ್ಠಾ ಆಂಟಿ ಕಾಲ್ ಮಾಡಬಹುದು. ಬ್ಲಾಕ್ ಮಾಡಿಸಿ ಎಂದು ಹೇಳಿದ್ದಾಳೆ. ಇದು ತಾಂಡವ್‌ಗೆ ನುಂಗಲಾರದ ತುತ್ತಾಗಿದೆ.
ತನ್ವಿ ಹೆಸರು ನೋಡಿದರೆ ಗೋವಿಂದ!
ಮೊದಲೇ ಶ್ರೇಷ್ಠಾ ಹೆಸರನ್ನು ಹನಿ ಎಂದು ಸೇವ್ ಮಾಡಿಕೊಂಡಿದ್ದಾನೆ. ಕುಸುಮಾ ಬೇರೆ ತನ್ವಿ ಬಾ ಇಲ್ಲಿ ನೀನು ಹೇಳಿದ್ದನ್ನ ಸರಿಯಾಗಿ ಮಾಡ್ತಾನಾ ನೋಡು ಎಂದಿದ್ದಾಳೆ. ತನ್ವಿಗೆ ಅದು ಬಹಳ ಖುಷಿ ಅದಕ್ಕೆ ಓಡಿ ಬಂದು ಪಪ್ಪನ ಬಳಿ ನಿಂತಿದ್ದಾಳೆ. ಈಗ ತಾಂಡವ್ ಗ್ರಹಚಾರ ಕೆಟ್ಟಂತೆಯೇ ಸರಿ. ಹನಿ ಅಂತ ಸೇವ್ ಮಾಡಿಕೊಂಡಿರುವ ವಿಚಾರವನ್ನೇನಾದರೂ ತನ್ವಿ ಮನೆಯವರ ಮುಂದೆ ಹೇಳಿದರೆ ಅಷ್ಟೆ. ಶ್ರೇಷ್ಠಾಳ ಜೊತೆಗೆ ಹೋಗಬೇಡ ಹೋಗಬೇಡ ಅಂತ ಹೇಳಿದರು ಕೇಳುತ್ತಿಲ್ಲ. ಈಗ ಗ್ರಹಚಾರ ಇನ್ನು ಬಿಡಿಸುತ್ತಾರೆ.


Click it and Unblock the Notifications











